ಫಾಝಿಲ್ ಕೊಲೆಗೆ ಬಳಸಿದ ಕಾರು ಪತ್ತೆ!
ಮಾಲೀಕನನ್ನೂ ಪತ್ತೆ ಹಚ್ಚಿದ ಪೊಲೀಸರು.
ಸುರತ್ಕಲ್ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು!
ಕಾರ್ಕಳ/ಮಂಗಳೂರು (ಆ.1) : ಸುರತ್ಕಲ್‌ನ ಫಾಝಿಲ್ ಹತ್ಯೆ ಪ್ರಕರಣದ ತನಿಖೆಗೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಹತ್ಯೆಗೆ ಬಳಸಿದ ಬಾಡಿಗೆ ಕಾರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಪತ್ತೆಯಾಗಿದೆ. ಕಾರಿನಲ್ಲಿ ಮೈಕ್ರೋ ಸಿಮ್ ಮತ್ತು ರಕ್ತದ ಕಲೆ ಪತ್ತೆಯಾಗಿದ್ದು, ಪೊಲೀಸರು ಈ ಕುರಿತು ತನಿಖೆ ಮುಂದುವರಿಸಿದ್ದಾರೆ. ಇದಕ್ಕೂ ಮುನ್ನ ಕಾರಿನ ಮಾಲೀಕ ಅಜಿತ್ ಡಿಸೋಜಾ ಎಂಬುವರನ್ನು ಬಂಧಿಸಿರುವ ಪೊಲೀಸರು, ಆರೋಪಿಗಳ ಕುರಿತು ಮಹತ್ವದ ಮಾಹಿತಿ ಕಲೆಹಾಕಿದ್ದಾರೆ ಎನ್ನಲಾಗಿದೆ.
ಜು.28ರಂದು ರಾತ್ರಿ ಸುರತ್ಕಲ್(Suratkal)ನಲ್ಲಿ ಫಾಝಿಲ್(Fazil)ನನ್ನು ಬಿಳಿ ಬಣ್ಣದ ಹುಂಡೈ ಇಯಾನ್(hyudai eon) ಕಾರ್‌ನಲ್ಲಿ ಬಂದ ದುಷ್ಕರ್ಮಿಗಳು ಅಟ್ಟಾಡಿಸಿ ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಆ ಬಳಿಕ ದುಷ್ಕರ್ಮಿಗಳು ಕಾರನ್ನು ಇನ್ನಾ ಗ್ರಾಮದ ಕಾಂಜರಕಟ್ಟೆರಿಂಗ್ ರಸ್ತೆಯ ಎರಡು ಕಿ.ಮೀ. ದೂರದಲ್ಲಿರುವ ಕಡೆಕುಂಜಾ(Kadekunja) ಎಂಬ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು.
ದಕ್ಷಿಣ ಕನ್ನಡ: ಫಾಝಿಲ್ ಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿ ಬಂಧನ
ಮಂಗಳೂರಿನ ಆರ್‌ಟಿಒ(Mangaluru RTO) ನೋಂದಣಿಯ ಕಾರು ಇದಾಗಿದ್ದು, ಗ್ಲಾನ್ಸಿ ಡಿಂಪಲ್ ಡಿಸೋಜ ಹೆಸರಿನಲ್ಲಿ ನೋಂದಣಿ ಆಗಿದೆ. ಈ ಕುರಿತು ಮಂಗಳೂರು ಹಾಗೂ ಉಡುಪಿ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಕಾರು ಪತ್ತೆಗೂ ಮುನ್ನವೇ ಮಾಲೀಕನನ್ನು ಬಂಧಿಸಿದ್ದ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹತ್ಯೆಗೂ ಆತನಿಗೂ ಯಾವುದೇ ಸಂಬಂಧ ಇಲ್ಲ ಎಂಬುದು ಸ್ಪಷ್ಟವಾಗಿದ್ದರೂ, ಸೂಕ್ತ ದಾಖಲೆ ಪರಿಶೀಲನೆ ಪರಿಶೀಲಿಸದೆ ಕಾರು ಬಾಡಿಗೆಗೆ ನೀಡಿರುವ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕಾರು ಪತ್ತೆಗೆ 30 ಸಿಸಿಟೀವಿ ಜಾಲಾಡಿದ ಪೊಲೀಸರು:
ಸುರತ್ಕಲ್‌ನಲ್ಲಿ ನಡೆದ ಫಾಝಿಲ್ ಹತ್ಯೆ ಪ್ರಕರಣ ಭೇದಿಸುವಲ್ಲಿ ಮಹತ್ವದ್ದಾಗಿದ್ದ ಅಪರಾಧ ಕೃತ್ಯಕ್ಕೆ ಬಳಸಿದ ಕಾರು ಪತ್ತೆ ಹಚ್ಚಲು ಪೊಲೀಸರು ಭಾರೀ ಸಾಹಸವನ್ನೇ ಮಾಡಬೇಕಾಯಿತು. ಹತ್ಯೆಗೆ ಬಿಳಿ ಬಣ್ಣದ ಕಾರು ಬಳಸಿದ್ದಾರೆಂಬುದು ಖಚಿತವಾಗಿದ್ದರೂ ಯಾವ ಕಾರೆಂಬುದು ಆರಂಭದಲ್ಲಿ ಪೊಲೀಸರಿಗೆ ಖಚಿತವಾಗಿರಲಿಲ್ಲ, ಆದರೆ ಟೋಲ್‌ಗೇಟ್‌ವೊಂದರ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಸಿಕ್ಕ ದೃಶ್ಯದ ಆಧಾರದ ಮೇಲೆ ಅದರ ಮಾಲೀಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ 30 ಸಿಸಿಟೀವಿಗಳನ್ನು ಜಾಲಾಡಿದ್ದಾರೆ. ಸುರತ್ಕಲ್‌ನಿಂದ ಸುಮಾರು 2 ಕಿ.ಮೀ. ದೂರದ ಟೋಲ್‌ಗೇಟ್‌ನಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಬಿಳಿ ಬಣ್ಣದ ಹುಂಡೈ ಇಯಾನ್ ಕಾರೊಂದು ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಹಾದುಹೋಗಿರುವುದು ಪತ್ತೆಯಾಗಿತ್ತು. ಅದರಂತೆ ಇಯಾನ್ ಕಾರಿನ ಬೆನ್ನು ಬಿದ್ದ ಪೊಲೀಸರು ಅನೇಕ ಕಾರು ಮಾಲೀಕರ ಕುರಿತು ಮಾಹಿತಿ ಕಲೆಹಾಕಲು ಶುರು ಮಾಡಿದ್ದಾರೆ. ಕೊನೆಗೆ ಅನುಮಾನದ ಆಧಾರದ ಮೇರೆಗೆ ಏಳೆಂಟು ಮಂದಿ ಹಿಂದೆ ಬಿದ್ದಾಗ ಬಾಡಿಗೆಗೆ ಕಾರು ನೀಡುವ ಅಜಿತ್ ಡಿಸೋಜಾರ ಸುಳಿವು ಸಿಕ್ಕಿದೆ. ತಕ್ಷಣ ಅಜಿತ್ ಡಿಜೋಜಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಮ್ಮದೇ ಕಾರನ್ನು ಆರೋಪಿಗಳು ತೆಗೆದುಕೊಂಡು ಹೋಗಿರುವುದಾಗಿ ಒಪ್ಪಿಕೊಂಡಿದ್ದಾರೆ.
ಪಾಝಿಲ್ ಹತ್ಯೆ ಕೇಸ್‌ನಲ್ಲಿ ಪೊಲೀಸರಿಗೆ ಸಿಕ್ತು ದೊಡ್ಡ ಸುಳಿವು
ಘಟನೆಗೂ ಘಟನೆಗೂ ತನಗೂ ಯಾವುದೇ ಸಂಬಂಧ ಇಲ್ಲ, ನಾನು ಕಾರನ್ನು ಕೇವಲ ಬಾಡಿಗೆಗೆ ನೀಡಿದ್ದೇನೆ. ಸುರತ್ಕಲ್‌ನಲ್ಲಿ ಕಾರು ಬಾಡಿಗೆಗೆ ನೀಡುವ ವ್ಯವಹಾರ ನಡೆಸುತ್ತಿದ್ದು, ಅದರಂತೆ ಈ ಕಾರನ್ನೂ ಬಾಡಿಗೆಗೆ ನೀಡಲಾಗಿದೆ. ಪ್ರತಿ ಬಾರಿಯೂ ಬಾಡಿಗೆಗೆ ದುಷ್ಕರ್ಮಿಗಳಲ್ಲಿ ಒಬ್ಬಾತ ಕಾರನ್ನು ತೆಗೆದುಕೊಂಡು ಹೋಗುತ್ತಿದ್ದುದನ್ನು ಅಜಿತ್ ಡಿಸೋಜಾ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳೀಯರಿಂದ ಮಾಹಿತಿ:
ಆರೋಪಿಗಳು ಕಾರು ಬಿಟ್ಟು ಹೋದ ಪ್ರದೇಶ ಕಾಡಿನ ಪ್ರದೇಶವಾಗಿದ್ದು, ಸುಮಾರು 60 ಎಕರೆ ವಿಸ್ತಾರ ಹೊಂದಿದೆ. ಸ್ಥಳೀಯ ಕುಶ ಕುಲಾಲ್ ಹೇಳುವಂತೆ ಸುಮಾರು ಎರಡ್ಮೂರು ದಿನಗಳಿಂದ ಈ ಭಾಗದಲ್ಲಿ ಕಾರು ಅನಾಥ ಸ್ಥಿತಿಯಲ್ಲಿದ್ದು, ನಾವು ಅಷ್ಟಾಗಿ ಗಮನಿಸಿಲ್ಲ. ಭಾನುವಾರ ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಪೊಲೀಸರು ಮಾಹಿತಿ ಪಡೆದಾಗ ಕೊಲೆಗೆ ಬಳಸಲಾದ ಕಾರು ಎಂದು ತಿಳಿಯಿತು ಎಂದಿದ್ದಾರೆ.
ಮೈಕ್ರೋ ಸಿಮ್, ರಕ್ತದ ಕಲೆ: ದುಷ್ಕರ್ಮಿಗಳು ಬಿಟ್ಟು ಹೋದ ಕಾರಿನ ಗ್ಲಾಸ್‌ನಲ್ಲಿ ಮೈಕ್ರೋ ಸಿಮ್‌ಕಾರ್ಡ್ ಹಾಗೂ ಹಿಂದಿನ ಸೀಟ್‌ನಲ್ಲಿ ನೀರಿನ ಬಾಟಲ್, ಸ್ವಲ್ಪ ಹಣ ಹಾಗೂ ರಕ್ತದ ಕಲೆಗಳು ಪತ್ತೆಯಾಗಿವೆ.
ಘಟನೆ ಕುರಿತು ನಾಲ್ಕು ತಂಡಗಳಲ್ಲಿ ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆಗಿಳಿದ ಪೊಲೀಸರು ಹತ್ಯೆಗೆ ಬಳಸಿದ ಕಾರು ಬಿಳಿ ಬಣ್ಣದ್ದು ಎಂಬುದನ್ನು ಪತ್ತೆ ಮಾಡಿದ್ದು ಘಟನಾ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳ ಆಧಾರದಲ್ಲಿ. ಆದರೆ ಯಾವ ಕಾರು ಎಂಬುದು ಮಾತ್ರ ಸ್ಪಷ್ಟವಾಗಿರಲಿಲ್ಲ. ಘಟನಾ ಸ್ಥಳದ ಆಸುಪಾಸಿನ ಸುಮಾರು 30ಕ್ಕೂ ಅಧಿಕ ಸಿಸಿ ಕ್ಯಾಮೆರಾ ಪರಿಶೀಲಿಸಿದರೂ ಪೊಲೀಸರಿಗೆ ಸ್ಪಷ್ಟಸುಳಿವು ಸಿಕ್ಕಿರಲಿಲ್ಲ. ಕೊನೆಗೆ