'ರೇಪ್ ವೇಳೆ ನಿದ್ರಿಸುತ್ತಿದ್ದೆ' ಭಾರತೀಯ ಮಹಿಳೆ ಪ್ರತಿಕ್ರಿಯೆ ಇದಲ್ಲವೆಂದ ಕೋರ್ಟ್!

By Suvarna News  |  First Published Jun 26, 2020, 2:59 PM IST

ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಪ್ರಕರಣ ಅತ್ಯಾಚಾರ/ ಆರೋಪಿ ರಾಕೇಶ್ ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು/ ತಮ್ಮ ಕಚೇರಿಯಲ್ಲಿ ರಾತ್ರಿ 11 ಗಂಟೆಗೆ ಅತ್ಯಾಚಾರವೆಂದು ಮಹಿಳೆ ದೂರು/  ನಂತರ ರಾಜಿಯಾಗುವುದಾದರೆ ಕೇಸ್ ಹಿಂಪಡೆಯುವುದಾಗಿ ಪತ್ರ / ಅತ್ಯಾಚಾರದ ವೇಳೆ ನಿದ್ರೆ ಮಾಡುತ್ತಿದ್ದೆ


ಬೆಂಗಳೂರು(ಜೂ. 26)  ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಪ್ರಕರಣದ ಆರೋಪಿ ರಾಕೇಶ್ ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.  ತಮ್ಮ ಕಚೇರಿಯಲ್ಲಿ ರಾತ್ರಿ 11 ಗಂಟೆ ವೇಳೆ ಅತ್ಯಾಚಾರ ಮಾಡಿದ್ದರು ಎಂದು ಮಹಿಳೆ ದೂರು ನೀಡಿದ್ದರು.

ಇದೊಂದು ವಿಚಿತ್ರ ಪ್ರಕರಣ. ಅತ್ಯಾಚಾರ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಅತ್ಯಾಚಾರದ ವೇಳೆ ನಾನು ನಿದ್ರೆಗೆ ಜಾರಿದ್ದೆ ಎಂದು ಮಹಿಳೆ ಹೇಳಿಕೆ ನೀಡಿದ್ದು  ಜಾಮೀನು ದೊರೆಯಲು ಕಾರಣವಾಗಿದೆ. ಯಾವ ಭಾರತೀಯ ನಾರಿ ಸಹ ಹೀಗೆ ಮಾಡಲು ಸಾಧ್ಯವಿಲ್ಲ ಎಂದಿರುವ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ.

Tap to resize

Latest Videos

ಎಚ್‌ಆರ್ ವಿಭಾಗದಲ್ಲಿ ಕೆಲಸ ಮಾಡುವ 42  ವರ್ಷದ ಮಹಿಳೆ ತನ್ನ ಸಹೋದ್ಯೋಗಿ 27 ವರ್ಷದ ಪುರುಷನ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದರು. ಆರ್ ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಾಲಕಿಯ ರೇಪ್ ಮಾಡಿದ್ದ ಕಾಮುಕನಿಗೆ ಕೊರೋನಾ

ಕೆಳ ನ್ಯಾಯಾಲಯ ಆರೋಪಿಗೆ ಜಾಮೀನು ನಿರಾಕರಣೆ ಮಾಡಿದ್ದರಿಂದ ಪುರುಷ ಹೈಕೋರ್ಟ್ ಮೊರೆ ಹೋಗಿದ್ದರು. ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಲಾಗಿದೆ ಎಂಬ ಆರೋಪಕ್ಕೆ ಸರಿಯಾದ ಆಧಾರಗಳು ಸಿಗುತ್ತಿಲ್ಲ ಎಂಬುದನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅಭಿಪ್ರಾಯಪಟ್ಟಿದ್ದರು.

ಇಬ್ಬರು ಸೇರಿ ಹೊಟೆಲ್ ಒಂದಕ್ಕೆ ತೆರಳಿ ಮದ್ಯಪಾನ ಮಾಡಿದ್ದೆವು. ನಂತರ ಕಾರ್‌ ನಲ್ಲಿ ಕುಳಿತೆವು..ಇದಾದ ಮೇಲೆ ಕಚೇರಿಗೆ ಬಂದೆವು.. ಕಚೇರಿಯಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಲಾಯಿತು. ನಾನು ಸುಸ್ತಾಗಿ ನಿದ್ರೆಗೆ ಜಾರಿದ್ದೆ ಎಂದು ಮಹಿಳೆ ಹೇಳಿಕೆ ನೀಡಿದ್ದರು.

ಮೊದಲು ದೂರು ನೀಡಿದ ಮಹಿಳೆ ನಂತರ  ರಾಜಿಯಾಗುವುದಾದರೆ ಕೇಸ್ ಹಿಂಪಡೆಯುವುದಾಗಿ ಪತ್ರ ಬರೆದಿದ್ದನ್ನು ನ್ಯಾಯಾಲಯ ಉಲ್ಲೇಖ ಮಾಡಿದೆ. ತಡರಾತ್ರಿಯಲ್ಲಿ ಆರೋಪಿಯನ್ನು ಕಚೇರಿಗೆ ಕರೆದೊಯ್ದಿದ್ದು ಏಕೆ? ಮದ್ಯಪಾನ ಮಾಡಲು ಅವಕಾಶ ಕೊಟ್ಟಿದ್ದೇಕೆ ? ರಾತ್ರಿ ಇಡೀ ಆತನೊಂದಿಗೆ ತನ್ನ ಕಚೇರಿಯಲ್ಲೇ ತಂಗಿದ್ದೇಕೆ?  ಎಂಬ ಪ್ರಶ್ನೆ ತೆಗೆದಿರುವ ಕೋರ್ಟ್ ಸುಸ್ತಾಗಿ ಮಲಗಿದ್ದೆ ಎಂಬ ಸ್ಪಷ್ಟನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದಿದೆ.

ನಿದ್ರೆಗೆ ಜಾರಿದ್ದೆ ಎಂಬುದು ಭಾರತೀಯ ಮಹಿಳೆ ಅತ್ಯಾಚಾರದ ವೇಳೆ ನೀಡುವ ಪ್ರತಿಕ್ರಿಯೆ ಆಗಲು ಸಾಧ್ಯವಿಲ್ಲ ಎಂದು ಆರೋಪಿಗೆ ಜಾಮೀನು ನೀಡಿದೆ.

click me!