Crime News; ಮದ್ಯದ ಅಮಲಿನಲ್ಲಿ ಮಧ್ಯರಾತ್ರಿ ಮಗಳ ಕತ್ತು ಸೀಳಿದ ಕಲಬುರಗಿಯ ಪಾಪಿ

By Suvarna News  |  First Published Nov 4, 2021, 8:46 PM IST

* ಕುಡಿದ ಅಮಲಿನಲ್ಲಿ ಹೆತ್ತ ಮಗಳನ್ನೇ ಹತ್ಯೆ ಮಾಡಿದ
* ಅಫ್ಜಲಪುರ್ ತಾಲೂಕಿನ ಉಪ್ಪಾರವಾಡಿ ಗ್ರಾಮದಲ್ಲಿ ಘಟನೆ
*  ಮಗಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ
* ಅಲಮಿನಲ್ಲಿ ಹತ್ಯೆ ಮಾಡುತ್ತಿರುವ ಪ್ರಕರಣಗಳಲ್ಲಿ ಏರಿಕೆ


ಕಲಬುರಗಿ(ನ. 04)  ಇದಕ್ಕಿಂತ ದುರಂತ ಇನ್ನೊಂದಿಲ್ಲ. ಕುಡಿದ ಅಮಲಿನಲ್ಲಿ (Liquor) ನಾಲ್ಕು ವರ್ಷದ ಮಗಳನ್ನು ಪಾಪಿ ತಂದೆ ಹತ್ಯೆ (Murder) ಮಾಡಿದ್ದಾನೆ. ನಂತರ ತಾನು ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ.

ಅಫ್ಜಲಪುರ್(Kalaburagi) ತಾಲೂಕಿನ ಉಪ್ಪಾರವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಘಟನೆಗೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ. ಹೆತ್ತ ತಂದೆಯಿಂದಲೇ ಏನು  ಅರಿಯದ ಮಗು ದಾರುಣ ಅಂತ್ಯ ಕಂಡಿದೆ.

Tap to resize

Latest Videos

undefined

ಮನೆ ಮಾಲೀಕರೆ ಎಚ್ಚರ.. ಹೀಗೂ ದೋಖಾ ಮಾಡ್ತಾರೆ ಹುಷಾರ್

ಶಿಕಾರಿಪುರದ ಸುದ್ದಿ;  ತಾನು ಹೇಳಿದ ಯುವಕನನ್ನು ಮದುವೆಯಾಗಲು ಮಗಳು ಒಪ್ಪಲಿಲ್ಲ ಎಂಬ ಕಾರಣಕ್ಕೆ ಮಗಳನ್ನು ತಂದೆಯೇ ಹತ್ಯೆ ಮಾಡಿ ರೈಲ್ವೆ ಹಳಿ ಸಮೀಪ ಬಿಸಾಡಿದ್ದ.

ಪ್ರಿಯಕರನನ್ನು ಬಿಡಲು ಒಪ್ಪದ ಮಗಳನ್ನು ಹೆತ್ತ ತಂದೆಯೇ ಹತ್ಯೆ ಮಾಡಿದ್ದ. ಬೀರೂರಿನ ರೈಲ್ವೆ ಟ್ರ್ಯಾಕ್ ಮೇಲೆ ಮಗಳ ಶವ ಎಸೆದು ಬಂದಿದ್ದ. ನಂತರ ಪೊಲೀಸ್ ಠಾಣೆಗೆ ತೆರಳೀ ಶರಣಾಗಿದ್ದ. 

ಮದ್ಯದ ಅಮಲು, ಡ್ರಗ್ಸ್ ಅಮಲಿನಲ್ಲಿ ಇಂಥ ಕೃತ್ಯ ಮಾಡುವ ಘಟನೆಗಳು ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಲೇ ಇವೆ. ತನ್ನ ಪ್ರೀತಿ ಒಪ್ಪಿಕೊಳ್ಳುತ್ತಿಲ್ಲ ಎಂದು ಪಾಗಲ್ ಪ್ರೇಮಿ ಪ್ರೇಯಸಿಯನ್ನು ಮಧ್ಯ ದಾರಿಯಲ್ಲೇ ಹತ್ಯೆ ಮಾಡಿದ್ದ. ನಂತರ ತಾನು ಆತ್ಮಹತ್ಯೆ ಪ್ರಯತ್ನ ಮಾಡಿ ಶಿವಮೊಗ್ಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಘಟನೆಯನ್ನು ನೋಡಿದ್ದವರು ಹೇಳುವಂತೆ ಆತ ಯಾವುದೋ ಅಮಲಿನಲ್ಲಿದ್ದ. 

 

click me!