ಪ್ರವಾಸಿ ತಾಣದ ಗುಹೆಯಲ್ಲಿ ಪತ್ನಿಯೊಂದಿಗೆ ಸೆಕ್ಸ್ ನಂತರ ಹತ್ಯೆ!

By Suvarna News  |  First Published Jul 27, 2021, 6:05 PM IST

* ಇದು ಯಾವ ಥ್ರಿಲ್ಲರ್ ಸಿನಿಮಾ ಕತೆಗೂ ಕಡಿಮೆ ಇಲ್ಲ
* ಪ್ರವಾಸಕ್ಕೆಂದು ಪತ್ನಿಯನ್ನು ಕರೆದುಕೊಂಡು ಹೋಗಿ ಹತ್ಯೆ
* ಗುಹೆಯಲ್ಲಿ ಸೆಕ್ಸ್ ಮಾಡಿ ಕತ್ತು ಹಿಸುಕಿದ
* ಮೊಬೈಲ್ ಲೊಕೇಶನ್ ಆಧಾರದಲ್ಲಿ ಆರೋಪಿ ಗಂಡ ಸೆರೆ


ನವದೆಹಲಿ(ಜು. 27)   'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾವನ್ನು ಬಹುತೇಕರು ನೋಡಿರಲಿಕ್ಕೆ ಸಾಕು.. ಅಂಥದ್ದೇ ಒಂದು ಕತೆ  ಇಲ್ಲಿದೆ. ನಾಪತ್ತೆಯಾಗಿದ್ದ ಮಹಿಳೆ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮಹಿಳೆ ಪತಿಯೇ ಪ್ರಕರಣದ ಆರೋಪಿ.  

ಪತ್ನಿಯನ್ನು ನೈನಿತಾಲ್ ಗೆ ಕರೆದುಕೊಂಡು ಹೋಗಿ ಆಕೆಯೊಂದಿಗೆ ಗುಹೆಯೊಂದರಲ್ಲಿ ಸೆಕ್ಸ್ ನಡೆಸಿ ಅಲ್ಲಿಯೇ ಕತ್ತು ಹಿಸುಕಿ ಹತ್ಯೆ ಮಾಡಿದ್ದ ರಾಜೇಶ್ ನನ್ನು ಬಂಧಿಸಲಾಗಿದೆ.

Tap to resize

Latest Videos

ಉತ್ತರಾಖಂಡನ ನಿವಾಸಿ ರಾಜೇಶ್ ಮತ್ತು ಹತ್ಯೆಯಾದ ಮಹಿಳೆ ಆಶಾ(ಹೆಸರು ಬದಲಾಯಿಸಲಾಗಿದೆ) ಮೊದಲಿನಿಂದಲೂ  ಪ್ರೀತಿ ಮಾಡುತ್ತಿದ್ದರು. ಆದರೆ ಸಂದರ್ಭವೊಂದು ಎದುರಾದಾಗ ರಾಜೇಶ್ ಮೇಲೆ ಆಶಾ ಅತ್ಯಾಚಾರದ ದೂರು ದಾಖಲಿಸಿದ್ದರು. ಈ ಕಾರಣಕ್ಕೆ ರಾಜೇಶ್ ಜೈಲು ಪಾಲಾಗಿದ್ದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ನಂತರ 2020  ರ ಡಿಸಿಂಬರ್ ನಲ್ಲಿ ಇಬ್ಬರು ಮದುವೆಯಾಗಿದ್ದರು.

ಆದರೆ ಈ ಮದುವೆ ಕತೆ ಈ ವರ್ಷದ ಜೂನ್ ನಲ್ಲಿ ದೊಡ್ಡ ತಿರುವು ಪಡೆದುಕೊಂಡಿತು.  ಜೂನ್ ತಿಂಗಳ ಮಧ್ಯಭಾಗದಲ್ಲಿ ಆಶಾ ನಾಪತ್ತೆಯಾಗಿದ್ದಾಳೆ ಎಂದು ಕುಟುಂಬಸ್ಥರು ದ್ವಾರಕಾ ಪೊಲೀಸ್ ಠಾಣಗೆ ದೂರು ನೀಡಿದ್ದರು.

ಸೆಕ್ಸ್ ನಲ್ಲಿದ್ದಾಗ ಕಿರುಚಿದರೆ ದಂಪತಿ ಮೇಲೆ ಕೇಸ್

ತನಿಖೆ ಆರಂಭಿಸಿದ ಪೊಲೀಸರು ಆಶಾರ ಪೋನ್ ಕರೆ ಮಾಹಿತಿ ಕಲೆ ಹಾಕಿದ್ದಾರೆ. ಕೊನೆಯದಾಗಿ ಅವರ ಮೊಬೈಲ್ ನೈನಿತಾಲ್  ಬಳಿ ನೆಟ್ ವರ್ಕ್ ನಲ್ಲಿತ್ತು.  ಇದಾದ ಮೇಲೆ ಪೊಲೀಸರು ಗಂಡ ರಾಜೇಶ್ ಮೊಬೈಲ್ ಲೊಕೇಶನ್ ಸಹ ಹುಡುಕಾಡಿದ್ದಾರೆ.  ಗಂಡನ ಮೊಬೈಲ್ ಸಹ ಪತ್ನಿ ಇದ್ದಲ್ಲಿಯೇ ಇತ್ತು. ನಂತರ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಎಲ್ಲ ಸತ್ಯ ಬಹಿರಂಗವಾಗಿದೆ.

ಪತ್ನಿ ಮತ್ತು ಪತ್ನಿಯ ತಾಯಿ ತನಗೆ ನಿರಂತರ ಕಿರುಕುಳ ನೀಡುತ್ತಿದ್ದರು. ಜುಲೈ  12  ರಂದು ದಂಪತಿ ನೈನಿತಾಲ್ ಗೆ ಹೋಗಿದ್ದಾರೆ. ಅಲ್ಲಿಂದ ಹದಿಮೂರು ಕಿಮೀ ದೂರದ ಬೆಟ್ಟವನ್ನು ಏರಿದ್ದಾರೆ.  ಅಲ್ಲಿ ಗಂಡ ತನಗೆ ನಿನ್ನ ಜತೆ ಸೆಕ್ಸ್ ಮಾಡಬೇಕು ಎಂದು ಒತ್ತಾಯ ಮಾಡಿದ್ದಾನೆ.  ಹತ್ತಿರದಲ್ಲಿಯೇ ಇದ್ದ ಗುಹೆಗೆ ಕರೆದೊಯ್ದು ಇಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ. ಇದಾದ ಮೇಲೆ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ರಾಜೇಶ್ ನನ್ನು ಕರೆದುಕೊಂಡು ಹೋಗಿದ್ದು ಕೊಲೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. 

click me!