ಮದುವೆ ಮಾಡಿಕೊಟ್ಟ ತಮ್ಮ 26 ವರ್ಷದ ಮಗಳು ಗಂಡನ ಮನೆಯಲ್ಲಿ ಸಾವಿಗೆ ಶರಣಾಗಿದ್ದು, ಇದರಿಂದ ರೊಚ್ಚಿಗೆದ್ದ ಪೋಷಕರು ಆಕೆಯ ಗಂಡನ ಮನೆಗೆ ಬೆಂಕಿ ಇಟ್ಟು ಅತ್ತೆ ಮಾವನನ್ನು ಸಜೀವವಾಗಿ ಸುಟ್ಟ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆದಿದೆ.
ಪ್ರಯಾಗ್ ರಾಜ್: ಮದುವೆ ಮಾಡಿಕೊಟ್ಟ ತಮ್ಮ 26 ವರ್ಷದ ಮಗಳು ಗಂಡನ ಮನೆಯಲ್ಲಿ ಸಾವಿಗೆ ಶರಣಾಗಿದ್ದು, ಇದರಿಂದ ರೊಚ್ಚಿಗೆದ್ದ ಪೋಷಕರು ಆಕೆಯ ಗಂಡನ ಮನೆಗೆ ಬೆಂಕಿ ಇಟ್ಟು ಅತ್ತೆ ಮಾವನನ್ನು ಸಜೀವವಾಗಿ ಸುಟ್ಟ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮುತ್ತಿಗಂಜ್‌ನಲ್ಲಿ ಈ ಭಯಾನಕ ಘಟನೆ ನಡೆದಿದೆ. 26 ವರ್ಷದ ಅನ್ಸಿಕಾ ಕೆಸರ್ವಾನಿ ಎಂಬ ಮಹಿಳೆ ತನ್ನ ಗಂಡನ ಕುಟುಂಬದವರು ತನ್ನನ್ನು ಕೆಟ್ಟದಾಗಿ ನಡೆಸಿಕೊಂಡರು ಎಂದು ಮನನೊಂದು ಮನೆಯಲ್ಲೇ ಸಾವಿಗೆ ಶರಣಾಗಿದ್ದಳು. ಸೊಸೆಯ ಸಾವಿನ ನಂತರ ಆಕೆಯ ಗಂಡನ ಮನೆಯವರು ಸೊಸೆಯ ಪೋಷಕರಿಗೆ ಕರೆ ಮಾಡಿ ಮಗಳ ಸಾವಿನ ಬಗ್ಗೆ ತಿಳಿಸಿದ್ದಾರೆ. ಬಳಿಕ ಸೊಸೆಯ ಪೋಷಕರು ಸಂಬಂಧಿಗಳು ನೆಂಟರಿಷ್ಟರು ಮನೆಗೆ ಬಂದಿದ್ದು, ಶವವಾಗಿ ಮಲಗಿದ್ದ ಮಗಳನ್ನು ನೋಡಿ ಸಂಬಂಧಿಗಳು ರೊಚ್ಚಿಗೆದ್ದಿದ್ದಾರೆ.
ಬಾಲಕಿ ಮೇಲೆ ಗ್ಯಾಂಗ್‌ರೇಪ್ ಮಾಡಿ ಸುಟ್ಟು ಕೊಂದ ಪಾಪಿಗಳು: ಮನನೊಂದ ತಂದೆ ಚಿತೆಗೆ ಹಾರಿ ಆತ್ಮಹತ್ಯೆಗೆ ಯತ್ನ
ಅಲ್ಲದೇ ಮಗಳ ಅತ್ತೆ ಮನೆಯವರಿಗೆ ಬುದ್ಧಿ ಕಲಿಸಲು ಅತ್ತೆ ಮಾವ ಮನೆಯೊಳಗೆ ಇದ್ದಾಗಲೇ ಮನೆಗೆ ಬೆಂಕಿ ಹಚ್ಚಿದ್ದಾರೆ. ಮನೆಯಲ್ಲಿದ್ದ ಉಳಿದ ಐವರನ್ನು ಪೊಲೀಸರು ರಕ್ಷಿಸಿದ್ದಾರೆ. ಮಹಿಳೆಯ ಪೋಷಕರು ತಮ್ಮ ಮಗಳ ಸಾವಿಗೆ ಆಕೆಯ ಅತ್ತೆ ಮನೆಯವರೇ ಕಾರಣ ಎಂದು ಆರೋಪಿಸಿ ಗಲಾಟೆ ಎಬ್ಬಿಸಿದ್ದು, ಈ ಗಲಾಟೆಯ ನಡುವೆಯೇ ಯಾರೋ ಮನೆಯ ನೆಲಮಹಡಿಗೆ ತೆರಳಿ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಹೀಗೆ ಹತ್ತಿಕೊಂಡ ಬೆಂಕಿ ಸ್ವಲ್ಪ ಹೊತ್ತಿನಲ್ಲೇ ಮನೆಯ ಇತರೆಡೆಗೂ ವ್ಯಾಪಿಸಿದೆ.
ಮನೆ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮನೆಯಲ್ಲಿದ್ದ ಇತರ ಐವರನ್ನು ರಕ್ಷಿಸಿದ್ದಾರೆ. ಆದರೆ ಬೆಂಕಿ ನಂದಿಸಿದ ನಂತರ ಮನೆ ಒಳಗೆ ಹೋಗಿ ನೋಡಿದಾಗ ಎರಡು ಸಜೀವವಾಗಿ ದಹಿಸಲ್ಪಟ್ಟ ಮೃತದೇಹಗಳು ಸಿಕ್ಕಿವೆ. ವಿಚಾರಣೆ ನಡೆಸಿದಾಗ ಈ ಶವಗಳು ಮಹಿಳೆಯ ಅತ್ತೆ ಹಾಗೂ ಮಾವನದ್ದು ಎಂದು ತಿಳಿದು ಬಂದಿದೆ. ಅವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಚೆನ್ನಾಗಿ ಓದುವಂತೆ ತಾಯಿ ಬುದ್ದಿ ಹೇಳಿದ್ದಕ್ಕೆ ಮಗಳು ಆತ್ಮಹತ್ಯೆ!
Warning: Disturbing visuals
Following death of a woman, house of her in-laws was set on fire allegedly by the deceased's family member in UP's Prayagraj. Woman's father and mother-in-law were charred to death. Incident happened last night in Mutthiganj area in the district. pic.twitter.com/noGiS6Q3G4
दिनांक 18/19.03.2024 को थाना मुठ्ठीगंज क्षेत्रांतर्गत घटित घटना के संबंध में पुलिस उपायुक्त नगर द्वारा दी गयी बाइट- pic.twitter.com/0FOP11kDwe
— DCP CITY PRAYAGRAJ (@DCPCityPrj)