ಖ್ಯಾತ ಕಿರುತೆರೆ ನಟಿ ಸಪ್ನಾ ಅವರ ಮಗ ಅನುಮಾನಾಸ್ಪದ ಸಾವನ್ನಿಪ್ಪಿದ್ದು, ಈ ಸಾವಿನ ಕುರಿತು ಬೆಚ್ಚಿಬೀಳಿಸುವ ಕಥೆ ಹೇಳಿದ ಹೈಸ್ಕೂಲ್ ಸ್ನೇಹಿತರು!
ಖ್ಯಾತ ಕಿರುತೆರೆ ನಟಿ ಸಪ್ನಾ ಸಿಂಗ್ ಅವರ 14 ವರ್ಷದ ಮಗ ಸಾಗರ್ ಈಚೆಗೆ ನಾಪತ್ತೆಯಾಗಿದ್ದು, ಇಂದು ಆತನ ಮೃತದೇಹ ಸಿಕ್ಕಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಾಗರ್ ತಾಯಿಯ ಚಿಕ್ಕಪ್ಪ ಓಂಪ್ರಕಾಶ್ ಅವರೊಂದಿಗೆ ವಾಸಿಸುತ್ತಿದ್ದ. ಎಂಟನೇ ತರಗತಿ ಓದುತ್ತಿದ್ದ ಈತ ಕಳೆದ ಭಾನುವಾರ ನಾಪತ್ತೆಯಾಗಿದ್ದ. ದೂರು ದಾಖಲಾದ ಹಿನ್ನೆಲೆಯಲ್ಲಿ ಶೋಧ ಕಾರ್ಯ ಕೈಗೊಂಡಿದ್ದ ಪೊಲೀಸರಿಗೆ ಬರೇಲಿಯ ಇಜ್ಜತ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅದ್ಲಾಖಿಯಾ ಗ್ರಾಮದ ಬಳಿ ಮೃತದೇಹ ಪತ್ತೆಯಾಗಿತ್ತು. ಆತನ ಮೂಗಿನಲ್ಲಿ ರಕ್ತ ಸುರಿಯುತ್ತಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ಕಾರಣವನ್ನು ಸ್ಪಷ್ಟಪಡಿಸಲು ಸಾಧ್ಯವಾಗಲಿಲ್ಲ. ಇದು ಕೊಲೆ ಎಂದು ಮೃತದೇಹವನ್ನು ಬಿಸಲ್‌ಪುರ ರಸ್ತೆಯಲ್ಲಿ ಇಟ್ಟು ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ನೂಕುನುಗ್ಗಲು ಉಂಟಾಗಿದ್ದವು.
ವಿಷಯ ತಿಳಿಸ ಸಪ್ನಾ ಅವರು ಮುಂಬೈನಿಂದ ಬರೇಲಿಗೆ ಹಿಂದಿರುಗಿದಾಗ, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಶವವನ್ನು ಅಂತ್ಯಸಂಸ್ಕಾರ ಮಾಡಲಾಯಿತು. ಸಾವಿನ ಕುರಿತು ತನಿಖೆ ನಡೆಸಿರುವ ಪೊಲೀಸರು ಸಪ್ನಾ ಸಿಂಗ್ ಅವರ ಪುತ್ರ ಸಾಗರ್ ಗಂಗ್ವಾರ್ ನ ಇಬ್ಬರು ಸ್ನೇಹಿತರಾದ ಅನುಜ್ ಮತ್ತು ಸನ್ನಿಯನ್ನು ಬಂಧಿಸಿದ್ದಾರೆ. ಹತ್ಯೆ ಪ್ರಕರಣದ ಆರೋಪದಲ್ಲಿ ಅವರಿಬ್ಬರನ್ನೂ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದೇ ವೇಳೆ, ಈ ಸ್ನೇಹಿತರು ಶಾಕಿಂಗ್ ಎನ್ನುವ ಮಾಹಿತಿಯನ್ನು ತೆರೆದಿಟ್ಟಿದ್ದಾರೆ. ಅದೇನೆಂದರೆ, ಮೂವರೂ ಅವರು ಒಟ್ಟಿಗೆ ಡ್ರಗ್ಸ್ ಮತ್ತು ಮದ್ಯ ಸೇವಿಸಿದ್ದಾರೆ ಎನ್ನುವುದು!
ಕನ್ನಡದಲ್ಲಿ ಕೊನೆಯ ಶೋ ಎಂದ ಸುದೀಪ್ ತೆಲುಗು ಬಿಗ್‌ಬಾಸ್‌ನಲ್ಲಿ! ವೈರಲ್ ವಿಡಿಯೋಗೆ ಫ್ಯಾನ್ಸ್ ಶಾಕ್
ಹೈಸ್ಕೂಲ್ ಓದುತ್ತಿರುವ ಈ ಮಕ್ಕಳು ಡ್ರಗ್ಸ್ ಮತ್ತು ಮದ್ಯ ಸೇವಿಸಿರುವ ವಿಷಯ ಬಹಿರಂಗಗೊಳ್ಳುತ್ತಿದ್ದಂತೆಯೇ ಎಲ್ಲರೂ ಶಾಕ್‌ಗೆ ಒಳಗಾಗಿದ್ದಾರೆ. ಸಾಗರ್ ಕಾಕ್ ಟೈಲ್ ಓವರ್ ಡೋಸ್ ಸೇವಿಸಿ ಕುಸಿದು ಬಿದ್ದ. ಆಗ ನಾವಿಬ್ಬರೂ ಗಾಬರಿಗೊಂಡು ರಸ್ತೆಯಿಂದ ಎಳೆದೊಯ್ದು ಗದ್ದೆಗೆ ಎಸೆದು ಮನೆಗೆ ಹೋಗಿರುವುದಾಗಿ ತಿಳಿಸಿದ್ದಾರೆ. ಅವನು ಸಾಯುತ್ತಾನೆ ಎಂದು ನಮಗೆ ತಿಳಿದಿರಲಿಲ್ಲ. ಭಯದಿಂದ ಓಡಿ ಹೋಗಿರುವುದಾಗಿ ಸ್ನೇಹಿತರು ಹೇಳಿದ್ದಾರೆ. ಆದರೆ ತಾವು ಕೊಲೆ ಮಾಡಿಲ್ಲ ಎಂದಿದ್ದಾರೆ. ಆದರೆ, ತಮ್ಮ ಪುತ್ರನ ಗಂಟಲನ್ನು ಸೀಳಲಾಗಿದ್ದು, ಕೈಕಾಲುಗಳ ಮೇಲೆ ಹೊಡೆದ ಗುರುತು ಇರುವುದಾಗಿ ನಟಿ ಹೇಳಿದ್ದಾರೆ.
ಘಟನಾ ಸ್ಥಳದ ಬಳಿಯಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದು, ಇಬ್ಬರು ಸ್ನೇಹಿತರು ಸಾಗರ್‌ನನ್ನು ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಪರಿಸ್ಥಿತಿ ತಿಳಿಯಾಗದೇ ಇದ್ದಾಗ, ಆರಂಭದಲ್ಲಿ ಅಪರಾಧಿ ನರಹತ್ಯೆ ಆರೋಪದಡಿ ಕ್ರಮ ಕೈಗೊಳ್ಳಲು ಬಯಸಿದ್ದ ಪೊಲೀಸರು, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದು ದೂರು ದಾಖಲಿಸಿಕೊಂಡು ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. . ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ತಿಳಿಸಿದ್ದಾರೆ. “ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸಾವಿನ ನಿಖರ ಕಾರಣ ದೃಢಪಡದಿದ್ದರೂ, ವಿಷಪ್ರಾಶನ ಅಥವಾ ಹೆಚ್ಚುವರಿ ಪ್ರಮಾಣದ ಮಾದಕ ದ್ರವ್ಯ ಸೇವಿಸಿರುವ ಲಕ್ಷಣಗಳು ಕಂಡು ಬಂದಿವೆ. ಎಂಜಲಿನ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಸಂಗ್ರಹಿಸಿಡಲಾಗಿದೆ” ಎಂದು ಫತೇಪುರ್ ವೃತ್ತಾಧಿಕಾರಿ ಅಶುತೋಷ್ ಶಿವಂ ಹೇಳಿದ್ದಾರೆ. ನಟಿ ಕ್ರೈ ಪೆಟ್ರೋಲ್ ಸೇರಿದಂತೆ ಹಲವು ಧಾರಾವಾಹಿಗಳಿಂದ ಮನೆ ಮಾತಾಗಿದ್ದಾರೆ.
ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಶಿವರಾಜ್ ಕುಮಾರ್! ಚಿಕಿತ್ಸೆಗೂ ಮುನ್ನ ಹಾಟ್ ಸೀಟ್‌ನಲ್ಲಿ ಶಿವಣ್ಣ...