ಕೊರೋನಾ ಭಯ; ಹೋಂ ಕ್ವಾರಂಟೈನ್‌ನಲ್ಲಿದ್ದ ಹೆಂಡತಿ ಕೊಂದ ಗಂಡ!

By Suvarna News  |  First Published Oct 12, 2020, 4:06 PM IST

ಕೊರೋನಾ ಭಯಕ್ಕೆ ಎರಡು ಜೀವಗಳು ಬಲಿ/ ಅನುಮಾನಾಸ್ಪದ ರೀತಿ ಮಹಿಳೆ ಸಾವು/ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಗಂಡ ಹೆಂಡತಿಯ ಹತ್ಯೆ ಮಾಡಿದನೆ?/ ಕೊರೋನಾದ ಕರಾಳ ಮುಖ ಅನಾವರಣ


ಖಮ್ಮಂ(ಅ. 11)  ಕೊರೋನಾ ಕಾರಣಕ್ಕೆ ಹೋಂ ಕ್ವಾರಂಟೈನ್ ನಲ್ಲಕಿದ್ದ ಮಹಿಳೆ ಅನುಮಾನಾಸ್ಪದ ರೀತಿ ಸಾವನ್ನಪ್ಪಿದ್ದಾಳೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಡಿಲ್ಲ, ಆಕೆಯ ಗಂಡನೆ ಹತ್ಯೆ ಮಾಡಿದ್ದಾನೆ ಎಂದು ಸಾವಿಗೀಡಾದ ಮಹಿಳೆಯ ತಾಯಿ ಆರೋಪಿಸಿದ್ದಾಳೆ. 

ಹೆಂಡತಿಗೆ ಕೊರೋನಾ ತಾಗಿದ್ದು ಗಂಡನ ಸಿಟ್ಟಿಗೆ ಕಾರಣವಾಗಿತ್ತು.  ತೆಲಂಗಾಣದ ಖಮ್ಮಂ ಜಿಲ್ಲೆಯ ಘಟನೆ ಕೊರೋನಾದ ಇನ್ನೊಂದು ಕರಾಳ ಮುಖವನ್ನು ತೆರೆದಿರಿಸಿದೆ.

Tap to resize

Latest Videos

ಕೊರೋನಾ ಔಷಧಿಗಳು ತರುವ ಸೈಡ್ ಎಫೆಕ್ಟ್ ಭಯಾನಕ

ಚಲ್ಲಾ ನಾಗರಾಜ್ ಮತ್ತು ರಾಮಲಕ್ಷ್ಮೀ ವರ್ಷಗಳ ಹಿಂದೆ ಮದುವೆಯಾಗಿದ್ದರು.   ದಂಪತಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಗಂಭೀರ ಲಕ್ಷಣಗಳು ಇಲ್ಲದ ಕಾರಣ ಹೋಂ ಕ್ವಾರಂಟೈನ್ ಆಗುವಂತೆ ವೈದ್ಯರು ತಿಳಿಸಿದ್ದರು.

ಕೊರೋನಾ ಸೋಂಕು ತಗುಲಿದ್ದ ರಾಮಲಕ್ಷ್ಮೀ ಶವ ಭಾನುವಾರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಗಳ ಶವವನ್ನು ಮೊದಲು ತಾಯಿ ನೋಡಿದ್ದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾಳೆ.

ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ.   ಸಾವಿಗೀಡಾದ ಮಗಳ ಮುಖ ಕಪ್ಪು ಬಣ್ಣಕ್ಕೆ ತಿರುಗಿದೆ.  ಅವಳ ಕುತ್ತಿಗೆ ಬಳಿ ಮಾರ್ಕ್ ಆಗಿದೆ.  ಮಗನಿಗೂ ತಾಯಿಯ ಕಾರಣದಿಂದ ಕೊರೋನಾ ಬಂದಿದೆ ಎಂದು ಕೋಪಗೊಂಡಿದ್ದ ಗಂಡನೆ ಆಕೆಯ ಹತ್ಯೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಾಯಿ ಆರೋಪಿಸಿದ್ದಾಳೆ.

 

 

click me!