ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ; ಹತ್ಯೆ ಬಗ್ಗೆ ಹಂತಕನೊಂದಿಗೆ ಕಾಂಗ್ರೆಸ್ ಮುಖಂಡ ಮಾತುಕತೆ!

By Ravi Janekal  |  First Published Oct 8, 2022, 12:29 PM IST

'ನಮಸ್ಕಾರ ಅಣ್ಣಾವರೆ, ನೀವು ಗುರೂಜಿ ಹೊಡೆಯೋದಕ್ಕೆ ಡೀಲ್ ಕೊಟ್ಟಿದ್ದರಲ್ಲ ಅದರ ಬಗ್ಗೆ ಮಾತನಾಡಬೇಕು' ಚಂದ್ರಶೇಖರ ಗುರೂಜಿಯ ಹಂತಕ ಮಹಾಂತೇಶ್ ಶಿರೂರು-ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆಗೆ ಕಳಿಸಿ ವಾಟ್ಸಪ್ ಮೆಸೇಜ್.


ಹುಬ್ಬಳ್ಳಿ (ಅ.8) : 'ನಮಸ್ಕಾರ ಅಣ್ಣಾವ್ರೆ, ನೀವು ಗುರೂಜಿ ಹೊಡೆಯೋದಕ್ಕೆ ಡೀಲ್ ಕೊಟ್ಟಿದ್ರಲ್ಲ, ಅದರ ಬಗ್ಗೆ ಮಾತನಾಡಬೇಕಿತ್ತು' ಇದು ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿಯ ಹಂತಕ ಮಹಾಂತೇಶ್ ಶಿರೂರು ಗುರೂಜಿ ಹತ್ಯೆಗೆ ಮುನ್ನ ಧಾರವಾಡ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆಗೆ ಕಳಿಸಿದ ವಾಟ್ಸಪ್(WhatsApp message) ಸಂದೇಶ!

ಚಂದ್ರಶೇಖರ್‌ ಗುರೂಜಿ ಹತ್ಯೆಯ ರಹಸ್ಯ ಬಿಚ್ಚಿಟ್ಟ ಕವರ್‌ ಸ್ಟೋರಿ ತಂಡ

Tap to resize

Latest Videos

ಹೌದು, ತನ್ನದೇ ಶಿಷ್ಯ ಬಳಗದಿಂದ ಭೀಕರವಾಗಿ ಹತ್ಯೆಯಾದ(Murdered)  ಸರಳ ವಾಸ್ತು ತಜ್ಞ ಡಾ. ಚಂದ್ರಶೇಖರ ಗುರೂಜಿ(Dr.Chandrasekhar Guruji) ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಹುಬ್ಬಳ್ಳಿ ಪೊಲೀಸರು ಹಂತಕರ‌ ಬಂಧನದ ಬಳಿಕ 800 ಪುಟಗಳು ದೋಷಾರೋಪಣೆ(charge sheet) ಪಟ್ಟಿಯನ್ನು ನ್ಯಾಯಾಲಯಕ್ಕೆ‌ ಸಲ್ಲಿಸಿದ್ದು, ಗುರೂಜಿ ಹತ್ಯೆಯ ಇಂಟರೆಸ್ಟಿಂಗ್ ಕಹಾನಿ ಬಯಲಾಗಿದೆ‌. 

ಅದರಲ್ಲೂ ಹತ್ಯೆಗೂ 25 ದಿನಗಳ‌ ಮೊದಲೇ ಹಂತಕ ಮಹಾಂತೇಶ್ ಶಿರೂರು(Mahantesh Shirooru) ಹಾಗೂ ಗುರೂಜಿ ಬೇನಾಮಿ ಆಸ್ತಿ ಖರೀದಿಸಿದ್ದ ಧಾರವಾಡ(Dharwad)ದ ಕಾಂಗ್ರೆಸ್(Congress) ಮುಖಂಡ ದೀಪಕ್ ಚಿಂಚೋರೆ(Deepak Chinchore) ಮಧ್ಯೆ ನಡೆದ ವಾಟ್ಸಪ್ ಮೆಸೇಜ್ ಪ್ರಕರಣಕ್ಕೆ‌ ಟ್ವಿಸ್ಟ್ ಕೊಟ್ಟಿದ್ದು, ತನಿಖಾಧಿಕಾರಿಗಳು ಎಲ್ಲ ವಿಚಾರಗಳನ್ನು ದೋಷಾರೋಪಣ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಹಂತಕ ಮಹಾಂತೇಶ್ ಶಿರೂರು ಹಾಗೂ ಕಾಂಗ್ರೆಸ್ ದೀಪಕ್ ಚಿಂಚೋರೆ ಮಧ್ಯೆ‌ ನಡೆದ ವಾಟ್ಸಪ್ ಸಂದೇಶ:

10-05-2022 ರ ರಾತ್ರಿ 11:59 ನಿಮಿಷಕ್ಕೆ ಹಂತಕ‌ ಮಹಾಂತೇಶ್ ತನ್ನದೇ ಮೊಬೈಲ್ ಸಂಖ್ಯೆ 9606***50 ಯಿಂದ ದೀಪಕ್ ಚಿಂಚೋರೆ ನಂಬರ್‌ಗೆ 98445**13 ಮೆಸೇಜ್ ಮಾಡಿದ್ದ. 'ನಮಸ್ಕಾರ ಅಣ್ಣಾವ್ರೆ, ನೀವು ಗುರೂಜಿ ಹೊಡೆಯೊದಿಕ್ಕೆ ಡೀಲ್ ಕೊಟ್ಟಿದ್ರಲ್ಲ; ಅದರ ಬಗ್ಗೆ ಮಾತನಾಡಬೇಕು'

ಮಾರನೇ ದಿನ( Next Day) 11-05-2022 ರ ಮಧ್ಯರಾತ್ರಿ( Midnight) 12 ಗಂಟೆ ಎರಡು ಮೆಸೇಜ್ ಕಳಿಸಿದ್ದ.

 'ಪೋನ್ ರಿಸೀವ್ ಮಾಡ್ರಿ ಅಣ್ಣಾವ್ರೆ' ಎಂದು ಮೆಸೇಜ್‌ ಕಳಿಸಿದ್ದ. ಬಳಿಕ ನೀವು ಚಂದ್ರಶೇಖರ ಗುರೂಜಿ ಬೇನಾಮಿ ಪ್ರಾಪರ್ಟಿ ಹಿಡಿದಿದ್ದರ ಬಗ್ಗೆ ಗುರೂಜಿನ ಹೊಡೆಯೋಕೆ ಹೇಳಿದ್ದರಲ್ಲ, ಅದರ ಬಗ್ಗೆ ಮಾತನಾಡಬೇಕಿತ್ತು, ನೀವು ಈ ಪೋನ್‌ನಲ್ಲಿ ಮಾತನಾಡಬೇಡ ಎಂದಿದ್ರಿ, ಯಾವಾಗ ಎಲ್ಲಿ ಭೇಟಿಯಾಗೋಣ? ಹೇಳಿ ಅಣ್ಣಾವ್ರೆ'  ಎಂದು ಮೆಸೇಜ್ ಮಾಡಿದ್ದ ಮಹಾಂತೇಶ್ ಶಿರೂರು.

ಮಹಾಂತೇಶ್ ಶಿರೂರು ಕಳಿಸಿದ ಮೆಸೇಜ್ ನೋಡಿದ  ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಬೆಳಗಿನ ಜಾವ ಯಾವ ರೀತಿ ಪ್ರತಿಕ್ರಿಯಿಸಿದ್ದರು ಅನ್ನೊದರ ವಿವರ ಇಲ್ಲಿದೆ ನೋಡಿ.

'Stop nonsense you are taking stupid. In my life never done wrong things, keeping me Dark above court you are taking all beseless and never expected from you.' ಅಂತ ರಿಪ್ಲೈ ಮಾಡ್ತಾರೆ. ಅಷ್ಟಕ್ಕೇ ಸುಮ್ಮನಾಗದೇ ಮತ್ತೊಂದು ಮಸೇಜ್ ಕಳಿಸಿದ್ದರು.
ಅದರ ವಿವರ ಇಲ್ಲಿದೆ‌,

'Stop rubbish taking my reputation not spoil by you, your attitude criminal I am innocent man you seems wrong way. I never done wrong in my life' ಅಂತ ಉತ್ತರ ಕೊಟ್ಟಿದ್ದರು. ಅಷ್ಟೇ ಅಲ್ಲ, ಮಹಾಂತೇಶ್ ಶಿರೂರು ಮಾಡಿದ್ದ ವಾಟ್ಸಪ್ ಮೆಸೇಜ್ ವಿಚಾರವನ್ನು ದೀಪಕ್ ಚಿಂಚೋರೆ, ಖುದ್ದಾಗಿ ಚಂದ್ರಶೇಖರ ಗುರೂಜಿ ಭೇಟಿಯಾಗಿ ತಿಳಸಿದ್ದರಂತೆ. ಆದ್ರೆ ಗುರೂಜಿ ಮಾತ್ರ ಹಂತಕರಿಂದ ಎಚ್ಚರವಹಿಸಲೇ‌ ಇಲ್ಲ ಅನ್ನೋದು ಪೊಲೀಸರು ತನಿಖೆ ವೇಳೆ ಬೆಳಕಿಗೆ ಬಂದಿದೆ. 

ಬೇನಾಮಿ ಆಸ್ತಿ ವಿಚಾರಕ್ಕೆ ಗುರೂಜಿ ಹತ್ಯೆ!

 ಹೌದು. ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ನಡೆದಿದ್ದು ಬೇನಾಮಿ ಆಸ್ತಿ‌ ವಿಚಾರದಲ್ಲೇ ಅನ್ನೋದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ಗುರೂಜಿ ಬಸವರೆಡ್ಡಿ ಔಡರಡ್ಡಿ ಹೆಸರಲ್ಲಿ ಗೋಕುಲ ಗ್ರಾಮದ ಸರ್ವೆ ನಂಬರ್ 166/1ರಲ್ಲಿ ಇದ್ದ  5 ಎಕರೆ 11 ಗುಂಟೆ ಬೆನಾಮಿ ಆಸ್ತಿಯನ್ನು ಗುರೂಜಿಗೆ ಗೊತ್ತಾಗದಂತೆ  ಬಸವರಡ್ಡಿ ಜೊತೆ ಸೇರಿಕೊಂಡು ಮಹಾಂತೇಶ್ ಶಿರೂರು, ಮಂಜುನಾಥ ಮರೇವಾಡ್  ಮಾರಾಟ ಮಾಡಿದ್ದರು.

ಸರಳವಾಸ್ತು ಗುರೂಜಿ ಸಹಸ್ರಾರು ಕೋಟಿ ಒಡೆಯ: ಸಿಂಗಾಪುರಕ್ಕೆ ತೆರಳಿ ವಾಸ್ತುಶಾಸ್ತ್ರಜ್ಞರಾದರು

 ಧಾರವಾಡದ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಈ ಆಸ್ತಿಯನ್ನು ತನ್ನ ಆಪ್ತ ತಾನಾಜಿ ಶಿರ್ಕೆ ಹೆಸರಲ್ಲಿ ಖರೀದಿಸಿದ್ದ. ಈ ವಿಚಾರ ಗೊತ್ತಾದ ಬಳಿಕ‌ ಚಂದ್ರಶೇಖರ ಗುರೂಜಿ ಕುಟುಂಬಸ್ಥರು ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಇದರಿಂದಾಗಿ ಆಸ್ತಿ‌ ಮಾರಾಟದಿಂದ ಬರಬೇಕಿದ್ದ ಪೂರ್ತಿ‌ ಹಣ ಮಹಾಂತೇಶ್ ಶಿರೂರು ಹಾಗೂ ಮಂಜುನಾಥ ಮರೆವಾಡ ಕೈಗೆ ತಲುಪಿರಲಿಲ್ಲ.‌ ಇದರಿಂದಾಗಿ ಗುರೂಜಿ ಮೇಲೆ ಕೆಂಡಮಂಡಲರಾಗಿದ್ದ ಹಂತಕರು, ಕೇಸ್ ವಾಪಸು ಪಡೆಯುವಂತೆ‌ ಕೇಳಿಕೊಂಡಿದ್ದರು. ಆದ್ರೆ ಇದಕ್ಕೆ ಚಂದ್ರಶೇಖರ ಗುರೂಜಿ ಒಪ್ಪಿರಲಿಲ್ಲ. 

ಇದರಿಂದಾಗಿ ಗುರೂಜಿ ಹತ್ಯೆಗೆ ಪ್ಲಾನ್ ಮಾಡಿದ್ದ ಹಂತಕರು, ಜುಲೈ 5 ರಂದು ಹುಬ್ಬಳ್ಳಿಯ ಉಣಕಲ್ ಬಳಿ‌ ಇರುವ  ಪ್ರೆಸಿಡೆಂಟ್ ಹೋಟೆಲ್ ನಲ್ಲಿ 54 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು.

click me!