ಉದ್ಯಮಿ ಹತ್ಯೆ ಪ್ರಕರಣದಲ್ಲಿ ಎ-1 ಆರೋಪಿ ಡಾ. ಸಚಿನ್ ಶಿರಗಾವಿ ಬಳಿ ಎ-2 ಆರೋಪಿ ಶಫತ್ 50 ಸಾವಿರ ರೂ. ಸುಪಾರಿ ಪಡೆದಿದ್ದರು. ಈ 50 ಸಾವಿರ ರೂ. ಹಣವನ್ನು ಮೂವರು ಆರೋಪಿಗಳು ಹಂಚಿಕೊಂಡಿದ್ದರು ಎನ್ನಲಾಗಿದ್ದು, ಬಂಧಿತರಿಂದ ರಾಡ್ ಸೇರಿ ಇನ್ನಿತರ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಳಗಾವಿ (ಫೆಬ್ರವರಿ 21, 2023): ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಉದ್ಯಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಗೋಕಾಕ್ ಶಹರ ಠಾಣೆ ಪೊಲೀಸರು 24 ವರ್ಷದ ಮೊಯಿನ್ ಪಟೇಲ್ ಹಾಗೂ 21 ವರ್ಷದ ಅಬುತಾಲ್ ಮುಲ್ಲಾ ಅವರನ್ನು ಬಂಧಿಸಿದ್ದಾರೆ. ಈ ಹಿನ್ನೆಲೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಬಂಧಿತ ಇಬ್ಬರೂ ಎ-2 ಆರೋಪಿ ಶಫತ್ ತ್ರಾಸಗಾರ್‌ನ ಸ್ನೇಹಿತರು ಎಂದು ತಿಳಿದುಬಂದಿದೆ.
ಉದ್ಯಮಿ ಹತ್ಯೆ ಪ್ರಕರಣದಲ್ಲಿ ಎ-1 ಆರೋಪಿ ಡಾ. ಸಚಿನ್ ಶಿರಗಾವಿ ಬಳಿ ಎ-2 ಆರೋಪಿ ಶಫತ್ 50 ಸಾವಿರ ರೂ. ಸುಪಾರಿ ಪಡೆದಿದ್ದರು. ಈ 50 ಸಾವಿರ ರೂ. ಹಣವನ್ನು ಮೂವರು ಆರೋಪಿಗಳು ಹಂಚಿಕೊಂಡಿದ್ದರು ಎನ್ನಲಾಗಿದ್ದು, ಬಂಧಿತರಿಂದ ರಾಡ್ ಸೇರಿ ಇನ್ನಿತರ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನು ಓದಿ: ಗೋಕಾಕ್: ಉದ್ಯಮಿ ರಾಜು ಝಂವರ್ ಹತ್ಯೆ ಪ್ರಕರಣ, 6 ದಿನಗಳ ಬಳಿಕ ಶವ ಪತ್ತೆ
ಪ್ರಕರಣದ ವಿವರ..
ಫೆಬ್ರವರಿ 10 ರಂದು ಬೆಳಗಾವಿ ಜಿಲ್ಲೆ ಗೋಕಾಕ್‌ನಿಂದ ಉದ್ಯಮಿ ರಾಜು ಝಂವರ ನಾಪತ್ತೆಯಾಗಿದ್ದರು. ನಂತರ, ಗೋಕಾಕ್ ನಗರದ ಸಿಟಿ ಆಸ್ಪತ್ರೆ ಬಳಿ ರಾಜು ಝಂವರ್ ಅವರ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ಅಲ್ಲದೆ, ಫೆಬ್ರವರಿ 11ರಂದು ಗೋಕಾಕ ಶಹರ ಠಾಣೆಯಲ್ಲಿ ಉದ್ಯಮಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ ಉದ್ಯಮಿ ರಾಜು ಝಂವರ್‌ಗೆ ಕೊನೆ ಬಾರಿ ಕರೆ ಮಾಡಿದ್ದವರ ಕರೆಯಿಸಿ ವಿಚಾರಣೆ ಮಾಡಲಾಗಿತ್ತು. ರಾಜು ಝಂವರ್ ನಾಪತ್ತೆಗೂ ಮುನ್ನ ವೈದ್ಯ ಡಾ.ಸಚಿನ್ ಶಿರಗಾವಿ ದೂರವಾಣಿ ಕರೆ ಮಾಡಿದ್ದು ಪತ್ತೆಯಾಗಿತ್ತು. ನಂತರ ಡಾ. ಸಚಿನ್ ಶಿರಗಾವಿಯನ್ನು ವಶಕ್ಕೆ ಪಡೆದು ಪೊಲೀಸ್ ಭಾಷೆಯಲ್ಲಿ ವಿಚಾರಣೆ ಮಾಡಲಾಯ್ತು.
ಇದನ್ನೂ ಓದಿ: Chitradurga: ಕುಡಿದ ಅಮಲಿನಲ್ಲಿ ಯುವಕನಿಗೆ ಚಾಕು ಇರಿತ; ಆಸ್ಪತ್ರೆಯಲ್ಲಿ ಸಾವು
ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ವೈದ್ಯ ಡಾ.ಸಚಿನ್ ಶಿರಗಾವಿ ಸತ್ಯ ಬಾಯಿಬಿಟ್ಟಿದ್ದು, ತಾನೇ ಸುಪಾರಿ ನೀಡಿ ಕೊಲೆ ಮಾಡಿಸಿರುವುದನ್ನು ಒಪ್ಪಿಕೊಂಡಿದ್ದಾನೆ. ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ವೈದ್ಯ ಡಾ. ಸಚಿನ್ ಶಿರಗಾವಿ, ಉದ್ಯಮಿ ರಾಜುವನ್ನು ಹತ್ಯೆಗೈದಿದ್ದಾರೆ ಎಂಬುದು ತಿಳಿದುಬಂದಿದೆ.
ಎ-2 ಆರೋಪಿ ಶಪಥ್ ಸೇರಿ ಡಾ. ಸಚಿನ್ ಶಿರಗಾವಿ ಮೂವರಿಗೆ ಸುಪಾರಿ ನೀಡಿದ್ದರು. ಫೆಬ್ರವರಿ 10ರಂದು ಯೋಗಿಕೊಳ್ಳ ಮಾರ್ಗದ ಬಳಿ ಉದ್ಯಮಿ ರಾಜು ಝಂವರ್ ಹತ್ಯೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಬಳಿಕ ಕೊಳವಿ ಗ್ರಾಮದ ಬಳಿ ಘಟಪ್ರಭಾ ಬಲದಂಡೆ ಕಾಲುವೆಗೆ ಶವ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಘಟನೆ ನಡೆದು 6 ದಿನಗಳ ಬಳಿಕ ಉದ್ಯಮಿ ರಾಜು ಝಂವರ್ ಶವ ಪತ್ತೆಯಾಗಿತ್ತು.
ಇದನ್ನೂ ಓದಿ: Chikkamagaluru: ಬೈಕಿನಲ್ಲಿ ಹೋಗುತ್ತಿದ್ದ ಇಬ್ಬರ ಮೇಲೆ ಗುಂಡಿನ ದಾಳಿ: ಸವಾರರಿಬ್ಬರು ಸ್ಥಳದಲ್ಲೇ ಸಾವು
ಗೋಕಾಕ್‌ನಲ್ಲಿ ಉದ್ಯಮಿ ರಾಜು ಝಂವರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹಕ್ಕಾಗಿ ಪೊಲೀಸರು ಮೆಗಾ ಸರ್ಚ್ ಆಪರೇಷನ್ ಕೈಗೊಂಡಿದ್ದರು. ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಎರಡೂ ಜಿಲ್ಲೆಗಳ 350 ಪೊಲೀಸರು ಶವ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಪಂಚನಾಯಕನಟ್ಟಿ ಬಳಿ ಘಟಪ್ರಭಾ ಬಲದಂಡೆ ಕಾಲುವೆಯಲ್ಲಿ ರಾಜು ಝಂವರ್ ಶವ ಪತ್ತೆಯಾಗಿದೆ. ಫೆಬ್ರವರಿ 10ರ ರಾತ್ರಿ ಗೋಕಾಕ್ ನಗರದಿಂದ ಉದ್ಯಮಿ ರಾಜು ಝಂವರ್ ನಾಪತ್ತೆಯಾಗಿದ್ದರು. ಗೋಕಾಕ್ ಸಿಟಿ ಆಸ್ಪತ್ರೆ ಬಳಿ ರಾಜು ಝಂವರ್ ದ್ವಿಚಕ್ರವಾಹನ ಪತ್ತೆಯಾಗಿತ್ತು.