ತಾಯಿಯನ್ನೇ ಕೊಂದು ಲವರ್ ಜೊತೆ ಎಸ್ಕೇಪ್ ಆಗಿದ್ದ ಅಮೃತಾ ಅರೆಸ್ಟ್!

By Suvarna News  |  First Published Feb 5, 2020, 1:26 PM IST

ತಾಯಿಯನ್ನೇ ಹತ್ಯೆ ಮಾಡಿ ಪ್ರಿಯಕರನೊಂದಿಗೆ ಎಸ್ಕೇಪ್ ಆಗಿದ್ದ ಮಗಳು| ಅಂಡಮಾನ್ ನಿಕೋಬಾರ್ ನಲ್ಲಿ ಆರೋಪಿಗಳ ಬಂಧನ| ಆರೋಪಿಗಳನ್ನ ಬಂಧಿಸಿದ ಇನ್ಸ್ಪೆಕ್ಟರ್ ಅಂಬರೀಶ್ ಅಂಡ್ ಟೀಂ


ಬೆಂಗಳೂರು[ನ.05]: ಮೈ ತುಂಬಾ ಸಾಲ ಮಾಡಿಕೊಂಡಿದ್ದೇನೆಂದು ಸುಳ್ಳು ಹೇಳಿ, ತಾಯಿಯನ್ನು ಕೊಂದು ಪ್ರಿಯಕರನೊಂದಿಗೆ ಪರತಾರಿಯಾಗಿದ್ದ ಬೆಂಗಳೂರಿನ ಮಹಿಳಾ ಟೆಕ್ಕಿ ಅಮೃತಾ ಕೊನೆಗೂ ಪೊಲೀಸರ ಬಲೆಯಲ್ಲಿ ಸಿಕ್ಕಿ ಬಿದ್ದಿದ್ದಾಳೆ. ಬೆಂಗಳೂರಿನಿಂದ ಹೈದರಾಬಾದ್ ಗೆ ಟಿಕೆಟ್ ಬುಕ್ ಮಾಡಿ ಎಸ್ಕೇಪ್ ಆಗಿದ್ದ ಅಮೃತಾ ಹಾಗೂ ಆಕೆಯ ಪ್ರಿಯಕರ ಶ್ರೀಧರ್ ರಾವ್ ನನ್ನು ಅಂಡಮಾನ್ ನಿಕೋಬಾರ್ ನ್ಲಲಿ ಪೊಲೀಸರು ಬಂಧಿಸಿದ್ದಾರೆ.

ಓಡಿ ಹೋಗೋಣ ಬಾ.. ಮರ್ಡರ್ ಮಾಡಿ ಬೆಂಗಳೂರು ಟೆಕ್ಕಿ ಬಾಯ್ ಫ್ರೆಂಡ್ ಜತೆ ಪರಾರಿ

Tap to resize

Latest Videos

undefined

ಹೌದು ಫೆ. 2 ರಂದು  ಕೆ.ಆರ್‌.ಪುರ ಠಾಣಾ ವ್ಯಾಪ್ತಿ ನಡೆದಿದ್ದ ಕೊಲೆ ಪ್ರಕರಣವೊಂದು ಸಿಲಿಕಾನ್ ಸಿಟಿ ಜನರನ್ನು ಬೆಚ್ಚಿ ಬೀಳಿಸಿತ್ತು.  ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ ಅಮೃತಾ, ಮಲಗಿದ್ದ ತನ್ನ ತಾಯಿಯನ್ನೇ ಚಾಕು ಇರಿದು ಕೊಂದಿದ್ದಳು. ಅಲ್ಲದೇ ತನ್ನ ಸಹೋದರನ ಮೇಲೂ ದಾಳಿ ನಡೆಸಿದ್ದಳು. ಕಾರಣ ಕೇಳಿದಾಗ ಮೈ ತುಂಬಾ ಸಾಲ ಮಾಡಿಕೊಂಡಿರುವುದಾಗಿ ಹೇಳಿ ಅಲ್ಲಿಂದ ಪರಾರಿಯಾಗಿದ್ದಳು. ಅದೃಷ್ಟವಶಾತ್ ಪಾರಾಗಿದ್ದ ಸಹೋದರ ಕೂಡಲೇ ಸಂಬಂಧಿಕರನ್ನು ಕರೆಸಿದ್ದ ಹಾಗೂ ಪೊಲೀಸರಿಗೆ ಮಾಹಿತಿ ರವಾನಿಸಿದ್ದ.

ತನಿಖೆ ನಡೆಸಿದ ಪೊಲೀಸರಿಗೆ ಮಾತ್ರ ಅಮೃತಾ ತನ್ನ ಸಹೋದರನಿಗೆ ಹೇಳಿದ್ದು ಕಟ್ಟು ಕತೆ ಎಂಬುವುದು ಸ್ಪಷ್ಟವಾಗಿತ್ತು. ತನಿಖೆ ಮುಂದುವರೆದಂತೆ ಈ ಪ್ರಕರಣ ಸದ್ಫೋಟಕ ತಿರುವು ಪಡೆದುಕೊಂಡಿದ್ದು, ಆಕೆ ಪ್ರೀತಿಸಿದ್ದ ಯುವಕನನ್ನು ತಾಯಿ ನಿರಾಕರಿಸಿದ್ದೇ ಈ ಕೊಲೆಗೆ ಕಾರಣವೆಂಬುವುದು ಸಾಬೀತಾಗಿತ್ತು. ಅಲ್ಲದೇ ಆಕೆ ತನ್ನ ಪ್ರಿಯಕರನೊಂದಿಗೆ ಹೈದ್ರಾಬಾದ್ ಗೆ ಪರಾರಿಯಾಗಿದ್ದಾಳೆಂಬ ವಿಚಾರವೂ ತಿಳಿದು ಬಂತು. ಸಿಸಿಟಿವಿ ದೃಶ್ಯಗಳೂ ಇದಕ್ಕೆ ಸಾಕ್ಷಿಯಾಗಿದ್ದವು.

ತಾನು ಸಾಲ ಮಾಡಿ ತಾಯಿಯ ಕೊಂದ ಮಹಿಳಾ ಟೆಕಿ, ಅದೃಷ್ಟವಶಾತ್‌ ತಮ್ಮ ಬಚಾವ್‌!

ಅಸಲಿಯತ್ತು ಹೊರ ಬಿದ್ದ ಬೆನ್ನಲ್ಲೇ ಮತ್ತಷ್ಟು ಸಕ್ರಿಯರಾದ ಪೊಲೀಸರು, ಕಾಲ್ ಡೀಟೇಲ್ಸ್ ಮೊದಲಾದ ವಿವರಗಳನ್ನು ಪಡೆದು ಆರೋಪಿಗಳನ್ನು ಬೆನ್ನತ್ತಿದ್ದರು. ಪ್ರಕರಣ ತನಿಖೆಯ ನೇತೃತ್ವ ವಹಿಸಿದ್ದ ಇನ್ಸ್ಪೆಕ್ಟರ್ ಅಂಬರೀಶ್ ಅಂಡ್ ಟೀಂ ಕೊಲೆ ನಡೆದ ಮೂರು ದಿನಗಳೊಳಗೆ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂಡಮಾನ್ ನಿಕೋಬಾರನ್ ನ ಪ್ಲೋರ್ಟ್ ಬ್ಲೈರ್ ನಲ್ಲಿ ತಲೆ ಮರೆಸಿಕೊಂಡಿದ್ದ ಈ ಖತರ್ನಾಕ್ ಪ್ರೇಮಿಗಳನ್ನು ಬಂಧಿಸಲಾಗಿದೆ.

ಕೊಲೆಗೆ ನಿಖರ ಕಾರಣ ಇನ್ನೂ ನಿಗೂಢ

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ವೈಟ್ ಫೀಲ್ಡ್ ವಿಭಾಗ ಡಿಸಿಪಿ ಎಂ.ಎನ್.ಅನುಚೇತ್ 'ಫೆಬ್ರವರಿ 2 ರಂದು ಕೆ.ಆರ್.ಪುರಂ ಅಕ್ಷಯನಗರದಲ್ಲಿ ನಡೆದಿದ್ದ ತಾಯಿ ನಿರ್ಮಲಾ ಕೊಲೆ ಪ್ರಕರಣ ಸಂಬಂಧ, ಪುತ್ರಿ ಅಮೃತಾ ಚಂದ್ರಶೇಖರ ಕೊಲೆ ಮಾಡಿದ ಆರೋದಪ ಹಿನ್ನಲೆ ಬಂಧಿಸಿದ್ದೇವೆ. ಅಂಡಮಾನ್ ನಿಕೋಬರ್ ಫೋರ್ಟ್ ಬ್ಲೇರ್ ನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಗಮನಿಸಿದಾಗ ಶ್ರೀಧರ್ ಜತೆಗೆ ಅಮೃತಾ ತೆರಳಿರುವುದು ಕಂಡು ಬಂದಿತ್ತು. ಕೊಲೆಗೆ ನಿಖರ ಕಾರಣ ಇನ್ನೂ ನಿಗೂಢವಾಗಿದೆ. ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸುತ್ತೇವೆ' ಎಂದಿದ್ದಾರೆ.

ಫೆಬ್ರವರಿ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ ಮಾಡಿ

click me!