ಮಗುವಿನ ಪ್ರಜ್ಞೆ ತಪ್ಪಿಸಲೋಗಿ ಕೊಂದೇಬಿಟ್ಟೆ; ತಪ್ಪೊಪ್ಪಿಕೊಂಡ ಬೆಂಗಳೂರು ಸ್ಟಾರ್ಟಪ್ ಸಿಇಒ ಸುಚನಾ ಸೇಠ್!

By Sathish Kumar KH  |  First Published Jan 10, 2024, 1:37 PM IST

ಬೆಂಗಳೂರಿನ ಸ್ಟಾರ್ಟಪ್ ಸಿಇಒ ಸುಚನಾ ಸೇಠ್ ತಾನು ಹೆತ್ತ 4 ವರ್ಷದ ಮಗುವನ್ನು ಕೊಲೆ ಮಾಡಿದ ಬಗ್ಗೆ ಗೋವಾ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.


ಬೆಂಗಳೂರು (ಜ.10): ಬೆಂಗಳೂರಿನ ಸ್ಟಾರ್ಟಪ್ ಸಿಇಒ ಸುಚನಾ ಸೇಠ್ ಅವರು ಗೋವಾಗೆ ಹೋಗಿ ಹೋಟೆಲೊಂದರಲ್ಲಿ ತಾನು ಹೆತ್ತ 4 ವರ್ಷದ ಮಗುವನ್ನೇ ಕೊಲೆಗೈದು ಬೆಂಗಳೂರಿಗೆ ಮೃತದೇಹ ತರುವಾಗ ಸಿಕ್ಕಿಬಿದ್ದಿದ್ದು, ಈತ ಸ್ವತಃ ತಾನೇ ಮಗುವಿನ ಕೊಲೆ ಬಗ್ಗೆ ಇಂಚಿಂಚು ಮಾಹಿತಿ ನೀಡಿದ್ದಾರೆ. ಗೋವಾ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

ಬೆಂಗಳೂರಿನ ಉದ್ಯಮಿ ಸುಚನಾ ಸೇಠ್‌ ತನ್ನ ಗಂಡನ ಮೇಲಿನ ಕೋಪಕ್ಕಾಗಿ ಹೆತ್ತ ಮಗುವನ್ನೇ ಕೊಲೆಗೈದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣ ಗೋವಾ ಹಾಗೂ ಕರ್ನಾಟಕ ರಾಜ್ಯಕ್ಕೆ ಸಂಬಂಧಪಟ್ಟಿದ್ದರಿಂದ ಗೋವಾ ಪೊಲೀಸರು ಸುಚನಾ ಸೇಠ್‌ಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ತಾನೇ ಮಗುವನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಗಂಡನ ಮೇಲಿನ ಕೋಪ ಹಾಗೂ ಕೊಲೆಯ ಕುರಿತ ಇಂಚಿಂಚು ಮಾಹಿತಿಯನ್ನು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾಳೆ.

Tap to resize

Latest Videos

undefined

ಗೋವಾದಲ್ಲಿ ಮಗನನ್ನು ಕೊಂದು ಬೆಂಗಳೂರಿಗೆ ಪರಾರಿಯಾಗ್ತಿದ್ದ ತಾಯಿ: ಸುಚನಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದೀಗೆ ನೋಡಿ..

ಸುಚನಾ ಸೇಠ್‌ ಹೇಳಿಕೆ: ನಾನು ಹಾಗೂ ವೆಂಕಟರಮಣ 2010 ರಲ್ಲಿ ಮದುವೆಯಾಗಿದ್ದೆವು. ನಾವು ಉದ್ಯಮ ಹಾಗೂ ಇತರೆ ಕಾರಣಕ್ಕಾಗಿ 2019ರಲ್ಲಿ ದಂಪತಿಗೆ ಮಗು ಮಾಡಿಕೊಂಡದ್ದೆವು. ನಮಗೆ ಮುದ್ದಾದ ಗಂಡು ಮಗುವಿನ ಜೊತೆಗಿದ್ದೆವು. ಆದರೆ, ನಮ್ಮ ದಾಂಪತ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ 2020ರಲ್ಲಿ ದಂಪತಿ ವಿಚ್ಛೇದನಕ್ಕೆ ಪಡೆಯಲು ಅರ್ಜಿ ಸಲ್ಲಿಸಿದ್ದೆವು. ಈ ವಿಚ್ಚೇಧನ ಅರ್ಜಿ ಪ್ರಕರಣ ಕೋರ್ಟ್ ನಲ್ಲಿತ್ತು. ವಿಚ್ಛೇದನದ ತೀರ್ಪು ಬರುವವರೆಗೂ ವಾರಕ್ಕೊಮ್ಮೆ ಪತಿ ವೆಂಕಟರಮಣನಿಗೆ ಮಗುವನ್ನ ವಿಡೀಯೋ ಕಾಲ್ ಮೂಲಕ ತೋರಿಸಬೇಕು ಎಂದು ನ್ಯಾಯಾಲಯ ಮಧ್ಯಂತರ ಆದೇಶ ನೀಡಿತ್ತು.

ಆದರೆ, ನ್ಯಾಯಾಲಯದ ಆದೇಶದಂತೆ ಮಗುವನ್ನು ವೆಂಕಟರಮಣನಿಗೆ ತೋರಿಸಲು ಸುತಾರಾಂ ಇಷ್ಟವಿರಲಿಲ್ಲ. ನನ್ನ ಮಗು ಕಂಡರೆ ನನಗೆ ಬಹಳ ಪ್ರೀತಿಯಿತ್ತು. ನಾನು ಇಷ್ಟು ಪ್ರೀತಿಸುವ ಮಗುವನ್ನು ನಾನು ದ್ವೇಷ ಮಾಡುವ ವೆಂಕಟರಮಣಿಗೆ ತೋರಿಸಲು ಮನಸ್ಸು ಒಪ್ಪುತ್ತಿರಲಿಲ್ಲ. ಹೀಗಾಗಿ ನಾನು ಭಾನುವಾರ ಗಂಡ ಕರೆ ಮಾಡುವ ವೇಳೆಗೆ ಮಗುವಿನ  ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ. ಆಗ, ಮಗು ಪ್ರಜ್ಞೆ ತಪ್ಪಿದೆ ಎಂದುಕೊಂಡಿದ್ದೆನು. ಆದರೆ, ದುರಾದೃಷ್ಟವಶಾತ್ ಮಗು ಸಾವನ್ನಪ್ಪಿತ್ತು.

Bengaluru: ಹೊಸ ವರ್ಷದ ಪಾರ್ಟಿಗಾಗಿ 5 ಲಕ್ಷ ಕೊಟ್ಟವನನ್ನೇ ಕೊಲೆಗೈದು ಕಾಡು ಪ್ರಾಣಿಗೆ ತಿನ್ನಲೆಸೆದ ಕಿರಾತಕರು!

ನಾನು ನನ್ನ  ಕೈಯಾರೆ ಹೆತ್ತ ಮಗುವನ್ನು ಕೊಂದುಬಿಟ್ಟೆನಲ್ಲಾ ಎಂಬ ನೋವಿನಲ್ಲಿ ನಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಕೈ ಕೊಯ್ದುಕೊಂಡೆನು. ಆಗ ರಕ್ತಸ್ರಾವ ಉಂಟಾಗುತ್ತಿದ್ದಾಗ ನೋವು ಹೆಚ್ಚಾಗಿದ್ದರಿಂದ ನಾನು ಕೈಗೆ ಬ್ಯಾಂಡೇಜ್‌ ಮಾಡಿಕೊಂಡು ಸಾವಿನಿಂದ ಪಾರಾದೆನು. ನಂತರ ಗಾಬರಿಯಲ್ಲಿ ಏನು ಮಾಡಬೇಕೆಂದು ತಿಳಿಯದೇ ಟ್ಯಾಕ್ಸಿ ಮಾಡಿಸಿಕೊಂಡು ಬೆಂಗಳೂರಿಗೆ ಬರಲು ತೀರ್ಮಾನಿಸಿದ್ದೆನು. ಹೀಗಾಗಿ, ಮೃತ ಮಗುವಿನ ದೇಹವನ್ನು ಸೂಟ್‌ಕೇಸ್‌ನಲ್ಲಿ ಹಾಕಿಕೊಂಡು ಅಲ್ಲಿಂದ ಪರಾರಿ ಆಗಲಿ ಯತ್ನಿಸಿದೆ ಎಂದು ಗೋವಾ ಪೊಲೀಸರ ಮುಂದೆ ಸುಚನಾ ಸೇಠ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಳೆ.

click me!