ಮಕ್ಕಳಿಗೆ ಉತ್ತಮ ಜೀವನ ರೂಪಿಸಲೆಂದು ಮಂಗಳೂರಿನಿಂದ ಬೆಂಗಳೂರಿಗೆ ಬಂದು ನೆಲೆಗೊಂಡಿದ್ದ ದಂಪತಿಯನ್ನು ಮಗನೇ ಬೀಕರವಾಗಿ ಕೊಲೆ ಮಾಡಿ ಪರಾರಿ ಆಗಿದ್ದಾನೆ.
ಬೆಂಗಳೂರು (ಜು.18): ಮಂಗಳೂರು ಮೂಲದ ದಂಪತಿ ಮಕ್ಕಳಿಗೆ ಉತ್ತಮ ಜೀವನ ರೂಪಿಸಿಕೊಡುವುದಕ್ಕಾಗಿ ಬೆಂಗಳೂರಿಗೆ ಬಂದು ನೆಲೆಗೊಂಡಿದ್ದರು. ಆದರೆ, ತಾವು ಹೆತ್ತು, ಎದೆಯೆತ್ತರಕ್ಕೆ ಬೆಳೆಸಿದ ಮಗನೇ ತಂದೆ-ತಾಯಿಯನ್ನು ಭೀಕರವಾಗಿ ಹತ್ಯೆ ಮಾಡಿ ಬಾಗಿಲನ್ನು ಮುಚ್ಚಿಕೊಂಡು ಓಡಿ ಹೋಗಿರುವ ದುರ್ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ.
ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಟರಾಯನಪುರದಲ್ಲಿ ಘಟನೆ ನಡೆದಿದೆ. ಕೆಲವು ವರ್ಷಗಳಿಂದ ಮಗ ಕುಡಿದು ಗಲಾಟೆ ಮಾಡುತ್ತಿದ್ದನು. ಮದುವೆ ಮಾಡಿದರೆ ಸರಿ ಹೋಗುತ್ತಾನೆ ಎಂದು ತಂದೆ-ಯತಾಯಿ ಸಹಿಸಿಕೊಂಡು ಇದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಮಗ ಸೈಕೋ ರೀತಿಯಲ್ಲಿ ವರ್ತಿಸುತ್ತಿದ್ದನು. ಮನೆಯಲ್ಲಿ ತಾನು ಕೇಳಿದಷ್ಟು ಹಣ ನೀಡುವಂತೆ ಗಲಾಟೆ ಮಾಡುತ್ತಿದ್ದನು. ಇದರಿಂದ ರೋಸಿ ಹೋಗಿದ್ದ ತಂದೆ-ತಾಯಿ ಹಣದ ಮೂಲಗಳನ್ನು ತಪ್ಪಿಸುವ ಯತ್ನ ಮಾಡಿದ್ದರು. ಆದರೆ, ಇದರಿಂದ ಕೋಪಗೊಂಡ ಮಗ ತಂದೆ-ತಾಯಿ ಇಬ್ಬರ ಮೇಲೂ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ, ರಸಕ್ತಸ್ರಾವದಿಂದ ಬಳಲುತ್ತಿದ್ದ ಇಬ್ಬರನ್ನೂ ಮನೆಯಲ್ಲಿ ಕೂಡಿಹಾಕಿ ಬೀಗ ಹಾಕಿಕೊಂಡು ಪರಾರಿ ಆಗಿದ್ದಾನೆ. ಇನ್ನು ಮನೆಯಲ್ಲಿಯೇ ದಂಪತಿ ರಕ್ತಸ್ರಾವದಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.
undefined
Bengaluru: ಹೆತ್ತ ಮಗನನ್ನೇ ಪೆಟ್ರೋಲ್ ಸುರಿದು ಸುಟ್ಟು ಹಾಕಿದ ನಿಷ್ಕರುಣಿ ತಾಯಿ
ಮೃತ ದಂಪತಿಯನ್ನು ಕೊಲೆ ಮಾಡಿದ ಯುವಕನ ತಾಯಿ ಶಾಂತ (60) ಹಾಗೂ ತಂದೆ ಭಾಸ್ಕರ್ (63) ಆಗಿದ್ದಾರೆ. ದಂಪತಿಯ ಎರಡನೇ ಮಗ ಶರತ್ (26) ಎಂಬಾತ ಕೃತ್ಯ ಎಸಗಿದ್ದಾನೆ. ಈ ಘಟನೆ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಸ್ಥಳಕ್ಕೆ ಆಗ್ನೇಯ ವಿಭಾಗ ಡಿಸಿಪಿ ಲಕ್ಷ್ಮೀ ಪ್ರಸಾದ್ ದೌಡಾಯಿಸಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಇನ್ನು ಕೊಲೆಯಾದ ದಂಪತಿ ಮಂಗಳೂರು ಮೂಲದವರು ಆಗಿದ್ದಾರೆ. ಕಳೆದ 25 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಇಲ್ಲಿಯೇ ವಾಸವಾಗಿದ್ದರು.
ಮೃತರಲ್ಲಿ ತಾಯಿ ಶಾಂತಾ ಕೇಂದ್ರ ಸರ್ಕಾರಿ ನೌಕರಳಾಗಿದ್ದು, ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಇನ್ನು ಅವರ ಪತಿ ಭಾಸ್ಕರ್ ಖಾಸಗಿ ಕ್ಯಾಂಟೀನ್ ವೊಂದರಲ್ಲಿ ಕ್ಯಾಶಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು ದಂಪತಿಗೆ ಇಬ್ಬರು ಮಕ್ಕಳಿದ್ದರು. ಒಬ್ಬ ಮಗ ಕೆಲಸಕ್ಕೆ ಹೋಗಿದ್ದನು. ಆದರೆ, ಇನ್ನೊಬ್ಬ ಮಗ ಆರೋಪಿ ಶರತ್ ಮನೆಯಲ್ಲೇ ಇರುತ್ತಿದ್ದನು. ಕೆಲಸವಿಲ್ಲದೇ ಮನೆಯಲ್ಲಿ ಇರುತ್ತಿದ್ದ ಕಿರಿಯ ಮಗ ಆಗಾಗ ಸೈಕೋ ರೀತಿ ವರ್ತಿಸುತ್ತಿದ್ದನು. ಇನ್ನು ನಿನ್ನೆ ಸಂಜೆ ವೇಳೆ ಕಿರಿಯ ಮಗ ಶರತ್ ಕುಡಿದು ಮನೆಯಲ್ಲಿ ಗಲಾಟೆ ಮಾಡಿದ್ದಾನೆ. ಈ ವೇಳೆ ರಾಡ್ ನಿಂದ ತಂದೆ ತಾಯಿಯ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ನಂತರ, ಮನೆ ಲಾಕ್ ಮಾಡಿ ಎಸ್ಕೇಪ್ ಅಲ್ಲಿಂದ ಪರಾರಿ ಆಗಿದ್ದಾನೆ.
Bengaluru PES College: ಪರೀಕ್ಷೆಯಲ್ಲಿ ಕಾಪಿ ಮಾಡ್ತಿದ್ದ ವಿದ್ಯಾರ್ಥಿಗೆ ಅವಮಾನ: 14ನೇ ಮಹಡಿಯಿಂದ ಬಿದ್ದು ಸಾವು
ಇನ್ನೊಬ್ಬ ಮಗ ಇಂದು ಬೆಳಗ್ಗೆ ತಂದೆ- ತಾಯಿಗೆ ಕರೆ ಮಾಡಿದ್ದಾನೆ. ಈ ವೇಳೆ ಮನೆಯಲ್ಲಿ ಯಾರೊಬ್ಬರೂ ಫೋನ್ ಸ್ವೀಕರಿಸಿ ಮಾತನಾಡಿಲ್ಲ. ಇದರಿಂದ ಅನುಮಾನ ಬಂದ ಪುತ್ರ ಕೂಡಲೇ ಪಕ್ಕದ ಮನೆಯವ್ರಿಗೆ ಕರೆ ಮಾಡಿ ಮನೆಯಲ್ಲಿ ಹೋಗಿ ನೋಡಿವಂತೆ ಹೇಳಿದ್ದಾನೆ. ಈ ವೇಳೆ ಪಕ್ಕದ ಮನೆಯವರು ಬಾಗಿಲು ಬಡಿದು ಮಾತನಾಡಿಸಿದರೂ ಯಾರೊಬ್ಬರೂ ಬಾಗಿಲು ತೆರೆಯಲಿಲ್ಲ. ಇನ್ನು ಕಿಟಕಿಯನ್ನೂ ಮುಚ್ಚಲಾಗಿದ್ದು, ಕಿಟಕಿ ಗಾಜು ಒಡೆದು ನೋಡಿದಾಗ ಮನೆಯಲ್ಲಿ ಕೊಲೆ ಆಗಿರುವುದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ನೀಡಲಾಗಿದೆ. ಕೂಡಲೇ ಪೊಲೀಸರಿಗೆ ಕರೆ ಮಾಡಿದ ಮಗ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈಶಾನ್ಯ ವಿಭಾಗ ಡಿಸಿಪಿ ನೇತೃತ್ವದಲ್ಲಿ ಪೊಲೀಸರ ತಂಡು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.