ಬೆಂಗಳೂರು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ಗಿಣಿಯಂತೆ ಸಾಕಿದ್ದ ಮಗಳನ್ನು ಯಾರೋ ಕೊಲೆ ಮಾಡಿದ್ದಾರೆ-ತಾಯಿ

By Sathish Kumar KH  |  First Published May 16, 2024, 1:21 PM IST

ಬೆಂಗಳೂರಿನಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಕುತ್ತಿಗೆ ಸೀಳಿದ ರೀತಿ ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.


ಬೆಂಗಳೂರು (ಮೇ 16): ಬೆಂಗಳೂರಿನಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಕುತ್ತಿಗೆ ಸೀಳಿದ ರೀತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ರಾಜ್ಯದಲ್ಲಿ ಹುಬ್ಬಳ್ಳಿಯಲ್ಲಿ ಕಾಲೇಜು ಓದುತ್ತಿದ್ದ ಇಬ್ಬರು ಯುವತಿಯರನ್ನು ಭೀಕರವಾಗಿ ಚಾಕು ಇರಿದು ಕೊಲೆ ಮಾಡಿದ ಘಟನೆ ನಡೆದಿದೆ. ಜೊತೆಗೆ, ಕೊಡಗು ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ್ದ ವಿದ್ಯಾರ್ಥಿನಿಯ ತಲೆಯನ್ನೇ ಕಡಿದು ಕ್ರೂರತ್ವ ಮೆರೆದ ಅಮಾನವೀಯ ಘಟನೆಗಳು ಇನ್ನೂ ನೆನಪಿನ ಪುಟದಿಂದ ಮಾಸದೇ ಹಸಿಯಾಗಿವೆ. ಹೀಗಿರುವಾಗ ಬೆಂಗಳೂರಿನಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದ ಯುವತಿ ಅನುಮಾನಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾಳೆ. ಅದು ಕೂಡ ಕುತ್ತಿಗೆ ಹಾಗೂ ಕೈಗಳನ್ನು ಕತ್ತರಿಸಿಕೊಂಡು ಸಾವನ್ನಪ್ಪಿದ್ದಾಳೆ. ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿದ್ದು, ಯುವತಿಯ ತಾಯಿ ಮಾತ್ರ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಯಾರೋ ಕಿಡಿಗೇಡಿಗಳು ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

Latest Videos

undefined

ಮೃತ ಯುವತಿ ಪ್ರಭುಧ್ಯಾ(21) ಆಗಿದ್ದಾಳೆ. ಈಕೆ ಖಾಸಗಿ ಕಾಲೇಜಿನಲ್ಲಿ ದ್ವೀತಿಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಆದರೆ, ನಿನ್ನೆ ಸಂಜೆ ಏಕಾಏಕಿ ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ನಿನ್ನೆ ಸಂಜೆ ನಡೆದಿರುವ ಘಟನೆ, ತಡವಾಗಿ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಈ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳ ಪರಿಶೀಲನೆ ಮಾಡಿದ ಪೊಲೀಸರು ಯುಡಿಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಹುಬ್ಬಳ್ಳಿ ನೇಹಾ ಮರ್ಡರ್ ಮಾದರಿಯಲ್ಲೇ, ಅಂಜಲಿಗೂ ಚಾಕು ಚುಚ್ಚಿ ಕೊಲೆಗೈದ ಪಾಗಲ್ ಪ್ರೇಮಿ!

ಮೃತದೇಹದ ಮರಣೋತ್ತರ ಪರೀಕ್ಷೆ:  ಯುವತಿ ಸಾವಿನ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳ ಭೇಟಿ ಮಾಡಿ ಪರಿಶೀಲನೆ ಮಾಡಿದ ಪೊಲೀಸರು, ಮೃತ ದೇಹವನ್ನು ಕೆಂಪೇಗೌಡ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೆಂಪೇಗೌಡ ಆಸ್ಪತ್ರೆಯ ಶವಾಗಾರದಲ್ಲಿ ಮೃತ ಯುವತಿಯ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ. ಮರಣೋತ್ತರ ಪರೀಕ್ಷಾ ವರದಿ ನಂತರವೇ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ಮಾಹಿತಿ ಹೊರಬೀಳಲಿದೆ. ಪೊಲೀಸರು ಕೂಡ ಎಲ್ಲ ಆಯಾಮಗಳಿಂದ ತನಿಖೆ ಆರಂಭಿಸಿದ್ದಾರೆ.

ನನ್ನ ಮಗಳದ್ದು ಆತ್ಮಹತ್ಯೆಯಲ್ಲ ಕೊಲೆ:  ಮೃತ ಯುವತಿ ಪ್ರಭುಧ್ಯಾ ಅವರ ತಾಯಿ ಸೌಮ್ಯಾ ಮಾತನಾಡಿ, ನನ್ನ ಆತ್ಮಹತ್ಯೆಗೆ ಶರಣಾಗುವ ಯುವತಿಯಲ್ಲ. ಪ್ರತಿದಿನ ಕಾಲೇಜಿಗೆ ಹೋದಾಗ, ಮನೆಗೆ ಬಂದಾಗ ಏನೇ ಘಟನೆಗಳು ನಡೆದಿದ್ದರೂ ಕರೆ ಮಾಡಿ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದಳು. ನಿನ್ನೆ ಮಧ್ಯಾಹ್ನ 1:30 ಹೊತ್ತಿಗೆ ಪೋನ್ ಮಾಡಿ ಫ್ರೆಂಡ್ ಜೊತೆ ಪಾನಿಪೂರಿ ತಿನ್ನುವ ವಿಚಾರವನ್ನೂ ನನ್ನ ಬಳಿ ಹೇಳಿಕೊಂಡಿದ್ದಳು. ಆದರೆ, ಮಧ್ಯಾಹ್ನ 3:30ರಿಂದ 4 ಗಂಟೆ ಸುಮಾರಿಗೆ ಹೀಗಾಗಿರಬಹುದು. ಇನ್ನು ನಾವು ಮನೆಗೆ ಬಂದು ನೋಡಿದಾಗ ಮನೆಯ ಮುಖ್ಯ ದ್ವಾರ ಕ್ಲೋಸ್ ಆಗಿತ್ತು. ಆದರೆ, ಮನೆಯ  ಹಿಂದಿನ ಬಾಗಿಲು ತೆಗೆದಿತ್ತು. ನಾವು ಮನೆಗೆ ಹೋದಾಕ್ಷಣ ಮೊದಲು ನೋಡಿದಾಗ ಮಗಳ ಮೊಬೈಲ್ ಇತ್ತು, ಆಮೇಲೆ ಮೊಬೈಲ್ ಇರಲಿಲ್ಲ. ಗಿಣಿ ಸಾಕಿದ ಹಾಗೆ ನನ್ನ ಮಗಳನ್ನ ಸಾಕಿದ್ದೆವು. ಆದರೆ, ಯಾರೋ ನನ್ನ ಮಗಳನ್ನ ಸಾಯಿಸಿದ್ದಾರೆಂದು ತಾಯಿ ಗೋಳಾಡುತ್ತಿದ್ದಾರೆ.

ಡೆತ್‌ನೋಟ್‌ಗೂ ಯುವತಿಯ ಬರವಣೆಗೆಗೂ ಮ್ಯಾಚ್ ಆಗ್ತಿಲ್ಲ: 
ಪ್ರಭುದ್ಯಾ ತುಂಬಾ ಒಳ್ಳೆಯ ಹುಡುಗಿ. ಹೆಚ್ಚಾಗಿ ಓದುತ್ತಾ ಇದ್ದಳು, ಅಮ್ಮನನ್ನು ಚೆನ್ನಾಗಿ ನೋಡ್ಕೋಬೇಕು ಅಂತಿದ್ದಳು. ನಿನ್ನೆ ಸಂಜೆ ಸುಮಾರಿಗೆ ಅವರ ತಮ್ಮ ಬಂದು ಡೋರು ಹೊಡೀತಿದ್ದ. ಈ ವೇಳೆ ಬಾಗಿಲು ತೆಗೆದು ನೋಡಿದಾಗ ಬಾತ್ ರೂಂನಲ್ಲಿ ಬಿದ್ದಿದ್ದಳು. ಕೂಡಲೇ ಆಸ್ಪತ್ರೆಗೆ ಕರ್ಕೊಂಡು ಹೋದ್ರೂ ಪ್ರಯೋಜನೆ ಆಗಲಿಲ್ಲ. ಪೊಲೀಸರು ಕೂಡ ಬಂದು ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದ್ದಾರೆ. ಪೊಲೀಸರು ಮೂರು ಡೆತ್ ನೋಟ್ ಸಿಕ್ಕಿದೆ ಅಂತಿದಾರೆ. ಅದ್ರಲ್ಲಿ ಇಂಗ್ಲೀಷ್‌ನಲ್ಲಿ ಸಾರಿ ಅಮ್ಮ ಅಂತ ಬರೆದಿದ್ದಾರೆ ಎಂದು ಹೇಳಿದ್ದಾರೆ. ಆದರೆ ನಾವು ಡೆತ್ ನೋಟ್ ನೋಡಿಲ್ಲ, ಪೊಲೀಸರು ತೋರಿಸಿದ್ದಾರೆ ಅಷ್ಟೆ. ಇನ್ನು ಯುವತಿಯ ಡೆತ್ ನೋಟ್ ಬರಹಕ್ಕೂ ಆಕೆಯ ಹ್ಯಾಂಡ್ ರೈಟಿಂಗ್‌ಗೆ ಮ್ಯಾಚ್ ಆಗ್ತಿಲ್ಲ ಎಂದು ಪೊಲೀಸರು ಹೇಳ್ತಿದ್ದಾರೆ. ಪೊಲೀಸರೇ ಮುಂದಿನ ಮಾಹಿತಿ ನೀಡಬೇಕು ಎಂದು ಮೃತ ವಿದ್ಯಾರ್ಥಿನಿಯ ನೆರೆ ಮನೆಯ ನಿವಾಸಿ ಶ್ವೇತಾ ಚಂದ್ರಶೇಖರ್ ತಿಳಿಸಿದ್ದಾರೆ. 

ಶೋಕಿಗೆ ಬಿದ್ದ ರೀಲ್ಸ್​​ ರಾಣಿಗಿತ್ತು ಲಕ್ಷ ಲಕ್ಷ ಸಾಲ: ಆಶ್ರಯ ನೀಡಿದ ಮನೆ ಮಾಲೀಕಳ ಕತೆ ಮುಗಿಸಿದ ಹಂತಕಿ ಸಿಕ್ಕಿದ್ಹೇಗೆ?

ಪ್ರಭುದ್ಯಾ ಸಾವಿನ ಘಟನೆಯು ನಿನ್ನೆ ಸಂಜೆ 7:30ರ ಸುಮಾರಿಗೆ ಘಟನೆ ವರದಿಯಾಗಿದೆ. 21 ವರ್ಷದ ವಿದ್ಯಾರ್ಥಿಯ ಕೈ ಹಾಗೂ ಕುತ್ತಿಗೆಗೆ ಚಾಕು ಇರಿತ ಆಗಿದೆ. ಆತ್ಮಹತ್ಯೆಯಾ ಅಥವಾ ಕೊಲೆಯಾ ಅನ್ನೋದು ತನಿಖೆ ನಡೀತಾ ಇದೆ. ಮನೆಯ ಬಾತ್ ರೂಂನಲ್ಲಿ ಘಟನೆ ನಡೆದಿದೆ. ಮನೆಯವರು ಸಾವಿನ ಹಿಂದೆ ಅನುಮಾನ ಇದೆ ಅಂತ ದೂರು ನೀಡಿದ್ದಾರೆ. ಈಗ ಕೇಸ್ ದಾಖಲಿಸಿ ತನಿಖೆ ಮಾಡ್ತಾ ಇದೀವಿ. ಮರಣೋತ್ತರ ಪರೀಕ್ಷೆ ಬರಲಿ ಅಂತ ಕಾಯ್ತಾ ಇದೀವಿ ಎಂದು ಹೇಳಿದರು. 
- ಲೋಕೇಶ್, ಡಿಸಿಪಿ, ದಕ್ಷಿಣ ವಿಭಾಗ

click me!