Bengaluru: ಮಗಳನ್ನು ಪ್ರೀತಿಸಿದ ಯುವಕನ ಕಿಡ್ನಾಪ್ ಮಾಡಿ ಬೆಂಕಿ ಇಟ್ಟ ಪ್ರಕರಣ, ಕುಟುಂಬ ಸಮೇತ ಊರು ಬಿಟ್ಟ ಆರೋಪಿ

By Gowthami K  |  First Published Jul 17, 2023, 1:17 PM IST

ಪುತ್ರಿಯನ್ನು ಶಶಾಂಕ್‌ ಪ್ರೀತಿಸುತ್ತಿದ್ದನೆಂದು ಸಿಟ್ಟಿಗೆದ್ದು ಯುವಕನನ್ನು ಅಪಹರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದ ಮನು ಮತ್ತು ಕುಟುಂಬ ಈಗ ಇಡೀ ಮನೆ ಖಾಲಿ ಮಾಡಿ ಎಸ್ಕೇಪ್ ಆಗಿದೆ


ಚಾಮರಾಜನಗರ (ಜು.17): ತನ್ನ ಪುತ್ರಿಯನ್ನು ಪ್ರೀತಿಸುತ್ತಿದ್ದಕ್ಕಾಗಿ ಆಕ್ರೋಶಗೊಂಡು ತನ್ನ ಸೋದರ ಸಂಬಂಧಿ ಯುವಕನ ಮೇಲೆ ಪೆಟ್ರೋಲ್‌ ಸುರಿದು, ಆತನ ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯ ಮನು ಅವರು ಕುಟುಂಬ ಸಮೇತರಾಗಿ ಮನೆ ಖಾಲಿ ಮಾಡಿದ್ದಾರೆ.  ಬೆಂಗ​ಳೂರು ದಕ್ಷಿಣ ತಾಲೂ​ಕಿನ ಕಣಿ​ಮಿ​ಣಿಕೆ ಟೋಲ್‌ ಬಳಿ ಶನಿ​ವಾರ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಮನು ಹಾಗೂ 6 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ವಿಷಯ ಬೆಳಕಿಗೆ ಬರುತ್ತಿದ್ದಂತೆ ಮನು ಹಾಗೂ ಕುಟುಂಬಸ್ಥರು ಊರು ಬಿಟ್ಟಿದ್ದಾರೆ.

ಘಟನೆ  ಹಿನ್ನೆಲೆ: ಬೆಂಗ​ಳೂರಿನ ಆರ್‌.ಆರ್‌.ನಗರದ 12ನೇ ಕ್ರಾಸ್‌ ನಿವಾಸಿ ರಂಗ​ನಾಥ್‌ ಮತ್ತು ಪ್ರೇಮಾ ದಂಪತಿ ಪುತ್ರ ಶಶಾಂಕ್‌ ಎಂಬಾ​ತನೇ ತನ್ನ ದೊಡ್ಡಪ್ಪನಿಂದ ದುಷ್ಕೃ​ತ್ಯಕ್ಕೆ ಒಳ​ಗಾದ ಯುವ​ಕ​. ಈತ ಎಸಿ​ಎಸ್‌ ಕಾಲೇ​ಜಿ​ನಲ್ಲಿ ಪ್ರಥಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡು​ತ್ತಿದ್ದಾನೆ. ಈತನ ದೊಡ್ಡಪ್ಪ ಚಾಮ​ರಾ​ಜ​ನ​ಗರ ಜಿಲ್ಲೆ ಹರ​ದ​ನ​ಹಳ್ಳಿ ನಿವಾಸಿ ಮನು ಎಂಬಾತನೇ ಈ ದುಷ್ಕೃತ್ಯ ಎಸಗಿದ್ದು, ಆತ ಹಾಗೂ 6 ಮಂದಿಯ ವಿರುದ್ಧ ಕುಂಬ​ಳ​ಗೂಡು ಪೊಲೀಸ್‌ ಠಾಣೆ​ಯಲ್ಲಿ ಪ್ರಕ​ರಣ ದಾಖಲಾಗಿದೆ. ಘಟನೆಯಲ್ಲಿ ಶಶಾಂಕ್‌ನಿಗೆ 50%ರಷ್ಟುಸುಟ್ಟಗಾಯಗಳಾಗಿದ್ದು, ಖಾಸಗಿ ಆಸ್ಪ​ತ್ರೆ​ಗೆ ದಾಖ​ಲಿಸಲಾಗಿದೆ.

Tap to resize

Latest Videos

ಮೂರು ವರ್ಷಗಳ ಹಿಂದೆ ಗುಟ್ಕಾ ತಿಂದು ಮನೆ ಗೋಡೆಗೆ ಉಗುಳಿದ್ದಕ್ಕೆ ಬೆಳಗಾವಿಯಲ್ಲಿ ರಫೀಕ್ ಮುಲ್ಲಾ ಹತ್ಯೆ!

ಘಟನೆ ವಿವ​ರ: ಶಶಾಂಕ್‌ ತನ್ನ ದೊಡ್ಡಪ್ಪ ಮನು​ ಅವರ ಪುತ್ರಿ ಲಹರಿಯನ್ನು ಪ್ರೀತಿ​ಸು​ತ್ತಿ​ದ್ದ. ಇವರಿಬ್ಬರ ಪ್ರೀತಿಗೆ ಯುವತಿಯ ಪೋಷ​ಕರ ವಿರೋಧವಿತ್ತು. ಅಲ್ಲದೆ, ಈ ವಿಚಾ​ರ​ವಾಗಿ ಶಶಾಂಕ್‌ಗೆ ಮನು​ ಹಲ​ವಾರು ಬಾರಿ ಬುದ್ಧಿ ಮಾತು ಕೂಡ ಹೇಳಿ​ದ್ದ​ರು. ಆದರೆ, ಬುದ್ಧಿಮಾತಿಗೆ ಶಶಾಂಕ್‌ ಬೆಲೆ ಕೊಟ್ಟಿರಲಿಲ್ಲ. ಈ ಮಧ್ಯೆ, ಜುಲೈ 3ರಂದು ಮೈಸೂ​ರಿ​ನಿಂದ ಬೆಂಗ​ಳೂ​ರಿ​ಗೆ ಬಂದಿದ್ದ ಲಹರಿಯನ್ನು ತನ್ನ ಮನೆಗೆ ಶಶಾಂಕ್‌ ಕರೆ​ದೊ​ಯ್ದಿ​ದ್ದ. ಈ ವಿಷಯ ತಿಳಿದು ಆಕ್ರೋಶಗೊಂಡ ಮನು, ಮನೆಗೇ ನುಗ್ಗಿ ಶಶಾಂಕ್‌ ಮೇಲೆ ಹಲ್ಲೆ ನಡೆಸಿ, ಪುತ್ರಿಯನ್ನು ಕರೆ​ದೊ​ಯ್ದಿದ್ದರು.

ಈ ಮಧ್ಯೆ, ಜುಲೈ 15ರಂದು ಬೆಳಗ್ಗೆ 8 ಗಂಟೆಗೆ ಶಶಾಂಕ್‌ ಎಂದಿನಂತೆ ಕಾಲೇ​ಜಿಗೆ ತೆರ​ಳಿದ್ದ. ತರ​ಗ​ತಿ ಇಲ್ಲದ ಕಾರಣ ಬೆಳಗ್ಗೆ 9.30ರ ವೇಳೆ ಮನೆಗೆ ವಾಪ​ಸ್ಸಾ​ಗುತ್ತಿದ್ದ. ಈ ವೇಳೆ, ಆರ್‌.ಆರ್‌.ಮೆಡಿ​ಕಲ್‌ ಕಾಲೇಜು ಬಳಿ ಇನೋವಾ ಕಾರಿ​ನಲ್ಲಿ ಬಂದ ಮನು ಬಲ​ವಂತವಾಗಿ ಎಳೆ​ದು ಶಶಾಂಕ್‌ನನ್ನು ಕಾರಿ​ನಲ್ಲಿ ಕೂರಿ​ಸಿ​ಕೊಂಡರು. ಈ ವೇಳೆ, ಕಾರಿ​ನ​ಲ್ಲಿದ್ದ ಇನ್ನು 6 ಮಂದಿ ಆತನ ಕಣ್ಣಿಗೆ ಬಟ್ಟೆಕಟ್ಟಿ, ಬಾ​ಯಿಗೆ ಬಟ್ಟೆತುರುಕಿ, ಬಲ​ವಂತ​ವಾಗಿ ಕಣಿ​ಮಿ​ಣಿಕೆ ಟೋಲ್‌ ಬಳಿಯಿರುವ ಖಾಲಿ ಜಾಗಕ್ಕೆ ಕರೆ​ದೊಯ್ದರು. ‘ಲಹ​ರಿ​ಯನ್ನು ಪ್ರೀತಿ ಮಾಡು​ತ್ತೀಯಾ? ನಿನಗೆ ಎಷ್ಟುಬಾರಿ ಹೇಳು​ವುದು’ ಎಂದು ಕೋಪ​ದಿಂದ ಶಶಾಂಕ್‌ನ ಮೇಲೆ ಹಲ್ಲೆ ನಡೆಸಿದರು. ಕಾರಿ​ನಿಂದ ಕೆಳ​ಗಿ​ಳಿಸಿ, ಪೆಟ್ರೋಲ್‌ ಸುರಿದು, ಬೆಂಕಿ ಹಚ್ಚಿ, ಆತನನ್ನು ಅಲ್ಲಿಯೇ ಬಿಟ್ಟು ಕಾರಿನಲ್ಲಿ ಪರಾರಿಯಾದರು.

ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ರೌಡಿಶೀಟರ್ ಕೊಲೆ, 5 ಆರೋಪಿಗಳು ಅರೆಸ್ಟ್, ಹತ್ಯೆಯ ಮಾಸ್ಟರ್‌ ಮೈಂಡ್‌ಗೆ ಶೋಧ

ಶಶಾಂಕ್‌ ಅಲ್ಲಿಯೇ ನೆಲದ ಮೇಲೆ ಹೊರ​ಳಾಡಿ, ಬೆಂಕಿ ಆರಿಸಿಕೊಂಡು, ಆ ನೋವಿನಲ್ಲಿಯೇ ತನ್ನ ಸಂಬಂಧಿ ಹೀರಾ ಎಂಬುವರಿಗೆ ವಿಷಯ ತಿಳಿಸಿದ. ಹೀರಾ ಅವರು ತಮ್ಮ ಕುಟುಂಬ ಸದಸ್ಯರ ಜೊತೆ ಆಗಮಿಸಿ, ಆ್ಯಂಬುಲೆನ್ಸ್‌ನಲ್ಲಿ ರಾಜ​ರಾ​ಜೇ​ಶ್ವರಿ ಆಸ್ಪ​ತ್ರೆ​ಗೆ ದಾಖ​ಲಿ​ಸಿದರು. ಶಶಾಂಕ್‌ ಅವರ ದೇಹದ 50%ರಷ್ಟುಭಾಗ ಸುಟ್ಟು ಹೋಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಕುಂಬಳಗೋಡು ಠಾಣೆ ಪೊಲೀಸರು ಪ್ರಕ​ರಣ ದಾಖ​ಲಿ​ಸಿ​ಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

click me!