ಬೆಳಗಾವಿ: ಹಾಡಹಗಲೇ ಮಾರಕಾಸ್ತೃಗಳಿಂದ ಕೊಚ್ಚಿ ವ್ಯಕ್ತಿ ಬರ್ಬರ ಹತ್ಯೆ

Belagavi Crime News: ಹಾಡಹಗಲೇ ಮಾರಕಾಸ್ತೃಗಳಿಂದ ಕೊಚ್ಚಿ ವ್ಯಕ್ತಿ ಬರ್ಬರ ಹತ್ಯೆ ಮಾಡಲಾಗಿರುವ ಘಟನೆ ಬೆಳಗಾವಿಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ಗ್ರಾಮದಲ್ಲಿ ನಡೆದಿದೆ


ಚಿಕ್ಕೋಡಿ (ಜು. 16): ಹಾಡಹಗಲೇ ಮಾರಕಾಸ್ತೃಗಳಿಂದ ಕೊಚ್ಚಿ ವ್ಯಕ್ತಿ ಬರ್ಬರ ಹತ್ಯೆ (Murder) ಮಾಡಲಾಗಿದೆ. ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ (Hidkal Dam) ಗ್ರಾಮದಲ್ಲಿ ಘಟನೆ ನಡೆದಿದೆ.  ಪರಶುರಾಮ್ ಹಲಕರ್ಣಿ(32) ಕೊಲೆಯಾದ ವ್ಯಕ್ತಿ. ಪರಶುರಾಮ್ ಹಲಕರ್ಣಿ ಹಿಡಕಲ್ ಡ್ಯಾಮ್ ಗ್ರಾಮದಲ್ಲಿ ಕಿರಾಣಿ ಅಂಗಡಿ ವ್ಯಾಪಾರಿಯಾಗಿದ್ದರು. ಕೊಲೆಯಾದ ಸ್ಥಳದಲ್ಲಿ ಒಂದು ಕಾರು ಹಾಗೂ ಒಂದು ಬೈಕ್ ಪತ್ತೆಯಾಗಿದೆ.  

ಶವದ ಪಕ್ಕದಲ್ಲಿರುವ ಕಾರಿನಲ್ಲಿಯೇ ಲಾಂಗ್ ಹಾಗೂ ಡ್ರಿಂಕ್ಸ್ ಪತ್ತೆಯಾಗಿವೆ. ಸ್ಥಳಕ್ಕೆ ಯಮಕನಮರಡಿ ಪೊಲೀಸರು (Police) ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Latest Videos

ಇದನ್ನೂ ಓದಿರಾಮನಗರದಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಗೃಹಣಿಯ ಕೊಲೆ

ಕಾಂಗ್ರೆಸ್ ಮುಖಂಡನ ಕೊಂದ ಹಂತಕನ ಮೇಲೆ ಫೈರಿಂಗ್: ಕಾಂಗ್ರೆಸ್ ಮುಖಂಡನನ್ನು ಹಾಡುವಾಗಲೇ ಕೊಂದು ಹಾಕಿದ ಹಂತಕನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡ ಮತ್ತು ಶಹಾಬಾದ್ ನಗರ ಸಭೆಯ ಅಧ್ಯಕ್ಷೆಯ ಪತಿ ಗಿರೀಶ ಕಂಬನೂರನನ್ನ ಹಾಡು ಹಗಲೇ ಕೊಂದು ಹಾಕಿದ್ದ ಹಂತಕನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. 

ರೌಡಿಶೀಟರ್ ವಿಜಯಕುಮಾರ ಹಳ್ಳಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಕೊಲೆ ಆರೋಪಿ. ಇದೇ ತಿಂಗಳ ಜುಲೈ 11 ರಂದು ಶಹಾಬಾದ ರೈಲ್ವೆ ಸ್ಟೇಷನ್  ಮುಂಬಾಗದಲ್ಲಿ ಗಿರಿಶ ಕಂಬನೂರನನ್ನು 7-8 ಜನ ಹಂತಕರು ಅಟ್ಯಾಕ್ ಮಾಡಿ ಕೊಂದು ಹಾಕಿದ್ದರು. ಅಲ್ಲದೇ ಅಂಗಾತ ನೆಲಕ್ಕೆ ಬಿದ್ದಿದ್ದ ಗಿರೀಶ ಕಂಬನೂರನ ಹೊಟ್ಟೆಯಲ್ಲಿ ಉದ್ದನೆಯ ತಲವಾರ್‌ನಿಂದ ಆಳವಾಗಿ ಇರಿದು, ಹೊಟ್ಟೆಯಲ್ಲಿಯೇ ಬಿಟ್ಟು ಹೋಗಿ ವಿಕೃತಿ ಮೆರೆದಿದ್ದರು. 

click me!