ಬೆಳಗಾವಿ: ಹಾಡುಹಗಲೇ ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಭೀಕರ ಕೊಲೆ!

By Ravi Janekal  |  First Published May 16, 2024, 5:25 PM IST

ಹಾಡುಹಗಲೇ ಸ್ಕ್ರೂಡ್ರೈವರ್‌ನಿಂದ ಯುವಕನಿಗೆ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿಯ ಮಹಾಂತೇಶ ನಗರದ ಬ್ರಿಡ್ಜ್ ಬಳಿ ನಡೆದಿದೆ. ಗಾಂಧಿನಗರ ನಿವಾಸಿ ಇಬ್ರಾಹಿಂ ಗೌಸ್ (22) ಮೃತ ಯುವಕ. ಮುಜಮಿಲ್ ಸತ್ತಿಗೇರಿ ಹತ್ಯೆ ಮಾಡಿದ ಆರೋಪಿ


ಬೆಳಗಾವಿ (ಮೇ.16): ಹಾಡುಹಗಲೇ ಸ್ಕ್ರೂಡ್ರೈವರ್‌ನಿಂದ ಯುವಕನಿಗೆ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿಯ ಮಹಾಂತೇಶ ನಗರದ ಬ್ರಿಡ್ಜ್ ಬಳಿ ನಡೆದಿದೆ.

ಗಾಂಧಿನಗರ ನಿವಾಸಿ ಇಬ್ರಾಹಿಂ ಗೌಸ್ (22) ಮೃತ ಯುವಕ. ಮುಜಮಿಲ್ ಸತ್ತಿಗೇರಿ ಹತ್ಯೆ ಮಾಡಿದ ಆರೋಪಿ. ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದ ಇಬ್ರಾಹಿಂ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು. ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಮೃತಪಟ್ಟಿರುವ ಇಬ್ರಾಹಿಂ. 

Tap to resize

Latest Videos

ಘಟನೆ ಹಿನ್ನೆಲೆ

ಹತ್ಯೆಯಾದ ಇಬ್ರಾಹಿಂಗೂ ಅದೇ ಬಡಾವಣೆಯ ಮುಜಮಿಲ್ ಸತ್ತಿಗೇರಿ ಎಂಬುವವನ ಸಹೋದರಿಯೊಂದಿಗೆ ಲವ್ವಿಡವ್ವಿಯಲ್ಲಿ ತೊಡಗಿದ್ದಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ಹಿಂದೆ ವಾರ್ನಿಂಗ್ ಕೊಟ್ಟಿದ್ದ ಎನ್ನಲಾಗಿದೆ. ಆದರೂ ಪ್ರೀತಿ, ಪ್ರೇಮ ಅಂತಾ ಮುಜಮಿಲ್ ಸಹೋದರಿಯಿಂದ ಬಿದ್ದಿದ್ದ. ಇಂದು ಸಹೋದರಿಯೊಂದಿಗೆ ಬೈಕ್‌ನಲ್ಲಿ ಹೊರಟಿದ್ದನ್ನು ನೋಡಿ ಇಬ್ರಾಹಿಂನ ಬೆನ್ನಟ್ಟಿ ಸ್ಕ್ರೂಡ್ರೈವರ್‌ನಿಂದ ಮನಬಂದಂತೆ ಚುಚ್ಚಿ ಹತ್ಯೆ ಮಾಡಿದ್ದಾನೆ. ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  

ಹುಬ್ಬಳ್ಳಿಯ ಯುವತಿ ಅಂಜಲಿ ಹತ್ಯೆಗೈದ ಗಿರೀಶನಿಗೆ ಕೊಲೆಗಾರ ಸ್ನೇಹಿತ ಶೇಷ್ಯಾನೇ ರೋಲ್ ಮಾಡೆಲ್!

click me!