ಬೆಂಗಳೂರಿನಲ್ಲಿ ಭೀಕರ ಘಟನೆಯೊಂದು ನಡೆದಿದೆ. ನೆಲಮಂಗಲ ಸಮೀಪದ ಹುಸ್ಕೂರು ರಸ್ತೆಯ ಬಳಿ ಕತ್ತು ಕೊಯ್ದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಬೆಂಗಳೂರು (ಫೆ.2): ಬೆಂಗಳೂರಿನಲ್ಲಿ ಭೀಕರ ಘಟನೆಯೊಂದು ನಡೆದಿದೆ. ನೆಲಮಂಗಲ ಸಮೀಪದ ಹುಸ್ಕೂರು ರಸ್ತೆಯ ಬಳಿ ಕತ್ತು ಕೊಯ್ದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮೃತ ಯುವಕ ಆಟೋ ಚಾಲಕನಾಗಿದ್ದು, ಬೇರೆ ಕಡೆಯಿಂದ ಕರೆದುಕೊಂಡು ಬಂದು ಆಟೋ ಚಾಲಕನನ್ನು ಕೊಲೆ ಮಾಡಲಾಗಿದೆ.
ಮೃತ ಯುವಕನನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದ್ದು, 28 ವರ್ಷದ ಈತ ಆಟೋ ಚಾಲಕನಾಗಿದ್ದ. ಮೂಲತಃ ಬೆಂಗಳೂರಿನ ತಣಿಸಂದ್ರದವನಾಗಿದ್ದ ಶ್ರೀನಿವಾಸ್ ನನ್ನು ಹಣಕಾಸಿನ ವಿಚಾರದಲ್ಲಿ ಗಲಾಟೆ ನಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
undefined
ನಾಟಿ ಕೋಳಿ ಸಾರು ಜೊತೆ ಮದ್ಯ ಸೇವನೆಗೆ ಬಿಡದ್ದಕ್ಕೆ ಮಗನನ್ನೇ ಭೀಕರವಾಗಿ ಕೊಂದ ತಂದೆ!
ಮಗ ಮಲಗಿದ್ದಾಗ ತಲೆಯ ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಿದ ತಂದೆ!
ಕನಕಪುರ: ಕುಡಿಯಲು ದುಡ್ಡು ಕೊಡಲಿಲ್ಲ ಎಂಬ ಕಾರಣಕ್ಕೆ ತಂದೆಯೇ ಮಗನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿರುವ ಘಟನೆ ತಿಗಳರ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕಸಬಾ ಹೋಬಳಿಯ ತಿಗಳರ ಹೊಸಹಳ್ಳಿ ಗ್ರಾಮದ ಗೋವಿಂದರಾಜು (33) ಕೊಲೆಯಾದ ವ್ಯಕ್ತಿ, ಇವರ ತಂದೆ ಕೊಡ್ಲಿ ನಾಗರಾಜು ಅಲಿಯಾಸ್ ವೆಂಕಟ ರಾಜು (58) ಕೊಲೆ ಆರೋಪಿ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಮಲಗಿದ್ದ ಮಗನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ, ನಂತರ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
ತಿಗಳರ ಹೊಸಹಳ್ಳಿ ಗ್ರಾಮದ ಆರೋಪಿ ನಾಗರಾಜುಗೆ ಇಬ್ಬರು ಗಂಡು ಮಕ್ಕಳು, ಹಿರಿಯ ಮಗ ಕಳೆದ ಒಂದು ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದ, ಈಗ ತಂದೆಯಿಂದಲೇ ಕೊಲೆಯಾಗಿರುವ ಕಿರಿಯ ಮಗ ಗೋವಿಂದರಾಜು (33) ಇನ್ನೂ ಮದುವೆಯಾಗಿರಲಿಲ್ಲ, ಇದೇ ಕಾರಣಕ್ಕೆ ಅಪ್ಪ, ಮಗನ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು ಎಂಬುದು ಗ್ರಾಮಸ್ಥರಿಂದ ತಿಳಿದು ಬಂದಿದೆ.
ಮಂಗಳವಾರ ರಾತ್ರಿ ಮದ್ಯ ಸೇವಿಸಿ ಬಂದಿದ್ದ ಆರೋಪಿ ನಾಗರಾಜು, ಮತ್ತೊಮ್ಮೆ ಮದ್ಯ ಸೇವಿಸಲು ಹಣ ಕೊಡುವಂತೆ ಮಗ ಗೋವಿಂದರಾಜುನನ್ನು ಕೇಳಿದ್ದಾನೆ. ಈ ಕಾರಣಕ್ಕೆ ತಂದೆ- ಮಗನ ನಡುವೆ ಗಲಾಟೆ ನಡೆದಿದೆ. ನಂತರ ಮಗ ಗೋವಿಂದರಾಜು ಮನೆಯಲ್ಲಿ ಮಲಗಿದ್ದಾಗ ರಾತ್ರಿ 11 ಗಂಟೆಗೆ ಕ್ಷುಲ್ಲಕ ಕಾರಣಕ್ಕೆ ಕುಪಿತಗೊಂಡು ಮಗನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾನೆ.
ಕಿಲ್ಲರ್ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿನಿ ಬಲಿ!
ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೋವಿಂದರಾಜುಗೆ ಸ್ಥಳೀಯರು ದಯಾನಂದ್ ಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯರು ತಿಳಿಸಿದಾಗ ವಾಪಸ್ ಕರೆದುಕೊಂಡು ಬರುವಾಗ ಮಾರ್ಗ ಮಧ್ಯೆ ಗೋವಿಂದರಾಜು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿ ತಂದೆ ನಾಗರಾಜು ಬುಧವಾರ ಬೆಳಗ್ಗೆ ಕುಡಿದು ಗ್ರಾಮಾಂತರ ಠಾಣೆಗೆ ಶರಣಾಗಲು ಹೋಗಿದ್ದಾರೆ, ಆದರೆ, ಕುಡಿದು ಮಾತನಾಡುತ್ತಿದ್ದ ಆರೋಪಿಯ ಮಾತನ್ನು ಪೊಲೀಸರು ನಂಬದೇ ಬಿಟ್ಟು ಕಳುಹಿಸಿ, ಬಳಿಕ ಗ್ರಾಮಸ್ಥರ ಮೂಲಕ ಖಾತ್ರಿಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಎಸ್ಪಿ ಗಿರೀಶ್, ವೃತ್ತ ನಿರೀಕ್ಷಕ ಕೃಷ್ಣ ಲಮಾಣಿ, ಗ್ರಾಮಾಂತರ ಠಾಣೆ ಪಿಎಸ್ಐ ಮನೋಹರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.