ಸ್ನೇಹಿತನಿಂದಲೇ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ| ಮೊನ್ನೆಯಷ್ಟೇ ಅಸ್ಸಾಂನಿಂದ ನಗರಕ್ಕೆ ಆಗಮಿಸಿದ್ದ ವಿದ್ಯಾರ್ಥಿನಿ| ಆಕೆ ಕಾಲೇಜಿಗೆ ದಾಖಲಾಗಲು ನೆರವಾಗಿದ್ದ ಆಕೆಗೆ ಆಪ್ತನೂ ಆಗಿದ್ದ ಆರೋಪಿ| ನಿನ್ನೆ ರೂಂಗೆ ಬಂದಿದ್ದಾಗ ಸ್ನೇಹಿತೆಯ ರೇಪ್ ಮಾಡಿ, ಕೊಲೆ ಮಾಡಿದ ಆರೋಪ
ಬೆಂಗಳೂರು(ಡಿ.17): ಖಾಸಗಿ ಕಾಲೇಜಿನ ಫಾರ್ಮಸಿ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತೆ ಮೇಲೆ ಅತ್ಯಾಚಾರ ಎಸಗಿ, ಅನಂತರ ಆಕೆಯನ್ನು ಕೊಂದಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ನಂಬಿಕೆ ಇಟ್ಟು ತಂಗಿಯನ್ನು ಸ್ನೇಹಿತನ ರೂಮ್ ಕಳುಹಿಸಿದ ಅಣ್ಣ, ಬಳಿಕ ನಡೆದಿದ್ದು ಘನಘೋರ
ಅಸ್ಸಾಂ ಮೂಲದ 22 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಹತ್ಯೆಗೀಡಾದ ದುರ್ದೈವಿ. ಈ ಕೃತ್ಯ ಸಂಬಂಧ ಮೃತಳ ಗೆಳೆಯ ಫಾರ್ಮಸಿ ವಿದ್ಯಾರ್ಥಿ ಹನ್ಸೂರ್ ರೆಹಮಾನ್ (22)ನನ್ನು ಬ್ಯಾಡರಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ಯಾಡರಹಳ್ಳಿ ಹತ್ತಿರದ ಗೆಳೆಯನ ಮನೆಗೆ ಬೆಳಗ್ಗೆ ಯುವತಿ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೊನ್ನೆಯಷ್ಟೇ ಅಸ್ಸಾಂನಿಂದ ಬಂದಿದ್ದಳು:
ಅಸ್ಸಾಂ ಮೂಲದ ಮೃತ ಯುವತಿ ಹಾಗೂ ಆರೋಪಿ ರೆಹಮಾನ್ ಆತ್ಮೀಯ ಸ್ನೇಹಿತರಾಗಿದ್ದು, ಆ ಎರಡು ಕುಟುಂಬಗಳಿಗೆ ಆಪ್ತ ಒಡನಾಟವಿದೆ. ಒಂದೂವರೆ ವರ್ಷದಿಂದ ನಗರದ ಖಾಸಗಿ ಕಾಲೇಜಿನಲ್ಲಿ ರೆಹಮಾನ್ ವ್ಯಾಸಂಗ ಮಾಡುತ್ತಿದ್ದ. ಈ ಸ್ನೇಹದ ಹಿನ್ನೆಲೆಯಲ್ಲಿ ರೆಹಮಾನ್ ಮೂಲಕ ಮೃತ ಯುವತಿ ಕೂಡಾ ಬೆಂಗಳೂರಿನಲ್ಲಿ ನರ್ಸಿಂಗ್ ಓದಲು ಬಂದಿದ್ದಳು. ಅಸ್ಸಾಂನಿಂದ ಮಂಗಳವಾರವಷ್ಟೆಬಂದು ಕಾಲೇಜಿಗೆ ಆಕೆ ದಾಖಲಾಗಿದ್ದಳು. ಕಾಲೇಜಿಗೆ ಸೇರುವಾಗ ರೆಹಮಾನ್ ಸಹಾಯ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಬಸ್, ಟ್ಯಾಂಕರ್ ನಡುವೆ ಭೀಕರ ಅಪಘಾತ: 7 ಜನ ಸಾವು, 25 ಮಂದಿಗೆ ಗಾಯ
ಕಾಲೇಜಿನ ಹಾಸ್ಟೆಲ್‌ನಲ್ಲಿ ಯುವತಿ ವಾಸ್ತವ್ಯ ಹೂಡಿದ್ದಳು. ಕೆಲವು ವಸ್ತುಗಳ ಖರೀದಿ ಸಲುವಾಗಿ ಗೆಳೆಯ ರೆಹಮಾನ್‌ನನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗಲು ಆಕೆ, ಬುಧವಾರ ಬೆಳಗ್ಗೆ ಬ್ಯಾಡರಹಳ್ಳಿ ಸಮೀಪವಿರುವ ರೆಹಮಾನ್ ಕೊಠಡಿಗೆ ಬಂದಿದ್ದಳು. ಆ ವೇಳೆ ಸ್ನೇಹಿತೆ ಮೇಲೆ ಆತ ಅತ್ಯಾಚಾರ ಎಸಗಿ ಕೊಂದಿದ್ದಾನೆ ಎಂಬ ಆರೋಪ ಬಂದಿದೆ.
ಲೈಂಗಿಕ ಕ್ರಿಯೆ ವೇಳೆ ಪ್ರಜ್ಞಾಹೀನಳಾದಳು
‘ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಲೇ ಸ್ನೇಹಿತೆ ಪ್ರಜ್ಞಾಹೀನಾಳಾದಳು. ಇದರಿಂದ ನನಗೆ ಭಯವಾಯಿತು. ಕೂಡಲೇ ನೆರೆಮನೆಯವರ ನೆರವು ಪಡೆದು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಆಸ್ಪತ್ರೆ ಸೇರುವ ಮುನ್ನವೇ ಮೃತಪಟ್ಟಿದ್ದಾಳೆ ಎಂದು ದೃಢಪಡಿಸಿದರು. ನಾನು ಕೊಲೆ ಮಾಡಿಲ್ಲ’ ಎಂದು ಆರೋಪಿತ ರೆಹಮಾನ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಈ ಘಟನೆ ಸಂಬಂಧ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾರ್ಟಿ ಮಾಡೋಣ ಬಾ.. ನಂಬಿ ಬಂದ ಆಕೆಗೆ ಮಾಡಬಾರದನ್ನ ಮಾಡಿದ ಕಾಮುಕ ಸ್ನೇಹಿತರು
ಯುವತಿ ಹೇಗೆ ಸಾವನ್ನಪ್ಪಿದ್ದಾಳೆ ಎಂಬುದು ಖಚಿತವಾಗಿಲ್ಲ. ಈ ಬಗ್ಗೆ ಮರಣೋತ್ತರ ಪರೀಕ್ಷೆ ವರದಿ ಬಳಿಕ ನಿಖರ ಮಾಹಿತಿ ಸಿಗಲಿದೆ. ಮೃತಳ ಕುಟುಂಬದವರಿಗೆ ಕೂಡಾ ಘಟನೆ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವರು ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಯುವತಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಗೆ ವಿಜಯನಗರ ಉಪ ವಿಭಾಗದ ಎಸಿಪಿ ನಂಜುಂಡೇಗೌಡ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.
-ಡಾ.ಸಂಜೀವ್ ಪಾಟೀಲ್, ಡಿಸಿಪಿ, ಪಶ್ಚಿಮ ವಿಭಾಗ