ಟವೆಲ್‌ನಿಂದ ಬಿಗಿದು ವೃದ್ಧೆಯ ಕೊಲೆ; ಆಸ್ತಿಗಾಗಿ ನಡೆದ ಹತ್ಯೆ ಶಂಕೆ

By Ravi Janekal  |  First Published Oct 26, 2023, 1:15 PM IST

ಆಸ್ತಿ ವಿಚಾರಕ್ಕೆ ಟವೆಲ್‌ನಿಂದ ಕುತ್ತಿಗೆ ಬಿಗಿದು ವೃದ್ಧೆಯನ್ನು ಕೊಲೆ ಮಾಡಿರುವ ಘಟನೆ ಮಂಡ್ಯ ನಗರದ ಹೆಬ್ಬಾಳ ಸಮೀಪದ ಹೊರವಲಯದಲ್ಲಿ ನಡೆದಿದೆ.


ಮಂಡ್ಯ (ಅ.26):ಆಸ್ತಿ ವಿಚಾರಕ್ಕೆ ಟವೆಲ್‌ನಿಂದ ಕುತ್ತಿಗೆ ಬಿಗಿದು ವೃದ್ಧೆಯನ್ನು ಕೊಲೆ ಮಾಡಿರುವ ಘಟನೆ ಮಂಡ್ಯ ನಗರದ ಹೆಬ್ಬಾಳ ಸಮೀಪದ ಹೊರವಲಯದಲ್ಲಿ ನಡೆದಿದೆ.

ನಳಿನಿ ರಮೇಶ್(62)ಕೊಲೆಯಾದ ದುರ್ದೈವಿ. ಕಾಫಿ ಪುಡಿ ಅಂಗಡಿ-ಚಿಕೋರಿ ಕಾರ್ಖಾನೆಯ ಮಾಲೀಕ ರಮೇಶ್ ಪತ್ನಿಯಾಗಿರುವ ಮೃತ ನಳಿನಿ ರಮೇಶ್. ಮಂಡ್ಯ ನಗರದ ವಿದ್ಯಾನಗರದ ನಿವಾಸಿಗಳಾಗಿದ್ದಾರೆ.
ಉದ್ಯಮ ಮಾಡಲು ಕಾಫೀ ಪುಡಿ ಅಂಗಡಿ ಹಾಗೂ ಚಿಕೋರಿ ಕಾರ್ಖಾನೆಯನ್ನ ಬ್ಯಾಂಕ್ ನಲ್ಲಿ ಅಡಮಾನ ಇಟ್ಟಿದ್ದರು. ಆದರೆ ಸಾಲ ತೀರಿಸಲಾಗದ ಕಾರಣ ಕಾರ್ಖಾನೆಯನ್ನ ವಶಕ್ಕೆ ಪಡೆದಿದ್ದ ಬ್ಯಾಂಕ್.

Tap to resize

Latest Videos

ಹೀಗಾಗಿ ಮಂಡ್ಯ ಬಿಟ್ಟು ಮೈಸೂರಿನ ವೃದ್ದಾಶ್ರಮದಲ್ಲಿದ್ದ  ದಂಪತಿಗಳು. ಇತ್ತೀಚಿಗೆ ವೃದ್ದೆ ಮಂಡ್ಯದ ಚಿಕೋರಿ ಕಾರ್ಖಾನೆಯ ಮನೆಯಲ್ಲಿ ವಾಸವಿದ್ದ ಮೃತ ವೃದ್ದೆ. ದುಷ್ಕರ್ಮಿಗಳು ಟವೆಲ್ ಬಳಸಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.  ಆಸ್ತಿಗಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಮಂಡ್ಯ ಎಸ್ಪಿ ಎನ್.ಯತೀಶ್ ಭೇಟಿ ಪರಿಶೀಲನ ನಡೆಸಿದ್ದಾರೆ. ಸದ್ಯ ಮೃತ ವೃದ್ದೆಯ ಶವವನ್ನು ಮಂಡ್ಯ ಮಿಮ್ಸ್ ಶವಗಾರಕ್ಕೆ ರವಾನಿಸಲಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತನ ಬರ್ಬರ ಹತ್ಯೆಗೈದ ಅಭಿಮಾನಿ: ಕೊಲೆಯ ಹಿಂದಿತ್ತು ಫ್ಯಾಮಿಲಿ ಮ್ಯಾಟರ್!

click me!