ಸೈಬರ್ ಕ್ರಿಮಿನಲ್ಸ್‌ಗಳು ನಾನಾ ಮಾರ್ಗಗಳ ಮೂಲಕ ಜನರನ್ನು ವಂಚಿಸುತ್ತಲೇ ಇದ್ದಾರೆ. ಈಗ ಕೃತಕ ಬುದ್ಧಿಮತ್ತೆ (AI) ಮೂಲಕವೂ ವಂಚಿಸುತ್ತಿದ್ದಾರೆ.
ನವದೆಹಲಿ (ನವೆಂಬರ್ 17, 2023): ಇತ್ತೀಚೆಗೆ ಕೃತಕ ಬುದ್ಧಿಮತ್ತೆ (AI) ಎಲ್ಲ ಕಡೆ ಪ್ರಭಾವ ಬೀರುತ್ತಿದೆ. ಇದರಿಂದ ವಂಚನೆಯೂ ಹೆಚ್ಚಾಗ್ತಿದೆ. ಇದಕ್ಕೆ ಇಲ್ಲೊಂದು ಉದಾಹರಣೆ ನೋಡಿ.. 59 ವರ್ಷದ ಮಹಿಳೆಯೊಬ್ಬರು ಕೃತಕ ಬುದ್ಧಿಮತ್ತೆ (AI) ಧ್ವನಿ ವಂಚನೆಗೆ ಬಲಿಯಾಗಿದ್ದು, ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ.
ಸೈಬರ್ ಕ್ರಿಮಿನಲ್ಸ್‌ಗಳು ನಾನಾ ಮಾರ್ಗಗಳ ಮೂಲಕ ಜನರನ್ನು ವಂಚಿಸುತ್ತಲೇ ಇದ್ದಾರೆ. ಈಗ ಕೃತಕ ಬುದ್ಧಿಮತ್ತೆ (AI) ಮೂಲಕವೂ ವಂಚಿಸುತ್ತಿದ್ದಾರೆ. 59 ವರ್ಷದ ಮಹಿಳೆಯೊಬ್ಬರು ಎಐ ಧ್ವನಿ ವಂಚನೆಯಿಂದ 1.4 ಲಕ್ಷ ರೂ. ಕಳೆದುಕೊಂಡಿದ್ದಾರೆ. ಮಹಿಳೆಯ ಪ್ರಕಾರ, ಕರೆ ಮಾಡಿದವರು ಕೆನಡಾದಲ್ಲಿರುವ ತನ್ನ ಸೋದರಳಿಯನ ಧ್ವನಿಯಲ್ಲೇ ಮಾತಾಡಿದರು. ಹಾಗೂ, ಅವರು ಸಂಕಷ್ಟದಲ್ಲಿದ್ದಾರೆ ಮತ್ತು ತುರ್ತು ನಗದು ಅಗತ್ಯವಿದೆ ಎಂದು ಹೇಳಿಕೊಂಡರು ಎಂದಿದ್ದಾರೆ.
ಇದನ್ನು ಓದಿ: ವಾಟ್ಸಾಪ್, ಎಸ್‌ಎಂಎಸ್‌ನಲ್ಲಿ ಬರುವ ಈ 7 ಸಂದೇಶಗಳ ಲಿಂಕನ್ನು ಯಾವ ಕಾರಣಕ್ಕೂ ಕ್ಲಿಕ್ ಮಾಡ್ಬೇಡಿ!
ಕೆನಡಾ ಮತ್ತು ಇಸ್ರೇಲ್‌ನಲ್ಲಿ ಕುಟುಂಬಗಳನ್ನು ಹೊಂದಿರುವ ಜನರು AI ಧ್ವನಿ ವಂಚನೆಗಳೊಂದಿಗೆ ಹೆಚ್ಚು ಗುರಿಯಾಗುತ್ತಿದ್ದಾರೆ ಎಂದು ತಜ್ಞರು ಹೇಳಿರುವ ಬಗ್ಗೆ ಮಾಧ್ಯಮ ವರದಿಗಳು ಬಂದಿವೆ. ಈ ಸಂದರ್ಭದಲ್ಲಿ, ಕರೆ ಮಾಡಿದವರು ತನ್ನ ಸೋದರಳಿಯನಂತೆ ನಿರರ್ಗಳವಾಗಿ ಪಂಜಾಬಿಯಲ್ಲಿ ಮಾತನಾಡಿದ್ದಾರೆ.
ತಡರಾತ್ರಿ ಆಕೆಗೆ ಕರೆ ಮಾಡಿ ತನಗೆ ಅಪಘಾತವಾಗಿದೆ ಮತ್ತು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆ ಹಣವನ್ನು ವರ್ಗಾಯಿಸಲು ಮತ್ತು ಸಂಭಾಷಣೆಯನ್ನು ರಹಸ್ಯವಾಗಿಡಲು ಅವರು ನನ್ನನ್ನು ವಿನಂತಿಸಿದರು ಎಂದು ದೆಹಲಿಯ ದೂರುದಾರೆ ಮಹಿಳೆ ಹೇಳಿದ್ದರೆ. ಇದು ವಂಚನೆ ಎಂದು ಆಕೆ ಅರಿತುಕೊಳ್ಳುವ ಹೊತ್ತಿಗೆ, ಮಹಿಳೆ ಈಗಾಗಲೇ ಕರೆಯಲ್ಲಿ ನಮೂದಿಸಲಾದ ಬ್ಯಾಂಕ್ ಅಕೌಂಟ್‌ಗೆ ಅನೇಕ ಟ್ರಾನ್ಸಾಕ್ಷನ್ ಮಾಡಿದ್ದರು ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: 2 ಗಂಟೆಯೊಳಗೆ ಸಂಪರ್ಕ ಕಡಿತವಾಗುತ್ತೆಂದು ಕರೆ ಬರ್ತಿದ್ಯಾ? ಮೊಬೈಲ್ ಬಳಕೆದಾರರಿಗೆ ದೂರಸಂಪರ್ಕ ಇಲಾಖೆ ಎಚ್ಚರಿಕೆ!
ಅಂತಹ ಮತ್ತೊಂದು ಘಟನೆಯಲ್ಲಿ, ಮಹಿಳಾ ಹಿರಿಯ ನಾಗರಿಕರು ಇತ್ತೀಚೆಗೆ ಕೆನಡಾಕ್ಕೆ ಸ್ಥಳಾಂತರಗೊಂಡಿದ್ದ ತನ್ನ ಸೋದರಳಿಯ ಎಂದು ಹೇಳಿಕೊಂಡ ವ್ಯಕ್ತಿಯಿಂದ ಕರೆಯನ್ನು ಸ್ವೀಕರಿಸಿದರು. ಆದರೆ, ಆಕೆಗೆ ಆನ್‌ಲೈನ್ ಹಣ ವರ್ಗಾವಣೆ ಬಗ್ಗೆ ಹೆಚ್ಚು ತಿಳಿದಿಲ್ಲದ ಕಾರಣ ಕುಟುಂಬ ಸದಸ್ಯರನ್ನು ಕರೆದರು. ಬಳಿಕ, ನಿಜವಾದ ಸೋದರಳಿಯನೊಂದಿಗಿನ ತ್ವರಿತ ವಿಡಿಯೋ ಕಾಲ್ ನಂತರ ಇದು ವಂಚನೆ ಎಂದು ಅರಿತುಕೊಂಡರು ಎಂದೂ ತಿಳಿದುಬಂದಿದೆ.
AI ಧ್ವನಿ ಅನುಕರಿಸುವ ಉಪಕರಣಗಳು ಧ್ವನಿಯನ್ನು ನಿಖರವಾಗಿ ಅನುಕರಿಸಬಲ್ಲವು. ಇದರಲ್ಲಿ ವಂಚಕನು ಇನ್ನೊಂದು ತುದಿಯಲ್ಲಿ ಮಾತನಾಡುತ್ತಾರೆ. ಆದರೆ AI ಉಪಕರಣವು ಸ್ವಯಂಚಾಲಿತವಾಗಿ ಧ್ವನಿಯನ್ನು ಅಳವಡಿಸಿಕೊಳ್ಳುತ್ತದೆ ಎಂದು ಸೈಬರ್ ಇಂಟಲಿಜೆನ್ಸ್ ಮತ್ತು ಡಿಜಿಟಲ್ ಫೊರೆನ್ಸಿಕ್ಸ್ (CRCIDF) ಸಂಶೋಧನಾ ಕೇಂದ್ರದ ನಿರ್ದೇಶಕ (ಕಾರ್ಯಾಚರಣೆ) ಪ್ರಸಾದ್ ಪಾಟಿಬಂಡ್ಲ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಭಾರತದ ಶೇ. 80 ರಷ್ಟು ಸೈಬರ್ ಅಪರಾಧ ಇಲ್ಲೇ ನಡೆಯುತ್ತೆ: ಕುಖ್ಯಾತ ಟಾಪ್ 10 ಜಿಲ್ಲೆಗಳ ಪಟ್ಟಿ ಹೀಗಿದೆ..