ಪತ್ನಿಯನ್ನ ಚುಡಾಯಿಸಿದ್ದಕ್ಕೆ ಬರ್ಬರವಾಗಿ ಹತ್ಯೆ ಮಾಡಿದ ಪತಿ!

By Ravi Janekal  |  First Published Oct 26, 2024, 10:51 AM IST

ಪತ್ನಿಯನ್ನ ಚುಡಾಯಿಸಿದ್ದಕ್ಕೆ  ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೋಲಾರ ನಗರದ ಜಮಾಲ್ ಷಾ ನಗರದಲ್ಲಿ ತಡರಾತ್ರಿ ನಡೆದಿದೆ. ಅರ್ಬಾಜ್ (25) ಹತ್ಯೆಯಾದ ವ್ಯಕ್ತಿ. ಅಮ್ಜಾದ್ ಹತ್ಯೆ ಮಾಡಿದ ಆರೋಪಿ


ಕೋಲಾರ (ಅ.26): ಪತ್ನಿಯನ್ನ ಚುಡಾಯಿಸಿದ್ದಕ್ಕೆ  ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೋಲಾರ ನಗರದ ಜಮಾಲ್ ಷಾ ನಗರದಲ್ಲಿ ತಡರಾತ್ರಿ ನಡೆದಿದೆ.

ಅರ್ಬಾಜ್ (25) ಹತ್ಯೆಯಾದ ವ್ಯಕ್ತಿ. ಅಮ್ಜಾದ್ ಹತ್ಯೆ ಮಾಡಿದ ಆರೋಪಿ. ಆರೋಪಿಯನ್ನ ಬಂಧಿಸಿದ ಪೊಲೀಸರು. ಕಳೆದ ಕೆಲವು ದಿನಗಳಿಂದ ಅಮ್ಜಾದ್ ಪತ್ನಿ ಮೇಲೆ ಕಣ್ಣು ಹಾಕಿದ್ದ ಅರ್ಬಾಜ್. ಮೊದಮೊದಲು ಅಷ್ಟಾಗಿ ಗಮನಿಸಿರಲಿಲ್ಲ. ಪದೇಪದೆ ಪತ್ನಿಯನ್ನು ಚುಡಾಯಿಸುವುದು ಕೆಣಕುವುದು ಮಾಡಿದ್ದ ಅರ್ಬಾಜ್. ಈ ವಿಚಾರ ಗೊತ್ತಾಗಿ ಎಚ್ಚರಿಕೆ ಕೊಟ್ಟಿದ್ದ ಅಮ್ಜಾದ್. ಆದರೂ ಪತ್ನಿಯನ್ನು ಚುಡಾಯಿಸುವುದು ಮುಂದುವರಿಸಿದ್ದ ಅರ್ಬಾಜ್. ಈ ವಿಚಾರವಾಗಿ ಇಬ್ಬರ ನಡುವೆ ಎರಡು ಮೂರು ಬಾರಿ ಗಲಾಟೆ ನಡೆದಿತ್ತು. ಇದರಿಂದ ರೋಸಿ ಹೋಗಿದ್ದ ಪತಿ. 

Tap to resize

Latest Videos

undefined

Kolar: ಅಂಗನವಾಡಿ ಕಾರ್ಯಕರ್ತೆಯಿಂದ ರಾಕ್ಷಸಿ ಕೃತ್ಯ: ಮಗುವಿಗೆ ಬೆಂಕಿಯಿಂದ ಸುಟ್ಟ ಸಹಾಯಕಿ!

ನಿನ್ನೆ ತಡರಾತ್ರಿ ಇದೇ ವಿಚಾರಕ್ಕೆ ಮತ್ತೆ ಗಲಾಟೆ ಮಾಡಿಕೊಂಡಿದ್ದಾರೆ. ಮೊದಲೇ ಮುಗಿಸಲು ಸ್ಕೆಚ್ ಹಾಕಿದವನಂತೆ ಚಾಕು ತೆಗೆದು ಅರ್ಬಾಜ್ ಎದೆಗೆ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ತಡರಾತ್ರಿ ಕೊಲೆ ನಡೆದಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು. ಆರೋಪಿ ಅಮ್ಜಾದ್‌ನನ್ನ ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!