ಬೆಂಗ್ಳೂರಲ್ಲಿ ವ್ಯಕ್ತಿಯ ಬರ್ಬರ ಹತ್ಯೆ: ಬಡ್ಡಿ ವ್ಯವಹಾರಕ್ಕೆ ಬಿತ್ತಾ ಹೆಣ..?

By Girish Goudar  |  First Published Jul 3, 2024, 9:54 AM IST

ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಅಜಿತ್‌ನನ್ನ ಭೀಕರವಾಗಿ ಕೊಲೆ ಮಾಡಿದ್ದಾರೆ. ಪುಲಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಗುಂಟೆ ಸಮೀಪ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪುಲಕೇಶಿನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. 


ಬೆಂಗಳೂರು(ಜು.03):  ವ್ಯಕ್ತಿಯೊಬ್ಬನನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಘಟನೆ ನಗರದ ಕಾಕ್ಸ್‌ಟೌನ್ ಸಮೀಪ ಇಂದು(ಬುಧವಾರ) ನಡೆದಿದೆ. ಅಜಿತ್(35)  ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾನೆ. 

ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಅಜಿತ್‌ನನ್ನ ಭೀಕರವಾಗಿ ಕೊಲೆ ಮಾಡಿದ್ದಾರೆ. ಪುಲಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಗುಂಟೆ ಸಮೀಪ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪುಲಕೇಶಿನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. 

Tap to resize

Latest Videos

ಬೆಂಗಳೂರು: ಮನೆಗಳ್ಳನನ್ನು ಹಿಡಿದು ಕೊಟ್ಟ ಸೇಫ್‌ ಸಿಟಿ ಎಚ್‌ಡಿ ಕ್ಯಾಮೆರಾ!

ಕೊಲೆಯಾದ ಅಜಿತ್ ಐಟಿಸಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ, ಕೆಲಸ ಮುಗಿಸಿ ವಾಪಸ್ ಮನೆಗೆ ಬರುವಾಗ ಕೊಲೆ ನಡೆದಿದೆ. ಮನೆ ಮುಂಭಾಗದಲ್ಲೇ ಅಜಿತ್ ಕೊಲೆಯಾಗಿದೆ.

ಬಡ್ಡಿ ವ್ಯವಹಾರಕ್ಕೆ ಬಿತ್ತು ಹೆಣ..?

ಮೃತ ಅಜಿತ್ ಬಾಣಸವಾಡಿಯಲ್ಲಿ ವಾಸವಾಗಿದ್ದು, ಬಡ್ಡಿಗಾಗಿ ಹಣ ಪಡೆದಿದ್ದನಂತೆ. ಹಣ ಕೊಡದೆ ಸತಾಯಿಸ್ತಿದ್ದ ಎಂಬ ಕಾರಣಕ್ಕೆ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ದೊಡ್ಡಗುಂಟ ಬಳಿ ಶೆಡ್‌ನಲ್ಲಿ ಡ್ಯೂಟಿ ಮುಗಿಸಿ ಬಟ್ಟೆ ಬದಲಿಸಲು ಆಗಮಿಸಿದ್ದ ವೇಳೆಯೇ ನಾಲ್ಕೈದು ಮಂದಿ ದುಷ್ಕರ್ಮಿಗಳ ತಂಡ ಅಟ್ಯಾಕ್ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. 

ಈ ಹಿಂದೆ ಹಣದ ವಿಚಾರವಾಗಿ ಅಜಿತ್ ಗಲಾಟೆ ಮಾಡಿಕೊಂಡಿಕೊಂಡಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ಇದೇ ಹಿನ್ನೆಲೆಯಲ್ಲಿ ದ್ವೇಷ ಬೆಳೆಸಿಕೊಂಡು ದುಷ್ಕರ್ಮಿಗಳು ಅಜಿತ್‌ನನ್ನ ಕೊಲೆಗೈದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 

click me!