ಮನೆಗೆ ಹಿಂದಿರುಗುತ್ತಿದ್ದ ಯುವತಿ ಮೇಲೆ ಅತ್ಯಾಚಾರ/ ಆಟೋ ಏರಿದ ಯುವತಿಗೆ ಕಿರುಕುಳ/ ಆಟೋದಿಂದ ಇಳಿಸಿ ಹಿಂಬಾಲಿಸಿದ ಕಾಮುಕರು/ ಅಪ್ರಾಪ್ತ ಬಾಲಕ ಸೇರಿ ಮೂವರ ಮೇಲೆ ಪ್ರಕರಣ
ಹೈದರಾಬಾದ್(ಸೆ. 13) ಹೈದರಾಬಾದಿನಲ್ಲೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಅಪ್ರಾಪ್ತ ಬಾಲಕ ಸೇರಿ ಮೂವರು 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ.
ಸ್ನೇಹಿತರನ್ನು ಭೇಟಿ ಮಾಡಿದ ಯುವತಿ ನಡೆರಗುಲ್ ನಿಂದ ಹಿಂದಿರುಗುತ್ತಿದ್ದಳು. ಬಾಲಾಪುರದಲ್ಲಿ ಆಟೋ ವೊಂದನ್ನು ಹಿಡಿದು ಮನೆಗೆ ಬರುತ್ತಿದ್ದಳು. ಆಟೋ ಏರಿದ ಇಬ್ಬರು ಯುವತಿಯೊಂದಿಗೆ ದುರ್ವರ್ತನೆ ತೋರಿಸಲು ಆರಂಭಿಸಿದ್ದಾರೆ. ಒತ್ತಾಯಪೂರ್ವಕವಾಗಿ ಯುವತಿಯನ್ನು ಆಟೋದಿಂದ ಇಳಿಸಲಾಗಿದೆ. ಆಕೆಯನ್ನು ನಂತರ ಫಾಲೋ ಮಾಡಿದ್ದಾರೆ.
ಲಿವ್ ಇನ್‌ನಲ್ಲಿದ್ದ ಜೋಡಿಗೆ ಕೋವಿಡ್ ನಿಧಿಗೆ 50 ಸಾವಿರ ಕೊಡಿ ಎಂದ ಕೋರ್ಟ್!
ಸಮಯ ನೋಡಿ ಯುವತಿಯನ್ನು ಕಿಡ್ನಾಪ್ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮದ್ಯ ಕುಡಿಸಿ ಅತ್ಯಾಚಾರ ಮಾಡಿದ್ದಾರೆ. ಅವರು ಕರೆದುಕೊಂಡು ಹೋದ ನಿರ್ಜನ ಪ್ರದೇಶಕ್ಕೆ ಹುಡುಗ ಬಂದಿದ್ದಾನೆ.
ಯುವತಿ ಅಲ್ಲಿಂದ ತನ್ನ ತಾಯಿಯ ಸಹಕಾರದಲ್ಲಿ ಪೊಲೀಸರ ಮೊರೆ ಹೋಗಿದ್ದಾಳೆ. ಮೊಬೈಲ್ ಪೋನ್ ಟ್ರೇಸ್ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.