* ಇರೋ 269 ವಿಚಾರಣಾಧೀನ ಕೈದಿಗಳಲ್ಲಿ 160 ಕೈದಿಗಳು ಪೋಕ್ಸೋ ಕೈದಿಗಳು
* ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕೇಸ್‌ಗಳ ಕೈದಿಗಳು
* ಮಲೆನಾಡ ಜೈಲು, ಪೋಕ್ಸೋ ಜೈಲೆನ್ನುವ ಸ್ಥಿತಿ ನಿರ್ಮಾಣ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜೂ.29): ಕಾಫಿನಾಡಿನ ಜೈಲು ಪೋಕ್ಸೋ ಕೈದಿಗಳಿಂದಲೇ ತುಂಬಿದೆ. ಇರೋ 269 ವಿಚಾರಣಾಧೀನ ಕೈದಿಗಳಲ್ಲಿ 160 ಕೈದಿಗಳು ಪೋಕ್ಸೋ ಕೈದಿಗಳಿದ್ದಾರೆ. ಮಲೆನಾಡ ಜೈಲು, ಪೋಕ್ಸೋ ಜೈಲೆನ್ನುವ ಸ್ಥಿತಿ ನಿರ್ಮಾಣವಾಗಿದೆ.ಅದರಲ್ಲೂ ಪೋಕ್ಸೋ ಅಪರಾಧಿಗಳಲ್ಲಿ ಮಲೆನಾಡಿನ ಅಪರಾಧಿಗಳೇ ಹೆಚ್ಚು ಎನ್ನುವ ಅಘಾತಕಾರಿ ವಿಶೇಷ.
ಒಂದು ಅಪರಾಧಕ್ಕೆ ಸೇರಿದ 160 ಕ್ಕೂ ಹೆಚ್ಚು ಕೈದಿಗಳು
ಚಿಕ್ಕಮಗಳೂರು ಜಿಲ್ಲಾ ಕಾರಾಗೃಹ. 15 ಎಕರೆಯ ವಿಸ್ತಾರದ ಜೈಲು. ಅಲ್ಲಿರೋದೇ 269 ವಿಚಾರಣಾಧೀನ ಕೈದಿಗಳು. ಆದ್ರೆ, ಆ 269ರಲ್ಲಿ ಅದೊಂದೇ ಒಂದು ಅಪರಾಧಕ್ಕೆ ಸೇರಿದ 160ಕ್ಕೂ ಹೆಚ್ಚು ಕೈದಿಗಳಿರೋದು ಮಾತ್ರ ನಿಜಕ್ಕೂ ದುರಂತ. ನಾಗರೀಕ ಸಮಾಜವೇ ತಲೆತಗ್ಗಿಸುವಂತದ್ದು. ಜೈಲಿನ ಒಳ ಪ್ರವೇಶ ಮಾಡಿದ್ರೆ ಕೈದಿಗಳು ನಿರ್ಮಾಣ ಮಾಡಿರುವ ಪಾರ್ಕ್ ಎದುರಾಗುತ್ತೆ.ಆದ್ರೆ, ಆ ಪಾರ್ಕ್‍ನಷ್ಟು ಸುಂದರ ಕೈದಿಗಳ ಮನಸ್ಸಿಲ್ಲ ಅನ್ನೋದೇ ನೋವಿನ ಸಂಗತಿ..ಜಿಲ್ಲಾ ಕಾರಾಗೃಹದಲ್ಲಿ 269 ಕೈದಿಗಳಲ್ಲಿ 160 ಕೈದಿಗಳಿರೋದು ಪೋಕ್ಸೋ ಪ್ರಕರಣದ ಆರೋಪಿಗಳು. ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕೇಸಲ್ಲಿ. ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯನ್ನ ಮೂರು ತಿಂಗಳು ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿತರೇ 50ಕ್ಕೂ ಹೆಚ್ಚು ಜನರಿದ್ದಾರೆ. ಇನ್ನುಳಿದಂತೆ ಜಿಲ್ಲೆಯ ಬೇರೆ-ಬೇರೆ ಭಾಗದ ಪೋಕ್ಸೋ ಕೇಸಲ್ಲಿ ಬಂಧಿತರಾಗದವರೇ 100ಕ್ಕೂ ಹೆಚ್ಚು ಜನರಿದ್ದಾರೆ. ಅಂದು ಹೆಸರು-ಮರ್ಯಾದೆ ಎರಡೂ ಹಾಳಾಗುವಂತಹಾ ಮಣ್ಣು ತಿನ್ನುವ ಕೆಲಸ ಮಾಡಿದವರು ಇಂದು ಜೈಲಲ್ಲಿ ಪಶ್ಚಾತ್ತಾಪ ಪಡುತ್ತಿದ್ದಾರೆ ಎನ್ನುವುದು ಜೈಲರ್ ರಾಕೇಶ್ ಕಾಂಬಳೆ ಅಭಿಪ್ರಾಯ..
ಕಂಠಪೂರ್ತಿ ಕುಡಿದು ಬಂದವ್ನು ಹೆಣವಾದ: ಸಣ್ಣಪುಟ್ಟ ಕಳ್ಳತನವೇ ಕೊಲೆಗೆ ಕಾರಣವಾಗಿಬಿಡ್ತಾ..?
ಪೋಕ್ಸೋ ಕೈದಿಗಳಲ್ಲಿ ಮಲೆನಾಡಿಗರೇ ಹೆಚ್ಚು
ಜೈಲಲ್ಲಿರೋ ಆ 160 ಪೋಕ್ಸೋ ಕೈದಿಗಳಲ್ಲಿ ಮಲೆನಾಡಿಗರೇ ಹೆಚ್ಚು ಅನ್ನೋದು ಮತ್ತೊಂದು ಆತಂಕಕಾರಿ ಬೆಳವಣಿಗೆ. ಅರಣ್ಯ ಹಾಗೂ ಅರಣ್ಯದಂತಹಾ ಕಾಫಿತೋಟಗಳೇ ಹೆಚ್ಚಾಗಿರೋ ಮಲೆನಾಡು ಭಾಗದಲ್ಲೇ ಪೋಕ್ಸೋ ಆರೋಪಿತರು ಹೆಚ್ಚಾಗಿದ್ದಾರೆ. ಇವರಲ್ಲಿ ಬೇರೆ-ಬೇರೆ ಊರುಗಳಿಂದ ದುಡಿಮೆ ಅರಸಿ ಬರುವ ಆರೋಪಿಗಳೂ ಇದ್ದಾರೆ. ಹಾಗಾಗಿ, ಜನ ಕೂಡ ಮಕ್ಕಳ ಬಗ್ಗೆ ಎಚ್ಚರದಿಂದಿರಬೇಕಾಗಿದೆ. ಈ ಮಧ್ಯೆ ಜೈಲಿನಲ್ಲಿ ಪಶ್ಚಾತ್ತಾಪ ಪಡುತ್ತಿರುವವರಿಗೆ ಜೈಲು ಕೂಡ ಕೈದಿಗಳ ಮನಪರಿವರ್ತನೆಗೆ ಮುಂದಾಗಿದೆ. ಕೈದಿಗಳಿಗೆ ಉದ್ಯೋಗದ ತರಬೇತಿ ನೀಡುತ್ತಿದೆ. ಟೈಲರಿಂಗ್, ಬಾರ್ಬೆಂಡಿಂಗ್, ಪ್ಲಾಸ್ಟಿಕ್ ಫ್ಲವರ್ ಮೇಕಿಂಗ್, ಪೇಪರ್ ಕಟ್ಟಿಂಗ್, ಕಂಪ್ಯೂಟರ್ ಡಾಟಾ ಆಪರೇಟರ್ ಹೀಗೆ ಹತ್ತು ಹಲವು ಟ್ರೈನಿಂಗ್ ನೀಡುವುದರ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪಾತ್ರ ಏನು, ಹೇಗಿರಬೇಕೆಂದು ಮೆಡಿಟೇಷನ್ ಮೂಲಕ ಮನಪರಿವರ್ತನೆ ಮಾಡುತ್ತಿದ್ದಾರೆ.