ಪ್ರೇಮದ ನಾಟಕವಾಡಿ 9ನೇ ಕ್ಲಾಸ್ ವಿದ್ಯಾರ್ಥಿನಿ ಕೈಗೆ ಮಗು ಕೊಟ್ಟ ನೆರೆಮನೆಯ ಯುವಕ

By Suvarna News  |  First Published Jan 19, 2020, 7:46 PM IST

ಆಕೆ ಇನ್ನೂ 14 ವರ್ಷದ ಬಾಲಕಿ.  ಮದುವೆ ಆಗಿಲ್ಲ.  ಆದರೂ ಚಿಕ್ಕವಯಸ್ಸಿನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ವಿದ್ಯ ಕಲಿಯಬೇಕಿದ್ದ ಬಾಲಕಿ ಆಗಲೇ ಒಂದು ಮಗುವಿಗೆ ತಾಯಿಯಾಗಿದ್ದಾಳೆ. ಇದೆಲ್ಲಾ ಹೇಗಾಯ್ತು ಅಂತೀರಾ ಈ ಸ್ಟೋರಿ ನೋಡಿ.


ಚಾಮರಾಜನಗರ, [ಜ.19]: ಜಿಲ್ಲೆಗುಂಡ್ಲುಪೇಟೆ ತಾಲೂಕಿನ ಗ್ರಾಮವೊಂದರ ಬಡಕುಟುಂಬದ ಬಾಲಕಿಯೊಬ್ಬಳು 14ನೇ ವಯಸ್ಸಿಗೆ ಗರ್ಭಿಣಿಯಾಗಿದ್ದಳು.  

9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಈಕೆ ಗೆಳೆಯತಿಯರು ಕೇಳಿದರೆ ನನ್ನಹೊಟ್ಟೆಯಲ್ಲಿ ಗಂಟಿದೆ ಎಂದು ಹೇಳುತ್ತಲೇ ಬಂದಿದ್ದಳು. ಆದರೆ ಕೊನೆಗೂ ರಹಸ್ಯ ಬಯಲಾಗಿದೆ.

Tap to resize

Latest Videos

ಸ್ಕೂಲ್ ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ಕೊಟ್ಟ 11ನೇ ತರಗತಿ ವಿದ್ಯಾರ್ಥಿನಿ! 

ತಂದೆ-ತಾಯಿ ಕೂಲಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ನೆರೆಮನೆಯ ಯುವಕನೊಬ್ಬ ಬಾಲಕಿಯನ್ನು ಪುಸಲಾಯಸಿ ದೈಹಿಕ ಸಂಪರ್ಕ ಬೆಳಸಿದ್ದ. ಆಗಾಗ್ಗೆ ಇದು ನಡೆಯುತ್ತಲೇ ಇತ್ತು. ದಿನ ಕಳೆದಂತೆ ಬಾಲಕಿ ಗರ್ಭಿಣಿಯಾಗಿದ್ದಾಳೆ. ಆದರೆ ಈ ವಿಷಯನ್ನು ಬಾಲಕಿ ಮುಚ್ಚಿಟ್ಟಿದ್ದಳು. 

ಆಕೆಯ ಹೊಟ್ಟೆದಪ್ಪ ಆಗಿರುವುದನ್ನು ನೋಡಿ ಅನುಮಾನಗೊಂಡು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿಬಿಟ್ಟಿದ್ದಾಳೆ. ಕೂಡಲೇ ಎಚ್ಚೆತ್ತುಕೊಂಡ ಪೋಷಕರು ಗುಂಡ್ಲುಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.  

ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸುಗುತ್ತಿದ್ದ ನೆರೆಮನೆಯ ಮಲ್ಲೇಶ್ ಎಂಬಯುವಕನನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. 

 ಗರ್ಭಿಣಿಯಾಗಿದ್ದ ಬಾಲಕಿಯನ್ನು ಚಾಮರಾಜನಗರದ ಸಾಂತ್ವನ ಕೇಂದ್ರದಲ್ಲಿಇರಿಸಲಾಗಿತ್ತು. ಹೆರಿಗೆ ನೋವು ಕಾಣಿಸಿಕೊಂಡ ನಂತರ ಈಕೆಯನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದೆ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. 

ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಮಕ್ಕಳ ರಕ್ಷಣಾಘಟಕಧಿಕಾರಿಗಳು ಬಾಲಕಿ ಹಾಗು ಮಗುವನ್ನು ಆರೈಕೆ ಮಾಡುತ್ತಿದ್ದಾರೆ. 

ಬಾಲಕಿ, ಹಾಗು ಆಕೆಯ ತಂದೆ ತಾಯಿ ಒಪ್ಪಿದರೆ ಮಗುವನ್ನು ವಶಕ್ಕೆ ತೆಗುದುಕೊಳ್ಳಲಾಗುವುದು ಎಂದು  ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿಜಯಕುಮಾರ್ ತಿಳಿಸಿದ್ದಾರೆ.

click me!