26/11 ಹುತಾತ್ಮರಿಗೆ ಟೀಂ ಇಂಡಿಯಾ ಕ್ರಿಕೆಟಿಗರ ಗೌರವ ನುಡಿ ನಮನ!

Published : Nov 26, 2019, 03:20 PM IST
26/11 ಹುತಾತ್ಮರಿಗೆ ಟೀಂ ಇಂಡಿಯಾ ಕ್ರಿಕೆಟಿಗರ ಗೌರವ ನುಡಿ ನಮನ!

ಸಾರಾಂಶ

ಮುಂಬೈ ಮೇಲಿನ ಭಯೋತ್ಪಾದಕ ದಾಳಿ ಯಾರೂ ಕೂಡ ಮರೆತಿಲ್ಲ. ಭಾರತ ಕಂಡ ಅತ್ಯಂತ ಘೋರ ಭಯೋತ್ಪಾದಕ ದಾಳಿಯಾಗಿರುವ 26/11ರ ದಾಳಿಗೆ 11 ವರ್ಷ ಸಂದಿದೆ. ಈ ದಾಳಿಯಲ್ಲಿ ಮಡಿದ ಭಾರತದ ಹೆಮ್ಮೆಯ ಭದ್ರತಾ ಸಿಬ್ಬಂಧಿಗಳು ಹಾಗೂ ನಾಗರೀಕರನ್ನು ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಸ್ಮರಿಸಿದ್ದಾರೆ.  

ಮುಂಬೈ(ನ.26): ಭಾರತೀಯ ಇತಿಹಾಸದಲ್ಲಿ ನವೆಂಬರ್ 26 ಅತ್ಯಂತ ಕರಾಳ ದಿನ. ಮುಂಬೈ ಮೇಲೆ ಭಯೋತ್ಪಾದಕರ ದಾಳಿಗೆ ಭಾರತ ಮಾತ್ರವಲ್ಲ, ಇಡೀ ವಿಶ್ವವೇ ಬೆಚ್ಚಿ ಬಿದ್ದಿತ್ತು. ಪಾಕಿಸ್ತಾನದ 10 ಉಗ್ರರ ತಂಡ, ಮುಂಬೈನ ಪ್ರಮುಖ ತಾಣಗಳ ಮೇಲೆ ದಾಳಿ ಮಾಡಿ ಬರೋಬ್ಬರಿ 166 ಮಂದಿಯನ್ನು ಹತ್ಯೆ ಮಾಡಿದ್ದರು. ಇಷ್ಟೇ ಅಲ್ಲ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪಾಕಿಸ್ತಾನ 9 ಮಂದಿ ಉಗ್ರರನ್ನು ಸದೆಬಡದು, ಓರ್ವನನ್ನು ಜೀವಂತವಾಗಿ ಹಿಡಿಯಲಾಗಿತ್ತು. ಈ ದಾಳಿ ನಡೆದು ಇಂದಿಗೆ 11 ವರ್ಷ ಪೂರೈಸಿದೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗರು ಉಗ್ರರ ದಾಳಿಯಲ್ಲಿ ಸಾವೀಗೀಡಾದ ನಾಗರಿಕರೂ ಹಾಗೂ ಪೊಲೀಸರಿಗೆ ಗೌರವ ನುಡಿ ನಮನ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಮುಂಬೈ ದಾಳಿಗೆ 11 ವರ್ಷ: ಉಸಿರಿರುವವರೆಗೂ ಹುತಾತ್ಮರನ್ನು ನೆನೆಯುವ ಉದ್ಘೋಷ!

ನವೆಂಬರ್ 26, 2008ರಲ್ಲಿ ಭಾರತ ಭೀಕರ ದಾಳಿಗೆ ತುತ್ತಾಗಿತ್ತು. 3 ದಿನಗಳ ಕಾಳಗದಲ್ಲಿ ಉಗ್ರರ ಹೆಡೆಮುರಿ ಕಟ್ಟಲಾಯಿತು. ಆದರೆ ಭಾರತದ ಹೆಮ್ಮೆಯ ಪೊಲೀಸರು, ಹಾಗೂ NSG ಕಮಾಂಡೋ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಈ ದಾಳಿಯಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಕೂಡ ರದ್ದಾಗಿತ್ತು. ಇದೀಗ ಈ ಕರಾಳ ದಿನದಲ್ಲಿ ಧರ್ಯದಿಂದ ಮುನ್ನಗ್ಗಿ ಮತ್ತಷ್ಟು ಅಪಾಯವನ್ನು ತಪ್ಪಿಸಿದ ಹುತಾತ್ಮ ಭದ್ರತಾ ಸಿಬ್ಬಂಧಿಗಳನ್ನು ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಸ್ಮರಿಸಿದ್ದಾರೆ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?
ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!