ಈ ಬಾರಿ ಕನಿಷ್ಠ ಮೊತ್ತಗಳ ಟಿ20 ವಿಶ್ವಕಪ್‌: 10 ಬಾರಿ 100ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್..!

By Kannadaprabha News  |  First Published Jun 16, 2024, 10:32 AM IST

ಈ ಬಾರಿಯ ಟೂರ್ನಿಯಲ್ಲಿ ತಂಡಗಳು 10 ಬಾರಿ 100ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟಾಗಿವೆ. ಇದು ಟಿ20 ವಿಶ್ವಕಪ್‌ ಆವೃತ್ತಿಯೊಂದರಲ್ಲಿ ಗರಿಷ್ಠ. ಇನ್ನು ಆವೃತ್ತಿಯೊಂದರಲ್ಲಿ ಕನಿಷ್ಠ ಬಾರಿ 100ಕ್ಕಿಂತಲೂ ಕಡಿಮೆ ರನ್‌ಗೆ ಆಲೌಟಾಗಿದ್ದು 2022ರಲ್ಲಿ. ಆ ಆವೃತ್ತಿಯಲ್ಲಿ ಕೇವಲ 1 ಬಾರಿ ಮಾತ್ರ(ಯುಎಇ ತಂಡ) 100ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟಾಗಿತ್ತು. 


ಬಾರ್ಬಡೊಸ್‌: ಇತ್ತೀಚೆಗಷ್ಟೇ ಐಪಿಎಲ್‌ನಲ್ಲಿ ಬೃಹತ್‌ ಮೊತ್ತಗಳ ಪಂದ್ಯಗಳನ್ನು ಕಣ್ತುಂಬಿಕೊಂಡಿದ್ದ ಕ್ರಿಕೆಟ್‌ ಅಭಿಮಾನಿಗಳು ಈಗ ಟಿ20 ವಿಶ್ವಕಪ್‌ನಲ್ಲಿ ಲೋ ಸ್ಕೋರ್‌ ಥ್ರಿಲ್ಲರ್‌ ಪಂದ್ಯಗಳನ್ನು ನೋಡುತ್ತಿದ್ದಾರೆ. ಈ ಬಾರಿ ಟೂರ್ನಿ ಕಡಿಮೆ ಮೊತ್ತಗಳ ವಿಶ್ವಕಪ್‌ ಎಂದೇ ಕರೆಸಿಕೊಳ್ಳುತ್ತಿದ್ದು, ಕಡಿಮೆ ಮೊತ್ತಗಳ ಮೂಲಕವೇ ದಾಖಲೆ ಬರೆದಿದೆ.

ಈ ಬಾರಿಯ ಟೂರ್ನಿಯಲ್ಲಿ ತಂಡಗಳು 10 ಬಾರಿ 100ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟಾಗಿವೆ. ಇದು ಟಿ20 ವಿಶ್ವಕಪ್‌ ಆವೃತ್ತಿಯೊಂದರಲ್ಲಿ ಗರಿಷ್ಠ. ಇನ್ನು ಆವೃತ್ತಿಯೊಂದರಲ್ಲಿ ಕನಿಷ್ಠ ಬಾರಿ 100ಕ್ಕಿಂತಲೂ ಕಡಿಮೆ ರನ್‌ಗೆ ಆಲೌಟಾಗಿದ್ದು 2022ರಲ್ಲಿ. ಆ ಆವೃತ್ತಿಯಲ್ಲಿ ಕೇವಲ 1 ಬಾರಿ ಮಾತ್ರ(ಯುಎಇ ತಂಡ) 100ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟಾಗಿತ್ತು. 

Latest Videos

undefined

2014 ಹಾಗೂ 2021ರಲ್ಲಿ 8 ಬಾರಿ ತಂಡಗಳು 100ಕ್ಕಿಂತ ಕಡಿಮೆ ರನ್‌ಗೆ ಆಲೌಟಾಗಿದ್ದವು. 2010ರಲ್ಲಿ 4, 2007, 2009 ಹಾಗೂ 2012ರಲ್ಲಿ ತಲಾ 3 ಬಾರಿ, 2016ರಲ್ಲಿ 2 ಬಾರಿ ತಂಡಗಳು 100ಕ್ಕಿಂತ ಕಡಿಮೆ ರನ್‌ಗೆ ಆಲೌಟಾಗಿದ್ದವು.

T20 World Cup 2024: ಭಾರತ vs ಕೆನಡಾ ವಿಶ್ವಕಪ್‌ ಪಂದ್ಯ ಮಳೆಗೆ ಆಹುತಿ!

ಟಿ20 ವಿಶ್ವಕಪ್‌: ಕೊನೆ ಬಾಲ್‌ ಥ್ರಿಲ್ಲರ್‌ನಲ್ಲಿ ಆಫ್ರಿಕಾಕ್ಕೆ ನೇಪಾಳ ಶರಣು

ಕಿಂಗ್ಸ್‌ಟೌನ್‌(ಸೇಂಟ್‌ ವಿನ್ಸೆಂಟ್‌): ಕೊನೆ ಎಸೆತದಲ್ಲಿ 2 ರನ್‌ ಬೇಕಿದ್ದಾಗ ಬೇಜವಾಬ್ದಾರಿತನದಿಂದ ರನ್‌ಔಟ್‌ ಆಗುವುದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಐತಿಹಾಸಿಕ ಫಲಿತಾಂಶ ದಾಖಲಿಸುವ ಅವಕಾಶವನ್ನು ನೇಪಾಳ ತಂಡ ಕಳೆದುಕೊಂಡಿದೆ.

ಕೊನೆ ಎಸೆತದ ಥ್ರಿಲ್ಲರ್‌ಗೆ ಸಾಕ್ಷಿಯಾದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ನೇಪಾಳ ವಿರುದ್ಧ ದ.ಆಫ್ರಿಕಾ 1 ರನ್‌ ರೋಚಕ ಗೆಲುವು ಸಾಧಿಸಿದ್ದು, ಸತತ 4 ಜಯದೊಂದಿಗೆ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿಯೇ ಸೂಪರ್‌-8ಕ್ಕೇರಿದೆ. ನೇಪಾಳ ಟೂರ್ನಿಯ ಮೊದಲ ಗೆಲುವಿಗೆ ಮತ್ತಷ್ಟು ಸಮಯ ಕಾಯುವಂತಾಯಿತು.

ಮೊದಲು ಬ್ಯಾಟ್‌ ಮಾಡಿದ ಆಫ್ರಿಕಾ, ನೇಪಾಳದ ಮಾರಕ ದಾಳಿಗೆ ತತ್ತರಿಸಿ ಕಲೆಹಾಕಿದ್ದು 7 ವಿಕೆಟ್‌ಗೆ 115 ರನ್. ನಾಯಕ ಮಾರ್ಕ್‌ರಮ್‌(15), ಡಿ ಕಾಕ್‌(10), ಕ್ಲಾಸೆನ್‌(03), ಮಿಲ್ಲರ್‌(07) ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಆದರೆ ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್‌(49 ಎಸೆತಗಳಲ್ಲಿ 43) ಹಾಗೂ ಟ್ರಿಸ್ಟನ್‌ ಸ್ಟಬ್ಸ್‌(18 ಎಸೆತಗಳಲ್ಲಿ ಔಟಾಗದೆ 27) ತಂಡಕ್ಕೆ ಆಸರೆಯಾದರು. ಕುಶಾಲ್‌ 19 ರನ್‌ಗೆ 4, ದೀಪೇಂದ್ರ ಸಿಂಗ್‌ 21 ರನ್‌ಗೆ 3 ವಿಕೆಟ್‌ ಕಬಳಿಸಿದರು.

ನಿಜಕ್ಕೂ ಪಾಕಿಸ್ತಾನದ ಆರ್ಥಿಕತೆಗಿಂತ ಐಪಿಎಲ್ 13 ಪಟ್ಟು ಮೌಲ್ಯಯುತವಾಗಿದೆಯೇ..? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

116 ರನ್‌ ಸುಲಭ ಗುರಿಯೇ ಆಗಿದ್ದರೂ, ಈ ಬಾರಿ ವಿಶ್ವಕಪ್‌ನ ಪಿಚ್‌ಗಳ ಪರಿಸ್ಥಿತಿ ಗಮನಿಸಿದರೆ ಈ ಮೊತ್ತವನ್ನು ದ.ಆಫ್ರಿಕಾ ರಕ್ಷಿಸಿಕೊಳ್ಳುವ ನಿರೀಕ್ಷೆಯಲ್ಲಿತ್ತು. ಆದರೆ ನೇಪಾಳದ ಬ್ಯಾಟರ್‌ಗಳು ಪ್ರಬಲ ಹೋರಾಟ ಪ್ರದರ್ಶಿಸಿದರು. ಆಸಿಫ್‌ ಶೇಖ್‌(42) ಹಾಗೂ ಅನಿಲ್‌ ಶಾ(27) ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 85ಕ್ಕೆ 2 ವಿಕೆಟ್‌ ಕಳೆದುಕೊಂಡಿದ್ದ ತಂಡ ಬಳಿಕ ಕುಸಿಯಿತು. ತಂಡಕ್ಕೆ ಕೊನೆ 18 ಎಸೆತಗಳಲ್ಲಿ 18 ರನ್‌ ಬೇಕಿತ್ತು. ಆ ಓವರ್‌ನ ಕೊನೆ ಎಸೆತದಲ್ಲಿ ಆಸಿಫ್‌ ಔಟಾದರು. ಆ ಬಳಿಕ 2 ಓವರಲ್ಲಿ 16 ರನ್ ಬೇಕಿದ್ದಾಗ ತಂಡ ಒತ್ತಡಕ್ಕೊಳಗಾಗಿ ಸೋಲೊಪ್ಪಿಕೊಂಡಿತು.

ಸ್ಕೋರ್‌: ದ.ಆಫ್ರಿಕಾ 20 ಓವರಲ್ಲಿ 115/7 (ಹೆಂಡ್ರಿಕ್ಸ್‌ 43, ಸ್ಟಬ್ಸ್‌ 27*, ಕುಶಾಲ್‌ 4-19, ದೀಪೇಂದ್ರ 3-21), ನೇಪಾಳ 20 ಓವರಲ್ಲಿ 114/7 (ಆಸಿಫ್‌ 42, ಅನಿಲ್‌ 27, ಶಮ್ಸಿ 4-19) ಪಂದ್ಯಶ್ರೇಷ್ಠ: ತಬ್ರೇಜ್‌ ಶಮ್ಸಿ

ಹೇಗಿತ್ತು ಕೊನೆ ಓವರ್‌?

ಬಾರ್ಟ್ಮನ್‌ ಎಸೆದ ಕೊನೆ ಓವರಲ್ಲಿ 8 ರನ್‌ ಬೇಕಿತ್ತು. ಗುಲ್ಶಾನ್‌ ಝಾ 2 ಎಸೆತ ವ್ಯರ್ಥ ಮಾಡಿದರೂ 3ನೇ ಎಸೆತವನ್ನು ಬೌಂಡರಿಗಟ್ಟಿದರು. 4ನೇ ಎಸೆತದಲ್ಲಿ 2 ರನ್‌ ದೋಚಿದರು. 5ನೇ ಎಸೆತ ಡಾಟ್‌ ಆಗಿದ್ದರಿಂದ ಕೊನೆ ಎಸೆತದಲ್ಲಿ 2 ರನ್‌ ಬೇಕಿತ್ತು. ಗುಲ್ಶಾನ್‌ ಬ್ಯಾಟ್‌ಗೆ ಸಿಗದೆ ಬಾಲ್‌ ಕೀಪರ್‌ನ ಕೈ ಸೇರಿದರೂ ಓಡಲು ಶುರು ಮಾಡಿದ ಗುಲ್ಶಾನ್‌, ನಾನ್‌ಸ್ಟ್ರೈಕ್‌ ಗೆರೆ ಮುಟ್ಟುವ ಮೊದಲೇ ಬೇಜವಾಬ್ದಾರಿತನದಿಂದ ನಿಧಾನವಾದ ಕಾರಣ ರನ್‌ಔಟ್‌ ಆದರು. ರನ್ ಪೂರ್ಣಗೊಳಿಸಿದ್ದರೆ ಪಂದ್ಯ ಸೂಪರ್‌ ಓವರ್‌ಗೆ ಹೋಗುತ್ತಿತ್ತು.

06ನೇ ಬಾರಿ: ಟಿ20 ವಿಶ್ವಕಪ್‌ನಲ್ಲಿ ತಂಡವೊಂದು 1 ರನ್‌ನಿಂದ ಗೆದ್ದಿರುವುದು ಇದು 6ನೇ ಬಾರಿ.

05ನೇ ಬಾರಿ: ಅಂತಾರಾಷ್ಟ್ರೀಯ ಟಿ20ಯಲ್ಲಿ ದ.ಆಫ್ರಿಕಾ 5ನೇ ಬಾರಿ 1 ರನ್‌ ಅಂತರದಲ್ಲಿ ಗೆದ್ದಿತು. ಬೇರೆ ಯಾವ ತಂಡವೂ 2ಕ್ಕಿಂತ ಹೆಚ್ಚು ಬಾರಿ ಗೆದ್ದಿದ್ದಿಲ್ಲ.
 

click me!