ಟಾಪ್ಲೆಸ್ ಆಗಿ ನಟಿಸುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ನಟಿ ನಿಲೀಮಾ ರಾಣಿಯವರನ್ನು ಕೇಳಿದಾಗ ಅವರು ಹೇಳಿದ ಉತ್ತರ ಕೇಳಿ ಫ್ಯಾನ್ಸ್ ದಂಗಾಗಿದ್ದಾರೆ.
ಚಿತ್ರರಂಗದಲ್ಲಿ ಅಗತ್ಯಕ್ಕಿಂತ ಹೆಚ್ಚೇ ಎನ್ನಿಸುವಷ್ಟು ದೇಹ ಪ್ರದರ್ಶನ ಮಾಡುವುದು ಇಂದು ಮಾಮೂಲಾಗಿ ಬಿಟ್ಟಿದೆ. ಇಂದಿನ ಬಹುತೇಕ ನಟಿಯರು ಚಿತ್ರಗಳಲ್ಲಿ ಮಾತ್ರವಲ್ಲದೇ ಹೊರಗಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗಲೂ ದೇಹ ಪ್ರದರ್ಶನವಾಗುವ ಬಟ್ಟೆಗಳನ್ನೇ ಧರಿಸುವುದು ಉಂಟು. ಬಟ್ಟೆಗೂ, ನಟಿಯರಿಗೂ ಆಗಿಯೇ ಬರುವುದಿಲ್ಲವೇನೋ ಎನ್ನುವಷ್ಟರಮಟ್ಟಿಗೆ ಕೆಲವೊಂದು ಅಶ್ಲೀಲ, ಅಸಭ್ಯ ಎನ್ನಿಸುವ ವಸ್ತ್ರ ತೊಡುವುದು ಇದೆ. ಪೈಪೋಟಿಗೆ ಬಿದ್ದವರಂತೆ ಅತ್ಯಂತ ಕಡಿಮೆ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಪಾತ್ರಗಳಿಗೆ ಅಗತ್ಯಬಿದ್ದರೆ ಬಟ್ಟೆ ಬಿಚ್ಚಲು ಸಿದ್ಧ ಎಂದು ಹೇಳುವ ನಟಿಯರಿಗೇನೂ ಕೊರತೆಯಿಲ್ಲ. ಆದರೆ ನಿಜವಾಗಿಯೂ ಚಿತ್ರದಲ್ಲಿ ನೋಡಿದಾಗ ಪಾತ್ರಗಳಿಗೆ ಅಗತ್ಯವೇ ಇರಲಿಲ್ಲವೇನೋ ಎನ್ನಿಸುವುದೂ ಉಂಟು. ಇದೀಗ ತಮಿಳಿನ ಖ್ಯಾತ ನಟಿ ನೀಲಿಮಾ ರಾಣಿ (Nileema Rani) ಇದರ ಬಗ್ಗೆಯೇ ಮಾತನಾಡಿದ್ದಾರೆ.
ಅಂದಹಾಗೆ ಟಾಲಿವುಡ್ನ ಫೇಮಸ್ ನಟಿಯೆಂದು ಗುರುತಿಸಿಕೊಂಡಿರುವ ನಟಿ ನೀಲಿಮಾ ರಾಣಿ. ಬಾಲ ಕಲಾವಿದೆಯಾಗಿ ಚಿತ್ರರಂಗ ಪ್ರವೇಶಿಸಿರೋ ನೀಲಿಮಾ ಅವರು ಇಂದು ಹಲವಾರು ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಶಾಲೆಯಲ್ಲಿದ್ದಾಗ ಒರು ಪೆನ್ನಿನ್ ಕಥಾಯ್ (Oru Pennin Kathay) ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದವರು. ನಂತರ ಬೇಸಿಗೆ ರಜೆಯಲ್ಲಿ ಅವರು ತೇವರ್ ಮಗನ್ , ವಿರುಂಬುಗಿರೆನ್ ಮತ್ತು ಪಾಂಡವರ ಭೂಮಿ ಮುಂತಾದ ಚಲನಚಿತ್ರಗಳನ್ನು ಮಾಡಿದರು. 15 ವರ್ಷ ವಯಸ್ಸಿನವರಿರುವಾಗಲೇ ಅಚಮ್ ಮೇಡಮ್ ಐರಿಪ್ಪು - ಬೃಂದಾವನಂ ಚಿತ್ರದಲ್ಲಿ ಎರಡನೇ ನಾಯಕಿ ಪಾತ್ರವನ್ನು ನಿರ್ವಹಿಸಿದ ನಟಿ. ಇದಾದ ಬಳಿಕ 2001 ರಲ್ಲಿ 850 ಎಪಿಸೋಡ್ ಸನ್ ಟಿವಿ ಧಾರಾವಾಹಿ, ಮೆಟ್ಟಿ ಓಲಿನಲ್ಲಿ ನಟಿಸಿದರು. ನಾನ್ ಮಹಾನ್ ಅಲ್ಲಾ ಚಿತ್ರದಲ್ಲಿ ಕಾರ್ತಿ ಅವರ ಸ್ನೇಹಿತನ ಪಾತ್ರವು ಅವರ ಅತ್ಯುತ್ತಮ ಪೋಷಕ ನಟಿಗಾಗಿ ಎಡಿಸನ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಇವರು ನಟಿ ಮಾತ್ರವಲ್ಲದೇ ನಿರ್ಮಾಪಕಿಯೂ ಆಗಿದ್ದಾರೆ. ಕೆ.ಎಸ್ ಅಧಿಯಮಾನ್ ಅವರ ಸಾಹಸೋದ್ಯಮ ಅಮಲಿ ತುಮಲಿ , ನಕುಲ್ , ಶಾಂತು ಮತ್ತು ಸಂತಾನಂ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಹಾಸ್ಯ ಚಿತ್ರದೊಂದಿಗೆ ನಿರ್ಮಾಪಕಿಯ ಪಟ್ಟಕ್ಕೇರಿದ್ದಾರೆ. ಅಲ್ಲದೆ, ಅವರೊಬ್ಬ ಕಂಠದಾನ ಕಲಾವಿದೆಯೂ ಹೌದು.
ಜೈಲಿನಿಂದ್ಲೇ ಇಂಥ ಪ್ಲ್ಯಾನ್ ಮಾಡಿದಾರಾ ನಟಿ ಜಾಕ್ವೆಲಿನ್ ಸ್ನೇಹಿತ? ಲವ್ ಲೆಟರ್ನಲ್ಲಿದೆ ಇಂಟರೆಸ್ಟಿಂಗ್ ವಿಷ್ಯ!
ಅವರು ಇತ್ತೀಚೆಗೆ ಬಹಳ ಫೇಮಸ್ ಆಗಿದ್ದಕ್ಕೆ ಕಾರಣ, ಸೋಷಿಯಲ್ ಮೀಡಿಯಾದಲ್ಲಿ ತರ್ಲೆ ನೆಟ್ಟಿಗನೊಬ್ಬ ಕೇಳಿದ್ದ ಪ್ರಶ್ನೆಗೆ ಇವರು ಉತ್ತರಿಸಿದ್ದ ಪರಿಯಿಂದ. ಅಭಿಮಾನಿಗಳ ಜೊತೆ ಸಂವಾದ ನಡೆಸುವ ಸಂದರ್ಭದಲ್ಲಿ ನೆಟ್ಟಿಗನೊಬ್ಬ ನೀವು ಧರಿಸುವ ಒಳಉಡುಪಿನ ಸೈಜ್ (Bra size) ಎಷ್ಟು? ಎಂದು ಕೇಳಿದ್ದ. ಇದಕ್ಕೆ ಉತ್ತರಿಸಿದ್ದ ನೀಲಿಮಾ ನಾನೇಕೆ ಅದನ್ನು ನಿನಗೆ ಹೇಳಬೇಕು? ನೀನೇನು ಮಾರಾಟ ಮಾಡುತ್ತೀದ್ದೀಯಾ? ಎಂದಿದ್ದರು. ಮತ್ತೊಬ್ಬ ನೆಟ್ಟಿಗ ನಿಮಗೆ ಯಾವ ಲೈಂಗಿಕ ಭಂಗಿ ಇಷ್ಟ? ತಿಂಗಳಲ್ಲಿ ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸುತ್ತೀರಾ ಎಂದು ಕೇಳಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ನೀಲಿಮಾ, ಇಂತಹ ಕ್ಷೀಣಬುದ್ಧಿ ಪ್ರಶ್ನೆಗಳಿಗೆ ಹೇಗೆ ಉತ್ತರ ನೀಡಲಿ ಎಂದಿದ್ದರು.
ಇದೀಗ ಅವರು, ಇತ್ತೀಚೆಗೆ ರಾಘವ ಲಾರೆನ್ಸ್ ಅಭಿನಯದ ರುದ್ರನ್ (Rudran) ಚಿತ್ರದಲ್ಲಿ ವೈದ್ಯನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಸಂದರ್ಶನ ನೀಡಿದ್ದಾರೆ. ಇವರು ಆಡಿರುವ ಮಾತುಗಳು ಇದೀಗ ಸಕತ್ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ, ಅವರು ನಟಿಯರ ಅರೆಬೆತ್ತಲೆ, ಟಾಪ್ಲೆಸ್ ಬಟ್ಟೆ ಕುರಿತು ಮಾತನಾಡಿದ್ದಾರೆ. ಸಿನಿಮಾಗಳಲ್ಲಿ ಟಾಪ್ಲೆಸ್ ಆಗಿ ನಟಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯೊಂದು ನೀಲಿಮಾ ಅವರಿಗೆ ಎದುರಾಯಿತು. ಆಗ ಯಾವುದೇ ನಿರ್ದಾಕ್ಷಿಣ್ಯವಿಲ್ಲದೇ ನಟಿ, ಟಾಸ್ಲೆಸ್ ಆಗಿ ನಟಿಸುವುದರಲ್ಲಿ ವಿಶೇಷವೇನಿದೆ? ಇದೇನು ದೊಡ್ಡ ದೊಡ್ಡ ವಿಷಯ ಎಂದು ನನಗೆ ಅನ್ನಿಸುವುದೇ ಇಲ್ಲ ಎಂದಿದ್ದಾರೆ!
ಲವರ್ಗಾಗಿ ಜವಾನ್ ಟಿಕೆಟ್ ಫ್ರೀ ಕೊಡಿ ಎಂದ ಪ್ರೇಮಿ: ಶಾರುಖ್ರಿಂದ ರೊಮ್ಯಾನ್ಸ್ ಪಾಠ!