ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರನ ಪುತ್ರಿ ನಿಹಾರಿಕಾ ಅವರ ಮಾಜಿ ಪತಿಯೂ ಎರಡನೇ ಮದ್ವೆಗೆ ರೆಡಿ ಆಗಿದ್ದಾರಂತೆ. ಹಾಗಿದ್ರೆ ವಧು ಯಾರು?
ಮೆಗಾಸ್ಟಾರ್ ಚಿರಂಜೀವಿ ಅವರ ಮನೆ ಮಗಳು ಅರ್ಥಾತ್ ಚಿರಂಜೀವಿ ಅವರ ಸಹೋದರನ ಮಗಳು ನಿಹಾರಿಕಾ ಕೊನಿಡೇಲಾ (Niharika Konidela) ಸಿನಿಮಾ ಮಾಡಿದ್ದು ಕಮ್ಮಿ. ಅವರು ಸಿನಿಮಾಗಿಂತಲೂ ವೈಯಕ್ತಿಕವಾಗಿಯೇ ಹೆಚ್ಚೆಚ್ಚು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಪತಿ ಚೈತನ್ಯ ಅವರಿಂದ ವಿಚ್ಛೇದನ ಪಡೆದುಕೊಂಡಿರುವ ನಿಹಾರಿಕಾ, ಮತ್ತೆ ಸದ್ದು ಮಾಡುತ್ತಲೇ ಇದ್ದಾರೆ. ನಿಹಾರಿಕಾ ಕೊನಿಡೆಲಾ ಅವರು ಚೈತನ್ಯ ಜೊನ್ನಲಗುಡ್ಡ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ಕೂಡ ನಡೆದಿತ್ತು. ನಿಹಾರಿಕಾ ಹಾಗೂ ಚೈತನ್ಯ ಮದುವೆಗೆ ಇಡೀ ಮೆಗಾಸ್ಟರ್ ಕುಟುಂಬ ಸಾಕ್ಷಿಯಾಗಿತ್ತು. ಆದರೆ, ಅದೇನಾಯಿತೋ ಗೊತ್ತಿಲ್ಲ, ದಾಂಪತ್ಯ ಕೇವಲ ಎರಡೂವರೆ ವರ್ಷಕ್ಕೆ ಅಂತ್ಯವಾಗಿ ಹೋಯ್ತು. ನಿಹಾರಿಕಾ ಈಗ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಸದ್ಯ ಏಕಾಂಗಿಯಾಗಿ ಲೈಫ್ ಲೀಡ್ ಮಾಡುತ್ತಿರೋ ನಿಹಾರಿಕಾ 2ನೇ ಮದ್ವೆಗೆ ರೆಡಿಯಾಗಿದ್ದಾರೆ ಎನ್ನುವ ಸುದ್ದಿ ಕಳೆದೊಂದು ತಿಂಗಳಿನಿಂದ ಭಾರಿ ಹರಿದಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತಾಗಿ ವ್ಯಾಪಕವಾಗಿ ಸುದ್ದಿಯಾಗಿದ್ದು, ಬಾಲನಟನಾಗಿ ಬಳಿಕ ಹೀರೋ ಆಗಿಯೂ ಮಿಂಚಿರುವ ಸ್ಟಾರ್ ನಟನನ್ನು ನಿಹಾರಿಕಾ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಆದರೆ ಹೆಸರು ರಿವೀಲ್ ಆಗಲಿಲ್ಲ. ಆದರೂ ಫ್ಯಾನ್ಸ್ ಬಿಡಬೇಕಲ್ಲ. ಇವರು ಯಾರನ್ನು ಮದುವೆಯಾಗಬಹುದು ಎಂದು ಹೆಕ್ಕಿ ತೆಗೆದಿದ್ದು, ಅವರು ತೆಲುಗಿನ ನಟ ವರುಣ್ ಎನ್ನಲಾಗಿದೆ. ವರುಣ್ ಅವರನ್ನು ನಿಹಾರಿಕಾ ಕೊನಿಡೆಲಾ 2ನೇ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.
ಆದರೆ ಇದೀಗ ಬಂದಿರುವ ಹೊಸ ಸುದ್ದಿ ಏನಪ್ಪಾ ಎಂದರೆ, ನಿಹಾರಿಕಾ ಅವರ ಮಾಜಿ ಪತಿ ಚೈತನ್ಯ ಅವರು ಎರಡನೆಯ ಮದ್ವೆಯಾಗಲಿದ್ದಾರಂತೆ! ಹೌದು. ತಮ್ಮ ಮಾಜಿ ಪತ್ನಿ ಎರಡನೆಯ ಮದ್ವೆಗೆ ರೆಡಿಯಾಗಿರುವ ಸುದ್ದಿಯ ಬೆನ್ನಲ್ಲೇ ಇದೀಗ ಚೈತನ್ಯ ಅವರೂ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಪತಿಯೊಂದಿಗೆ ವಿಚ್ಛೇದನ ಪಡೆದ ಬಳಿಕ ನಟಿ ನಿಹಾರಿಕಾ ಫುಲ್ ಬದಲಾಗಿದ್ದು, ದೇಶ-ವಿದೇಶಗಳನ್ನು ಸುತ್ತುತ್ತಾ ಎಂಜಾಯ್ ಮಾಡ್ತಿದ್ದಾರೆ. ಬೋಲ್ಡ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರೆ, ಮುರಿದುಬಿದ್ದ ಮದ್ವೆಯಿಂದ ಚೈತನ್ಯ ಅವರು ತುಂಬಾ ನೊಂದುಕೊಂಡಿದ್ದರು. ಇದೀಗ ಮನೆಯವರ ಒತ್ತಾಯಕ್ಕೆ ಎರಡನೇ ಮದುವೆಗೆ ಒಪ್ಪಿದ್ದಾರೆ ಎನ್ನಲಾಗುತ್ತಿದೆ. ತನ್ಯ ಅವರ ಎರಡನೇ ಮದುವೆ ತನ್ನ ಕುಟುಂಬಕ್ಕೆ ತುಂಬಾ ಹತ್ತಿರವಾಗಿರುವ ಐಪಿಎಸ್ ಅಧಿಕಾರಿಯೊಬ್ಬರ ಮಗಳೊಂದಿಗೆ ನಡೆಯಲಿದೆ. ಎರಡೂ ಕುಟುಂಬಗಳು ಈ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯದಲ್ಲೇ ಚೈತನ್ಯ ಮದುವೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಡೈವೋರ್ಸ್ ಪಡೆದ ತಿಂಗಳ ಒಳಗೆ 2ನೇ ಮದುವೆಗೆ ರೆಡಿಯಾದ ಮೆಗಾ ಕುಟುಂಬದ ಕುಡಿ ನಿಹಾರಿಕಾ?
ಅಷ್ಟಕ್ಕೂ ಚಿರಂಜೀವಿ ಪುತ್ರಿ ಶ್ರೀಜಾ ಕೂಡ ಎರಡನೇ ಪತಿಯ ಜೊತೆ ವಿರಸ ಉಂಟಾಗಿರುವ ಕಾರಣ ತವರು ಮನೆಯಲ್ಲಿ ಬಂದು ನೆಲೆಸಿದ್ದಾರೆ. ಇದರ ಬೆನ್ನಲ್ಲೇ ನಿಹಾರಿಕಾ ಕೂಡ ವಿಚ್ಛೇದನ ಪಡೆದಿದ್ದರು. ಆರಂಭದಲ್ಲಿ ಇದರ ಬಗ್ಗೆ ಗಾಳಿ ಸುದ್ದಿ ಹರಡಿತ್ತು. ಆದರೆ ಚೈತನ್ಯ ಅವರು, ನಿಹಾರಿಕಾ ಅವರನ್ನು ಅನ್‌ಫಾಲೋ ಮಾಡಿದ್ದು ಮಾತ್ರವಲ್ಲ, ಮದುವೆ ಫೋಟೊ ಸೇರಿ ಅವರೊಂದಿಗಿನ ಎಲ್ಲಾ ಫೋಟೊಗಳನ್ನು ಡಿಲೀಟ್ ಮಾಡಿದ್ದರು. ನಿಹಾರಿಕಾ ಕೂಡ ತಮ್ಮ ಮದುವೆಯ ಫೋಟೊಗಳನ್ನು ಇನ್‌ಸ್ಟಾಗ್ರಾಂ ಖಾತೆಯಿಂದ ಡಿಲಿಟ್ ಮಾಡಿದ್ದರು. ಆಗಲೇ ಇವರಿಬ್ಬರ ನಡುವೆ ಬಿರುಕು ಬಿಟ್ಟಿದ್ದ ವಿಷಯ ತಿಳಿದುಬಂದಿತ್ತು. ಇಬ್ಬರು ಹಲವು ತಿಂಗಳುಗಳಿಂದ ದೂರ ದೂರ ವಾಸಿಸುತ್ತಿದ್ದು ಬಳಿಕ ಅಧಿಕೃತವಾಗಿ ಡಿವೋರ್ಸ್ ಬಗ್ಗೆ ಹೇಳಿದ್ದರು.
ಇನ್ನು ಸಿನಿಮಾದ ವಿಚಾರಕ್ಕೆ ಬರುವುದಾದರೆ ನಿಹಾರಿಕ ʼಒಕ ಮನಸ್ಸುʼ ಹಾಗೂ ʼಹ್ಯಾಪಿ ವೆಡ್ಡಿಂಗ್ʼ ಸಿನಿಮಾದ ನಟನೆಯ ಮೂಲಕ ಖ್ಯಾತಿ ಪಡೆದಿದ್ದರು. ಇವರು ಕೊನೆಯ ಬಾರಿ ತೆರೆ ಮೇಲೆ ಕಾಣಿಸಿದ್ದು ಚಿರಂಜೀವಿ ನಟನೆಯ ʼಸೈರಾ ನರಸಿಂಹ ರೆಡ್ಡಿʼ ಸಿನಿಮಾದಲ್ಲಿ. ಸದ್ಯ ಈಕೆ ಸಿನಿಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ.
ರಾಗಿಣಿ ಹಾಟ್ ಫೋಟೋಶೂಟ್: ಬಿಕಿನಿಯಲ್ಲೇ ನೀವ್ ಚೆಂದ, ಚೆಡ್ಡಿ ಬಿಟ್ಬಿಡಿ ಅನ್ನೋದಾ ಫ್ಯಾನ್ಸ್?