ಟಿವಿ ನಟಿಯ ಮೇಲೆ ಅತ್ಯಾಚಾರ | ಹಲವು ಬಾರಿ ಹಲವು ಸಂದರ್ಭಗಳಲ್ಲಿ ನಟಿಯ ಮೇಲೆ ಅತ್ಯಾಚಾರ ಮಾಡಿದಾತನ ವಿರುದ್ಧ ಕೇಸು ದಾಖಲು
ಮುಂಬೈ(ಮಾ.07): ಮದುವೆಯ ಭರವಸೆ ನೀಡಿ ಟಿವಿ ನಟಿಯ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ನಟಿ ಉತ್ತರ ಮುಂಬೈನ ಓಶಿವರದಲ್ಲಿ ಪೊಲೀಸ್ ಕಂಪ್ಲೇಟ್ ಕೊಟ್ಟಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದೀಗ ಅತ್ಯಾಚಾರ ಮಾಡಿದ ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮದುವೆಯಾಗುತ್ತೇನೆ ಎಂದು ನಂಬಿಸಿ ಹಲವು ಸಂದರ್ಭಗಳಲ್ಲಿ ಹಲವು ಬಾರಿ ಆರೋಪಿ ತನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ನಟಿ ದೂರಿನಲ್ಲಿ ತಿಳಿಸಿದ್ದಾಳೆ.
ಹೊಟ್ಟೆ ಆಪರೇಷನ್ ಮಾಡಿ ಸ್ಟಿಚ್ ಹಾಕದೆ ಬಿಟ್ಟ ವೈದ್ಯರು, 3 ವರ್ಷದ ಕಂದ ಸಾವು
ಇದೀಗ ಆರೋಪಿಯ ವಿರುದ್ಧ ರೇಪ್, ವಂಚನೆ, ಮೋಸ, ಉದ್ದೇಶಪೂರ್ವಕ ಅವಮಾನ ಸೇರಿ ಹಲವು ಸೆಕ್ಷನ್ಗಳಡಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಟಿವಿ ನಟಿಯೊಬ್ಬರು ಪೈಲಟ್ ಮದುವೆ ಭರವಸೆ ನೀಡಿ ಅತ್ಯಾಚಾರ ಮಾಡಿದ್ದಾನೆಂದು ಆರೋಪಿಸಿದ ಕೆಲವೇ ದಿನಗಳಲ್ಲಿ ಈ ಪ್ರಕರಣವೂ ಬೆಳಕಿಗೆ ಬಂದಿದೆ.