ಕರೀನಾ ಕಪೂರ್ ಬ್ರಾ ಧರಿಸದೇ ಮದುಮಗಳ ಫೋಟೋಶೂಟ್ ಮಾಡಿಸಿಕೊಂಡು, ಸಕತ್ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ನೆಟ್ಟಿಗರು ಏನಂದ್ರು ನೋಡಿ...
ಬಾಲಿವುಡ್ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಜೋಡಿ. ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್ ಸುದ್ದಿ ಮಾಡಿದವರು. ಸೈಫ್ ಅಲಿ ಖಾನ್ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು.
ಇದೀಗ ಕರೀನಾ ಕಪೂರ್ ಕೆಲವೊಂದು ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಇದೀಗ ಮದುಮಗಳ ಡ್ರೆಸ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿವಿಧ ಭಾಗಗಳಲ್ಲಿನ ಮದುಮಗಳ ಡ್ರೆಸ್ ಹಾಕಿಕೊಂಡು ವಿಡಿಯೋಶೂಟ್ ಮಾಡಿಸಿದ್ದಾರೆ. ವಯಸ್ಸು 43 ಆದರೂ ಈಗಲೂ ನಟಿಗೆ ಜಾಹೀರಾತು ಕಂಪೆನಿಗಳಿಂದಲೂ ಬೇಡಿಕೆ ಇದೆ. ಇದೇ ಕಾರಣಕ್ಕೆ ಮದುಮಗಳ ಲುಕ್ನಲ್ಲಿ ನಟಿ ಮಿಂಚಿದ್ದಾರೆ. ಆದರೆ ಈ ಡ್ರೆಸ್ಗಳನ್ನು ನೋಡಿದ ನೆಟ್ಟಿಗರು ನಟಿಯ ವಿರುದ್ಧ ಟೀಕೆಗಳ ಸುರಿಮಳೆಯನ್ನೇಗೈಯುತ್ತಿದ್ದಾರೆ. ಇದಕ್ಕೆ ಕಾರಣ ಕೆಲವು ಮದುಮಗಳ ಡ್ರೆಸ್ನಲ್ಲಿ ಕರೀನಾ ಕಪೂರ್ ಬ್ರಾಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಈಗೀಗ ಇದೊಂದು ರೀತಿಯಲ್ಲಿ ಟ್ರೆಂಡ್ ಕೂಡ ಆಗಿದೆ ಅನ್ನಿ. ಕೆಲವು ನಟಿಯರು ಪ್ರಚಾರಕ್ಕೋ ಅಥವಾ ಬೇಡಿಕೆ ಕುದುರಿಸಿಕೊಳ್ಳುವುದಕ್ಕಾಗಿಯೋ ಬ್ರಾಲೆಸ್ನಲ್ಲಿ ಕಾಣಿಸಿಕೊಳ್ಳುವುದು ಟ್ರೆಂಡ್ ಆಗಿದೆ.
ಯಶ್ ಜೊತೆ ಟಾಕ್ಸಿಕ್ನಲ್ಲಿ ಕರೀನಾ ಕಪೂರ್ ನಟಿಸ್ತಾ ಇರೋದು ನಿಜನಾ? ನಟಿ ನೀಡಿದ ಅಪ್ಡೇಟ್ ಏನು?
ಅದೇ ರೀತಿ ನಟಿ ಕರೀನಾ ಕಪೂರ್ ಕೂಡ ಬ್ರಾಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಟೀಕಾಕಾರರು ಸುಮ್ಮನೆ ಬಿಡುತ್ತಾರೆಯೆ? ವಯಸ್ಸು 43 ಆದರೂ, ಅದು ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದ್ದರೂ ಸ್ವಲ್ಪನಾದರೂ ನಾಚಿಕೆ ಮರ್ಯಾದೆ ಬೇಕು ಎನ್ನುತ್ತಿದ್ದಾರೆ. ಇನ್ನು ಕೆಲವರು ನೀವು ಉಳಿದ ವೇಳೆ ಡ್ರೆಸ್ ಹಾಕಿಕೊಳ್ಳಿ, ಬಿಡಿ... ಯಾರೂ ತಕರಾರು ಮಾಡುವುದಿಲ್ಲ. ಆದರೆ ಮದುಮಗಳ ಡ್ರೆಸ್ ಹೆಸರಿನಲ್ಲಿ ಈ ರೀತಿ ಬ್ರಾಲೆಸ್ ಹಾಕಿಕೊಳ್ಳುವ ಸಂಪ್ರದಾಯ ಎಲ್ಲಿದೆ ಎಂದು ಪ್ರಶ್ನಿಸುತ್ತಿದ್ದಾರೆ. ನಿಮ್ಮ ಕಡೆ ಏನಾದರೂ ಹೀಗೆ ಮದುಮಗಳು ಕಾಣಿಸಿಕೊಳ್ಳುತ್ತಾಳಾ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರಂತೂ ಅತಿರೇಕಕ್ಕೆ ಹೋಗಿದ್ದು, ಭಾರತೀಯ ಸಂಪ್ರದಾಯದಲ್ಲಿ ಮದುವೆ, ಮದುಮಕ್ಕಳಿಗೆ ಬೆಲೆ ಇದೆ. ಈ ರೀತಿಯ ಡ್ರೆಸ್ ಹಾಕುವ ಮೂಲಕ ಮದುವೆಯಂಥ ಸಂಪ್ರದಾಯಕ್ಕೆ ಕಳಂಕ ತರಬೇಡಿ ಎಂದು ನಟಿಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಇತ್ತೀಚೆಗಷ್ಟೇ ಹೊಸ ವರ್ಷದ ರೆಸಲ್ಯೂಷನ್ ಹೇಳಿದ್ದ ನಟಿ, ತಾವು ಯಾರೇ ಟೀಕೆ ಮಾಡಿದರೂ ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಇದೇ ನನ್ನ ಹೊಸ ವರ್ಷದ ರೆಸಲ್ಯೂಷನ್ ಎಂದಿದ್ದಾರೆ. 1+1=5 ಎಂದರೂ ಸುಮ್ಮನೆ ಇರುತ್ತೇನೆ. ಏನೂ ಹೇಳಲು ಹೋಗುವುದಿಲ್ಲ. 2024ರಲ್ಲಿ ಯಾವುದೇ ವಿವಾದಗಳಿಂದ ದೂರ ಇರುತ್ತೇನೆ. ಯಾರು ಬಂದು ಏನೇ ಹೇಳಿದರೂ ಅವರ ಜೊತೆ ಮಾತಿನ ಚಕಮಕಿ ನಡೆಸುವುದಿಲ್ಲ ಎಂದಿದ್ದರು. ಅದರಂತೆ ಈ ಟೀಕೆಗಳಿಗೂ ನಟಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
1+1=5 ಅಂದ್ರೂ ನಿಜನೇ: ಇದು ಕರೀನಾ ಕಪೂರ್ ಹೊಸ ವರ್ಷದ ಮಂತ್ರವಂತೆ! ಏನಿದರ ಅರ್ಥ ಗೊತ್ತಾ?