ನಟ ಅರ್ಬಾಜ್ ಖಾನ್ ಅವರ ಮಾಜಿ ಗೆಳತಿ ಜಾರ್ಜಿಯಾ ಆಂಡ್ರಿಯಾನಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅವರ ಡ್ರೆಸ್ಗೆ ಟ್ರೋಲ್ ಮಾಡಲಾಗುತ್ತಿದೆ.
ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ತಮಗಿಂತ 22 ವರ್ಷ ಚಿಕ್ಕ ಯುವತಿಯನ್ನು ಮದುವೆಯಾಗಿ ತಿಂಗಳುಗಳೇ ಕಳೆದಿವೆ. 56 ವಯಸ್ಸಿನ ಅರ್ಬಾಜ್ ಖಾನ್ಗೆ ಇದಾಗಲೇ ನಟಿ ಮಲೈಕಾ ಅರೋರಾ ಜೊತೆ ಮದ್ವೆಯಾಗಿ, ಇಟಲಿಯ ನಟಿ ಮತ್ತು ರೂಪದರ್ಶಿ ಜಾರ್ಜಿಯಾ ಆಂಡ್ರಿಯಾನಿ ಜೊತೆ ಮದುವೆಯಾಗದಿದ್ದರೂ ಸುದೀರ್ಘ ಸಂಬಂಧ ಹೊಂದಿ ಬ್ರೇಕ್ ಮಾಡಿಕೊಂಡವರು. ಇದೀಗ ಶುರಾ ಖಾನ್ ಜೊತೆ ಸಂಸಾರ ನಡೆಸುತ್ತಿದ್ದಾರೆ. ಶುರಾ ಖಾನ್. ಇವರು ಮೇಕಪ್ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾರೆ. ಮಲೈಕಾ ಅರೋರಾ ಜೊತೆ ಈ ಜೋಡಿಗೆ 21 ವರ್ಷದ ಮಗ ಅರ್ಹಾನ್ ಖಾನ್ ಇದ್ದಾನೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್ ಖಾನ್ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಮಲೈಕಾ. ಅದೇ ಇನ್ನೊಂದೆಡೆ ಮಗಳ ವಯಸ್ಸಿನ ಯುವತಿ ಜೊತೆ ಅರ್ಬಾಜ್ ಮದ್ವೆಯಾಗಿ ಸಂಸಾರ ನಡೆಸುತ್ತಿದ್ದಾರೆ.
ಈ ವಿಷಯ ಮತ್ತೆ ಮುನ್ನೆಲೆಗೆ ಬರಲು ಕಾರಣ, ಅರ್ಬಾಜ್ ಅವರ ಜೊತೆ ಸುದೀರ್ಘ ಸಂಬಂಧ ಹೊಂದಿದ್ದ ಇಟಲಿಯ ನಟಿ ಮತ್ತು ರೂಪದರ್ಶಿಯಾಗಿದ್ದು ಜಾರ್ಜಿಯಾ ಆಂಡ್ರಿಯಾನಿಯ ವಿಡಿಯೋ ಒಂದು ವೈರಲ್ ಆಗುತ್ತಿರುವುದಕ್ಕೆ. ಇವರು, ಅರ್ಬಾಜ್ ಜೊತೆ ಸಂಬಂಧದಲ್ಲಿದ್ದರು. ಅಧಿಕೃತವಾಗಿ ಮದ್ವೆಯಾಗದಿದ್ದರೂ ಪತಿ-ಪತ್ನಿಯಂತೆ ಬಾಳುತ್ತಿದ್ದರು. 2019 ರಲ್ಲಿ ಜಾರ್ಜಿಯಾ ಆಂಡ್ರಿಯಾನಿ ಅವರೊಂದಿಗಿನ ಸಂಬಂಧವನ್ನು ಅರ್ಬಾಜ್ ಖಾನ್ ದೃಢಪಡಿಸಿದ್ದರು. ಸಂಬಂಧ ಮುರಿದ ಬಳಿಕ ಈ ಕುರಿತು ಮಾತನಾಡಿದ್ದ ಜಾರ್ಜಿಯಾ ಆಂಡ್ರಿಯಾನಿ, ಈ ಸಂಬಂಧ ಶಾಶ್ವತವಾಗಿ ಉಳಿಯುವುದಿಲ್ಲ ಎಂದು ಮೊದಲಿನಿಂದಲೂ ನಮಗಿಬ್ಬರಿಗೂ ಗೊತ್ತಿತ್ತು. ಏಕೆಂದರೆ ನಾವು ತುಂಬಾ ಭಿನ್ನರು. ಅದು ಇಬ್ಬರಿಗೂ ಗೊತ್ತಿತ್ತು ಆದರೆ ಅದನ್ನು ಒಪ್ಪಿಕೊಳ್ಳುವ ಧೈರ್ಯ ನಮ್ಮಿಬ್ಬರಿಗೂ ಇರಲಿಲ್ಲ ಎಂದಿದ್ದರು. ನಾಲ್ಕು ವರ್ಷಗಳ ಅವಧಿಯಲ್ಲಿ ನಾವು ತುಂಬಾ ಒಳ್ಳೆಯ ಸ್ನೇಹಿತರಾಗಿದ್ದೇವೆ, ನಾವು ಯಾವಾಗಲೂ ಉತ್ತಮ ಸ್ನೇಹಿತರಾಗಿರುತ್ತೇವೆ. ಆ ಸಮಯದಲ್ಲಿ ನಾವು ಸ್ನೇಹಿತರಿಗಿಂತ ಹೆಚ್ಚಾಗಿದ್ದೆವು. ನಾವು ಯಾವಾಗಲೂ ತುಂಬಾ ಹತ್ತಿರವಾಗಿದ್ದೇವೆ. ಒಟ್ಟಿಗೆ ಮೋಜು ಮಾಡಿ, ಸ್ನೇಹಿತರಿಂದ ಸ್ನೇಹಿತರಾಗಲು ಕಷ್ಟವಾಗಲು ಇದು ಕೂಡ ಒಂದು ಕಾರಣ ಎಂದು ನಾನು ಭಾವಿಸುತ್ತೇನೆ ಎಂದಿದ್ದರು.
ಮದ್ವೆಯಾಗ್ತೀಯಾ ಎಂದು ಪ್ರಿಯಾಂಕಾಗೆ ಕೇಳಿದ್ದ ಶಾರುಖ್! ಮತ್ತೆ ಮುನ್ನೆಲೆಗೆ ಬಂತು ಹಳೆಯ ಸಂಬಂಧ
ಮಲೈಕಾ ಜೊತೆಗಿನ ಅರ್ಬಾಜ್ ಸಂಬಂಧದ ಕುರಿತು ಮಾತನಾಡಿದ ಜಾರ್ಜಿಯಾ, ಇದು ನನ್ನ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರಲಿಲ್ಲ. ಮಲೈಕಾ ಅವರೊಂದಿಗಿನ ಸಂಬಂಧವು ನಿಜವಾಗಿಯೂ ಅವನೊಂದಿಗಿನ ನನ್ನ ಸಂಬಂಧಕ್ಕೆ ಅಡ್ಡಿಯಾಗಲಿಲ್ಲ. ಅದು ಈಗಾಗಲೇ ಮುಗಿದ ಅಧ್ಯಾಯ. ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ನಾನು ಮತ್ತು ಅರ್ಬಾಜ್ ಪರಸ್ಪರ ಬೇರ್ಪಡಲು ನಿರ್ಧರಿಸಿದ್ದೇವೆ ಎಂದು ಜಾರ್ಜಿಯಾ ಹೇಳಿದ್ದರು. ಇದೀಗ ಬ್ರೇಕಪ್ ನಂತರ ಮತ್ತೊಮ್ಮೆ ಕಾಣಿಸಿಕೊಂಡಿದ್ದಾರೆ ಜಾರ್ಜಿಯಾ.
ಇದೀಗ ತಲೆಯ ಮೇಲೆ ದುಪ್ಪಟ್ಟಾ ಧರಿಸಿ, ಉಳಿದ ಅಂಗಾಂಗಗಳನ್ನು ಪ್ರದರ್ಶಿಸುತ್ತಾ ಪೋಸ್ ಕೊಟ್ಟಿದ್ದಾರೆ. ಇದಕ್ಕಾಗಿ ಸಕತ್ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಹೀಗೆ ಅಂಗಾಂಗ ಪ್ರದರ್ಶನವೇನೂ ಹೊಸತಲ್ಲ. ಆದರೆ ತಲೆಯ ಮೇಲೆ ದುಪ್ಪಟ್ಟಾ ಧರಿಸಿರುವ ಹಿನ್ನೆಲೆಯಲ್ಲಿ ಎಷ್ಟು ಸಂಸ್ಕಾರವಂತೆ ನೋಡಿ ಎಂದು ಕಾಲೆಳೆಯುತ್ತಿದ್ದಾರೆ ನೆಟ್ಟಿಗರು. ಅಂದಹಾಗೆ ನಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಆದ್ದರಿಂದ ಈ ಉಡುಗೆ ತೊಟ್ಟು ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡರು. ಅವರಿಗೆ ಈಗ 35 ವರ್ಷ ವಯಸ್ಸು.
20ರ ಹರೆಯದಲ್ಲೇ 40ರ ವಿನೋದ್ ಖನ್ನಾ ಜೊತೆ ಹಸಿಬಿಸಿ ಬೆಡ್ರೂಂ ಸೀನ್, ಇವರಿಬ್ಬರ ನಡುವೆ ಇತ್ತಾ ಅಫೇರ್!