ಐಟಿ ದಿಗ್ಗಜರಾದ ನಾರಾಯಣ ಮೂರ್ತಿ ದಂಪತಿಗಳ ಬಯೋಪಿಕ್ ತೆರೆಗೆ | ಬಾಲಿವುಡ್ ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿಗೆ ತೆರೆಗೆ ತರುತ್ತಿದ್ದಾರೆ | ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ. ಬಾಲಿವುಡ್, ತಮಿಳು ಹಾಗೂ ಕನ್ನಡ ಭಾಷೆಯಲ್ಲಿ ಚಿತ್ರ ತೆರೆಗೆ
ಸುಧಾ ಮೂರ್ತಿ-ನಾರಾಯಣ ಮೂರ್ತಿ ದಂಪತಿ ಎಂದರೆ ಕರುನಾಡಿಗೇ ವಿಶೇಷ ಗೌರವ. ಇನ್ಪೋಸಿಸ್ ಎಂಬ ದಿಗ್ಗಜ ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸಿ, ಸಾವಿರಾರು ಮಂದಿಗೆ ಉದ್ಯೋಗ ನೀಡಿದ ಅನ್ನದಾತರೂ ಹೌದು. ಅಲ್ಲದೇ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಕರುನಾಡ ಮಂದಿಗೆ ಬೇಕಾದ ಕಣ್ಮಣಿಗಳು.
ಇಂಥ ಸರಳ, ಸಜ್ಜನಿಕೆಗೆ ಹೆಸರಾದ ಮೂರ್ತಿ ದಂಪತಿಗಳ ಬಯೋಪಿಕ್ ತೆರೆಗೆ ಬರುತ್ತಿದೆ. ಹಿಂದಿ, ತಮಿಳು ಹಾಗೂ ಕನ್ನಡ ಮೂರು ಭಾಷೆಗಳಲ್ಲಿಯೂ ಚಿತ್ರ ಮೂಡಿ ಬರುತ್ತಿದ್ದು, ಈ ವರ್ಷವೇ ರಿಲೀಸ್ ಆಗುವ ನಿರೀಕ್ಷೆ ಇದೆ. ಬಾಲಿವುಡ್ ನಿರ್ದೇಶಕಿ ಚಿತ್ರ ನಿರ್ದೇಶಿಸಲಿದ್ದಾರೆ. ಯಾರು, ಏನು? ನೀವೇ ಓದಿ...
ನಮ್ಮ ಮದುವೆಗೆ ಖರ್ಚಾಗಿದ್ದು 800 ರೂ ಮಾತ್ರ
ಸುಧಾಮೂರ್ತಿ- ನಾರಾಯಣ ಮೂರ್ತಿ ದಂಪತಿಯ ಬಯೋಪಿಕ್ ಮಾಡಿದ್ರೆ ಹೇಗೆ? ಹೀಗೊಂದು ಯೋಚನೆಯನ್ನು ಬಾಲಿವುಡ್ ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ ಮಾಡಿದ್ದಾರೆ. ಇವರಿಬ್ಬರ ಕಥೆಯನ್ನು ತೆರೆ ಮೇಲೆ ತರುತ್ತಿದ್ದಾರೆ. ಚಿತ್ರಕ್ಕೆ 'ಮೂರ್ತಿ 'ಎಂದು ಹೆಸರಿಟ್ಟಿದ್ದಾರೆ.
ರಿಕ್ಷಾದಲ್ಲಿ ಸುಧಾ ಮೂರ್ತಿಗೆ ಪ್ರಪೋಸ್ ಮಾಡಿದ್ದ ಇನ್ಫೋಸಿಸ್ ಮಾಲೀಕ!
ಐಶ್ವರ್ಯ ಅಯ್ಯರ್ ತಿವಾರಿ ಆ್ಯಕ್ಷನ್ ಕಟ್ ಹೇಳುತ್ತಿದ್ದು ಶ್ರೇಯಸ್ ಜೈನ್, ಪಿಯೂಶ್ ಗುಪ್ತಾ ಚಿತ್ರಕಥೆ ಬರೆಯಲಿದ್ದಾರೆ.
ಈ ಬಗ್ಗೆ ಐಶ್ವರ್ಯಾ ಅಯ್ಯರ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸುಧಾಮೂರ್ತಿ- ನಾರಾಯಣ ಮೂರ್ತಿಯವರ ರೀತಿ ಬದುಕಬೇಕೆಂಬುದು ನನ್ನ ಕನಸು. ಅವರಿಬ್ಬರ ಪ್ರಾಮಾಣಿಕತೆ, ಕಷ್ಟಪಟ್ಟು ದುಡಿದ ರೀತಿ ನನಗೆ ಸ್ಪೂರ್ತಿಯಾಗಿದೆ. ಅವರಿಬ್ಬರ ಬಯೋಪಿಕ್ 'Murthy' ಯನ್ನು ಮಾಡುತ್ತಿರುವುದು ಖುಷಿ ತಂದಿದೆ ಎಂದು ಸುಧಾ ಮೂರ್ತಿ ಜೊತೆಗಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಸುಧಾಮೂರ್ತಿ ಪಾತ್ರವನ್ನು ಅಲಿಯಾ ಭಟ್ ಮಾಡುತ್ತಾರೆ ಎಂಬ ಮಾತು ಕೇಳಿ ಬಂದಿದೆ. ಇದಿನ್ನೂ ಅಧಿಕೃತವಾಗಿಲ್ಲ.