Budget 2023: ಒಂದೇ ವರ್ಷದಲ್ಲಿ ನಾಟಕೀಯ ಬದಲಾವಣೆಗೆ ಸಾಕ್ಷಿಯಾದ ಜಗತ್ತು!

By Santosh NaikFirst Published Jan 9, 2023, 5:57 PM IST
Highlights

ಕಳೆದ ವರ್ಷದ ಬಜೆಟ್‌ ಬಳಿಕ ಜಗತ್ತು ಸಂಪೂರ್ಣವಾಗಿ ಬದಲಾಗಿದೆ. 2022 ರ ಬಜೆಟ್ ಸಮಯದಲ್ಲಿ, ಭಾರತವು ಕರೋನಾ ಸಾಂಕ್ರಾಮಿಕದಿಂದ ನಿಧಾನವಾಗಿ ಹೊರಬರುವ ಪ್ರಯತ್ನ ಮಾಡುತ್ತಿತ್ತು. ಆದ್ದರಿಂದ, ಸರ್ಕಾರದ ಸಂಪೂರ್ಣ ಗಮನವು ಚೇತರಿಕೆಯತ್ತ ಇತ್ತು. ಇಂದು ಆ ವಾತಾವರಣವಿಲ್ಲ. ಹಾಗಿದ್ದರೂ, ರಷ್ಯಾ ಮತ್ತು ಉಕ್ರೇನ್ ರೂಪದಲ್ಲಿ ಸುದೀರ್ಘ ಯುದ್ಧಕ್ಕೆ ಜಗತ್ತು ಸಾಕ್ಷಿಯಾಗಿದೆ. ಇದು ಯಾವಾಗ ಕೊನೆಗೊಳ್ಳುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ.

ನವದೆಹಲಿ (ಜ.9): 2023ರ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದೆ. ದಿನಗಳು ಕಳೆದಂತೆ ಫೆಬ್ರವರಿ 1 ಇನ್ನಷ್ಟು ಹತ್ತಿರವಾಗಿದೆ. ಅದೇ ದಿನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ದೇಶದ ಬಜೆಟ್‌ ಮಂಡನೆ ಮಾಡಲಿದ್ದಾರೆ. ಆ ದಿನಕ್ಕಾಗಿಯೇ ದೇಶದ ಜನರು ಕಾಯುತ್ತಿದ್ದಾರೆ. ತೆರಿಗೆ ಸುಧಾರಣೆಗೆ ಸಂಬಂಧಿಸಿದಂತೆ ಹಣಕಾಸು ಸಚಿವೆ ಕೆಲವು ದೊಡ್ಡ ಘೋಷಣೆಗಳನ್ನು ಮಾಡುವ ನಿರೀಕ್ಷೆ ಎಲ್ಲರಲ್ಲಿದೆ. ಅದರ ನಡುವೆಯೇ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಖಚಿತವಾದ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. 2022ರ ಬಜೆಟ್‌ಗೆ ಹೋಲಿಸಿದರೆ, ಈ ಬಾರಿ ಭಾರತದ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಅಂದು ದೇಶವು ಕರೋನಾ ಸಾಂಕ್ರಾಮಿಕದಿಂದ ಹೊರಬರುವ ಪ್ರಯತ್ನದಲ್ಲಿತ್ತು. ಹಾಗಾಗಿ ದೇಶದ ಸಂಪೂರ್ಣ ಗಮನ ಕೊರೋನಾದಿಂದ ಚೇತರಿಕೆಯಲ್ಲಿತ್ತು. ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ. ಒಂದೇ ವರ್ಷದಲ್ಲಿ ಇಡೀ ಜಗತ್ತಿನ ಸಮೀಕರಣಗಳು ತಲೆಕೆಳಗಾಗಿವೆ. ಇಂತಹ ಪರಿಸ್ಥಿತಿಯಲ್ಲಿ ವಿತ್ತ ಸಚಿವರು ಪ್ರತಿ ಹೆಜ್ಜೆಯನ್ನೂ ಬಹಳ ಎಚ್ಚರಿಕೆಯಿಂದ ಇಡಬೇಕಾಗುತ್ತದೆ. ಬೆಳವಣಿಗೆಗೆ ಉತ್ತೇಜನ ನೀಡುವುದರೊಂದಿಗೆ, ಅವರು ಹಣದುಬ್ಬರವನ್ನು ಸಹ ನಿಯಂತ್ರಿಸಬೇಕಾಗುತ್ತದೆ. ಇದು ಸುಲಭದ ಕೆಲಸವಲ್ಲ. ಕಳೆದ ಬಜೆಟ್‌ನಿಂದ ಇಂದಿನಿನವರೆಗೆ ಏನು ಬದಲಾಗಿದೆ ಮತ್ತು ಸೀತಾರಾಮನ್ ಯಾವ ವಿಷಯಗಳತ್ತ ಹೆಚ್ಚಿನ ಗಮನ ನೀಡಬೇಕು ಎನ್ನುವುದರ ವಿವರ ಇಲ್ಲಿದೆ.

ದೀರ್ಘ ಯುದ್ಧಕ್ಕೆ ಸಾಕ್ಷಿಯಾದ ಜಗತ್ತು: ಬಜೆಟ್ 2022 ರ ಕೆಲವೇ ವಾರಗಳ ನಂತರ, ರಷ್ಯಾ ಮತ್ತು ಉಕ್ರೇನ್ ನಡುವಿನ ಪರಿಸ್ಥಿತಿಯು ಉದ್ವಿಗ್ನತೆಗೆ ತಿರುಗಿತು. 2022ರ ಫೆಬ್ರವರಿ 24 ರಂದು ರಷ್ಯಾವು ಉಕ್ರೇನ್‌ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿತು. ಬಳಿಕ ಅದು ಯುದ್ಧದ ರೂಪಕ್ಕೆ ತಿರುಗಿತ್ತು. ನಿರೀಕ್ಷೆಗೂ ಮೀರಿ ದೀರ್ಘಕಾಲದವರೆಗೂ ಈ ಯುದ್ಧ ಸಾಗಿ ಬಂದಿದೆ. ಇಲ್ಲಿಯವರೆಗೂ ಈ ಯುದ್ಧದಲ್ಲಿ ಗೆದ್ದಿದ್ದು ಯಾರು ಅನ್ನೋದು ನಿರ್ಧಾರವಾಗಿಲ್ಲ. ಆದರೆ, ಇದು ವಿಶ್ವದ ಪೂರೈಕೆ ಸರಪಳಿ ಮೇಲೆ ಕೆಟ್ಟ ಪರಿಣಾಮ ಬೀರಿದೆ ಅನ್ನೋದಂತೂ ನಿಜ. ಇದು ಪ್ರಪಂಚದಾದ್ಯಂತ ಸರಕುಗಳ ಬೆಲೆಗಳ ಮೇಲೆ ಪರಿಣಾಮ ಬೀರಿದೆ. ಭಾರತದ ವ್ಯವಹಾರದ ಮೇಲೂ ಇದು ಪರಿಣಾಮ ಬೀರಿದೆ.

ಕಚ್ಚಾ ತೈಲದ ಬೆಲೆಯಲ್ಲಿ ಬಾರಿ ಏರಿಕೆ: 2022ರಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಏರಿಕೆ ಕಂಡಿತು. ರಷ್ಯಾ-ಉಕ್ರೇನ್ ಯುದ್ಧದ ಕಾರಣ ಪೂರೈಕೆ ಅಡಚಣೆಗಳಿಂದ ಇದು ಸಂಭವಿಸಿತ್ತು. ಅಗ್ರ ಆಮದುದಾರ ಚೀನಾದಿಂದ ದುರ್ಬಲ ಬೇಡಿಕೆ ಮತ್ತು ಆರ್ಥಿಕ ಕುಸಿತದ ಭಯವೂ ಕಚ್ಚಾ ಬೆಲೆಯನ್ನು ಹೆಚ್ಚಿಸಿತು.

ಕೋವಿಡ್‌ ಪರಿಣಾಮ: ಆರ್ಥಿಕತೆಯನ್ನು ಮರಳಿ ಟ್ರ್ಯಾಕ್‌ಗೆ ತರಲು ಸರ್ಕಾರದ ಗಮನವು ಇದ್ದ ಸಮಯದಲ್ಲಿ 2022ರ ಬಜೆಟ್‌ ಘೋಷಿಸಲಾಯಿತು. ಆ ಸಮಯದಲ್ಲಿ ಲಾಕ್‌ಡೌನ್‌ನಿಂದಾಗಿ ಹಲವು ಕ್ಷೇತ್ರಗಳು ಭಾರೀ ನಷ್ಟವನ್ನು ಅನುಭವಿಸಿದ್ದವು. ಸಾಂಕ್ರಾಮಿಕ ರೋಗದ ನಂತರದ ಹಂತದಲ್ಲಿ, ಪ್ರವಾಸೋದ್ಯಮ, ಪ್ರಯಾಣ ಮತ್ತು ಆತಿಥ್ಯದಂತಹ ಕ್ಷೇತ್ರಗಳು ಮತ್ತೆ ಜೀವ ಪಡೆದುಕೊಂಡಿವೆ. ಅಂತಹ ಪರಿಸ್ಥಿತಿಯಲ್ಲಿ, ಮುಂಬರುವ ಬಜೆಟ್‌ನಲ್ಲಿ, ಭಾರತದ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಲು ಸರ್ಕಾರವು ಕೆಲವು ಕ್ರಮಗಳನ್ನು ತೆಗೆದಕೊಳ್ಳುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.

ಹಣದುಬ್ಬರ: ವರ್ಷವಿಡೀ ಹಣದುಬ್ಬರವು ಆರ್‌ಬಿಐನ ಆರಾಮ ಮಟ್ಟಕ್ಕಿಂತ ಹೆಚ್ಚಿತ್ತು. ಇದರ ಹಿಂದಿರುವ ಪ್ರಮುಖ ಕಾರಣ ಆಹಾರ ಪದಾರ್ಥಗಳ ಜತೆಗೆ ಇಂಧನ ಬೆಲೆ ಏರಿಕೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಏರಿಕೆಯಿಂದ ಆಹಾರ ಹಣದುಬ್ಬರ ದರ ಏರಿಕೆಯಾಗಿದೆ. ಪ್ರಪಂಚದ ಹಲವು ದೇಶಗಳು ರಫ್ತು ನಿಷೇಧಿಸಿವೆ. ಇದರಿಂದ ಹಣದುಬ್ಬರದ ಪ್ರಮಾಣವೂ ಹೆಚ್ಚಿದೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಏಮ್ಸ್‌ ಆಸ್ಪತ್ರೆಗೆ ದಾಖಲು

ರೂಪಾಯಿ ಕುಸಿತ: 2022 ರ ದ್ವಿತೀಯಾರ್ಧದಲ್ಲಿ ರೂಪಾಯಿ ಮೌಲ್ಯದಲ್ಲಿ ತೀವ್ರ ಕುಸಿತವಿದೆ. ಡಾಲರ್ ಎದುರು ಭಾರತೀಯ ಕರೆನ್ಸಿ ಶೇಕಡಾ 11 ಕ್ಕಿಂತ ಹೆಚ್ಚು ಕುಸಿದಿದೆ. ರೂಪಾಯಿಯ ಈ ಚಲನೆಯು ಭಾರತೀಯ ಹೂಡಿಕೆದಾರರ ಸಂಕಷ್ಟಕ್ಕೆ ಕಾರಣವಾಗಿದೆ.

ವಿಶ್ವದ ಪ್ರಭಾವಿ ಸ್ತ್ರೀಯರ ಪಟ್ಟಿಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್

ಚುನಾವಣೆಗೂ ಮುನ್ನ ಕೊನೆಯ ಪೂರ್ಣ ಬಜೆಟ್‌: 2023ರ ಬಜೆಟ್ ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಮುನ್ನ ಪ್ರಸ್ತುತ ಸರ್ಕಾರದ ಕೊನೆಯ ಪೂರ್ಣ ಬಜೆಟ್ ಆಗಿರುತ್ತದೆ. ನಿರ್ಮಲಾ ಸೀತಾರಾಮನ್ ಅವರು ಸತತ ಐದನೇ ಬಾರಿಗೆ ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಸರ್ಕಾರವು ಹಣಕಾಸಿನ ಬಲವರ್ಧನೆಗೆ ಗಮನಹರಿಸಬಹುದು. ಇದು ಮೋದಿ ಸರಕಾರದ ಪಾಲಿಗೆ ಸುರಕ್ಷಿತ ನಡೆ. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಮೋದಿ ಸಂಪುಟ ವಿತ್ತೀಯ ಬಲವರ್ಧನೆಯ ಹಾದಿಗೆ ಅಂಟಿಕೊಂಡಿತ್ತು.

click me!