ITR: ನೀವು ವಿದೇಶದಲ್ಲಿ ಆಸ್ತಿ ಹೊಂದಿದ್ದೀರಾ? ಹಾಗಾದ್ರೆ ತಪ್ಪದೇ ಐಟಿಆರ್ ಸಲ್ಲಿಕೆ ಮಾಡಿ

By Suvarna News  |  First Published Jul 5, 2022, 10:53 AM IST

2021-22ನೇ ಹಣಕಾಸು ಸಾಲಿನ ಐಟಿಆರ್ ಸಲ್ಲಿಕೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ವಿದೇಶದಲ್ಲಿ ಆಸ್ತಿ ಹೊಂದಿರೋರು ಐಟಿಆರ್ ನಲ್ಲಿ ಆ ಬಗ್ಗೆ ಉಲ್ಲೇಖಿಸೋದು ಅತೀಮುಖ್ಯ. ವಿದೇಶಿ ಆಸ್ತಿಯಲ್ಲಿ ಏನೆಲ್ಲ ಸೇರಿದೆ? ಅದನ್ನು ಐಟಿಆರ್ ನಲ್ಲಿ ಉಲ್ಲೇಖಿಸೋದು ಏಕೆ ಮುಖ್ಯ? ಇಲ್ಲಿದೆ ಮಾಹಿತಿ. 


Business Desk: 2021-22ನೇ ಹಣಕಾಸು ಸಾಲಿನ (Financial Year) ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆಗೆ ಜುಲೈ 31 ಅಂತಿಮ ಗಡುವು. ಐಟಿಆರ್ ಸಲ್ಲಿಕೆಗೆ ಸಂಬಂಧಿಸಿ ತೆರಿಗೆದಾರರಿಗೆ (Taxpayers) ಹಲವು ಅನುಮಾನಗಳು ಕಾಡೋದು ಸಹಜ. ಹಾಗೆಯೇ ವಿದೇಶದಲ್ಲಿ (Foreign) ಆಸ್ತಿ (assets) ಹೊಂದಿರುವ ಅಥವಾ ಅಂಥ ಆಸ್ತಿಯಿಂದ ಆದಾಯ ಪಡೆಯುತ್ತಿರುವ ತೆರಿಗೆದಾರರು ಕೂಡ ಆದಾಯ ತೆರಿಗೆ ರಿಟರ್ನ್  (ITR) ಸಲ್ಲಿಕೆ ಮಾಡೋದು ಕಡ್ಡಾಯ.

ವಿದೇಶಿ ಆಸ್ತಿಯಲ್ಲಿ ಯಾವುದೆಲ್ಲ ಸೇರಿದೆ?
ವಿದೇಶಿ ಆಸ್ತಿ (Foreign Assets) ಅಂದ ತಕ್ಷಣ ಬರೀ ಸ್ಥಿರ ಆಸ್ತಿಯಷ್ಟೇ (immovable property) ಎಂದೇ ಭಾವಿಸಬೇಡಿ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ (Income tax Department) ವಿವರವಾದ ಪಟ್ಟಿಯನ್ನೇ ನೀಡಿದೆ. ವಿದೇಶಿ ಆಸ್ತಿಯಲ್ಲಿ ಸ್ಥಿರ ಆಸ್ತಿ (immovable property), ಬ್ಯಾಂಕ್ ಖಾತೆಗಳು (bank accounts), ಸಾಲ ಅಥವಾ ಈಕ್ವಿಟಿ ಬಡ್ಡಿ, ಇತರ ಬಂಡವಾಳ ಆಸ್ತಿಗಳು, ಕ್ಯಾಶ್ ವ್ಯಾಲ್ಯು ಇನ್ ಶೂರೆನ್ಸ್ ಕಾಂಟ್ರ್ಯಾಕ್ಟ್ (cash value insurance contract), ಆನ್ಯುನಿಟಿ ಕಾಂಟ್ರ್ಯಾಕ್ಟ್ (annuity contract) ಹಾಗೂ ಖಾತೆಗಳು ಅಥವಾ ಯಾವುದೇ ಸಂಸ್ಥೆಯಲ್ಲಿ ಆರ್ಥಿಕ ಲಾಭ ಅಥವಾ ಸಹಿ ಹಾಕುವ ಅಧಿಕಾರ ಹೊಂದಿರೋದು ಸೇರಿದೆ. 

Tap to resize

Latest Videos

ಸ್ಟಾರ್ಟಪ್‌ಗೆ ಒಳ್ಳೆಯ ವಾತಾವರಣ: ಗುಜರಾತ್‌, ಕರ್ನಾಟಕ ಅತ್ಯುತ್ತಮ

ವಿದೇಶಿ ಆಸ್ತಿಗಳನ್ನು ತೆರಿಗೆದಾರರು ಶೆಡ್ಯೂಲ್ ವಿದೇಶಿ ಆಸ್ತಿ ಅಥವಾ ಐಟಿಆರ್ --2 ಎಫ್ ಎ ಅಥವಾ ಐಟಿಆರ್ -3ಯಲ್ಲಿ ವರದಿ ಮಾಡಬೇಕು. ಇಲ್ಲಿಯ ತನಕ ವಿದೇಶಿ ಆಸ್ತಿಗಳನ್ನು ವಿದೇಶಿ ರಾಷ್ಟ್ರಗಳು ವಿವರಿಸಿರುವಂತೆ ಸಂಬಂಧಿಸಿದ ಲೆಕ್ಕಪತ್ರ ಅವಧಿಗೆ ವರದಿ ಮಾಡಬೇಕು. ಅಮೆರಿಕದ ಕ್ಯಾಲೆಂಡರ್ ವರ್ಷ ಅನುಸರಿಸುವ ರಾಷ್ಟ್ರಗಳು 2022-23ನೇ ಮೌಲ್ಯಮಾಪನ ವರ್ಷಕ್ಕೆ ಲೆಕ್ಕಪತ್ರ ಅವಧಿಯನ್ನು ಕ್ಯಾಲೆಂಡರ್ ವರ್ಷಕ್ಕೆ (2021ರ ಡಿಸೆಂಬರ್  31ಕ್ಕೆ ಅಂತ್ಯವಾಗುವಂತೆ) ಬದಲಾಯಿಸಿವೆ. ಇದರರ್ಥ 2021ರ ಜನವರಿ 1 ಹಾಗೂ 2021ರ ಡಿಸೆಂಬರ್ 31 ರ ನಡುವೆ ಹೊಂದಿರುವ ಎಲ್ಲ ವಿದೇಶಿ ಆಸ್ತಿಗಳನ್ನು ಈ ವರ್ಷದ ಐಟಿಆರ್ ನಲ್ಲಿ ಘೋಷಣೆ ಮಾಡಬೇಕು. ಉದಾಹರಣೆಗೆ ನೀವು ಭಾರತದಿಂದ ಹೊರಗಿರುವ X ಕಂಪನಿಯ ಷೇರುಗಳನ್ನು 2022ರ ಫೆಬ್ರವರಿಯಲ್ಲಿ ಖರೀದಿಸಿದ್ದೀರಿ ಎಂದು ಭಾವಿಸೋಣ. ಆಗ ನೀವು ಪ್ರಸಕ್ತ ಮೌಲ್ಯಮಾಪನ ವರ್ಷದ ಐಟಿಆರ್ ನಲ್ಲಿ ಅದನ್ನು ಉಲ್ಲೇಖಿಸಬೇಕಿಲ್ಲ. ಅದನ್ನು ನೀವು ಕಳೆದ ಆರ್ಥಿಕ ಸಾಲಿನಲ್ಲಿ ಖರೀದಿಸಿದ್ದರೂ ಅದನ್ನು ಮುಂದಿನ ವರ್ಷದ ಐಟಿಆರ್ ನಲ್ಲಿ  ಅಂದ್ರೆ  2023-24ನೇ ಮೌಲ್ಯಮಾಪನ ವರ್ಷದಲ್ಲಿ ವರದಿ ಮಾಡಿದ್ರೆ ಸಾಕು.

ಆದ್ರೆ ಇಲ್ಲಿ ಒಂದು ವಿಷಯವನ್ನು ತೆರಿಗೆದಾರರು ಗಮನಿಸಬೇಕು. ಅದೇನಪ್ಪ ಅಂದ್ರೆ ವಿದೇಶಿ ಆಸ್ತಿಯನ್ನು ಕ್ಯಾಲೆಂಡರ್ ವರ್ಷದ ಅನ್ವಯ ಬಹಿರಂಗಪಡಿಸಬಹುದಾಗಿದ್ರೂ ಭಾರತದಲ್ಲಿ ಅದರ ಮೇಲಿನ ತೆರಿಗೆ ಲೆಕ್ಕಾಚಾರವನ್ನು ಆರ್ಥಿಕ ಸಾಲಿನ ಆಧಾರದಲ್ಲೇ ಮಾಡಲಾಗುತ್ತದೆ. ಉದಾಹರಣೆಗೆ ನೀವು 2022ರ ಜನವರಿಯಲ್ಲಿ ಆಸ್ತಿ ಖರೀದಿಸಿ ಮಾರಾಟ ಮಾಡಿ ಆದಾಯ ಗಳಿಸಿದ್ರೆ ಅದೇ ವರ್ಷ ಅಂದ್ರೆ 2021-22ನೇ ಆರ್ಥಿಕ ಸಾಲಿನಲ್ಲಿ ನೀವು ತೆರಿಗೆ ಪಾವತಿಸಬೇಕು. ಆದ್ರೆ ನೀವು ಇದನ್ನು 2023-24ನೇ ಸಾಲಿನ ಮೌಲ್ಯಮಾಪನ ವರ್ಷದಲ್ಲಿ ವರದಿ ಮಾಡಿದ್ರೆ ಸಾಕು. 

SBI ಗ್ರಾಹಕರು ಬ್ಯಾಂಕಿಂಗ್‌ ಸೇವೆ ಪಡೆಯಲು ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿ

ಈಗ ಐಟಿಆರ್ ಅನ್ನು ನೀವೇ ಆನ್ ಲೈನ್ ನಲ್ಲಿ ಸಲ್ಲಿಕೆ ಮಾಡಬಹುದು. ಇನ್ನು ರಿಟರ್ನ್ ಇ-ಪರಿಶೀಲನೆ (e-verification) ಮಾಡಲು ಆರು ವಿಧಾನಗಳನ್ನು ಅನುಸರಿಸಬಹುದು.  ನೆಟ್ ಬ್ಯಾಂಕಿಂಗ್, ಬ್ಯಾಂಕ್ ಎಟಿಎಂ, ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಒಟಿಪಿ, ಡಿಮ್ಯಾಟ್ ಖಾತೆ, ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿ.
 

click me!