ಪಿಪಿಎಫ್ ಖಾತೆ ಅವಧಿ 15 ವರ್ಷ, ಆ ಬಳಿಕ ಖಾತೆದಾರ ಏನ್ ಮಾಡ್ಬಹುದು?

By Suvarna News  |  First Published Nov 25, 2022, 3:55 PM IST

ಭಾರತೀಯರ ನೆಚ್ಚಿನ ಹೂಡಿಕೆ ಆಯ್ಕೆಗಳಲ್ಲಿ ಪಿಪಿಎಫ್ ಕೂಡ ಒಂದು. 15 ವರ್ಷಗಳ ಬಳಿಕ ಪಿಪಿಎಫ್ ಖಾತೆ ಮೆಚ್ಯೂರ್ ಆಗುತ್ತದೆ. ಆಗ ಖಾತೆದಾರನ ಮುಂದಿರುವ ಆಯ್ಕೆಗಳೇನು? 15 ವರ್ಷ ಕಳೆದ ಬಳಿಕವೂ ಪಿಪಿಎಫ್ ಖಾತೆ ಮುಚ್ಚದಿದ್ರೆ ಏನಾಗುತ್ತದೆ? ಇಲ್ಲಿದೆ ಮಾಹಿತಿ. 


Business Desk:ಹೂಡಿಕೆ ಹಾಗೂ ಉಳಿತಾಯದ ವಿಚಾರ ಬಂದಾಗ ಭಾರತೀಯರು ಮೊದಲು ನೋಡುವುದು ಸುರಕ್ಷತೆಯನ್ನು. ಹೀಗಾಗಿ ಸರ್ಕಾರದ ಬೆಂಬಲವಿರುವ ಯೋಜನೆಗಳನ್ನು ಹೂಡಿಕೆಗೆ ಹೆಚ್ಆಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇಂಥ ಸುರಕ್ಷಿತ ಹೂಡಿಕೆ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಕೂಡ ಒಂದು. ಪಿಪಿಎಫ್  ಅವಧಿ 15 ವರ್ಷ. ಅದಾದ ಬಳಿಕ ನೀವು ಬಯಸಿದರೆ ಪ್ರತೀ 5 ವರ್ಷಕ್ಕೊಮ್ಮೆ ಅವಧಿ ವಿಸ್ತರಣೆ ಮಾಡಬಹುದು. ಪಿಪಿಎಫ್ ಯೋಜನೆಗಳ ನಿಯಮಗಳು  2019ರ ಅನ್ವಯ ಪಿಪಿಎಫ್ ಖಾತೆ 15 ವರ್ಷಗಳ ಬಳಿಕ ಮೆಚ್ಯೂರ್ ಆದಾಗ ಮೂರು ಆಯ್ಕೆಗಳಿರುತ್ತವೆ.ಒಂದು ಖಾತೆ ಮುಚ್ಚುವುದು ಹಾಗೂ ಎಲ್ಲ ಹಣವನ್ನು ವಿತ್ ಡ್ರಾ ಮಾಡಿಕೊಳ್ಳುವುದು. ಇನ್ನೊಂದು ಹೊಸ ಹೂಡಿಕೆಯಿಲ್ಲದೆ 5 ವರ್ಷಗಳಿಗೆ ಖಾತೆ ಅವಧಿ ವಿಸ್ತರಣೆ ಮಾಡುವುದು. ಹಾಗೆಯೇ ಮತ್ತೊಂದು ಹೊಸ ಹೂಡಿಕೆ ಸಮೇತ ಖಾತೆ ಅವಧಿ ವಿಸ್ತರಣೆ ಮಾಡುವುದು. ಹೀಗಾಗಿ 15 ವರ್ಷಗಳ ಬಳಿಕ ಪಿಪಿಎಫ್ ಖಾತೆದಾರ ಆತನ ಖಾತೆಯನ್ನು ಮುಚ್ಚಬಹುದು.ಆದರೆ, ನೆನಪಿಡಿ, ಪಿಪಿಎಫ್ ಖಾತೆ ತೆರೆದ ದಿನಾಂಕ ಅದರ ಮೆಚ್ಯುರಿಟಿ ದಿನಾಂಕವನ್ನು ನಿರ್ಧರಿಸೋದಿಲ್ಲ. ಬದಲಿಗೆ ಖಾತೆ ಪ್ರಾರಂಭಿಸಿದ ಆರ್ಥಿಕ ವರ್ಷದ ಕೊನೆಯಿಂದ ಹಿಡಿದು 15  ವರ್ಷಗಳ ಅವಧಿಯದ್ದಾಗಿರುತ್ತದೆ. ಅಂದರೆ ನೀವು 2009ರ ಜುಲೈ 20ರಂದು ಪಿಪಿಎಫ್ ಖಾತೆ ತೆರೆದ್ರೆ ನಿಮಯದ ಪ್ರಕಾರ ಈ ಖಾತೆ 2024ರ ಏಪ್ರಿಲ್ 1ರಂದು ಮೆಚ್ಯುರ್ ಆಗುತ್ತದೆ.

ಖಾತೆ ಮುಚ್ಚುವುದು ಹೇಗೆ?
ನಿಮ್ಮ ಪಿಪಿಎಫ್ ಖಾತೆಗೆ 15 ವರ್ಷ ತುಂಬುತ್ತ ಬಂದಿದ್ದು, ನೀವು ಮುಚ್ಚಲು ಬಯಸಿದ್ರೆ ಖಾತೆ ಅವಧಿ ಮುಗಿದ ದಿನದಿಂದ ಒಂದು ವರ್ಷದೊಳಗೆ ನಿರ್ಧರಿಸಬೇಕು. ನೀವು ಖಾತೆ ಮುಚ್ಚಿದ ತಿಂಗಳಿಗಿಂತ ಹಿಂದಿನ ತಿಂಗಳ ತನಕದ ಹಣ ಬಡ್ಡಿಸಹಿತ ಸಿಗುತ್ತದೆ. ಖಾತೆ ಮುಚ್ಚಿದ ಬಳಿಕ ಅದರಲ್ಲಿರುವ ಎಲ್ಲ ಹಣವನ್ನು ಒಂದೇ ಬಾರಿಗೆ ವಿತ್ ಡ್ರಾ ಮಾಡಬಹುದು ಅಥವಾ ಒಂದು ವರ್ಷದ ಅವಧಿಯಲ್ಲಿ ಕಂತುಗಳಲ್ಲಿ ವಿತ್  ಡ್ರಾ ಮಾಡಿಕೊಳ್ಳಬಹುದು. 

Tap to resize

Latest Videos

KYC ಅಂದ್ರೇನು? ಅದ್ರ ಲಾಭವೇನು ಗೊತ್ತಾ?

ಖಾತೆ ಅವಧಿ ವಿಸ್ತರಿಸೋದು ಹೇಗೆ?
ಪಿಪಿಎಫ್ ಖಾತೆದಾರರು ಅವರ ಖಾತೆಯನ್ನು ಯಾವುದೇ ಹೊಸ ಠೇವಣಿಯಿಲ್ಲದೆ ಮೆಚ್ಯುರಿಟಿ ಅವಧಿ ಮುಗಿದ ಬಳಿಕವೂ ಮುಂದುವರಿಸಬಹುದು. ಆದರೆ, ಒಂದು ಮೆಚ್ಯುರಿಟಿ ಅವಧಿ ಮುಗಿದು ಒಂದು ವರ್ಷದೊಳಗೆ ನೀವು ಈ ನಿರ್ಧಾರ ಕೈಗೊಳ್ಳಬೇಕು. ಖಾತೆಯಲ್ಲಿರುವ ಹಣದಿಂದ ಖಾತೆದಾರ ಪ್ರತಿ ವರ್ಷ ಎಷ್ಟು ಮೊತ್ತದ ಹಣವನ್ನಾದ್ರೂ ವಿತ್ ಡ್ರಾ ಮಾಡಿಕೊಳ್ಳಬಹುದು. ಆದರೆ, ನೆನಪಿಡಿ, ಒಂದು ಬಾರಿ ನೀವು ಯಾವುದೇ ಹೊಸ ಠೇವಣಿಗಳಿಲ್ಲದೆ ಖಾತೆಯನ್ನು ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ಮುಂದುವರಿಸಿದರೆ, ಖಾತೆದಾರನಿಗೆ ಠೇವಣಿಯನ್ನು ಮತ್ತೊಮ್ಮೆ ಹೊಸ ಠೇವಣಿಯೊಂದಿಗೆ ಮುಂದುವರಿಸುವ ಅವಕಾಶ ಸಿಗೋದಿಲ್ಲ. ಹಾಗೆಯೇ ಹೊಸ ಠೇವಣಿಯೊಂದಿಗೆ ಕೂಡ ಖಾತೆ ಅವಧಿ ವಿಸ್ತರಿಸಬಹುದು. ಖಾತೆದಾರ ಈ ನಿರ್ಧಾರದ ಬಗ್ಗೆ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಮೆಚ್ಯುರಿಟಿ ಅವಧಿ ಮುಗಿದ ಒಂದು ವರ್ಷದೊಳಗೆ ತಿಳಿಸಬೇಕು. 

ಬಿಸ್ಲೆರಿಯನ್ನು ಮಾರಿ, ಮಗಳಿಗೆ ಅವಳಾಸೆಯಂತೆ ಬದುಕಲು ಬಿಟ್ಟ ರಮೇಶ್‌ ಚೌಹಾಣ್‌!

ಖಾತೆ ಮುಚ್ಚದಿದ್ರೆ ಏನಾಗುತ್ತೆ?
ಪಿಪಿಎಫ್ ಖಾತೆ ಅವಧಿ ಮುಗಿದ ಬಳಿಕವೂ ಬಡ್ಡಿ ಸಿಗುತ್ತದೆ ಎಂಬ ಭಾವನೆಯಿಂದ ಹಾಗೇ ಬಿಡಬೇಡಿ. ಏಕೆಂದರೆ ಖಾತೆ ಅವಧಿ ಮುಗಿದ ಒಂದು ವರ್ಷದ ತನಕ ನಿರ್ಧಾರ ಕೈಗೊಳ್ಳಲು ನಿಮಗೆ ಅವಕಾಶವಿರುತ್ತದೆ. ಒಂದು ವೇಳೆ ನೀವು ಒಂದು ವರ್ಷವಾದ ಬಳಿಕವೂ ಏನೂ ನಿರ್ಧಾರ ಕೈಗೊಳ್ಳದಿದ್ರೆ ಆಗ ನಿಮ್ಮ ಪಿಪಿಎಫ್ ಖಾತೆಗೆ ಯಾವುದೇ ಕೊಡುಗೆಯಿಲ್ಲದೆ ಐದು ವರ್ಷಗಳ ಅವಧಿಗೆ ವಿಸ್ತರಣೆಯಾಗುತ್ತದೆ. ಈ ವಿಸ್ತರಣೆಗೊಂಡಿರುವ ಅವಧಿಯಲ್ಲಿ ನಿಮ್ಮ ಪಿಪಿಎಫ್ ಖಾತೆಗೆ ಹಣ ಜಮೆ ಮಾಡುವಂತಿಲ್ಲ. ಆದರೆ, ನಿಮ್ಮ ಖಾತೆಯಿಂದ ಎಷ್ಟು ಬೇಕಾದರೂ ಹಣ ವಿತ್ ಡ್ರಾ ಮಾಡಬಹುದು. ಆದರೆ, ಒಂದು ವರ್ಷದಲ್ಲಿ ಒಮ್ಮೆ ಮಾತ್ರ ವಿತ್ ಡ್ರಾ ಮಾಡಲು ಅವಕಾಶವಿದೆ. 
 

click me!