ಅಮೆರಿಕದ ಹಣದುಬ್ಬರ 41 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ; ಭಾರತಕ್ಕೂ ತಟ್ಟಲಿದೆ ಬಿಸಿ

By Suvarna News  |  First Published Jul 15, 2022, 5:02 PM IST

ಒಂದೆಡೆ ಅಗತ್ಯ ವಸ್ತುಗಳ ಬೆಲೆಯೇರಿಕೆ, ಇನ್ನೊಂದೆಡೆ ಡಾಲರ್  ಎದುರು ದಿನದಿಂದ ದಿನಕ್ಕೆ ಕುಸಿಯುತ್ತಿರುವ ರೂಪಾಯಿ ಮೌಲ್ಯ ಭಾರತೀಯರ ನಿದ್ದೆಗೆಡಿಸಿದೆ. ಈ ಮಧ್ಯೆ ಅಮೆರಿಕದಲ್ಲಿ ಹಣದುಬ್ಬರ  41 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಳವಾದ್ರೆ ನಮಗೇನು ಎಂದು ಸಮಾಧಾನ ಪಟ್ಟುಕೊಳ್ಳುವಂತಿಲ್ಲ. ಏಕೆಂದ್ರೆ ಜಗತ್ತಿನ ದೊಡ್ಡಣ್ಣ ಅಮೆರಿಕದಲ್ಲಿನ ವಿತ್ತೀಯ ಬದಲಾವಣೆಗಳು ಇಡೀ ಜಗತ್ತಿನ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತವೆ. ಭಾರತ ಕೂಡ ಇದ್ರಿಂದ ಹೊರತಾಗಿಲ್ಲ. 
 


ನವದೆಹಲಿ (ಜು.15): ಅಮೆರಿಕದಲ್ಲಿ ಜೂನ್ ತಿಂಗಳಲ್ಲಿ ಹಣದುಬ್ಬರ 41 ವರ್ಷಗಳ ಗರಿಷ್ಠ ಮಟ್ಟ ಶೇ.9.1ಕ್ಕೆ ತಲುಪಿದೆ. ಜಾಗತಿಕ ಪೂರೈಕೆ ಸರಪಳಿಯಲ್ಲಿನ ವ್ಯತ್ಯಯ ಹಾಗೂ ಕೊರೋನಾ ಸಮಯದಲ್ಲಿ ಸರ್ಕಾರ ಕೈಗೊಂಡ ಆರ್ಥಿಕ ಉತ್ತೇಜನಕಾರಿ ಕ್ರಮಗಳ ಪರಿಣಾಮವಾಗಿ ಹಣದುಬ್ಬರ ಹೆಚ್ಚಳಗೊಂಡಿದೆ ಎನ್ನೋದು ತಜ್ಞರ ಅಭಿಪ್ರಾಯ. ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಣಕ್ಕೆ ಕಳೆದ ತಿಂಗಳು ಅಮೆರಿಕದ ಫೆಡರಲ್ ಬ್ಯಾಂಕ್ ಸುಮಾರು 30 ವರ್ಷಗಳಲ್ಲೇ ಅತ್ಯಧಿಕ ಬಡ್ಡಿದರ ಹೆಚ್ಚಳ ಮಾಡಿದೆ. ಫೆಡರಲ್ ಬ್ಯಾಂಕ್ ಬಡ್ಡಿದರವನ್ನು 75 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಿತ್ತು. ಅಮೆರಿಕದ ಕೇಂದ್ರೀಯ ಬ್ಯಾಂಕ್ ಹಣದುಬ್ಬರವನ್ನು ಶೇ.2 ರೊಳಗಿಡುವ ಗುರಿ ಹೊಂದಿದೆ. ಹೀಗಾಗಿ  ಫೆಡರಲ್ ಬ್ಯಾಂಕ್ ಇನ್ನೊಮ್ಮೆ ಬಡ್ಡಿದರದಲ್ಲಿ ಭಾರೀ ಏರಿಕೆ ಮಾಡುವ ಸಾಧ್ಯತೆಯಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್ ಬಡ್ಡಿದರ ಹೆಚ್ಚಳ ಮಾಡಿದ್ರೆ ಅದ್ರಿಂದ ಭಾರತದ ಆರ್ಥಿಕತೆಯ ಮೇಲೆ ಯಾವ ರೀತಿ ಪರಿಣಾಮವಾಗಲಿದೆ? ಎಂಬ ಪ್ರಶ್ನೆ ಕಾಡೋದು ಸಹಜ. ಅಮೆರಿಕದಲ್ಲಿನ ವಿತ್ತೀಯ ಬದಲಾವಣೆಗಳು ಭಾರತದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತವೆ. ಅಮೆರಿಕದ ಕೇಂದ್ರೀಯ ಬ್ಯಾಂಕ್ ಬಡ್ಡಿದರ ಹೆಚ್ಚಳ ಮಾಡಿದ ತಕ್ಷಣ ಭಾರತದಿಂದ ವಿದೇಶಿ ಬಂಡವಾಳ ಹೂಡಿಕೆ ಹೊರಹರಿವು ಹೆಚ್ಚುತ್ತದೆ. ಅಂದ್ರೆ ವಿದೇಶಿ ಹೂಡಿಕೆದಾರರು ಭಾರತದ ಮಾರುಕಟ್ಟೆಯಿಂದ ಬಂಡವಾಳ ಹಿಂಪಡೆಯಲು ಪ್ರಾರಂಭಿಸುತ್ತಾರೆ. ಇದ್ರಿಂದ ಈಗಾಗಲೇ ಡಾಲರ್ ಎದುರು ಸಾರ್ವಕಾಲಿಕ ಕುಸಿತ ದಾಖಲಿಸುತ್ತಿರುವ ರೂಪಾಯಿ ಮೌಲ್ಯ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ. ಅಲ್ಲದೆ, ಭಾರತದ ಈಕ್ವಿಟಿ ಮಾರುಕಟ್ಟೆ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ.

ಅಡುಗೆ ಅನಿಲ (Gas), ಆಹಾರ ಪದಾರ್ಥಗಳು (Food) ಹಾಗೂ ಬಾಡಿಗೆ (Rent) ಬೆಲೆಯಲ್ಲಿ ಭಾರೀ ಹೆಚ್ಚಳವಾಗಿರುವ ಪರಿಣಾಮ ಜೂನ್ ನಲ್ಲಿ ಅಮೆರಿಕದಲ್ಲಿ (US) ಗ್ರಾಹಕ ದರ ಸೂಚ್ಯಂಕ ಆಧಾರಿತ ಹಣದುಬ್ಬರ (Inflation) ಶೇ. 9.1ಕ್ಕೆ ಏರಿಕೆಯಾಗಿದೆ.  ಮೇನಲ್ಲಿ ಅಮೆರಿಕದಲ್ಲಿ (US) ಹಣದುಬ್ಬರ ಶೇ.8.6ರಷ್ಟಿತ್ತು. ಒಂದು ತಿಂಗಳ ಅವಧಿಯಲ್ಲಿ ಅಂದ್ರೆ ಮೇನಿಂದ ಜೂನ್ ತನಕದ ಅವಧಿಯಲ್ಲಿ ವಸ್ತುಗಳ ಬೆಲೆಗಳಲ್ಲಿ ಶೇ.1.3 ಹೆಚ್ಚಳವಾಗಿತ್ತು. ಅದೇ ಏಪ್ರಿಲ್ ನಿಂದ ಮೇ ತನಕದ ಅವಧಿಯಲ್ಲಿ ಬೆಲೆಗಳಲ್ಲಿ ಶೇ.1 ರಷ್ಟು ಹೆಚ್ಚಳವಾಗಿತ್ತು.

Tap to resize

Latest Videos

4,500 ಕೋಟಿ ಆಸ್ತಿ ಮಾಲೀಕ ಲಲಿತ್ ಮೋದಿ ಗರ್ಲ್ ಫ್ರೆಂಡ್ ಸುಶ್ಮಿತಾ ನಿವ್ವಳ ಆಸ್ತಿ ಎಷ್ಟು?

ಇಡೀ ಜಗತ್ತಿನ ಮೇಲೆ ಪರಿಣಾಮ
ಅಮೆರಿಕದ ಕರೆನ್ಸಿ ಡಾಲರ್ (Dollar) ಆಧಾರದಲ್ಲೇ  ಅಂತಾರಾಷ್ಟ್ರೀಯ ವಹಿವಾಟುಗಳು ನಡೆಯುವ ಕಾರಣ ಅಮೆರಿಕದ ಹಣದುಬ್ಬರ (Inflation), ಅಲ್ಲಿನ ಅಧಿಕ ಬಡ್ಡಿದರ, ಕಠಿಣ ವಿತ್ತೀಯ ಕ್ರಮಗಳು ಇತರ ರಾಷ್ಟ್ರಗಳ ಕರೆನ್ಸಿ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತವೆ. ಭಾರತದ ಕರೆನ್ಸಿ ರೂಪಾಯಿ (Rupee) ಮೌಲ್ಯ ಈಗಾಗಲೇ ಡಾಲರ್ ಎದುರು  ದಿನದಿಂದ ದಿನಕ್ಕೆ ಕುಸಿತ ದಾಖಲಿಸುತ್ತಿದೆ. ಗುರುವಾರ ರೂಪಾಯಿ ಮೌಲ್ಯ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 79.71ಕ್ಕೆ ಕುಸಿದಿದೆ. 

LIC EV Rise; ಎಲ್‌ಐಸಿ ಆಸ್ತಿ .5.41 ಲಕ್ಷ ಕೋಟಿ

ವಿದೇಶಿ ಬಂಡವಾಳ ಹೊರಹರಿವು ಹೆಚ್ಚಳ
ಈಗಾಗಲೇ ಭಾರತದಿಂದ (India) ವಿದೇಶಿ ಬಂಡವಾಳ  ಹೊರಹರಿವು ಹೆಚ್ಚಿದೆ. 2021ರ ಅಕ್ಟೋಬರ್ ನಿಂದ ವಿದೇಶಿ ಹೂಡಿಕೆದಾರರು (Foreign Investors)ಭಾರತೀಯ ಮಾರುಕಟ್ಟೆಗಳಿಂದ ಹಣವನ್ನು ಹಿಂಪಡೆಯುತ್ತಿದ್ದಾರೆ. ಈ ತಿಂಗಳಲ್ಲಿ ಅವರು 4,000  ಕೋಟಿ ರೂ.ಗೂ ಅಧಿಕ ಮೊತ್ತದ ಹಣವನ್ನು ಹಿಂಪಡೆದಿದ್ದಾರೆ. ಡಾಲರ್ ಮೌಲ್ಯದಲ್ಲಿ ಹೆಚ್ಚಳ ಹಾಗೂ ಅಮೆರಿಕದಲ್ಲಿ ಬಡ್ಡಿದರ ಏರಿಕೆಯಾಗಿರುವ ಕಾರಣ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಬಂಡವಾಳ ಹಿಂತೆಗೆಯುತ್ತಿದ್ದಾರೆ. ಈ ವರ್ಷ ಇಲ್ಲಿಯ ತನಕ ಈಕ್ವಿಟಿಗಳಿಂದ ಎಫ್ ಪಿಐ ( FPI) ನಿವ್ವಳ ಹೊರಹರಿವು ಸಾರ್ವಕಾಲಿಕ ಗರಿಷ್ಠ ಮಟ್ಟವಾದ ಸುಮಾರು 2.21 ಲಕ್ಷ ಕೋಟಿ ರೂ. ತಲುಪಿದೆ. 

click me!