ಬ್ಯಾಂಕ್ ನಲ್ಲಿರುವ ಹಣ ಮಾತ್ರವಲ್ಲ ಲಾಕರ್ ನಲ್ಲಿರುವ ದಾಖಲೆ, ಹಣ, ವಸ್ತು ಎಲ್ಲವೂ ಸುರಕ್ಷಿತವಾಗಿರುತ್ತದೆ. ಆದ್ರೆ ಲಾಕರ್ ತೆರೆಯುವ ಮುನ್ನ ನೀವು ಕೆಲ ನಿಯಮ ಪಾಲನೆ ಮಾಡ್ಬೇಕು. ಶುಲ್ಕ ಪಾವತಿಯನ್ನು ಮರೆಯಬಾರದು.
ದುಬಾರಿ ಬೆಲೆಯ ಆಭರಣ, ಮಹತ್ವದ ದಾಖಲೆಗಳನ್ನು ಮನೆಯಲ್ಲಿ ಇಡೋದು ಸುರಕ್ಷಿತವಲ್ಲ. ಮನೆಯಲ್ಲಿಟ್ಟ ಆಭರಣ ಕಳ್ಳರ ಪಾಲಾಗಬಹುದು. ಇವುಗಳನ್ನು ಸುರಕ್ಷಿತವಾಗಿಡಲು ಜನರು ಬ್ಯಾಂಕ್ ಲಾಕರ್ ಬಳಕೆ ಮಾಡ್ತಾರೆ. ಮನೆಯಲ್ಲಿ ಸಾಕಷ್ಟು ಆಭರಣವಿದೆ ಅಥವಾ ಮಹತ್ವದ ದಾಖಲೆಯಿದ್ದು ಅದನ್ನು ಸುರಕ್ಷಿತವಾಗಿಡಲು ಬಯಸ್ತೀರಿ ಅಂದ್ರೆ ಬ್ಯಾಂಕ್ ಲಾಕರ್ ಬೆಸ್ಟ್. ಬ್ಯಾಂಕ್ ಲಾಕರ್ ನಲ್ಲಿ ನೀವು ಪುಕ್ಕಟೆಯಾಗಿ ವಸ್ತುಗಳನ್ನು ಇಡಲು ಸಾಧ್ಯವಿಲ್ಲ. ಬ್ಯಾಂಕ್ ಗೆ ನೀವು ಹಣ ಪಾವತಿ ಮಾಡಬೇಕಾಗುತ್ತದೆ. ಬ್ಯಾಂಕ್ ಲಾಕರ್ ತೆರೆಯಲು ಮುಂದಾಗಿದ್ರೆ ಅದ್ರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳಿ.
ಮನೆಯಲ್ಲಿ ಸುರಕ್ಷಿತವಲ್ಲ ಅಂತಾ ಬ್ಯಾಂಕ್ (Bank) ನಲ್ಲಿ ಆಭರಣ (Jewelry) ಇಡ್ತೇವೆ. ಅಲ್ಲಿಯೂ ಸಮಸ್ಯೆಯಾದ್ರೆ ಏನು ಮಾಡೋದು ಎಂಬ ಜನರ ಆತಂಕಕ್ಕೆ ಆರ್ ಬಿಐ (RBI) ನೆಮ್ಮದಿ ನೀಡಿದೆ. ಜನವರಿ 1, 2023ರಲ್ಲಿ ಆರ್ ಬಿಐ ಹೊಸ ನಿಯಮವನ್ನು ಜಾರಿಗೆ ತಂದಿದೆ. ಆರ್ ಬಿಐ ಲಾಕರ್ ಅಗ್ರಿಮೆಂಟ್ ಜಾರಿಗೆ ತಂದಿದೆ. ಲಾಕರ್ ಹೊಂದಿದ ಗ್ರಾಹಕರು ಹಾಗೂ ಬ್ಯಾಂಕ್ ಮಧ್ಯೆ ಒಂದು ಅಗ್ರಿಮೆಂಟ್ ನಡೆಯುತ್ತದೆ. ಬ್ಯಾಂಕಿನ ನಿರ್ಲಕ್ಷ್ಯದಿಂದ ಲಾಕರ್‌ನಲ್ಲಿ ಇರಿಸಲಾಗಿರುವ ವಸ್ತುಗಳಿಗೆ ಹಾನಿಯಾಗಿದ್ದರೆ, ಬ್ಯಾಂಕ್ ಇದಕ್ಕೆ ಪರಿಹಾರವನ್ನು ಪಾವತಿಸಬೇಕು ಎಂದು ಆರ್ ಬಿಐ ಹೇಳಿದೆ. ಹೊಸ ಆರ್‌ಬಿಐ ನಿಯಮಗಳ ಪ್ರಕಾರ, ಲಾಕರ್‌ಗಳು ಮತ್ತು ಬ್ಯಾಂಕ್ ಆವರಣಗಳ ಭದ್ರತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು ಬ್ಯಾಂಕ್‌ಗಳ ಜವಾಬ್ದಾರಿಯಾಗಿದೆ. ಭೂಕಂಪ, ಸಿಡಿಲು, ಚಂಡಮಾರುತ ಅಥವಾ ಪ್ರವಾಹದಂತಹ ನೈಸರ್ಗಿಕ ವಿಕೋಪಗಳಿಂದ ಲಾಕರ್‌ನಲ್ಲಿರುವ ವಸ್ತುಗಳು ಹಾನಿಗೊಳಗಾದರೆ ಬ್ಯಾಂಕ್ ಜವಾಬ್ದಾರನಾಗಿರುವುದಿಲ್ಲ.
Recurring Deposit: ಆರ್ ಡಿ ಖಾತೆ ತೆರೆಯುವ ಮುನ್ನ ಈ ವಿಷಯದ ಬಗ್ಗೆ ಗಮನವಿರಲಿ
ಬ್ಯಾಂಕ್ ಲಾಕರ್ ಶುಲ್ಕ : ಬ್ಯಾಂಕ್ ಲಾಕರ್ ಶುಲ್ಕ ಬೇರೆ ಬೇರೆಯಾಗಿರುತ್ತದೆ. ರಿಜಿಸ್ಟ್ರೇಶನ್ ಶುಲ್ಕ, ವಾರ್ಷಿಕ ಶುಲ್ಕ, 12ಕ್ಕಿಂತ ಹೆಚ್ಚು ಬಾರಿ ಲಾಕರ್ ತೆರೆದ್ರೆ ಶುಲ್ಕ ಹೀಗೆ ಅನೇಕ ಶುಲ್ಕಗಳನ್ನು ಬ್ಯಾಂಕ್ ವಿಧಿಸುತ್ತದೆ. ಸಣ್ಣ ಲಾಕರ್ ತೆರೆಯಲು ನೀವು 500 ಪ್ಲಸ್ ಜಿಎಸ್ಟಿ ಪಾವತಿಸಬೇಕು. ಮಧ್ಯಮ ಲಾಕರ್ ತೆರೆಯಲು 500 ಪ್ಲಸ್ ಜಿಎಸ್ಟಿ, ದೊಡ್ಡ ಹಾಗೂ ಅತಿ ದೊಡ್ಡ ಲಾಕರ್ ತೆರೆಯಲು 1000 ಪ್ಲಸ್ ಜಿಎಸ್ಟಿ ನೀಡಬೇಕು. ಬ್ಯಾಂಕ್ ಲಾಕರ್ ವಾರ್ಷಿಕ ಶುಲ್ಕ ಸಾವಿರ ರೂಪಾಯಿಯಿಂದ 9000 ರೂಪಾಯಿವರೆಗೆ ಇರುತ್ತದೆ. ವರ್ಷದಲ್ಲಿ 12ಕ್ಕಿಂತ ಹೆಚ್ಚು ಬಾರಿ ಲಾಕರ್ ತೆರೆದ್ರೆ ನೀವು ಒಂದು ಬಾರಿಗೆ 100 ರೂಪಾಯಿ ಪ್ಲಸ್ ಜಿಎಸ್ಟಿ ನೀಡಬೇಕು. ಬೇರೆ ಬೇರೆ ಬ್ಯಾಂಕ್ ಹಾಗೂ ಗಾತ್ರದ ಮೇಲೆ ಎಲ್ಲ ಶುಲ್ಕ ಬದಲಾಗುತ್ತದೆ. ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಗ್ರಾಹಕ ಲಾಕರ್ ತೆಗೆದಿಲ್ಲವೆಂದ್ರೆ ಬ್ಯಾಂಕ್ ಲಾಕರ್ ಒಡೆಯುತ್ತದೆ. ಇದಕ್ಕೆ ಪ್ರತ್ಯೇಕ ಶುಲ್ಕ ಪಾವತಿಸಬೇಕಾಗುತ್ತದೆ. ಲಾಕ್ ಬದಲಿಸಲು ಹಣದ ಅವಶ್ಯವಿದ್ರೆ ಅದನ್ನು ಗ್ರಾಹಕರೇ ನೀಡಬೇಕು. ಆದ್ರೆ ಇದನ್ನು ಮಾಡುವ ಮೊದಲು ಬ್ಯಾಂಕ್ ಗ್ರಾಹಕರ ಅನುಮತಿ ಪಡೆಯುತ್ತದೆ.
ಲಾಕರ್ ಬಾಡಿಗೆ ಪಾವತಿಸದಿದ್ದರೆ ಏನಾಗುತ್ತದೆ? : ಬ್ಯಾಂಕಿನ ಲಾಕರ್ ಅನ್ನು ವಾರ್ಷಿಕವಾಗಿ ಬಾಡಿಗೆಗೆ ನೀಡಬೇಕು. ನೀವು 3 ವರ್ಷಗಳಿಂದ ನಿಮ್ಮ ಬಾಡಿಗೆಯನ್ನು ಪಾವತಿಸದಿದ್ದರೆ, ಬ್ಯಾಂಕ್ ತನ್ನ ನೀತಿಯ ಪ್ರಕಾರ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ನೀವು ಬಾಡಿಕೆಯನ್ನು ತಡವಾಗಿ ನೀಡಿದ್ರೂ ದಂಡ ಪಾವತಿಸಬೇಕು.
Personal Finance: ಇಎಂಐ ಹೊರೆ ಕಡಿಮೆ ಮಾಡೋದು ಚಾಲಾಕಿತನ
ಲಾಕರ್ ಬಗ್ಗೆ ಇವು ತಿಳಿದಿರಲಿ : ವೈಯಕ್ತಿಕ ಲಾಕರ್ ಗಿಂತ ಜಾಯಿಂಟ್ ಲಾಕರ್ ತೆರೆಯುವುದು ಒಳ್ಳೆಯದು. ಇದ್ರಿಂದ ನಿಮ್ಮ ಬಾಡಿಗೆ ಹಂಚಿಹೋಗುತ್ತದೆ. ನೀವು ಲಾಕರ್ ತೆರೆಯುವ ಬ್ಯಾಂಕ್ ನಲ್ಲಿ ಖಾತೆ ಅಥವಾ ಎಫ್ ಡಿ ಖಾತೆ ಹೊಂದಿದ್ದರೆ, ಲಾಕರ್ ಶುಲ್ಕ ಕಡಿಮೆ ಮಾಡುವಂತೆ ಬ್ಯಾಂಕ್ ಜೊತೆ ಮಾತನಾಡಬಹುದು. ಒಂದ್ವೇಳೆ ಲಾಕರ್ ಖಾಲಿಯಿಲ್ಲ ಎಂದು ಬ್ಯಾಂಕ್ ಹೇಳಿದ್ರೆ ನಿಮಗೆ ಲಾಕರ್ ಡೇಟಾ ಕೇಳುವ ಹಕ್ಕಿದೆ.