ಎಲ್ಲ ಕಾಲಕ್ಕೂ ಚಿನ್ನವನ್ನು ಅತ್ಯಂತ ಸುರಕ್ಷಿತ ಹೂಡಿಕೆ ಎಂದೇ ಭಾವಿಸಲಾಗುತ್ತದೆ. ಆದ್ರೆ ಇಂದು ಚಿನ್ನ ಖರೀದಿಸಿ ಮನೆಯಲ್ಲೋ, ಬ್ಯಾಂಕ್ ಲಾಕರ್‌ನಲ್ಲೋ ಇಡೋ ಬದಲು ಇಂಥ ತಲೆನೋವೇ ಇಲ್ಲದ ಡಿಜಿಟಲ್ ಗೋಲ್ಡ್ ಖರೀದಿಗೆ ಜನ ಆಸಕ್ತಿ ತೋರುತ್ತಿದ್ದಾರೆ.
ಇಂದಿಗೂ ಕೂಡ ಜನರು ಬಂಗಾರದ ಮೇಲಿನ ಹೂಡಿಕೆಯನ್ನು ಅತ್ಯಂತ ಸುರಕ್ಷಿತ ಎಂದು ಭಾವಿಸುತ್ತಾರೆ. ಇದೇ ಕಾರಣಕ್ಕೆ ಸದಾ ಚಿನ್ನ ಜನರ ನೆಚ್ಚಿನ ಹೂಡಿಕೆ ಸಾಧನಗಳಲ್ಲಿ ಒಂದಾಗಿ ಉಳಿದಿದೆ. ಆದ್ರೆ ಈಗ ಮೊದಲಿನಂತೆ ಚಿನ್ನ ಖರೀದಿಸಿ ಅದನ್ನು ಮನೆ ಅಥವಾ ಬ್ಯಾಂಕ್ ಲಾಕರ್ನಲ್ಲಿ ಸುರಕ್ಷಿತವಾಗಿಡೋ ತಲೆಬಿಸಿ ಇಲ್ಲ. ಅಂದ್ರೆ ಕಾಲಕ್ಕೆ ತಕ್ಕಂತೆ ಚಿನ್ನದ ಮೇಲಿನ ಹೂಡಿಕೆಯೂ ಹೊಸ ರೂಪ ಪಡೆದುಕೊಂಡಿದೆ. ಅದೇ ಡಿಜಿಟಲ್ ಗೋಲ್ಡ್.
ನಿಮ್ಮವರ ಭವಿಷ್ಯಕ್ಕೆ ಆರ್ಥಿಕ ಸುರಕ್ಷೆ ನೀಡಬಯಸ್ತೀರಾ?
undefined
ಡಿಜಿಟಲ್ ಗೋಲ್ಡ್ ಎಂದರೇನು?
ಹೆಸರೇ ಸೂಚಿಸುವಂತೆ ಡಿಜಿಟಲ್ ಗೋಲ್ಡ್ ಆನ್ಲೈನ್ ಉತ್ಪನ್ನವಾಗಿದ್ದು, ಚಿನ್ನವನ್ನು ನೀವು ಖರೀದಿಸಿ ಬ್ಯಾಂಕ್ ಲಾಕರ್ ಅಥವಾ ಇನ್ಯಾವುದೋ ಸುರಕ್ಷಿತ ಜಾಗದಲ್ಲಿಡಬೇಕಾದ ಅಗತ್ಯವಿಲ್ಲ. ಏಕೆಂದ್ರೆ ಇದು ವರ್ಚುವಲ್ ಗೋಲ್ಡ್. ಅಂದ್ರೆ ವಾಸ್ತವದಲ್ಲಿ ನೀವು ಭೌತಿಕವಾಗಿ ಚಿನ್ನವನ್ನು ಖರೀದಿಸೋದಿಲ್ಲ. ಬದಲಿಗೆ ನೀವು ಆನ್ಲೈನ್ನಲ್ಲಿ ಎಷ್ಟು ಚಿನ್ನ ಖರೀದಿ ಮಾಡುತ್ತಿರೋ ಅಷ್ಟೇ ತೂಕದ ಚಿನ್ನವನ್ನು ಮಾರಾಟ ಮಾಡುತ್ತಿರೋ ಸಂಸ್ಥೆ ನಿಮ್ಮ ಹೆಸರಿನಲ್ಲಿ ಖರೀದಿಸಿ ಸುರಕ್ಷಿತವಾಗಿಡುತ್ತದೆ. ಕನಿಷ್ಠ ಇಷ್ಟೇ ಖರೀದಿಸಬೇಕು ಎಂಬ ನಿಯಮವೇನೂ ಇಲ್ಲ. ಹೀಗಾಗಿ ನೀವು 100ರೂ. ಮೌಲ್ಯದ ಚಿನ್ನವನ್ನುಕೂಡ ಖರೀದಿಸಬಹುದು. ಜಿ-ಪೇ, ಫೋನ್ ಪೇ, ಪೇಟಿಎಂ ಮನಿ, ಎಚ್ಡಿಎಫ್ಸಿ ಸೆಕ್ಯುರಿಟಿಸ್, ಮೋತಿಲಾಲ್ ಒಸ್ವಾಲ್ ಮುಂತಾದ ಸಂಸ್ಥೆಗಳು ಡಿಜಿಟಲ್ ಗೋಲ್ಡ್ ಮಾರಾಟ ಮಾಡುತ್ತವೆ. ಈ ಸಂಸ್ಥೆಗಳು ಹೂಡಿಕೆದಾರರಿಗೆ ಸಣ್ಣ ಮೊತ್ತದ ಬಂಗಾರವನ್ನು ಖರೀದಿಸಲು ಅವಕಾಶ ನೀಡುತ್ತವೆ. ಹೂಡಿಕೆದಾರ ಹೀಗೆ ಖರೀದಿಸಿದ ಸಣ್ಣ ಸಣ್ಣ ಮೊತ್ತದ ಬಂಗಾರವನ್ನು ಈ ಸಂಸ್ಥೆಗಳು ಸಂಗ್ರಹಿಸಿಡುತ್ತವೆ. ಈ ರೀತಿ ಚಿಕ್ಕ ಮೊತ್ತದ ಬಂಗಾರ ಖರೀದಿ ಆ ಬಳಿಕ ದೊಡ್ಡ ಮೊತ್ತದ ಸಂಗ್ರಹವಾಗುತ್ತದೆ.
ನಿಯಮಾವಳಿಗಳೇನು?
ಡಿಜಿಟಲ್ ಗೋಲ್ಡ್ ರೆಗ್ಯುಲೇಟರಿ ಗ್ರೇ ಝೋನ್ ಅಡಿಯಲ್ಲಿ ಬರುತ್ತದೆ. ಇದು ಯಾವುದೇ ಹಣಕಾಸು ವಲಯದ ನಿಯಮಗಳಿಗೆ ಒಳಪಡೋದಿಲ್ಲ. ಇದು ಸ್ವಯಂ ನಿಯಂತ್ರಿತ ಅಡಿಟ್ಗೊಳಪಡುತ್ತದೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಸ್ಟಾಕ್ ಬ್ರೋಕರ್ಸ್, ವೆಲ್ತ್ ಮ್ಯಾನೇಜರ್ ಸೇರಿದಂತೆ ತನ್ನ ಸದಸ್ಯರಿಗೆ ಸೆಪ್ಟೆಂಬರ್ 10ರೊಳಗೆ ಡಿಜಿಟಲ್ ಗೋಲ್ಡ್ ಮಾರಾಟವನ್ನು ನಿಧಾನವಾಗಿ ಸ್ಥಗಿತಗೊಳಿಸುವಂತೆ ಸೂಚಿಸಿದೆ. ಹೊಸ ಯುಗದ ಫಿನ್ಟೆಕ್ ಬ್ರೋಕರ್ಸ್ ಅಪ್ಸ್ಟಾಕ್ಸ್, ಗ್ರೋ, ಪೇಟಿಎಂ ಮನಿ ಹಾಗೂ ಸಾಂಪ್ರದಾಯಿಕ ಬ್ರೋಕರ್ಗಳಾದ ಎಚ್ಡಿಎಫ್ಸಿ ಸೆಕ್ಯುರಿಟೀಸ್, ಮೋತಿಲಾಲ್ ಒಸ್ವಾಲ್ ಇತ್ಯಾದಿ ಸಂಸ್ಥೆಗಳ ಮೇಲೆ ಈ ಹೊಸ ನೀತಿ ಪರಿಣಾಮ ಬೀರಲಿದೆ. ಇಂಥ ಬ್ರೋಕರ್ ಸಂಸ್ಥೆಗಳು ಸೆಬಿಯಲ್ಲಿ ನೋಂದಾಯಿಸಲ್ಪಟ್ಟ ಘಟಕದಿಂದ ಇಂಥ ಅನಿಯಂತ್ರಿತ ಉತ್ಪನ್ನಗಳನ್ನು ಮಾರುವಂತಿಲ್ಲ. ಇದಕ್ಕಾಗಿಯೇ ಇಂಥ ಸಂಸ್ಥೆಗಳಿಗೆ ತಮ್ಮ ಗ್ರಾಹಕರಿಗೆ ಮಾಹಿತಿ ನೀಡಿ ಡಿಜಿಟಲ್ ಗೋಲ್ಡ್ ಮಾರಾಟವನ್ನು ಸೆ.10ರೊಳಗೆ ಸ್ಥಗಿತಗೊಳಿಸುವಂತೆ ತಿಳಿಸಲಾಗಿದೆ. ಆದ್ರೆ ಬ್ರೋಕಿಂಗ್ ಸಂಸ್ಥೆಗಳಲ್ಲದ ಫೋನ್ ಪೇ ಹಾಗೂ ಗೂಗಲ್ ಪೇಗೆ ಈ ಹೊಸ ನಿಯಮಗಳಿಂದ ಯಾವುದೇ ಹಾನಿಯಾಗೋದಿಲ್ಲ. ಅಲ್ಲದೆ, ಈಗಾಗಲೇ ಡಿಜಿಟಲ್ ಗೋಲ್ಡ್ ಹೊಂದಿರೋ ಗ್ರಾಹಕರಿಗೆ ಕೂಡ ಇದ್ರಿಂದ ಯಾವುದೇ ಸಮಸ್ಯೆಯಿಲ್ಲ.
ಸೆ. 30ರೊಳಗೆ ತಪ್ಪದೆ ಈ 5 ಕೆಲಸಗಳನ್ನು ಮಾಡಿ ಮುಗಿಸಿ!
ಪ್ರಯೋಜನಗಳೇನು?
-ಡಿಜಿಟಲ್ ಗೋಲ್ಡ್ ಖರೀದಿಸಿದ್ರೆ ಬ್ಯಾಂಕ್ ಲಾಕರ್ಗೆ ಬಾಡಿಗೆ ಪಾವತಿಸಬೇಕಾಗಿಲ್ಲ ಅಥವಾ ಸುರಕ್ಷತೆಗೆ ಇನ್ಯುರೆನ್ಸ್ ಮಾಡಿಸಬೇಕಾಗಿಯೂ ಇಲ್ಲ.
-ನೀವು 100ರೂ. ಹೂಡಿಕೆ ಮಾಡಿ ಕೂಡ ಡಿಜಿಟಲ್ ಗೋಲ್ಡ್ ಖರೀದಿಸಬಹುದು. ನಂತರ ನಿಧಾನವಾಗಿ ನಿಮ್ಮ ಆದಾಯಕ್ಕೆ ಅನುಗುಣವಾಗಿ ಡಿಜಿಟಲ್ ಗೋಲ್ಡ್ ಸಂಗ್ರಹ ಹೆಚ್ಚಿಸಿಕೊಳ್ಳಬಹುದು. ಅದೇ ನೀವು ಚಿನ್ನವನ್ನು ಭೌತಿಕವಾಗಿ ಖರೀದಿಸಲು ಸಾಕಷ್ಟು ಹಣ ಬೇಕಾಗುತ್ತದೆ.
-ಸಾಮಾನ್ಯವಾಗಿ ಚಿನ್ನದ ದರ ನಗರದಿಂದ ನಗರಕ್ಕೆ ಹಾಗೂ ಆಭರಣದಿಂದ ಆಭರಣಕ್ಕೆ ಬದಲಾಗುತ್ತದೆ. ಆದ್ರೆ ಡಿಜಿಟಲ್ ಗೋಲ್ಡ್ ದರ ಮಾತ್ರ ದೇಶದುದ್ದಕ್ಕೂ ಒಂದೇ ಆಗಿರುತ್ತದೆ. ಚಿನ್ನದ ಮೇಲೆ ದುಬಾರಿ ಮೇಕಿಂಗ್ ಚಾರ್ಜ್ ವಿಧಿಸಲಾಗುತ್ತದೆ. ಅದೇ ಡಿಜಿಟಲ್ ಗೋಲ್ಡ್ಗೆ ಕೇವಲ ಶೇ.3 ಜಿಎಸ್ಟಿ ವಿಧಿಸಲಾಗುತ್ತದೆ.
ಗೃಹಸಾಲ ಮಾಡಿದೋರಿಗಷ್ಟೇ ಸಿಗುತ್ತೆ ಈ ಲೋನ್?
-ಡಿಜಿಟಲ್ ಗೋಲ್ಡ್ 24 ಕ್ಯಾರೆಟ್ ಪ್ರಮಾಣೀಕೃತ ಚಿನ್ನವಾಗಿದೆ. ಅದೇ ಭೌತಿಕವಾಗಿ 24 ಕ್ಯಾರೆಟ್ ಚಿನ್ನ ಖರೀದಿಸಲು ಹೆಚ್ಚುವರಿ ಹಣ ನೀಡಬೇಕಾಗುತ್ತದೆ.
-ನೀವು ಡಿಜಿಟಲ್ ಗೋಲ್ಡ್ ಅನ್ನು ಸುಲಭವಾಗಿ ಮಾರಾಟ ಅಥವಾ ಭೌತಿಕವಾಗಿ ಪಡೆದುಕೊಳ್ಳಬಹುದು. ನೀವು ಡಿಜಿಟಲ್ ಗೋಲ್ಡ್ ಅನ್ನು ಮಾರಾಟ ಮಾಡಿದ ತಕ್ಷಣ ಹಣ ನಿಮ್ಮ ಖಾತೆಗೆ ವರ್ಗಾವಣೆಯಾಗುತ್ತದೆ. ಅದೇ ನೀವು ಚಿನ್ನವನ್ನು ಭೌತಿಕವಾಗಿ ಬಯಸಿದ್ರೆ ನಿಮ್ಮ ಮನೆಗೆ ಅದನ್ನು ತಲುಪಿಸಲಾಗುತ್ತದೆ.
-ನೀವು ಡಿಜಿಟಲ್ ಗೋಲ್ಡ್ ಅನ್ನು ಅಗತ್ಯವೆನಿಸಿದ ತಕ್ಷಣ ಮಾರಾಟ ಮಾಡಬಹುದು. ಆದ್ರೆ ಚಿನ್ನವನ್ನು ಮಾರಾಟ ಮಾಡಲು ಅನೇಕ ಚಿನ್ನದಂಗಡಿಗಳಿಗೆ ಅಲೆದಾಡಬೇಕಾದ ಅನಿವಾರ್ಯತೆ ಇರುತ್ತದೆ.
-ಡಿಜಿಟಲ್ ಗೋಲ್ಡ್ ಆಧಾರವಾಗಿಟ್ಟು ಬ್ಯಾಂಕ್ಗಳಿಂದ ಸಾಲ ಪಡೆಯಲು ಕೂಡ ಅವಕಾಶವಿದೆ.