
ಎಫ್ಡಿ ಮೂಲಕ ಹಣ ಉಳಿತಾಯ ಮಾಡಲು ಅನೇಕರು ಮುಂದಾಗ್ತಾರೆ. ಎಫ್ ಅಂದ್ರೆ ಸ್ಥಿರ ಠೇವಣಿ. ಬ್ಯಾಂಕ್ ಗಳಲ್ಲಿ ಸ್ಥಿರ ಠೇವಣಿಗೆ ಸಂಬಂಧಿಸಿದಂತೆ ಕೆಲ ನಿಯಮಗಳಿವೆ. ನೀವು ಎಫ್ ಡಿ ಇಟ್ಟಿದ್ದರೆ ಅಥವಾ ಇಡುವ ನಿರ್ಧಾರ ತೆಗೆದುಕೊಂಡಿದ್ದರೆ ಎಫ್ ಡಿಯಲ್ಲಿ ಹಣ ಹೂಡುವ ಮುನ್ನ ಕೆಲವು ವಿಷ್ಯಗಳನ್ನು ನೀವು ತಿಳಿದಿರಬೇಕು. ಎಫ್‌ಡಿ ಮಾಡಿದರೆ ಅದರ ಮೇಲೆ ನೀವು ಸಾಲವನ್ನು ತೆಗೆದುಕೊಳ್ಳಬಹುದೇ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿಯಬೇಕು. ನಿಮಗೆ ಹಣದ ಅಗತ್ಯವಿದ್ದಾಗ ಬೇರೆ ಯಾವುದಾದ್ರೂ ವಿಧಾನವನ್ನು ಪಾಲಿಸುವ ಮೂಲಕ ನೀವು ಎಫ್‌ಡಿ ಮೇಲೆ ಸಾಲವನ್ನು ತೆಗೆದುಕೊಳ್ಳಬಹುದೇ ಎಂಬುದನ್ನು ಕೂಡ ನೀವು ತಿಳಿದಿರಬೇಕು. ಎಫ್ ಡಿಗೆ ಸಂಬಂಧಿಸಿದಂತೆ ನಾವಿಂದು ಒಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಎಫ್ ಡಿ (FD) ಅಂದ್ರೇನು ?: ಎಫ್‌ಡಿ ಅಂದ್ರೆ ನಿಗದಿತ ಅವಧಿಗೆ ಬ್ಯಾಂಕಿ (Bank) ನಲ್ಲಿ ಠೇವಣಿ ಮಾಡುವುದು. ಬ್ಯಾಂಕ್ ಈ ಠೇವಣಿ (Deposit ) ಮಾಡಿದ ಹಣಕ್ಕೆ ಬಡ್ಡಿ (Interest) ಯನ್ನು ಪಾವತಿಸುತ್ತದೆ. ಎಫ್‌ಡಿ ಸಹಾಯದಿಂದ ನೀವು ಯಾವುದೇ ಹಣಕಾಸಿನ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು. ಆದರೆ ನಿಮಗೆ ಅಗತ್ಯವಿದೆ ಎಂದಾಗ ನೀವು ಎಫ್ ಡಿ ಹಣ ತೆಗೆಯಲು ಸಾಧ್ಯವಿಲ್ಲ. ನಿಗದಿತ ಸಮಯಕ್ಕಿಂತ ಮೊದಲು ಎಫ್‌ಡಿ ಹಣವನ್ನು ಹಿಂಪಡೆಯಲು ಒಪ್ಪಿಗೆ ನೀಡುವುದಿಲ್ಲ. ಕೆಲವು ತುರ್ತು ಸಂದರ್ಭಗಳಲ್ಲಿ ಬ್ಯಾಂಕ್ ನಿಮಗೆ ಹಣ ಹಿಂಪಡೆಯುವ ಅವಕಾಶ ನೀಡುತ್ತದೆ. ಆದ್ರೆ ಇದಕ್ಕೆ ನೀವು ಬ್ಯಾಂಕ್ ಗೆ ದಂಡ (Fine) ಪಾವತಿ ಮಾಡಬೇಕಾಗುತ್ತದೆ.
Saving Tips : ಹಣ ಉಳಿಸೋಕೆ ಗೃಹಿಣಿಯರು ಫಾಲೋ ಮಾಡಿ ಈ ಟಿಪ್ಸ್
ಎಫ್ ಡಿ ಮೂಲಕ ನೀವು ಸಾಲವನ್ನು ಕೂಡ ತೆಗೆದುಕೊಳ್ಳಬಹುದು. ಸಾಲದ ಅವಧಿ ಎಫ್ ಡಿ ಅವಧಿಗೆ ಸಮಾನವಾಗಿರುತ್ತದೆ. ಎಫ್‌ಡಿಯ ಒಟ್ಟು ಮೊತ್ತದ ಸುಮಾರು ಶೇಕಡಾ 70 ರಷ್ಟನ್ನು ಸಾಲವಾಗಿ ನೀವು ತೆಗೆದುಕೊಳ್ಳಬಹುದು. ಎಫ್‌ಡಿ ಬಡ್ಡಿ ದರಕ್ಕಿಂತ ಶೇಕಡಾ 2 ರಷ್ಟು ಹೆಚ್ಚಿನ ದರದಲ್ಲಿ ಬಡ್ಡಿಯನ್ನು ನೀವು ಪಾವತಿಸಬೇಕಾಗುತ್ತದೆ.
ಎಫ್ ಡಿಯಲ್ಲಿದೆ ಇಷ್ಟೊಂದು ವಿಧ : ಸ್ಥಿರ ಠೇವಣಿಯಲ್ಲಿ ಎರಡು ವಿಧವಿದೆ. ಒಂದು ಕ್ಯುಮಿಲೇಟಿವ್ ಎಫ್ ಡಿಯಾದ್ರೆ ಇನ್ನೊಂದು ನಾನ್ ಕ್ಯುಮಿಲೇಟಿವ್ ಎಫ್ ಡಿ. ಹೆಚ್ಚಿನ ಬಡ್ಡಿ ಬೇಕು ಎನ್ನುವವರು ಖಾಸಗಿ ವಲಯದ ಅಥವಾ ಸಣ್ಣ ಹಣಕಾಸು ಸಂಸ್ಥೆಗಳಲ್ಲಿ ಎಫ್ ಡಿ ಮಾಡಿದ್ರೆ ಒಳ್ಳೆಯದು. ನಿಮ್ಮ ಮೊತ್ತ ದೊಡ್ಡದಾಗಿದ್ದರೆ ಅಂದ್ರೆ 8 ರಿಂದ 10 ಲಕ್ಷದ ರೂಪಾಯಿಯಾಗಿದ್ದರೆ ನೀವು ಒಂದೇ ಕಡೆ ಎಫ್ ಡಿ ಮಾಡುವ ಬದಲು ಎರಡು ಕಡೆ ಎಫ್ ಡಿ ಮಾಡಿದ್ರೆ ಹೆಚ್ಚಿನ ಲಾಭ ಪಡೆಯಬಹುದು.
Personal Finance: ಫ್ಲೋಟಿಂಗ್ ಬಡ್ಡಿ ದರ ಎಂದ್ರೇನು ಗೊತ್ತಾ?
ಎಫ್ ಡಿ ಮೇಲೆ ಎಷ್ಟು ತೆರಿಗೆ (Tax) ವಿಧಿಸಲಾಗುತ್ತದೆ ? : ಎಫ್ ಡಿ ಒಂದು ಸುರಕ್ಷಿತ ಹೂಡಿಕೆಯಾಗಿದೆ. ಇಲ್ಲಿ ನೀವು ಹೂಡಿದ ಹಣ ಸುರಕ್ಷಿತವಾಗಿರುತ್ತದೆ. ನಿಗದಿತ ಸಮಯದ ನಂತ್ರ ಹಣದ ಜೊತೆ ಬಡ್ಡಿ ಹಣ ನಿಮಗೆ ಸಿಗುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ಸರ್ಕಾರ ಎಫ್ ಡಿ ಹಣ 1.5 ಲಕ್ಷಕ್ಕಿಂತ ಕಡಿಮೆ ಇದ್ದರೆ ಯಾವುದೇ ತೆರಿಗೆಯನ್ನು ವಿಧಿಸುವುದಿಲ್ಲ. ತೆರಿಗೆಯಿಂದ ತಪ್ಪಿಸಿಕೊಳ್ಳಲು ಬಯಸುವವರು ಬ್ಯಾಂಕ್ ನ ಫಾರ್ಮ್ ಒಂದರಲ್ಲಿ ನೀವು ಮಾಹಿತಿ ಭರ್ತಿ ಮಾಡಬೇಕಾಗುತ್ತದೆ. ಬ್ಯಾಂಕ್ ಗೆ ನೀವು 15 ಎ ಫಾರ್ಮ್ ಸಲ್ಲಿಸಬೇಕಾಗುತ್ತದೆ. ಅಲ್ಲಿ ನೀವು ಪ್ಯಾನ್ ಕಾರ್ಡ್ ನ ನಕಲನ್ನು ಕೂಡ ನೀಡಬೇಕಾಗುತ್ತದೆ. ಹಿರಿಯ ನಾಗರಿಕರು 15 ಎಚ್ ಫಾರ್ಮ್ ಭರ್ತಿ ಮಾಡಿ ಬ್ಯಾಂಕ್ ಗೆ ನೀಡಬೇಕು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.