ಹೂಡಿಕೆ ನಮ್ಮ ಭವಿಷ್ಯವನ್ನು ಭದ್ರಗೊಳಿಸುತ್ತದೆ. ಅಸುರಕ್ಷಿತ ಪ್ರದೇಶದಲ್ಲಿ ಹೂಡಿಕೆ ಮಾಡಿದ್ರೆ ಹಣ ನಷ್ಟವಾಗುವ ಸಾಧ್ಯತೆಯಿದೆ. ನಿವೃತ್ತಿ ಸಮಯದಲ್ಲಿ ಕೈಚಾಚುವ ಸ್ಥಿತಿ ನಿರ್ಮಾಣವಾಗಬಹುದು. ಹಾಗಾಗಿ ಹಣ ಗಳಿಸುವ ಸಮಯದಲ್ಲೇ ಹೂಡಿಕೆ ಮಾಡಿದ್ರೆ ಒಳ್ಳೆಯದು.
ಪ್ರತಿಯೊಬ್ಬರೂ ಸಣ್ಣ ಮೊತ್ತವನ್ನಾದ್ರೂ ಉಳಿತಾಯ ಮಾಡುವುದು ಬಹಳ ಮುಖ್ಯ. ಸಾಮಾನ್ಯವಾಗಿ ಮಹಿಳೆಯರು ಸಣ್ಣಪುಟ್ಟ ಉಳಿತಾಯ ಮಾಡ್ತಿರುತ್ತಾರೆ. ಅದಕ್ಕೆ ಯಾವುದೇ ಭದ್ರತೆ ಇರೋದಿಲ್ಲ. ಚೀಟಿ ಕಟ್ಟುವುದು, ಸಕ್ಕರೆ ಡಬ್ಬದಲ್ಲಿ ಹಣ ಕೂಡಿಡುವುದು ಮಾಡ್ತಾರೆ. ಈ ಉಳಿತಾಯ ತಾತ್ಕಾಲಿಕ ಮಾತ್ರ. ಜೀವನ ಪರ್ಯಂತ ಕುಟುಂಬ, ಮನೆ, ಮಕ್ಕಳ ಏಳ್ಗೆಗೆ ದುಡಿಯುವ ಮಹಿಳೆ ವಯಸ್ಸಾದ್ಮೇಲೆ ಎಲ್ಲರ ತಾತ್ಸಾರಕ್ಕೊಳಗಾಗ್ತಾಳೆ. ವಯಸ್ಸಾದ್ಮೇಲೆ ಮಕ್ಕಳ ಮುಂದೆ ಕೈಚಾಚಬೇಕಾಗುತ್ತದೆ. ಕೆಲ ಮಕ್ಕಳು ಈಗ ತಂದೆ – ತಾಯಿಯನ್ನು ಸರಿಯಾಗಿ ನೋಡಿಕೊಳ್ಳೋದಿಲ್ಲ. ವೃದ್ಧಾಶ್ರಮದಲ್ಲಿ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಪತ್ನಿ 60 ವರ್ಷದ ನಂತ್ರ ಖರ್ಚಿನ ರೂಪದಲ್ಲಿ ನಿಯಮಿತ ಆದಾಯವನ್ನು ಪಡೆಯಬೇಕು. ಭವಿಷ್ಯದಲ್ಲಿ ಹೆಂಡತಿ ಹಣಕ್ಕಾಗಿ ಯಾರನ್ನೂ ಅವಲಂಬಿಸಬಾರದು ಎಂದಾದ್ರೆ ಪತ್ನಿ ಹೆಸರಿನಲ್ಲಿ ಹೂಡಿಕೆ ಮಾಡುವುದು ಬಹಳ ಮುಖ್ಯ. ಗಂಡನಾದವನು ಪತ್ನಿ ಹೆಸರಿನಲ್ಲಿ ಎನ್ ಪಿಎಸ್ (National Pension Scheme) ನಲ್ಲಿ ಹೂಡಿಕೆ ಮಾಡಬೇಕು. ಇಂದು ನಾವು ಎನ್ ಪಿಎಸ್ ಬಗ್ಗೆ ಒಂದಿಷ್ಟು ಮಾಹಿತಿ ನೀಡ್ತೇವೆ.
ಎನ್ ಪಿಎಸ್ ಎಂದರೇನು? : ಎನ್ ಪಿಎಸ್ ಕೇಂದ್ರ (Center) ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಇದನ್ನು ಭಾರತೀಯ ಪಿಂಚಣಿ ನಿಧಿ (Pension Fund) ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿಯಂತ್ರಿಸುತ್ತದೆ. ಹೂಡಿಕೆದಾರರು ಪಾವತಿಸುವ ಹಣವನ್ನು ಮಾರುಕಟ್ಟೆಗೆ ಸಂಬಂಧಿತ ಹಣಕಾಸು ಸಾಧನಗಳಾದ ಸಾಲ ಮತ್ತು ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.
ಎನ್ ಪಿಎಸ್ ನಲ್ಲಿ ಹೂಡಿಕೆ (Investment) ಮಾಡಿದ್ರೆ ಎಷ್ಟು ಲಾಭ ? : ಹೆಂಡತಿಯ ಹೆಸರಿನಲ್ಲಿ ನೀವು ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಿದರೆ ಶೇಕಡಾ 10 ರಷ್ಟು ವಾರ್ಷಿಕ ಆದಾಯವನ್ನು ಪಡೆಯಬಹುದು. ಅಂದ್ರೆ 60 ವರ್ಷ ವಯಸ್ಸಿನಲ್ಲಿ ಹೆಂಡತಿಯ ಖಾತೆಯಲ್ಲಿ ಒಟ್ಟು 1.12 ಕೋಟಿ ರೂಪಾಯಿ ಇರುತ್ತದೆ. ಪತ್ನಿಗೆ 60 ವರ್ಷ ವಯಸ್ಸಾದ ಮೇಲೆ ಒಂದು ದೊಡ್ಡ ಮೊತ್ತವನ್ನು ಬ್ಯಾಂಕ್ ನೀಡುತ್ತದೆ. ಅವರು ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ನಿಯಮಿತ ಆದಾಯವನ್ನು ಪಡೆಯಬಹುದು. ಎನ್ ಪಿಎಸ್ ಖಾತೆ ತೆರೆಯುವ ವೇಳೆ ನೀವು ಪ್ರತಿ ತಿಂಗಳು ಎಷ್ಟು ಪಿಂಚಣಿ ಸಿಗಬೇಕು ಎನ್ನುವ ಬಗ್ಗೆಯೂ ನಿರ್ಧರಿಸಬಹುದು. ಎನ್ ಪಿಎಸ್ ಮಾಡಿಸಿದ್ರೆ ಪತ್ನಿ ಕೊನೆ ವಯಸ್ಸಿನಲ್ಲಿ ಬೇರೆಯವರನ್ನು ಅವಲಂಭಿಸುವ ಅನಿವಾರ್ಯತೆ ಬರುವುದಿಲ್ಲ.
Personal Finance : ಖರ್ಚು ಮಾಡಿದ್ದು ಸಾಕು, ನವೆಂಬರ್ ನಲ್ಲಿ ಉಳಿತಾಯ ಶುರು ಮಾಡಿ..
ಎಷ್ಟು ಠೇವಣಿ ಮಾಡಬೇಕು ? : ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಪ್ರತಿ ತಿಂಗಳು ಅಥವಾ ವಾರ್ಷಿಕವಾಗಿ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಬಹುದು. ಕೇವಲ 1,000 ರೂಪಾಯಿಗೆ ನೀವು ಎನ್ ಪಿಎಸ್ ಮಾಡಬಹುದು. ಎನ್ ಪಿಎಸ್ ಖಾತೆಯು 60 ನೇ ವಯಸ್ಸಿನಲ್ಲಿ ಪಕ್ವವಾಗುತ್ತದೆ. 65 ವರ್ಷದವರೆಗೂ ನೀವು ಇದನ್ನು ಮುಂದುವರೆಸಬಹುದು.
ಏನೇ ಅನ್ನಿ ಹಣ ಉಳಿಸೋದೊಂದು ಕಲೆ, ಕ್ರೆಡಿಟ್ ಕಾರ್ಡ್ ಬಳಕೆ ಹೇಗ್ ಮಾಡಬಹುದು?
ಈ ಯೋಜನೆಯಲ್ಲಿ ಪತ್ನಿಗೆ ಸಿಗುತ್ತೆ ತಿಂಗಳಿಗೆ ಇಷ್ಟು ಪಿಂಚಣಿ : ಪತ್ನಿಗೆ 30 ವರ್ಷ ವಯಸ್ಸಿನಲ್ಲಿ ಎನ್ ಪಿಎಸ್ ಮಾಡಿಸಿದ್ದರೆ, ಹಾಗೆ ನೀವು ಪ್ರತಿ ತಿಂಗಳು 5000 ರೂಪಾಯಿ ಹೂಡಿಕೆ ಮಾಡಿದ್ರೆ, ವಾರ್ಷಿಕವಾಗಿ ಹೂಡಿಕೆಗೆ ಶೇಕಡಾ 10ರಷ್ಟು ಲಾಭ ಬರ್ತಿದೆ ಎಂದಾದ್ರೆ ಪತ್ನಿ ಖಾತೆಯಲ್ಲಿ 60ನೇ ವಯಸ್ಸಿನಲ್ಲಿ ಒಟ್ಟು 1.12 ಕೋಟಿ ರೂಪಾಯಿ ಇರುತ್ತದೆ. ಆಕೆ ತಿಂಗಳಿಗೆ ಸುಮಾರು 45,000 ರೂಪಾಯಿ ಪಿಂಚಣಿ ಪಡೆಯಬಹುದಾಗಿದೆ. 30 ವರ್ಷದಲ್ಲಿ ಹೂಡಿಕೆ ಶುರು ಮಾಡಿದ್ರೆ 30 ವರ್ಷ ಹೂಡಿಕೆ ಮಾಡಬೇಕಾಗುತ್ತದೆ. ಎನ್ ಪಿಎಸ್ ನಲ್ಲಿ ಈವರೆಗೆ ಶೇಕಡಾ 10ರಿಂದ 11ರಷ್ಟು ರಿಟರ್ನ್ ನೀಡಿದೆ. ಎನ್ ಪಿಎಸ್ ನಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ.