ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಅಡುಗೆ ಮಾಡಲು ಬರುತ್ತದೆ. ಅದನ್ನೇ ಸಣ್ಣ ಪ್ರಮಾಣದಲ್ಲಿ ಬ್ಯುಸಿನೆಸ್ ರೀತಿ ಆರಂಭಿಸಿ ಯಶ ಕಂಡೋರು ಅನೇಕರು. ಶ್ಯಾವಿಗೆ ತಯಾರಿಸಿ ಜೈ ಎನಿಸಿಕೊಂಡಿದ್ದಾರೆ ಕವಿತಾ.
ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ: ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿರುವುದು ನಿಜವಾಗಲೂ ಅಭಿವೃದ್ಧಿಯ ಪ್ರತೀಕ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ರೈತಾಪಿ ಜನರು ಹೊಲ ಗದ್ದೆಗಳಿಗೆ ತಮ್ಮ ತಮ್ಮ ಹೆಣ್ಣು ಮಕ್ಕಳನ್ನ ದುಡಿಯಲು ಕಳಸದೇ, ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಲು ಅನುವು ಮಾಡಿಕೊಡುತ್ತಿದ್ದಾರೆ. ಸ್ವತಃ ತಾವೇ ಹೊಸ ಸರಕಾರದ ಯೋಜನೆಗಳ ಲಾಭ ಪಡೆದು, ಮಹಿಳೆಯೊಬ್ಬರು ಮಾಸಿಕ 25 ರಿಂದ 30 ಸಾವಿರ ಲಾಭ ಗಳಿಸುತ್ತಿದ್ದಾರೆ.
ಧಾರವಾಡ ತಾಲೂಕಿನ ಮುಗದ ಗ್ರಾಮದಲ್ಲಿ ಕವಿತಾ ನೀರಲಕಟ್ಟಿ (Kavita niralakatti) ಎಂಬ ಮಹಿಳೆ ತಾವೇ ಎರಡು ಲಕ್ಷದವರಗೆ ಸಾಲ ಪಡೆದು, ಶ್ಯಾವಿಗೆ ಮಶಿನ್ ಹಾಕಿಕ್ಕೊಂಡು ದಿನಕ್ಕೆ 1000 ರೂ. ಆದಾಯ ಗಳಿಸುತ್ತಿದ್ದಾರೆ. ಈ ಸ್ವಾವಲಂಬಿ ಬದುಕು ಉಳಿದ ಮಹಿಳೆಯರಿಗೂ ಮಾದರಿಯಾಗಿದ್ದು, ಮತ್ತೊಂದಿಷ್ಟು ಜನರು ಇದೇ ದಾರಿಯಲ್ಲಿ ಸಾಗುವಂತೆ ಪ್ರೇರೇಪಿಸುತ್ತಿದೆ.
6210 ಕೋಟಿ ಮೊತ್ತದ ಆಸ್ತಿ ಉದ್ಯೋಗಿಗಳಿಗೆ ದಾನ ಮಾಡಿದ ಶ್ರೀರಾಮ ಗ್ರೂಪ್ ಮಾಲೀಕ
ಜೈ ಆಂಜನೇಯ ಸಂಘದ ಸದಸ್ಯರಾದ ಕವಿತಾ ನಿರಲಕಟ್ಟಿ ಕೇಂದ್ರ ಸರಕಾರದ (Central Govt) ಯೋಜನೆಯಿಂದ 40,000 ಸಾಲ ಹಾಗೂ ಉಳಿದ ಅಗತ್ಯವಿದ್ದ ಹಣಕ್ಕೆ ಬ್ಯಾಂಕ್‌ಲೋನ್ ಸಬ್ಸಿಡಿ (Bank Loan subsidy) ಪಡೆದು, ಬ್ಯುಸಿನೆಸ್ ಆರಂಭಿಸಿದ್ದಾರೆ. ತೆಗೆದುಕೊಂಡ ಎರಡು ಲಕ್ಷ ಸಾಲದಲ್ಲಿ ಆಗಲೇ ಅರ್ಧ ಸಾಲ ಮರುಪಾವತಿಸಲಾಗಿದೆ. ಸದ್ಯಕ್ಕೆ ಸಣ್ಣ ಮಷೀನ್ ಇದೆ. ತುಸು ದೊಡ್ಡ ಮಷಿನ್ ಖರೀದಿಸಿ, ಬ್ಯುಸಿನೆಸ್ ವಿಸ್ತರಿಸುವ ಗುರಿ ಹೊಂದಿದ್ದಾರೆ ಕವಿತಾ. ಈಗಾಗಲೇ ಇದಕ್ಕೆ ಬ್ಯಾಂಕ್ ಲೋನ್ (Bank Loan) ಮಂಜೂರಾಗಿದ್ದು, ಶೀಘ್ರದಲ್ಲಿ ಹೊಸ ಮಷಿನ್ ಶೀಘ್ರದಲ್ಲಿಯೇ ಇವರ ಕೈ ಸೇರಲಿದೆ. ಒಂದು ದಿನಕ್ಕೀಗ ನೂರು ಕೆಜಿ ರವೆಯಿಂದ ಶ್ಯಾವಿಗೆ ತಯಾರಿಸಲಾಗುತ್ತಿದೆ. ಕೇಜಿಗೆ 58 ರೂ.ನಂತೆ ಮಾರಲಾಗುತ್ತಿದೆ. ತಿಂಗಳಿಗೆ ನಮಗೆ 25 ರಿಂದ 30 ಸಾವಿರದವರೆಗೆ ಲಾಭವಿದೆ. ಮೊದಲು ಊರಿನಲ್ಲಿ ಮಾತ್ರ ಮಾರುತಿದ್ವಿ. ಇದೀಗ ಬೇರೆಡೆಯಿಂದಲೂ ಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದೆಯಂತೆ.
ಗಾಣದೆಣ್ಣೆ ಉದ್ಯಮ ಸ್ಥಾಪಿಸಿ, ಸ್ವಾವಲಂಬಿಯಾದ ಝಾನ್ಸಿ
ಸಂಜೀವಿನಿ ಒಕ್ಕೂಟಕ್ಕೆ ಸೇರಿದಾಗಿನಿಂದ ತಯಾರಿಸುತ್ತಿರು ಉತ್ಪನ್ನವನ್ನು ಮಾಸಿಕ ಸಂತೆಯಲ್ಲಿಯೂ ಮಾರಲಾಗುತ್ತಿದೆ. ಅಲ್ಲಿ ಮಾರೋದ್ರಿಂದ ಇವಾಗ ಬೇರೆ ಊರಿಂದಲೂ ಆರ್ಡರ್ ಹೆಚ್ಚುತ್ತಿದೆ. ನಮ್ಮ ಜೀವನಕ್ಕಿದು ತುಂಬಾ ಅನುಕೂಲವಾಗಿದೆ. ಮಹಿಳೆಯಾಗಿ, ಸರಕಾರದಿಂದ ಸಾಲ ಪಡೆದು, ಉದ್ಯೋಗ ಆರಂಭಿಸಿದ್ದೇನೆ. ಇದರಿಂದ ಆತ್ಮವಿಶ್ವಾಸ ಹೆಚ್ಚಿದೆ. ಮನಸ್ಸಿಗೆ ಖುಷಿ ಕೊಟ್ಟಿದೆ ಎನ್ನುತ್ತಾರೆ ಕವಿತಾ.