E - Rupi ಪ್ರಾಯೋಗಿಕ ಪರೀಕ್ಷೆ ಆರಂಭ: 275 ಕೋಟಿ ರೂ. ಮೊತ್ತದ ಸರ್ಕಾರಿ ಬಾಂಡ್‌ ಸೆಟಲ್‌ಮೆಂಟ್‌

By BK AshwinFirst Published Nov 2, 2022, 11:46 AM IST
Highlights

ನಗದು, ಕ್ರೆಡಿಟ್ ಅಥವಾ ಡೆಬಿಟ್‌ ಕಾರ್ಡ್ , ಮೊಬೈಲ್‌ ಆಪ್, ಇ—ಬ್ಯಾಂಕಿಂಗ್ ಇವು ಯಾವುದರ ಅಗತ್ಯವಿಲ್ಲದೆ ಇ-ರುಪಿ ಬಳಸಿ ಪಾವತಿ ಮಾಡಬಹುದು.  ಇದು ನಿರ್ದಿಷ್ಟ ವ್ಯಕ್ತಿ ಹಾಗೂ ಉದ್ದೇಶ ಕೇಂದ್ರೀಕೃತ  ವೋಚರ್ ಪಾವತಿ ವ್ಯವಸ್ಥೆಯಾಗಿದೆ. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಸೇವದಾತರು ಹಾಗೂ ಫಲಾನುಭವಿಗಳ ನಡುವೆ ನೇರ ಸಂಪರ್ಕ ಕಲ್ಪಿಸಲು ನೆರವು ನೀಡುತ್ತದೆ. 

ನವದೆಹಲಿ (ನವೆಂಬರ್ 2): ಹಣಕಾಸು ವಹಿವಾಟು (Financial Transactions) ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣವಾಗಬಹುದೆಂದು ಎಣಿಸಲಾಗಿರುವ ದೇಶದ ಮೊದಲ ಡಿಟಿಟಲ್‌ ರುಪಿ (Digital Rupee) ಗೆ ಮಂಗಳವಾರ ಪ್ರಾಯೋಗಿಕವಾಗಿ ಚಾಲನೆ ನೀಡಿದೆ. ಅಲ್ಲದೆ, ಮೊದಲ ದಿನದಲ್ಲೇ ಸೆಕೆಂಡರಿ ಮಾರುಕಟ್ಟೆಯಲ್ಲಿ 275 ಕೋಟಿ ರೂ. ಮೊತ್ತದ ಸರ್ಕಾರಿ ಬಾಂಡ್‌ಗಳ ಸೆಟಲ್‌ಮೆಂಟ್‌ಗಳನ್ನು (Government Bond Settlement) ಇ - ರುಪಿ (e - Rupi) ಮೂಲಕ ಮಾಡಲಾಗಿದೆ. ಮೊದಲ ದಿನವಾದ್ದರಿಂದ ದ್ರವ ರೂಪದಲ್ಲಿದ್ದ ಬಾಂಡ್‌ಗಳನ್ನು ಮಾತ್ರ ಕೇಂದ್ರ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿ (Central Bank Digital Currency) (ಸಿಬಿಡಿಸಿ) (CBDC) ಮೂಲಕ ಸೆಟಲ್‌ಮೆಂಟ್‌ ಮಾಡಲಾಯಿತು ಎಂದು ಬ್ಯಾಂಕ್‌ ಟ್ರೇಡರ್‌ವೊಬ್ಬರು ಹೇಳಿದರು. 

ಸಗಟು ವಿಭಾಗದಲ್ಲಿ ಕೇಂದ್ರ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿಗಾಗಿ ಪ್ರಾಯೋಗಿಕ ಚಾಲನೆಯನ್ನು ಸೋಮವಾರ ಘೋಷಿಸಿದ ಆರ್‌ಬಿಐ, ಇ-ರೂಪಾಯಿ ಇಂಟರ್‌ಬ್ಯಾಂಕ್ ಮಾರುಕಟ್ಟೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಎಂದು ಸೋಮವಾರ ಹೇಳಿದೆ. 

ಇದನ್ನು ಓದಿ: ಇಂದಿನಿಂದ ಡಿಜಿಟಲ್‌ ರುಪಾಯಿ ಯುಗ ಶುರು: ಪ್ರಾಯೋಗಿಕವಾಗಿ ಆರ್‌ಬಿಐನಿಂದ E- Rupi ಬಿಡುಗಡೆ

"ಸೆಟಲ್ಮೆಂಟ್ ಗ್ಯಾರಂಟಿ ಮೂಲಸೌಕರ್ಯ ಅಥವಾ ವಸಾಹತು ಅಪಾಯವನ್ನು ತಗ್ಗಿಸಲು ಮೇಲಾಧಾರದ ಅಗತ್ಯವನ್ನು ಮುಂಚಿತವಾಗಿ ಖಾಲಿ ಮಾಡುವ ಮೂಲಕ ಸೆಂಟ್ರಲ್ ಬ್ಯಾಂಕ್ ಹಣದಲ್ಲಿ ಸೆಟಲ್ಮೆಂಟ್ ವಹಿವಾಟು ವೆಚ್ಚವನ್ನು ಕಡಿಮೆ ಮಾಡುತ್ತದೆ" ಎಂದು ಆರ್‌ಬಿಐ ಹೇಳಿದೆ. ಇದು ಒಂದು ತಿಂಗಳೊಳಗೆ ಚಿಲ್ಲರೆ ವಿಭಾಗಕ್ಕೆ ಇ-ರೂಪಾಯಿಯನ್ನು ಪ್ರಾರಂಭಿಸಲು ಯೋಜಿಸಿದೆ. ಅಂದರೆ, ಆ ವೇಳೆಗೆ ಇದು ಜನ ಸಾಮಾನ್ಯರ ಬಳಕೆಗೂ ಲಭ್ಯವಾಗಲಿದೆ. 

ವಿಶ್ವಾದ್ಯಂತ ಜನರು ಕ್ರಿಪ್ಟೋ ಕರೆನ್ಸಿಯತ್ತ ಮುಖ ಮಾಡುತ್ತಿರುವ ಬೆನ್ನಲ್ಲೇ ಭಾರತದಲ್ಲೂ ಆರ್‌ಬಿಐ ಇ - ರುಪಿ ಹೆಸರಲ್ಲಿ ಡಿಜಿಟಟಲ್‌ ರೂಪಾಯಿಯನ್ನು ಪರಿಚಯ ಮಾಡಿದೆ. ಕ್ರಿಪ್ಟೋದಲ್ಲಿ ಜನರಿಗೆ ಆಗುತ್ತಿರುವ ನಷ್ಟ, ವಂಚನೆ ತಡೆಗಟ್ಟುವುದರ ಜತೆಗೆ ಕಾನೂನುಬದ್ಧವಾಗಿ, ನಿಯಂತ್ರಿತ ರೀತಿಯಲ್ಲಿ ಡಿಜಿಟಲ್‌ ಕರೆನ್ಸಿ ನೀಡುವುದು ಭಾರತೀಯ ರಿಸರ್ವ್‌ ಬ್ಯಾಂಕ್‌ ಉದ್ಧೇಶವಾಗಿದೆ. 

ಇದನ್ನೂ ಓದಿ: ಶೀಘ್ರ ಬರಲಿದೆ ಆರ್‌ಬಿಐ Digital Currency: ಇ - ರುಪಿ ಬಗ್ಗೆ ಇಲ್ಲಿದೆ ವಿವರ..

ಇ-ರುಪಿ ಹೇಗೆ ಕಾರ್ಯನಿರ್ವಹಿಸುತ್ತದೆ..?
ಇ-ರುಪಿ ನಗದು ರಹಿತ ಹಾಗೂ ಸಂಪರ್ಕ ರಹಿತ ಡಿಜಿಟಲ್‌ ಪಾವತಿ ವ್ಯವಸ್ಥೆಯಾಗಿದೆ. ಇದು ಇ-ವೋಚರ್‌ ರೂಪದಲ್ಲಿದ್ದು, ಇದನ್ನು ಫಲಾನುಭವಿಗಳ ಮೊಬೈಲ್‌ಗೆ ಎಸ್‌ಎಂಎಸ್‌ ಅಥವಾ ಕ್ಯೂಆರ್‌ ಕೋಡ್‌ ಮಾದರಿಯಲ್ಲಿ ಕಳುಹಿಸಬಹುದು. ಇದು ಪ್ರೀಪೇಯ್ಡ್ ಇ-ಗಿಫ್ಟ್‌ ವೋಚರ್‌ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಂದ್ರೆ ಹೇಗೆ ಇ-ಗಿಫ್ಟ್‌ ವೋಚರ್ ಬಳಸಿ ನಿರ್ದಿಷ್ಟ ಸ್ವೀಕೃತಿ ಕೇಂದ್ರಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಬಹುದೋ ಹಾಗೆಯೇ ಇ-ರುಪಿ ಕೂಡ. 

ನಗದು, ಕ್ರೆಡಿಟ್ ಅಥವಾ ಡೆಬಿಟ್‌ ಕಾರ್ಡ್ , ಮೊಬೈಲ್‌ ಆಪ್, ಇ—ಬ್ಯಾಂಕಿಂಗ್ ಇವು ಯಾವುದರ ಅಗತ್ಯವಿಲ್ಲದೆ ಇ-ರುಪಿ ಬಳಸಿ ಪಾವತಿ ಮಾಡಬಹುದು.  ಇದು ನಿರ್ದಿಷ್ಟ ವ್ಯಕ್ತಿ ಹಾಗೂ ಉದ್ದೇಶ ಕೇಂದ್ರೀಕೃತ  ವೋಚರ್ ಪಾವತಿ ವ್ಯವಸ್ಥೆಯಾಗಿದೆ. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಸೇವದಾತರು ಹಾಗೂ ಫಲಾನುಭವಿಗಳ ನಡುವೆ ನೇರ ಸಂಪರ್ಕ ಕಲ್ಪಿಸಲು ನೆರವು ನೀಡುತ್ತದೆ. 
ವಿಶೇಷವಾಗಿ ಇ-ರುಪಿ ಮೂಲಕ ಸರ್ಕಾರದ ಸಹಾಯಧನ ನೇರವಾಗಿ ಫಲಾನುಭವಿಗಳಿಗೆ ತಲುಪಿಸಲಿದೆ. ಸರ್ಕಾರ ಯಾವುದೇ ಯೋಜನೆ ಸಹಾಯಧನವನ್ನು ಪ್ರಸಕ್ತವಿರುವಂತೆ ಫಲಾನುಭವಿ ಬ್ಯಾಂಕ್‌ ಖಾತೆಗೆ ಜಮಾ ಮಾಡೋ ಬದಲು ಆತನ ಮೊಬೈಲ್‌ಗೆ ನೇರವಾಗಿ ಇ-ವೋಚರ್ ಎಸ್‌ಎಂಎಸ್‌ ಕಳುಹಿಸಲಿದೆ.

ಇದನ್ನೂ ಓದಿ: ಇದನ್ನೂ ಓದಿ: e-RUPIಗೆ ಮೋದಿ ಚಾಲನೆ; ಡಿಜಿಟಲ್ ಇಂಡಿಯಾ ಕ್ರಾಂತಿಗೆ ವಿಶ್ವವೇ ಬೆರಗು!

ಇತರ ಆನ್‌ಲೈನ್‌ ಪೇಮೆಂಟ್‌ಗಿಂತ ಭಿನ್ನ ಹೇಗೆ..?
ಇ-ರುಪಿ ಪಾವತಿ ವಿಧಾನ ಯಾವುದೇ ಆಪ್‌ ಅಥವಾ ಮೊಬೈಲ್‌ ಬ್ಯಾಂಕಿಂಗ್‌ಗೆ ಸಂಬಂಧಿಸಿಲ್ಲ. ಹೀಗಾಗಿ ಯಾರು ಬೇಕಾದ್ರೂ ಯಾವುದೇ ಮೊಬೈಲ್‌ನಿಂದ ಇ- ವೋಚರ್‌ ಪಡೆಯಬಹುದು. ಸಂಬಂಧಿಸಿದವರಿಗೆ ಎಸ್‌ಎಂಎಸ್‌ ವೋಚರ್‌ ಮೂಲಕ ಪಾವತಿ ಮಾಡಬಹುದು. ಪ್ರೇಪೇಯ್ಡ್‌ ಆಗಿರೋ ಕಾರಣ ಇ- ವೋಚರ್‌ನಿಂದ ಸಂಬಂಧಪಟ್ಟವರಿಗೆ ಸಮಯಕ್ಕೆ ಸರಿಯಾಗಿ ಪಾವತಿ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ, ವ್ಯವಹಾರಕ್ಕೆ ಮಧ್ಯವರ್ತಿಗಳ ಅವಶ್ಯಕತೆಯೂ ಇರೋದಿಲ್ಲ. 

ಪ್ರಯೋಜನಗಳೇನು..?:
ಡಿಜಿಟಲ್‌ ರುಪಿ ಬಳಕೆಯಿಂದ ಅಂತರ ಬ್ಯಾಂಕ್‌ ವಹಿವಾಟು ಇನ್ನಷ್ಟು ಸರಳವಾಗಲಿದೆ. ವಹಿವಾಟು ಶುಲ್ಕ ಇಳಿಸಲಿದೆ. ಸೆಟಲ್‌ಮೆಂಟ್‌ ಅಪಾಯ ತಪ್ಪಿಸಲು ಖಾತರಿ ನೀಡಬೇಕಾದ ಅಗತ್ಯವನ್ನು ತಪ್ಪಿಸಲಿದೆ. ಡಿಜಿಟಲ್‌ ರುಪಿ ಹಾಳಾಗುವುದಿಲ್ಲ, ಸವೆಯುವುದಿಲ್ಲ, ಮುದ್ರಣದ ವೆಚ್ಚ ಇರುವುದಿಲ್ಲ. ಸ್ವತಃ ಆರ್‌ಬಿಐ ಇಂಥ ಡಿಜಿಟಲ್‌ ರುಪಿ ಬಿಡುಗಡೆ ಮಾಡುವ ಕಾರಣ, ಬಿಟ್‌ಕಾಯಿನ್‌ ಸೇರಿದಂತೆ ಇತರೆ ಖಾಸಗಿ ಕಂಪನಿಗಳು ಚಲಾವಣೆಗೆ ಬಿಟ್ಟಿರುವ ಡಿಜಿಟಲ್‌ ಕರೆನ್ಸಿಯಲ್ಲಿನ ಭಾರಿ ಏರಿಳಿತದ ಅಪಾಯ ಇರುವುದಿಲ್ಲ ಮತ್ತು ಇಡೀ ವ್ಯವಸ್ಥೆ ಮೇಲೆ ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ನಿಯಂತ್ರಣ ಹೊಂದಿರುತ್ತದೆ. 

click me!