ಮಿಡಲ್ ಕ್ಲಾಸ್‌ ಭಾರತೀಯರ ಕಾರಿನ ಕನಸು ನನಸು ಮಾಡಿದ್ದ ರತನ್‌ ಟಾಟಾ!

By Kannadaprabha News  |  First Published Oct 10, 2024, 7:58 AM IST

ಆರಂಭದಲ್ಲಿ ನ್ಯಾನೋ ಕಾರ್ ಗಳನ್ನು ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಪ್ರಾರಂಭಿಸುವ ಯೋಜನೆ ಹಾಕಲಾಗಿತ್ತು. ಇದರಿಂದ ಅಲ್ಲಿನ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗಿ, ಆರ್ಥಿಕ ಅಭಿವೃದ್ಧಿಗೆ ವೇಗ ದೊರಕುತ್ತಿತ್ತು. ಇದಕ್ಕಾಗಿ ಅಲ್ಲಿ ಸಾಕಷ್ಟು ಕೃಷಿ ಭೂಮಿ ಖರೀದಿಸಿ ತಯಾರಿಕಾ ಘಟಕ ಆರಂಭಿಸಿತು. ಆದರೆ ಅಂದು ತಲೆಯೆತ್ತಿದ ಭೂ ಸ್ವಾಧೀನ ವಿರೋಧಿ ಆಂದೋಲನ ಇದಕ್ಕೆ ಮುಳುವಾಗಿ ಪರಿಣಮಿಸಿತು. 


ಬೆಂಗಳೂರು(ಅ.10):  ಮಧ್ಯಮ ವರ್ಗದವರೇ ಹೆಚ್ಚಿರುವ ಭಾರತದಲ್ಲಿ, ಅವರಿಗೆ ಕೈಗೆಟುಕುವ ದರದಲ್ಲಿ ಕಾರ್ ತಯಾರಿಸುವ ಕನಸು ಕಂಡವರು ಉದ್ಯಮಿ ರತನ್ ಟಾಟಾ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ 2003ರಲ್ಲಿ ಅವರಿಟ್ಟ ಮೊದಲ ಹೆಜ್ಜೆ ಹೆಸರೇ 'ಟಾಟಾ ನ್ಯಾನೋ', 

ಮೊದಲ ಹೆಜ್ಜೆಯಲ್ಲೇ ಸೋಲು: 

Tap to resize

Latest Videos

ಆರಂಭದಲ್ಲಿ ನ್ಯಾನೋ ಕಾರ್ ಗಳನ್ನು ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಪ್ರಾರಂಭಿಸುವ ಯೋಜನೆ ಹಾಕಲಾಗಿತ್ತು. ಇದರಿಂದ ಅಲ್ಲಿನ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗಿ, ಆರ್ಥಿಕ ಅಭಿವೃದ್ಧಿಗೆ ವೇಗ ದೊರಕುತ್ತಿತ್ತು. ಇದಕ್ಕಾಗಿ ಅಲ್ಲಿ ಸಾಕಷ್ಟು ಕೃಷಿ ಭೂಮಿ ಖರೀದಿಸಿ ತಯಾರಿಕಾ ಘಟಕ ಆರಂಭಿಸಿತು. ಆದರೆ ಅಂದು ತಲೆಯೆತ್ತಿದ ಭೂ ಸ್ವಾಧೀನ ವಿರೋಧಿ ಆಂದೋಲನ ಇದಕ್ಕೆ ಮುಳುವಾಗಿ ಪರಿಣಮಿಸಿತು. 

ಟಾಟಾ ಸಾಮ್ರಾಜ್ಯ ಕಟ್ಟಿದ್ದು ಜೆಮ್‌ಶೆಡ್‌ಜಿ ಟಾಟಾ: ಸೆಣಬು ಉತ್ಪನ್ನ ರಫ್ತಿನೊಂದಿಗೆ ಆರಂಭವಾದ ಗ್ರೂಪ್‌

ರಾಜ್ಯದಲ್ಲಿ ವಿಪಕ್ಷನಾಯಕಿಯಾಗಿದ್ದ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ, ಕಾರ್ಖಾನೆಗಾಗಿ ರೈತರ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿದ್ದರು. ಘಟಕದ ವಿರುದ್ಧ ದೊಡ್ಡಮಟ್ಟದ ಹೋರಾಟ ನಡೆಯಿತು. ಹೋರಾಟ ಹಿಂಸಾರೂಪ ಪಡೆದು ಸಾವು ನೋವಿಗೂ ಕಾರಣವಾಯ್ತು. ಹೀಗಾಗಿ ಅಲ್ಲಿ ಕಾರುಗಳ ಉತ್ಪಾದನೆ ಸಾಧ್ಯವಾಗಲಿಲ್ಲ. ಸತತ ಕಾನೂನು ಹೋರಾಟದ ಬಳಿಕ 2023ರಲ್ಲಿ ಸಿಂಗೂರು ಕಾರ್ಖಾನೆಯನ್ನು ಕೈಬಿಟ್ಟದ್ದಕ್ಕೆ ಟಾಟಾ ಮೋಟಾರ್ಸ್‌ಗೆ ಪರಿಹಾರ ದೊರೆಯಿತಾದರೂ, ಇದರಿಂದ ಆರ್ಥಿಕ ಅಭಿವೃದ್ಧಿಯ ಒಂದು ಅವಕಾಶ ಪಶ್ಚಿಮ ಬಂಗಾಳದ ಕೈತಪ್ಪಿತು.

ನ್ಯಾನೋಗೆ ಹೊಸ ಅಲೆ 

ನರೇಂದ್ರ ಮೋದಿಯವರು ಗುಜರಾತ್‌ನ ಸಿಎಂ ಆಗಿದ್ದ ಸಂದರ್ಭದಲ್ಲಿ ಟಾಟಾ ಲಭಿಸಿತು. ಅಲ್ಲಿನ ಸಾಣಂದ್  ಸರ್ಕಾರದಿಂದ ದೊರೆತ 1,100 ಎಕರೆ ಭೂಮಿಯಲ್ಲಿ 2 ಸಾವಿರ ಕೋಟಿ ಹೂಡಿಕೆಯೊಂದಿಗೆ ತಲೆಯೆತ್ತಿದ ನ್ಯಾನೋ ಯೋಜನೆ ಬೆಳವಣಿಗೆ ಕಂಡು, ರಾಜ್ಯದ ಆರ್ಥಿಕತೆಗೂ ವೇಗ ಕಲ್ಪಿಸಿತು. ಹೀಗೆ ಪ.ಬಂಗಾಳದಲ್ಲಿ ಮುದುರಿದ 'ನ್ಯಾನೋ' ಕನಸು ಗುಜರಾತ್‌ನಲ್ಲಿ ಚಿಗುರಿತು, ಬೆಳೆಯಿತು.

ಕನಸಿನ ಕಾರು ಮಾರುಕಟ್ಟೆಗೆ 

ಬಿಡುಗಡೆ ಸತತ ಸಂಘರ್ಷ ಹಾಗೂ ಛಲದ ಫಲವಾಗಿ 2009ರ ಮಾರ್ಚ್ 23ರಂದು ಮೊದಲ ಟಾಟಾ ನ್ಯಾನೋ ಕಾರು ಮಾರುಕಟ್ಟೆಗೆ ಪ್ರವೇಶಿಸಿತು. ತನ್ನ ನಾವೀನ್ಯತೆ ಹಾಗೂ ಕೈಗೆಟುಕುವ ದರದಿಂದಲೇ ಅದು ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಮೊದಮೊದಲು ನ್ಯಾನೋಗೆ ನಿರೀಕ್ಷಿಸಿದ ಸಫಲತೆ ದೊರಕಲಿಲ್ಲ. ಕಾರಣ, ಕಾರುಗಳನ್ನು ಅಗತ್ಯತೆ ಎಂದು ಪರಿಗಣಿಸಿದ್ದ ಟಾಟಾಅದನ್ನು ಅನ್ಯ ಕಾರುಗಳಂತೆಷಾರಾಮಿಯಾಗಿ ನಿರ್ಮಿಸಲಿಲ್ಲ. ನ್ಯಾನೋವನ್ನು ಕಡಿಮೆ ಬೆಲೆಯ ಕಾರೆಂದು ಬಿಂಬಿಸುವ ಮೂಲಕ ಅದರ ಖರೀದಿ ಯನ್ನು ಉತ್ತೇಜಿಸುವುದು ಟಾಟಾದ ತಂತ್ರವಾಗಿತ್ತಾ ದರೂ, ಜನ ಅಗ್ಗದ ವಸ್ತುವೆಂಬ ಹಣೆಪಟ್ಟಿ ಹೊತ್ತ ಕಾರನ್ನು ಹೊಂದಲು ಬಯಸಲಿಲ್ಲ. ಈ ಎಲ್ಲಾ ಕಾರಣಗಳಿಂದ ನ್ಯಾನೋ ಕಾರುಗಳ ಮಾರಾಟ ಕುಸಿತ ಕಂಡಿತು. ಆದರೂ 2018ರವೇಳೆಗೆ 2.75 ಲಕ್ಷ ಕಾರುಗಳು ಮಾರಾಟವಾಗಿದ್ದವು. ಈ ಟಾಟಾ ನ್ಯಾನೋ ಸಂಘರ್ಷದ ೯ದ ಹಾದಿಯ ಮೂಲಕ ಸಫಲತೆಯನ್ನು ತಲುಪಿತು. ದುರಾದೃಷ್ಟದ ಶಾತ್ ವರ್ಷ ಕಳೆದಂತೆ ನ್ಯಾನೋ ಕಾರುಗಳಮಾರಾಟ ಕಾರಣ 20-20ರಲ್ಲಿ ಅದರ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು. 

ರತನ್ ಟಾಟಾ ಇನ್ನಿಲ್ಲ: ಮದುವೆಯಾಗದ ಟಾಟಾ ಪ್ರೀತಿಸಿದ ಹುಡುಗಿ ಯಾರು? ಗೊತ್ತಿಲ್ಲದ ಕೆಲವು ಸಂಗತಿಗಳು!

ಸಿಂಗೂರು ಟಾಟಾ ಕಂಪನಿ ಜಾಗ ವಿವಾದ

ರತನ್‌  ಟಾಟಾ ತಮ್ಮ ಕನಸಿನ ಟಾಟಾ ನ್ಯಾನೋ ಕಾರು ಘಟಕವನ್ನು ಆರಂಭಿಸಲು ಮೊದಲಿಗೆ ಪಶ್ಚಿಮ ಬಂಗೊಳದ ಸಿಂಗೂರು ಗ್ರಾಮ ಆಯ್ಕೆ ಮಾಡಿಕೊಂಡಿದ್ದರು. ಇದಕ್ಕೆ ಅಂದಿನ ಸಿಪಿಎಂ ಸರ್ಕಾರ ಭೂಮಿ ನೀಡಿತ್ತು.ಅದರಂತೆ ಘಟಕನಿ ರ್ಮಾಣದ ಕಾಮಗಾರಿಯೂ ಆರಂಭವಾಗಿತ್ತು. ಆದರೆ ಆದರೆ ಈ ಘಟಕದಲ್ಲಿ ಸ್ಥಳೀಯರನ್ನು ಕೆಲಸಕ್ಕೆ ಸೇರಿಸಿಕೊಳ್ಳದಿದ್ದನ್ನು ವಿರೋಧಿಸಿ ಮತ್ತು ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗೆ ನೀಡಿದ್ದನ್ನು ಅಂದಿನ ಟಿಎಂಸಿ ಸರ್ಕಾರ ಭೂಮಿ ನೀಡಿತ್ತು. ಅದರಂತೆ ಘಟಕ ನಿರ್ಮಾಣದ ಕಾಮಗಾರಿಯೂ ಆರಂಭವಾಗಿತ್ತು. ರೈತರ ಹೋರಾಟಕ್ಕೆ ಕೈಜೋಡಿಸಿದ ಮಮತಾ ದೊಡ್ಡ ಮಟ್ಟದ ಪ್ರತಿಭಟನೆ ಆರಂಭಿಸಿದರು. ಹೋರಾಟ ತೀವ್ರಗೊಂಡು ಹಿಂಸಾರೂಪ ಪಡೆದ ಕಾರಣ ಬೇಸತ್ತ ರತನ್ ಟಾಟಾ ನ್ಯಾನೋ ಘಟಕವನ್ನು ಗುಜರಾತಿನ ಅಹ್ಮದಾಬಾದಿಗೆ ಸ್ಥಳಾಂತರಿಸಿದರು.

click me!