ಜನ ಸಾಮಾನ್ಯರ ಪ್ರಾಮಾಣಿಕತೆ ಮೇಲೆ ನಂಬಿಕೆ| ಪ್ರಮಾಣಿಕರಿಗೆ ಮೋದಿ ಗೌರವ| ಹೊಸ ಹಂತದ ಟ್ಯಾಕ್ಸ್ ಸುಧಾರಣೆ| ಪಾರದರ್ಶಕ ತೆರಿಗೆ ಪ್ರಾಮಾಣಿಕರಿಗೆ ಗೌರವ
ನವದೆಹಲಿ(ಆ.13) ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸಲು ಹಾಗೂ ನೇರ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ತೆರಿಗೆದಾರಸ್ನೇಹಿ ಆಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೂತನ ತೆರಿಗೆ ಸುಧಾರಣಾ ಕ್ರಮಗಳನ್ನು ಪ್ರಕಟಿಸಿದ್ದಾರೆ.
ಪಾರದರ್ಶಕ ತೆರಿಗೆ ಪ್ರಾಮಾಣಿಕರಿಗೆ ಗೌರವವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ ಸಾಮಾನ್ಯರ ಪ್ರಾಮಾಣಿಕತೆ ಮೇಲೆ ನಂಬಿಕೆ ಇದೆ ಎಂದಿದ್ದಾರೆ ಹಾಗೂ ಹೊಸ ಹಂತದ ಟ್ಯಾಕ್ಸ್ ಸುಧಾರಣೆ ಜಾರಿಗೊಳಿಸಿದ್ದಾರೆ.
ಪ್ರಧಾನಿಯಿಂದ ತೆರಿಗೆ ಸುಧಾರಣೆ ಪ್ರಕಟ!
India salutes then hardworking taxpayers. https://t.co/fRdqbcSIgt
— Narendra Modi (@narendramodi)ಮೋದಿ ಭಾಷಣದ ಮುಖ್ಯಾಂಗಳು:
* ವ್ಯವಸ್ಥಿತ ಸುಧಾರಣೆಯ ಮತ್ತೊಂದು ಹಂತಕ್ಕೆ ತಲುಪಿದೆ. ದೇಶದಲ್ಲಿ ವ್ಯವಸ್ಥಿತ ಸುಧಾರಣೆಯ ಸರಣಿ ಆರಂಭವಾಗಿದೆ. ಅದರ ಭಾಗವಾಗಿ ಇಂದಿನ ಯೋಜನೆ ಜಾರಿಯಾಗಿದೆ.
* ಅಸೆಸ್ಮೆಂಟ್, ದೂರು, ಯಾವ ಪ್ರಕ್ರಿಯೆಯೂ ಮುಖಾಮುಖಿ ಇಲ್ಲ. ಅಧಿಕಾರಿ- ತೆರಿಗೆದಾರ ನಡುವೆ ನೇರ ಸಂಪರ್ಕ ಇಲ್ಲ. ಮುಖರಹಿತ ತೆರಿಗೆ ನಿರ್ಧರಣಾ ನಿಯಮ ಜಾರಿಗೊಳಿಸಲಾಗಿದ್ದು, ಭಯರಹಿತ, ಪ್ರಾಮಾಣಿಕ ತೆರಿಗೆ ವ್ಯವಸ್ಥೆ ಜಾರಿ. ಈ ವ್ಯವಸ್ಥೆ ಜಾರಿಗೆ ಕಾರಣರಾದವರಿಗೆ ಐಟಿ ಸಿಬ್ಬಂದಿಗೆ ಮೋದಿ ಅಭಿನಂದನೆ.
* 6 ವರ್ಷಗಳಲ್ಲಿ ನಮ್ಮ ಆದ್ಯತೆ ಬ್ಯಾಂಕಿಂಗ್ ವ್ಯವಸ್ಥೆ, ಹಣಕಾಸು ವ್ಯವಸ್ಥೆ ಬ್ಯಾಂಕಿಂಗ್ಗೆ ತರುವುದು . ಅಭದ್ರ ವಾತಾವರಣ ಭದ್ರಗೊಳಿಸುವುದಾಗಿತ್ತು. ಈಗ ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸುವುದು ಅಗತ್ಯ, ಇದ್ಕಾಗಿ ಪ್ರಾಮಾಣಿಕ ತೆರಿಗೆದಾರರ ಜೀವನ ಸರಳಗೊಳ್ಳಬೇಕು. ಅವರ ಜೀವನ ಸರಳಗೊಂಡಾಗ, ದೇಶವೂ ಮುಂದುವರಿಯುತ್ತದೆ.
ಈ 10 ರಾಜ್ಯಗಳು ಕೊರೋನಾ ಗೆದ್ದರೆ ದೇಶ ಗೆದ್ದಂತೆ: ಪಿಎಂ ಮೋದಿ!
* ತೆರಿಗೆ ವ್ಯವಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪ ಕಡಿಮೆಗೊಳಿಸುವ ಪ್ರಯತ್ನ ಮಾಡಲಾಗಿದೆ. ಪ್ರತಿ ಯೋಜನೆ ಜನ ಕೇಂದ್ರಿತವಾಗಿರಬೇಕು. ಈ ಮುಂಚೆ ಅದು ಸರ್ಕಾರ ಕೇಂದ್ರಿತ, ಅಧಿಕಾರ ಕೇಂದ್ರಿತವಾಗಿತ್ತು. ಅಡ್ಡದಾರಿಗಳಿಂದ ಸಾಧನೆ, ಸುಧಾರಣೆ ಅಸಾಧ್ಯ. ತಪ್ಪು ದಾರಿಗಳಿಂದ ಗುರಿ ತಲುಪುವ ಕಾಲ ಈಗಿಲ್ಲ.
* ಈ ಬದಲಾವಣೆ ಸಾಧ್ಯವಾಗುತ್ತಿರುವುದು ಹೇಗೆ ? ಇದು ಶಕ್ತಿ ಮತ್ತು ಶಿಕ್ಷೆ ಭಯದಿಂದ ಬಂದಿರುವುದಲ್ಲ. ಸರ್ಕಾರದ ನೀತಿ ಸ್ಪಷ್ಟವಿದ್ದಾಗ ಗೊಂದಲ ಇರಲ್ಲ. ಜನಸಾಮಾನ್ಯರ ಪ್ರಾಮಾಣಿಕತೆ ಮೇಲೆ ನಂಬಿಕೆ ಇದೆ. ಸರ್ಕಾರಿ ವ್ಯವಸ್ಥೆಯಲ್ಲಿ ಜನರ ಹಸ್ತಕ್ಷೇಪ ಕಡಿಮೆ ಇದೆ. ತಂತ್ರಜ್ಞಾನ ಆಧರಿಸಿ ಕೆಲಸ ಮಾಡುವುದು ಟೆಂಡರ್ನಿಂದ ಸೇವೆವರೆಗೂ ತಂತ್ರಜ್ಞಾನ ಬಳಕೆಯಾಗುತ್ತಿದೆ.
* ಪ್ರಾಮಾಣಿಕತೆ ಕಸುಬುದಾರಿಕೆಗೆ ಗೌರವ ನೀಡಲಾಗುತ್ತಿದೆ. ಈ ಮುಂಚೆ ಅನಿವಾರ್ಯತೆ, ಒತ್ತಡದಿಂದ ನಿರ್ಧಾರ ತೆಗೆದುಕೊಳ್ಳಲಾಗುತ್ತಿತ್ತು. ಅವುಗಳನ್ನೇ ಸುಧಾರಣೆ ಎಂದು ಕರೆಯಲಾಗುತ್ತಿತ್ತು. ಈಗ ಚಿಂತನೆ ಮತ್ತು ಕಾರ್ಯವೈಖರಿ ಎರಡೂ ಬದಲಾಗಿದೆ. ಸುಧಾರಣೆ ನೀತಿ ಆಧಾರಿತವಾಗಿರಬೇಕು, ತುಂಡು ತುಂಡಾಗಿರಬಾರದು, ಒಂದು ಸುಧಾರಣೆ ಮತ್ತೊಂದು ಸುಧಾರಣೆಗೆ ದಾರಿಯಾಗಬೇಕು. ಸುಧಾರಣೆ ಎನ್ನುವುದು ನಿರಂತರ ಪ್ರಕ್ರಿಯೆಯಾಗಿಬೇಕು.
* ತೆರಿಗೆ ವ್ಯವಸ್ಥೆ ತೆರಿಗೆದಾರರನ್ನು ಸಿಲುಕಿಸುವುದಕ್ಕಿಂತ. ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕು
* ತೆರಿಗೆದಾರರಿಗೆ ಅಧಿಕಾರಿ ಯಾರೆಂಬುದು ತಿಳಿಯಬೇಕಿಲ್ಲ. ಇದುವರೆಗೂ ನಮ್ಮೂರಿನ ತೆರಿಗೆ ಕಚೇರಿಯಲ್ಲೇ ಕೆಲಸ ಆಗ್ತಿತ್ತು. ಇನ್ನು ಮೇಲೆ ಈ ಪದ್ಧತಿ ಇರುವುದಿಲ್ಲ. ನಿಮ್ಮ ತೆರಿಗೆ ಸಮಸ್ಯೆಯನ್ನು ಇನ್ನೆಲ್ಲೋ ಕುಳಿತ ಅಧಿಕಾರಿ ಬಗೆಹರಿಸಬಹುದು. ಬೆಂಗಳೂರು, ಚೆನ್ನೈ, ಕೊಚ್ಚಿ, ಮುಂಬೈ ಹೀಗೆ ಇನ್ನೆಲ್ಲೋ ಕುಳಿತ ಅಧಿಕಾರಿ ಅಸೆಸ್ಮೆಂಟ್ ಮಾಡಬಹುದು.
* ಯಾರ ಅಸೆಸ್ಮೆಂಟ್ ಯಾರು ಮಾಡಬೇಕೆಂಬುದನ್ನು ಕಂಪ್ಯೂಟರ್ ನಿರ್ಧರಿಸುತ್ತೆ. ಇದರಿಂದ, ತೆರಿಗೆ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಹೆಚ್ಚುತ್ತೆ. ತೆರಿಗೆ ವ್ಯವಸ್ಥೆಯಲ್ಲಿ ಇನ್ನು ಲಂಚದ ಮಾತೇ ಇರುವುದಿಲ್ಲ. ಆಯಕಟ್ಟಿನ ಜಾಗಗಳಿಗೆ ಬರಲು ಲಂಚ ನೀಡುವ ವ್ಯವಸ್ಥೆ ಇರುವುದಿಲ್ಲ.
* ‘ತೆರಿಗೆದಾರ ಚಾರ್ಟರ್’ನಲ್ಲಿ ಕ್ರಾಂತಿಕಾರಿ ಬದಲಾವಣೆ. ತೆರಿಗೆದಾರರ ಹಕ್ಕು, ಕರ್ತವ್ಯಗಳ ಸಮತೋಲನ. ತೆರಿಗೆದಾರರಿಗೆ ಉಚಿತ, ವಿನಮ್ರ, ತರ್ಕಬದ್ಧ ಸೇವೆ. ತೆರಿಗೆದಾರರ ಮಾತುಗಳ ಮೇಲೆ ವಿಶ್ವಾಸವಿಡಬೇಕಾಗುತ್ತದೆ. ಆಧಾರವಿಲ್ಲದೇ ತೆರಿಗೆದಾರರ ಮೇಲೆ ಸಂಶಯ ಇಲ್ಲ. ತೆರಿಗೆದಾರರಿಗೆ ಮೇಲ್ಮನವಿ ಸಲ್ಲಿಸುವ ಅಧಿಕಾರವಿದೆ.
* ತೆರಿಗೆ ಕಟ್ಟಿಸಿಕೊಳ್ಳುವುದು ಸರ್ಕಾರದ ಅಧಿಕಾರವಲ್ಲ. ತೆರಿಗೆ ಪಾವತಿಸುವುದು ತೆರಿಗೆದಾರರ ಕರ್ತವ್ಯ. ತೆರಿಗೆ ವ್ಯವಹಾರ ನಡೆಯುವುದು ಸೇವೆ ಮನೋಭಾವದಿಂದ, ತೆರಿಗೆದಾರರ ಪ್ರತಿ ಪೈಸೆ ಸದುಪಯೋಗಪಡಿಸಿಕೊಳ್ಳಬೇಕು.
* 2012-13ರಲ್ಲಿ ಒಟ್ಟು ರಿಟರ್ನ್ಗಳ ಪೈಕಿ ಶೇ. 0.94 ತನಿಖೆಯಾಗ್ತಿತ್ತು. ಈಗ ತನಿಖೆಯ ಪ್ರಮಾಣ 4 ಪಟ್ಟು ಕಡಿಮೆಯಾಗಿದೆ. ಇದು ತೆರಿಗೆ ಇಲಾಖೆಯಲ್ಲಿನ ಬದಲಾವಣೆಗೆ ಸಾಕ್ಷಿ
ಕೊರೋನಾ ಹೊಡೆತ; ಬಾಷ್ ಆದಾಯ ಶೇ.64ರಷ್ಟು ಕುಸಿತ!
ಯಾಕೆ ಈ ಹೊಸ ವ್ಯವಸ್ಥೆ?
2020-21ರ ಬಜೆಟ್‌ನಲ್ಲಿ ತೆರಿಗೆದಾರರ ಚಾರ್ಟರ್ ಜಾರಿಗೊಳಿಸುವುದಾಗಿ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. ಅದರ ಭಾಗವಾಗಿ ಆದಾಯ ತೆರಿಗೆ ಇಲಾಖೆಯಿಂದ ತೆರಿಗೆದಾರರಿಗೆ ನಿರ್ದಿಷ್ಟಕಾಲಮಿತಿಯೊಳಗೆ ಕಡ್ಡಾಯವಾಗಿ ಸೇವೆಗಳು ಸಿಗುವಂತೆ ಮಾಡುವ ‘ಪಾರದರ್ಶಕ ತೆರಿಗೆ: ಪ್ರಾಮಾಣಿಕರಿಗೆ ಗೌರವ’ ಎಂಬ ತತ್ವದಡಿ ಹೊಸ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.