ಹೊಸ ಟ್ಯಾಕ್ಸ್ ಸ್ಲ್ಯಾಬ್ ದರ: ಈಗ CA ಸಹಾಯವಿಲ್ಲದೇ ITR ಮಾಡಬಹುದು!

By Suvarna News  |  First Published Feb 10, 2020, 3:19 PM IST

ನೂತನ ಆದಾಯ ತೆರಿಗೆ ಸ್ಲ್ಯಾಬ್ ಗಳನ್ನ ಪರಿಚಯಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್|ಈ ನಿಯಮ ಆದಾಯ ತೆರಿಗೆ ಕಟ್ಟೋರಿಗೆ ವರದಾನ|ನೂತನ ನಿಯಮದಿಂದ ತೆರಿಗೆ ಲೆಕ್ಕಹಾಕುವುದು ಮತ್ತು ITR ಫಾರ್ಮ್‌ ಭರ್ತಿ ಮಾಡುವುದು ಸುಲಭ|
 


ನವದೆಹಲಿ(ಫೆ.10): ಮುಂದಿನ ವರ್ಷ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಅಥವಾ ಇನ್ನಾವುದೇ ವೃತ್ತಿಪರರ ಸಹಾಯದ ಅಗತ್ಯವಿರುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಹೌದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ನೂತನ ಆದಾಯ ತೆರಿಗೆ ಸ್ಲ್ಯಾಬ್ ಗಳನ್ನ ಪರಿಚಯಿಸಿದ್ದಾರೆ.

ಈ ಹೊಸ ಆದಾಯ ತೆರಿಗೆ ನಿಯಮವನ್ನು ಅನುಸರಿಸಿದರೆ ಹಲವಾರು ತೆರಿಗೆದಾರರ ತೆರಿಗೆ ಕಟ್ಟೋದು ತಪ್ಪಲಿದೆ. ಈ ನಿಯಮ ಆದಾಯ ತೆರಿಗೆ ಕಟ್ಟೋರಿಗೆ ವರದಾನವಾಗಲಿದೆ. ನೂತನ ಆದಾಯ ತೆರಿಗೆ ನಿಯಮವು ಕಡಿಮೆ ದರ ಇರವುದರಿಂದ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸುಲಭವಾಗಲಿದೆ. 

Tap to resize

Latest Videos

undefined

ಭವಿಷ್ಯ ನಿಧಿ, ಪಿಂಚಣಿ ಮೇಲೂ ತೆರಿಗೆ: ಟ್ಯಾಕ್ಸ್ ಸಂಗ್ರಹಕ್ಕೆ ಕೇಂದ್ರದ ಹೊಸ ಮಾರ್ಗ!

ವಿವಿಧ ವಿನಾಯಿತಿಗಳು ಮತ್ತು ಕಡಿತಗಳೊಂದಿಗೆ ಪರಿಹರಿಸಲ್ಪಟ್ಟ ಆದಾಯ ತೆರಿಗೆ ಕಾಯ್ದೆಯು ಹೆಚ್ಚಿನ ತೆರಿಗೆದಾರರು ವೃತ್ತಿಪರ ಸಹಾಯವಿಲ್ಲದೆ ITR ಅನ್ನು ಸಲ್ಲಿಸುವುದು ಕಠಿಣವಾಗಿಸುತ್ತದೆ.

ಆದಾಯ ತೆರಿಗೆ ಕಾನೂನುಗಳ ಅನುಸರಣೆಯನ್ನು ಖಾತರಿಪಡಿಸುವುದು ಪ್ರಸ್ತುತ ತೆರಿಗೆದಾರರಿಗೆ ಭಾರವಾದ ಪ್ರಕ್ರಿಯೆಯಾಗಿದೆ.  ಆದರೆ ಈ ನೂತನ ಆದಾಯ ತೆರಿಗೆ ಆಡಳಿತವು ತೆರಿಗೆ ರಚನೆಯನ್ನು ಸರಳಗೊಳಿಸುತ್ತದೆ. ಜೊತೆಗೆ ತೆರಿಗೆ ಪ್ರಯೋಜನಗಳನ್ನು ಪಡೆಯಲು ಪಿಪಿಎಫ್ ಮತ್ತು ವಿಮಾ ಪಾಲಿಸಿಗಳಂತಹ ಯಾವುದೇ ಹೂಡಿಕೆ ಅಥವಾ ಖರ್ಚುಗಳನ್ನು ಮಾಡದೆ ತೆರಿಗೆಗಳನ್ನು ಉಳಿಸಲು ನಿಮಗೆ ಅನುವು ಮಾಡಿಕೊಡುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದರು. 

ಉದ್ಯಮಿಗಳಿಗೆ ರಿಲ್ಯಾಕ್ಸ್, ತೆರಿಗೆದಾರರಿಗೆ ರಿಲೀಫ್; ಮೋದಿ ನಿರ್ಮಲಕ್ಕನ ಲೆಕ್ಕಾಚಾರವಿದು!

ಈ ನೂತನ ನಿಯಮದಿಂದ ತೆರಿಗೆ ಲೆಕ್ಕಹಾಕುವುದು ಮತ್ತು ITR ಫಾರ್ಮ್‌ಗಳನ್ನು ಭರ್ತಿ ಮಾಡುವುದು ಕೂಡಾ ಅತೀ ಸುಲಭವಾಗಲಿದೆ.  ಹೊಸ ಆದಾಯ ತೆರಿಗೆ ಸ್ಲ್ಯಾಬ್ ದರವನ್ನು ಆರಿಸಿಕೊಳ್ಳುವವರು ಮೊದಲೇ ಭರ್ತಿ ಮಾಡಿದ ಐಟಿಆರ್ ಪಡೆದು, ತಜ್ಞರ ಸಹಾಯವಿಲ್ಲದೆ ರಿಟರ್ನ್ಸ್ ಸಲ್ಲಿಸಬಹುದು ಎಂದು ಸೀತಾರಾಮನ್ ಹೇಳಿದ್ದಾರೆ. ಹೀಗಾಗಿ ಈ ನೂತನ ನಿಯಮ ಆದಾಯ ತೆರಿಗೆ ಕಟ್ಟುವವರರಿಗೆ ವರದಾನವಾಗಲಿದೆ.

2019-20ನೇ ಸಾಲಿನ  ಏಪ್ರಿಲ್‌ನಿಂದ  ITR ಸಲ್ಲಿಸಲು ಎಲ್ಲಾ ತೆರಿಗೆ ಪಾವತಿದಾರರು ಎರಡು ಆದಾಯ ತೆರಿಗೆ ನಿಯಮಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಪಡೆಯುತ್ತಾರೆ ಎಂದು ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಸ್ಪಷ್ಟಪಡಿಸಿದ್ದಾರೆ. 

ಹೊಸ ಆದಾಯ ತೆರಿಗೆ ಸ್ಲ್ಯಾಬ್ ದರಗಳನ್ನು ಆರಿಸಿಕೊಳ್ಳುವವರಿಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಐಟಿಆರ್ ಫಾರ್ಮ್ ಸಿಗಲಿದೆ. ಅಲ್ಲಿ ಹೆಚ್ಚಿನ ವಿವರಗಳನ್ನು ಮೊದಲೇ ಭರ್ತಿ ಮಾಡಿ ಬಳಿಕ ನೀವು ಸುಲಭವಾಗಿ ರಿಟರ್ನ್ ಸಲ್ಲಿಸಬಹುದು ಮತ್ತು ಬಾಕಿ ಇಡುವ ತೆರಿಗೆ ಪಾವತಿಸಬಹುದಾಗಿದೆ. ಒಂದು ವೇಳೆ ನೀವು ಹಳೆಯ ವ್ಯವಸ್ಥೆಯನ್ನು ಆರಿಸಿದರೆ, ಫಾರ್ಮ್ ಮಾತ್ರ ತೆರೆಯುತ್ತದೆ. ಹೊಸ ತೆರಿಗೆ ರಚನೆಗಳ ಅಡಿಯಲ್ಲಿ ಫಾರ್ಮ್ ಅನ್ನು ಮೊದಲೇ ಭರ್ತಿ ಮಾಡಬೇಕು.

ಫೆಬ್ರವರಿ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!