ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020 ಮಂಡನೆ ಆರಂಭ| ಬಜೆಟ್ ಭಾಷಣ ಓದುತ್ತಿರುವ ನಿರ್ಮಲಾ ಸೀತಾರಾಮನ್| ರೈಲ್ವೇ ಇಲಾಖೆಗೆ ಬಂಪರ್ ಕೊಡುಗೆ ಘೋಷಿಸಿದ ನಿರ್ಮಲಾ| ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಶುರು| ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಕಾಮಗಾರಿಗೆ ಚಾಲನೆ| 2023ರೊಳಗೆ ದಿಲ್ಲಿ-ಮುಂಬೈ ಎಕ್ಸ್ ಪ್ರೆಸ್ ಹೈವೇ ಕಾಮಗಾರಿ ಪೂರ್ಣ|
ನವದೆಹಲಿ(ಫೆ.01): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಸಾರಿಗೆ ಕ್ಷೇತ್ರ ಅದರಲ್ಲೂ ರೈಲ್ವೇ ಇಲಾಖೆಯ ಅಭಿವೃದ್ಧಿಗೆ ನಿರ್ಮಲಾ ಭರಪೂರ ಯೋಜನೆಗಳನ್ನು ಘೋಷಿಸಿದ್ದಾರೆ.
ಅನ್ನದಾತನೊಂದಿಗೆ ಆರಂಭವಾದ ನಿರ್ಮಲಾ ಬಜೆಟ್: ರೈತನಿಗಾಗಿ 16 ಸೂತ್ರ!
ಪ್ರಮುಖವಾಗಿ ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಕಾಮಗಾರಿಗೆ ನಿರ್ಮಲಾ ಚಾಲನೆ ನೀಡಿದ್ದು ,ಮೂಲಸೌಕರ್ಯ ಉತ್ತೇಜನಕ್ಕೆ ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.
FM Nirmala Sitharaman - : The Delhi-Mumbai Expressway will be completed by 2023 pic.twitter.com/i9pWLLwIua
— ANI (@ANI)ಅದರಂತೆ 2023ರೊಳಗೆ ದಿಲ್ಲಿ-ಮುಂಬೈ ಎಕ್ಸ್ ಪ್ರೆಸ್ ಹೈವೇ ಕಾಮಗಾರಿ ಪೂರ್ಣವಾಗಲಿದ್ದು, ತೇಜಸ್ ಮಾದರಿ ರೈಲುಗಳ ಹೆಚ್ಚಳಕ್ಕೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಪ್ರವಾಸಿ ತಾಣಗಳನ್ನು ತಲುಪುವ ತೇಜಸ್ ರೈಲುಗಳ ಸಂಖ್ಯೆ ವೃದ್ಧಿಸುವುದು ಸರ್ಕಾರದ ಉದ್ದೇಶವಾಗಿದೆ.
ಇನ್ಮುಂದೆ ಆನ್‌ಲೈನ್ ಡಿಗ್ರಿ ವ್ಯವಸ್ಥೆ: ವಿದ್ಯಾರ್ಥಿ ಸಮುದಾಯಕ್ಕೆ ಬಂಪರ್!
FM Nirmala Sitharaman: Setting up large solar panel capacity alongside the railway tracks on land owned by railways, a proposal is under consideration. More Tejas type trains will connect iconic destinations. pic.twitter.com/haMzcQYhmP
— ANI (@ANI)ಇದಕ್ಕಾಗಿ 27 ಸಾವಿರ ಕಿ.ಮೀ ರೈಲು ಟ್ರ್ಯಾಕ್ ವಿದ್ಯುದೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಒಟ್ಟಿನಲ್ಲಿ ರೈಲ್ವೇ ಮೂಲಸೌಕರ್ಯ ಅಭಿವೃದ್ಧಿಗಾಗಿ 1 ಲಕ್ಷ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.
Finance Minister Nirmala Sitharaman: High-speed train between Mumbai and Ahmedabad will be actively pursued. pic.twitter.com/ub4r4Ho2nw
— ANI (@ANI)ಬೆಂಗಳೂರು ಸಬ್ ಅರ್ಬನ್ ರೈಲ ಯೋಜನೆಗೆ ಚಾಲನೆ ನೀಡಲಾಗಿದ್ದು, ಬೆಂಗಳೂರು ಸಬ್ ಅರ್ಬನ್ ರೈಲಿಗೆ 18600 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಮೆಟ್ರೋ ಮಾದರಿಯಲ್ಲಿಯೇ ಸಬ್ ಅರ್ಬನ್ ರೈಲು ಸ್ಕೀಮ್ ಜಾರಿಗೆ ತರಲಾಗುವುದು ಎಂದು ನಿರ್ಮಲಾ ಸ್ಪಷ್ಟಪಡಿಸಿದರು ಅಲ್ಲದೇ ಸಬ್ ಅರ್ಬನ್ ರೈಲಿಗಾಗಿ ಕೇಂದ್ರದಿಂದ ಶೇ.60ರಷ್ಟು ಹಣ ನೀಡುವುದಾಗಿ ಘೋಷಿಸಿದರು.
ಸಾರಿಗೆ ಕ್ಷೇತ್ರಕ್ಕೆ 1.7 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟುರುವುದು ಈ ಬಜೆಟ್‌ನ ವಿಶೇಷತೆ.
ಫೆಬ್ರವರಿ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ