*ಹಕ್ಕುಸ್ವಾಮ್ಯ ದುರುಪಯೋಗ: 2 ಕಂಪನಿ ವಿರುದ್ಧ ಎಫ್‌ಐಆರ್
*ಬ್ರಿಸ್ಟೋ ಬೇವರೇಜಸ್, ರಾಯಲ್ ಆಕ್ವಾ ಇಂಡಸ್ಟ್ರೀಸ್ ವಿರುದ್ಧ ದೂರು
*2 ಕಂಪನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು
ಬೆಂಗಳೂರು (ಜ. 14): ದಕ್ಷಿಣ ಕನ್ನಡ (Mangalore) ಮೂಲದ ತಂಪುಪಾನಿಯ ತಯಾರಿಕಾ ಕಂಪನಿಯೊಂದರ ಹಕ್ಕು ಸ್ವಾಮ್ಯ (Patent) ದುರುಪಯೋಗ ಪಡಿಸಿಕೊಂಡ ಆರೋಪದಡಿ ನಗರದ ‘ಬ್ರಿಸ್ಟೋ ಬೇವರೇಜಸ್’ (Bistro Beverages) ಹಾಗೂ ಆಂಧ್ರಪ್ರದೇಶ ಮೂಲದ ‘ರಾಯಲ್ ಆಕ್ವಾ ಇಂಡಸ್ಟ್ರೀಸ್’ (ROYAL AQUA) ಕಂಪನಿಗಳ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ದಕ್ಷಿಣ ಕನ್ನಡ ಮೂಲದ ‘ಮೆಘಾ ಫ್ರೂಟ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್’ನ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ಈ ಎರಡೂ ಕಂಪನಿಗಳ ಮಾಲಿಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಮೆಘಾ ಫ್ರೂಟ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯು (MEGHA FRUIT PROCESSING PVT LTD) ಕಾನೂನು ಬದ್ಧವಾಗಿ ನೋಂದಾಯಿತ ಹಕ್ಕುಸ್ವಾಮ್ಯ ಪಡೆದು ವಿವಿಧ ಪಾನೀಯ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಅದರಲ್ಲಿ ‘ಬಿಂದು ಆ್ಯಂಡ್ ಬಿಂದು, ಫಿಜಾ, ಜೀರಾ ಮಸಾಲ’ ಈ ಉತ್ಪನ್ನಗಳನ್ನು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: ಜೀರೋ ಟು ಹೀರೋ: ‘ಬಿಂದು’ವಿನಿಂದ ಆರಂಭಿಸಿ ಬಂಧುವಾದ ಸತ್ಯಶಂಕರ್!
ಆದರೆ, ಈ ಎರಡೂ ಕಂಪನಿಗಳು ತಮ್ಮ ಕಂಪನಿಯ ತಂಪು ಪಾನೀಯ ಬಾಟಲಿಗಳ ಮೇಲಿನ ಹಕ್ಕುಸ್ವಾಮ್ಯ ಬಳಸಿಕೊಂಡು ಅಕ್ರಮವಾಗಿ ಅವರ ಕಂಪನಿಯ ತಂಪುಪಾನಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಕಂಪನಿಗೆ ನಷ್ಟವುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಈ ಎರಡೂ ಕಂಪನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಎಂದು ದೂರಿನಲ್ಲಿ ಕೋರಲಾಗಿದೆ. ಈ ದೂರು ಆಧರಿಸಿ ಸಂಪಿಗೆಹಳ್ಳಿ ಠಾಣೆ ಪೊಲೀಸರು ಹಕ್ಕು ಸ್ವಾಮ್ಯ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ವಿಶೇಷ ತಳಿ ಆಲೂಗಡ್ಡೆ ಮೇಲಿನ ಪೆಪ್ಸಿಕೋ ಹಕ್ಕುಸ್ವಾಮ್ಯ ರದ್ದು
ನಿರ್ದಿಷ್ಟ ಆಲೂಗಡ್ಡೆ (Potato) ತಳಿಗೆ ಪೆಪ್ಸಿಕೋ ಇಂಡಿಯಾ (PepsiCo India) ಪಡೆದಿದ್ದ ಹಕ್ಕುಸ್ವಾಮ್ಯವನ್ನು (Patent) ಸಸ್ಯ ವೈವಿಧ್ಯ ಹಾಗೂ ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ (PPV ಹಾಗೂ PPR) ರದ್ದುಪಡಿಸಿದೆ. ಗುಜರಾತಿನ(Gujarat) 9 ರೈತರು ಪೇಟೆಂಟ್ ಹಕ್ಕುಗಳನ್ನು ಉಲ್ಲಂಘಿಸಿ ನೋಂದಾಯಿತ ನಿರ್ದಿಷ್ಟ ತಳಿಯ ಆಲೂಗಡ್ಡೆ ಬೆಳೆದಿದ್ದಾರೆ ಎಂದು ಎರಡು ವರ್ಷಗಳ ಹಿಂದೆ ಪೆಪ್ಸಿಕೋ ಇಂಡಿಯಾ ಆರೋಪಿಸಿತ್ತು. ಈ ತೀರ್ಪು ಗುಜರಾತ್ ನಲ್ಲಿ ಪೆಪ್ಸಿಕೋ ನೀತಿಯ ವಿರುದ್ಧ ಹೋರಾಟ ನಡೆಸಿದ ರೈತರಿಗೆ ಸಿಕ್ಕ ಗೆಲುವು ಎಂದೇ ಹೇಳಬಹುದು. 'ಈ ತೀರ್ಪು ಭಾರತದ ರೈತರ ಪಾಲಿಗೆ ಇತಿಹಾಸಿಕ ಗೆಲುವಾಗಿದೆ.
ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳಿಗೆ ಪೇಟೆಂಟ್ ಶುಲ್ಕದಲ್ಲಿ ಶೇ. 80ರಷ್ಟು ವಿನಾಯಿತಿ!
ಇದು ಇತರ ಯಾವುದೇ ಬೀಜ ಅಥವಾ ಆಹಾರ ನಿಗಮ ಕಾನೂಬದ್ಧವಾಗಿ ಅನುಮತಿ ನೀಡಿರೋ ಭಾರತದ ರೈತರ ಬಿತ್ತನೆ ಕಾಳು ಸ್ವಾತಂತ್ರ್ಯದ ಮೇಲೆ ಅತಿಕ್ರಮಣ ಮಾಡೋದನ್ನುತಡೆಯುವಂತಾಗಬೇಕು' ಎಂದು ಸುಸ್ಥಿರ ಹಾಗೂ ಸಮಗ್ರ ಕೃಷಿ ಮೈತ್ರಿಯ ವಕ್ತಾರೆ ಕವಿತಾ ಕುರುಗಂಟಿ ಹೇಳಿದ್ದಾರೆ. ಇವರು ಪೆಪ್ಸಿಕೋ ನಿರ್ದಿಷ್ಟ ತಳಿಯ ಆಲೂಗಡ್ಡೆಗೆ ಪಡೆದಿರೋ ಹಕ್ಕುಸ್ವಾಮ್ಯವನ್ನು ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಬೀಜ ತಳಿಯ ಮಾಲೀಕತ್ವದ ಬಗ್ಗೆ ಪೆಪ್ಸಿಕೋ ಹಾಜರುಪಡಿಸಿರೋ ದಾಖಲೆಗಳನ್ನು ಪಿಪಿವಿ ಹಾಗೂ ಎಫ್ ಆರ್ ಎ ಪ್ರಶ್ನಿಸಿದೆ. 2019ರ ಏಪ್ರಿಲ್ ನಲ್ಲಿ ಲೇಸ್ ಆಲೂಗಡ್ಡೆ ಚಿಪ್ಸ್ ನಲ್ಲಿ ಬಳಸಿದ FL-2027 ಪ್ರಭೇದದ ಆಲೂಗಡ್ಡೆ ಬೆಳಕಿಗೆ ಬಂದಿರೋ ಜೊತೆ ಗುಜರಾತ್ ಉತ್ತರ ಭಾಗದಲ್ಲಿ ಆಲೂಗಡ್ಡೆ ಬೆಳೆಯೋ ಪ್ರದೇಶದಲ್ಲಿ ಡೇವಿಡ್ ವರ್ಸಸ್ ಗೊಲಿಯಥ್ ಹೋರಾಟಕ್ಕೆ ಕೇಂದ್ರಬಿಂದುವಾಯಿತು. ಭಾರತದಲ್ಲಿ 2009ರಲ್ಲಿ ಪರಿಚಯಿಸಲ್ಪಟ್ಟ ಆಲೂಗಡ್ಡೆಯನ್ನು ಸುಮಾರು 12 ಸಾವಿರ ರೈತರು ಬೆಳೆಯುತ್ತಿದ್ದರು. ಅವರೊಂದಿಗೆ ಕಂಪನಿ ಬೀಜಗಳ ಮಾರಾಟ ಹಾಗೂ ಆಲೂಗಡ್ಡೆ ಖರೀದಿಗೆ ಸಂಬಂಧಿಸಿ ಒಪ್ಪಂದ ಮಾಡಿಕೊಂಡಿತ್ತು.