Koppal: ಕಚ್ಚಾ ಕೂದಲು ರಫ್ತಿಗೆ ನಿರ್ಬಂಧ: ಜಗತ್ತಿಗೆ ಭಾರತದ್ದೇ ಸಿಂಹಪಾಲು..!

By Kannadaprabha News  |  First Published Jan 26, 2022, 12:08 PM IST

*  ದೇಶದ ಮಾನವ ಕೂದಲು ಉದ್ಯಮಕ್ಕೆ ಪುನಃರುಜ್ಜೀವನ
*  50ರಿಂದ 100 ಕೋಟಿ ವಹಿವಾಟು
*  ಅಕ್ರಮಕ್ಕೆ ಕಡಿವಾಣ


ಸೋಮರಡ್ಡಿ ಅಳವಂಡಿ

ಕೊಪ್ಪಳ(ಜ.26):  ಮಾನವರ ಕಚ್ಚಾ ಕೂದಲು ರಫ್ತಿನಿಂದ ಭಾರತದ(India) ಅರ್ಥ ವ್ಯವಸ್ಥೆಯ ಮೇಲೆ ಪರೋಕ್ಷ ಪರಿಣಾಮ ಬೀರುತ್ತಿರುವುದನ್ನು ಮನಗಂಡ ಕೇಂದ್ರ ಸರ್ಕಾರ(Central Government) ಕಚ್ಚಾ ಕೂದಲು ರಫ್ತಿಗೆ ನಿರ್ಬಂಧ ವಿಧಿಸಿದೆ. ಈ ಮೂಲಕ ಕಚ್ಚಾ ಕೂದಲು ಆಮದು ಮಾಡಿಕೊಂಡು ವಿಶ್ವ ಕೂದಲು ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸುತ್ತಿದ್ದ ಚೀನಾಕ್ಕೆ(China) ಭಾರಿ ಪೆಟ್ಟು ನೀಡಿದೆ.

Latest Videos

undefined

ಜ. 25ರಂದು ಮಾನವ ಕೂದಲು ರಫ್ತು ನೀತಿ ತಿದ್ದುಪಡಿ ಮಾಡಿ, ಕಚ್ಚಾ ಕೂದಲು ರಫ್ತಿಗೆ(Export of Raw Hair) ನಿರ್ಬಂಧ ವಿಧಿಸಿ ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯ ಹಾಗೂ ವಿದೇಶಿ ವ್ಯಾಪಾರ ಮಹಾನಿರ್ದೇಶಕರ ಇಲಾಖೆ ಆದೇಶ ಹೊರಡಿಸಿದೆ. ಈ ನೂತನ ಆದೇಶದ ಪ್ರಕಾರ ಇನ್ಮುಂದೆ ಭಾರತದಿಂದ ಮಾನವನ ಕಚ್ಚಾ ಕೂದಲು ರಫ್ತು ಮಾಡುವುದನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಕೇವಲ ಸಂಸ್ಕರಿಸಿದ ಕೂದಲು ಮಾತ್ರ ರಫ್ತು ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಕೂದಲು ರಫ್ತುದಾರರ ಹಲವು ವರ್ಷಗಳ ಬೇಡಿಕೆಯನ್ನು ಈಗ ಈಡೇರಿಸಿದಂತೆ. ಇದರಿಂದ ಚೀನಾದ ಕಳ್ಳಾಟಕ್ಕೆ ಬ್ರೇಕ್‌ ಬಿದ್ದಂತೆ ಆಗಲಿದೆ.

ಬೆಳ್ಳಂಬೆಳಗ್ಗೆ ನಡೆದ ಕೊಪ್ಪಳದ ಗವಿಸಿದ್ದೇಶ್ವರ ರಥೋತ್ಸವ: ರಾಜ್ಯಕ್ಕೆ ಮಾದರಿಯಾದ ‌ಗವಿಮಠ ಶ್ರೀ

ಪಶ್ಚಿಮಬಂಗಾಳ(West Bengal), ಆಂಧ್ರಪ್ರದೇಶ(Andhra Pradesh), ತಮಿಳನಾಡು(Tamil Nadu) ಹಾಗೂ ಕರ್ನಾಟಕದಲ್ಲಿ(Karnataka) (ಕೊಪ್ಪಳ ಬಳಿಯ ಭಾಗ್ಯನಗರ) ಕೂದಲು ಉದ್ಯಮಗಳು(Hair Industries) ಇವೆ. ಪ್ರತಿ ವರ್ಷ 5ರಿಂದ 6 ಸಾವಿರ ಕೋಟಿ ವಿದೇಶಿ ವಿನಿಮಯ ನಡೆಯುವಷ್ಟು ವಹಿವಾಟನ್ನು ಇದು ಹೊಂದಿವೆ. ದೇಶಾದ್ಯಂತ ಹತ್ತಾರು ಸಾವಿರ ಕಾರ್ಮಿಕರು ಇದರ ಮೇಲೆಯೇ ನೆರವಾಗಿ ಜೀವನ ನಡೆಸುತ್ತಿದ್ದರೆ, ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಇದು ಆಸರೆಯಾಗಿದೆ. ಕಚ್ಚಾ ಕೂದಲು ರಫ್ತಿನಿಂದಾಗಿ ದೇಶಿಯ ಕೂದಲು ಉದ್ಯಮ ನಲುಗುವ ಜತೆಗೆ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಉದ್ಯೋಗಗಳು(Jobs) ನಷ್ಟವಾಗಿದ್ದವು. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಭಾರತದ ಕೂದಲು ಉದ್ಯಮಿಗಳು ಸಂತಸಗೊಂಡಿದ್ದು, ಈ ಉದ್ಯಮಕ್ಕೆ ಮರು ಜೀವ ನೀಡಿದಂತಾಗಿದೆ.

ಭಾರತದ್ದೇ ಸಿಂಹಪಾಲು:

ವಿಶ್ವದ(World) ಶೇ. 95ರಷ್ಟು ಮಾನವ ಕೂದಲು ಬೇಡಿಕೆಯನ್ನು ಭಾರತವೇ ಪೂರೈಕೆ ಮಾಡುತ್ತಿದೆ. ಆದರೆ, ಇದನ್ನು ಆಮದು ಮಾಡಿಕೊಳ್ಳುತ್ತಿದ್ದ ಚೀನಾ ಸಿದ್ಧಪಡಿಸಿದ ಕೂದಲನ್ನು ವಿಶ್ವಕ್ಕೆ ಪೂರೈಕೆ ಮಾಡುತ್ತಿತ್ತು. ಈಗ ಇದಕ್ಕೆ ಕಡಿವಾಣ ಬೀಳಲಿದ್ದು, ಇಡೀ ವಿಶ್ವ ಮಾನವ ಕೂದಲಿಗಾಗಿ ಭಾರತದ ಮಾರುಕಟ್ಟೆಯನ್ನೇ(Market) ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಇದರಿಂದ ವಿದೇಶಿ ವಿನಿಮಯಕ್ಕೆ(Foreign Exchange) ಬಹುದೊಡ್ಡ ಕೊಡುಗೆ ದೊರೆಯಲಿದೆ.

ಅಕ್ರಮಕ್ಕೆ ಕಡಿವಾಣ:

ಮೇಲ್ನೋಟಕ್ಕೆ ಇದು ಕೂದಲು ಉದ್ಯಮವಾಗಿದ್ದರೂ ಎಲ್ಲ ಅಕ್ರಮಗಳು ಕಚ್ಚಾ ಕೂದಲು ರಫ್ತಿನ ಮೂಲಕವೇ ನಡೆಯುತ್ತಿತ್ತು. ಅಂತಾರಾಷ್ಟ್ರೀಯ ಹವಾಲ ದಂಧೆಗೂ ಇದು ದೊಡ್ಡ ದಾರಿ ಮಾಡಿಕೊಡುತ್ತಿದ್ದು ಕಳೆದೆರಡು ವರ್ಷಗಳಿಂದ ನಡೆದ ನಿರಂತರ ಪರಿಶೀಲನೆಯಲ್ಲಿ ಇದೆಲ್ಲವು ಬೆಳಕಿಗೆ ಬಂದಿದೆ. ಕೇಜಿಗೆ .6000 ಇದ್ದ ದರವನ್ನು ಕೇವಲ 100ಕ್ಕೆ ನಿಗದಿ ಮಾಡಿ ರಫ್ತು ಮಾಡಲಾಗುತ್ತಿತ್ತು. ಈ ಮೂಲಕ ಕೇಂದ್ರ ಸರ್ಕಾರಕ್ಕೆ ಬರಬೇಕಾಗಿದ್ದ ಆದಾಯಕ್ಕೂ ಧೋಖಾ ಮಾಡಲಾಗುತ್ತಿತ್ತು. ಇದೆಲ್ಲವನ್ನು ಪರಿಗಣಿಸಿಯೇ ಕೇಂದ್ರ ಸರ್ಕಾರ ಈಗ ಕಚ್ಚಾ ಕೂದಲು ರಫ್ತು ಮಾಡುವುದನ್ನು ಸಂಪೂರ್ಣ ನಿರ್ಬಂಧಿಸಿ ಆದೇಶ ಮಾಡಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಬಾಂಗ್ಲಾದೇಶ(Bangladesh), ಬರ್ಮಾ(Burma) ಮೂಲಕ ಚೀನಾ ನಡೆಸುತ್ತಿದ್ದ ಈ ಕೂದಲು ವಹಿವಾಟಿಗೆ ಬ್ರೇಕ್‌ ಹಾಕುವುದಕ್ಕಾಗಿಯೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

50ರಿಂದ 100 ಕೋಟಿ ವಹಿವಾಟು

ಕೊಪ್ಪಳದ(Koppal) ಭಾಗ್ಯನಗರದಲ್ಲಿ(Bhagya Nagar) ವರ್ಷಕ್ಕೆ ಕೂದಲು ಉದ್ಯಮದ ವಹಿವಾಟು 50ರಿಂದ 100 ಕೋಟಿ ನಡೆಯುತ್ತಿದೆ. ಒಟ್ಟು 20 ಸಾವಿರ ಜನರು ಈ ಉದ್ಯಮ ಮೇಲೆ ಅವಲಂಬಿತರಾಗಿದ್ದಾರೆ. ಪ್ರತಿ ಕೆಜಿ ಕಚ್ಚಾ ಕೂದಲು 6000ರಿಂದ  8000 ವರೆಗೆ ಮಾರಾಟವಾಗುತ್ತದೆ. ಈ ಮೊದಲು ಭಾಗ್ಯನಗರ ವ್ಯಾಪ್ತಿಯಲ್ಲಿ 300 ಸಂಸ್ಕರಣಾ ಘಟಕಗಳಿದ್ದವು. ಇದೀಗ 10ರಿಂದ 12ಕ್ಕೆ ಆ ಸಂಖ್ಯೆ ಇಳಿದಿದೆ.

Budget 2022 Expectations: ಈ ಬಾರಿ ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳವಾಗುತ್ತಾ? ಸಮೀಕ್ಷೆ ಏನ್ ಹೇಳುತ್ತೆ?

ಇದೀಗ ಕಚ್ಚಾ ಕೂಡಲನ್ನು ರಪ್ತು ಮಾಡುವುದನ್ನು ನಿಷೇಧಿಸಿರುವುದರಿಂದ ಇವೆಲ್ಲವೂ ಸ್ಥಳೀಯವಾಗಿ ಹಾಗೂ ರಾಜ್ಯ, ದೇಶದಲ್ಲಿರುವ ಸಂಸ್ಕರಣಾ ಘಟಕದಲ್ಲಿ ಸಂಸ್ಕರಣೆ ಹೊಂದಿ ಬಳಿಕ ಅದನ್ನು ಗೊಂಬೆ, ವಿಗ್‌, ಆಟಿಕೆ ಸೇರಿದಂತೆ ಮತ್ತಿತರ ಸಾಮಗ್ರಿ ತಯಾರಿಸಲು ಬಳಸುತ್ತಾರೆ. ಇದರಿಂದ ಸಂಸ್ಕರಣಾ ಘಟಕಗಳು ಪುನಶ್ಚೇತನಗೊಳ್ಳಲಿವೆ ಹಾಗೂ ಹೊಸ ಹೊಸ ಘಟಕ ಸ್ಥಾಪನೆಗೆ ಅನುಕೂಲವಾಗಲಿದೆ. ಸ್ಥಳೀಯವಾಗಿಯೇ ಕೂದಲು ಸಿಗುವುದರಿಂದ ವೆಚ್ಚವೂ ತಗ್ಗಲಿದೆ. ದೇಶಿಯ ಮಾಲಿಗೆ ಬೇಡಿಕೆ ಬರಲಿದೆ.

ಬಹು ವರ್ಷಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಇದರಿಂದ ದೇಶಿಯ ಕೂದಲು ಉದ್ಯಮಗಳು ಪುನರುಜ್ಜೀವನಗೊಳ್ಳಲಿವೆ. ಕಾರ್ಮಿಕರಿಗೆ ಕೆಲಸ ದೊರೆಯುತ್ತದೆ. ವಿಶ್ವದ ಶೇ. 95 ಮಾನವ ಕೂದಲು ಪೂರೈಕೆಯಾಗುವುದೇ ಭಾರತದಿಂದ. ಹೀಗಾಗಿ, ಈ ಆದೇಶ ಭಾರಿ ಮಹತ್ವದ್ದಾಗಿದೆ ಅಂತ ಕೂದಲು ರಫ್ತುದಾರ ಶ್ರೀನಿವಾಸ ಗುಪ್ತಾ ತಿಳಿಸಿದ್ದಾರೆ. 
 

click me!