ಒಂದು ವಸ್ತುವನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಕಳಿಸಬೇಕೆಂದ್ರೆ ನಾವು ಕೊರಿಯರ್ ಮಾಡ್ತೆವೆ. ಈ ಕೊರಿಯರ್ ಸೇವೆಗೆ ಸಾಕಷ್ಟು ಬೇಡಿಕೆಯಿದೆ. ಹೂಡಿಕೆ ಸ್ವಲ್ಪ ಹೆಚ್ಚಿದ್ರೂ ಲಾಭವೇನು ಕಡಿಮೆಯಿಲ್ಲ.
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್ ಟ್ರೆಂಡ್ ಹೆಚ್ಚಾಗಿದೆ. ಜನರು ವಸ್ತುಗಳನ್ನು ಅಂಗಡಿಗಿಂತ ಆನ್‌ಲೈನ್ ನಲ್ಲಿ ಖರೀದಿಸಲು ಇಷ್ಟಪಡ್ತಿದ್ದಾರೆ. ಅಮೆಜಾನ್, ಫ್ಲಿಪ್ಕಾರ್ಟ್ ನಂತಹ ಶಾಪಿಂಗ್ ಸೈಟ್‌ಗಳಿಂದ ವಸ್ತುಗಳನ್ನು ಆರ್ಡರ್ ಮಾಡುತ್ತಾರೆ. ಕೊರಿಯರ್ ಕಂಪನಿಗಳು ಈ ಸರಕುಗಳನ್ನು ನಮಗೆ ತಲುಪಿಸುವ ಕೆಲಸ ಮಾಡುತ್ತವೆ. ಸರಕುಗಳ ವಿತರಣೆಗೆ ಕೊರಿಯರ್ ಸೇವೆ ಬಹಳ ಮುಖ್ಯ. ಸ್ವಂತ ಉದ್ಯೋಗ ಮಾಡಲು ನೀವು ಬಯಸಿದ್ದರೆ ಕೊರಿಯರ್ ಸೇವೆ ಶುರು ಮಾಡಬಹುದು. ನಾವಿಂದು ಕೊರಿಯರ್ ಸೇವೆ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೆವೆ.
ಕೊರಿಯರ್ (Courier) ಸೇವೆ ಶುರು ಮಾಡೋದು ಹೇಗೆ? : ಗ್ರಾಮೀಣ (Rural ) ಪ್ರದೇಶ ಜನರು ಕೂಡ ಆನ್ಲೈನ್ (Online) ವಸ್ತುಗಳನ್ನು ಹೆಚ್ಚಾಗಿ ಖರೀದಿ ಮಾಡ್ತಿರುವ ಕಾರಣ ನೀವು ಗ್ರಾಮೀಣ ಅಥವ ನಗರ ಯಾವುದೇ ಪ್ರದೇಶದಲ್ಲಿಯಾದ್ರೂ ಇದನ್ನು ಶುರು ಮಾಡಬಹುದು. ಇದಕ್ಕೆ ನೀವು ಮೊದಲು ಕೊರಿಯರ್ ಸೇವಾ ಕಂಪನಿ (Company) ಯಿಂದ ತರಬೇತಿ ಪಡೆಯಬೇಕಾಗುತ್ತದೆ.
ಗೃಹಬಳಕೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಎಂಬ ಮೂರು ಕೊರಿಯರ್ ಸೇವಾ ಕೇಂದ್ರದ ವಿಧಗಳಿವೆ. ಹಾಗೆಯೇ ಭಾರತದಲ್ಲಿ ಬ್ಲೂ ಡರ್ಟ್ ಎಕ್ಸ್ ಪ್ರೆಸ್ ಲಿಮಿಟೆಡ್, ಡಿಎಚ್ ಎಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಫಸ್ಟ್ ಫ್ಲೈಟ್ ಕೊರಿಯರ್ ಲಿಮಿಟೆಡ್ ಸೇರಿದಂತೆ ಅನೇಕ ಕೊರಿಯರ್ ಸೇವಾ ಕಂಪನಿಗಳಿವೆ. ನೀವು ಕಂಪನಿಯಿಂದ ಫ್ರಾಂಚೈಸಿ ಪಡೆದು ಕೊರಿಯರ್ ಸೇವೆ ಶುರು ಮಾಡಬೇಕಾಗುತ್ತದೆ. ಅದಕ್ಕೆ ಜಾಗದ ಅವಶ್ಯಕತೆಯಿರುತ್ತದೆ. ನೀವು ಕೊಠಡಿಯನ್ನು ಬಾಡಿಗೆ ಕೂಡ ಪಡೆಯಬಹುದು. ಮೊಬೈಲ್ ಹಾಗೂ ದೂರವಾಣಿ ಸಂಪರ್ಕ ಕೂಡ ಬೇಕು.
undefined
ಪರವಾನಗಿ (License) ಅಗತ್ಯ : ಪ್ರತಿಯೊಂದು ವ್ಯವಹಾರದಂತೆ ಕೊರಿಯರ್ ಸೇವಾ ವ್ಯವಹಾರ ಶುರು ಮಾಡಲು ನೀವು ಪರವಾನಗಿ ಪಡೆಯಬೇಕು. ಮುನ್ಸಿಪಲ್ ಕಾರ್ಪೊರೇಶನ್‌ಗೆ ಹೋಗಿ, ಅರ್ಜಿ ಸಲ್ಲಿಸಿ, ದಾಖಲೆ ನೀಡುವುದಲ್ಲದೆ ಜಿಎಸ್ಟಿ ನೋಂದಣಿ ಮಾಡಬೇಕು. ಜಿಎಸ್ಟಿಗಾಗಿ ಜಿಎಸ್ಟಿ ಕೇಂದ್ರಕ್ಕೆ ಹೋಗಬೇಕಾಗುತ್ತದೆ.
ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಹೊಂದಿದ್ದೀರಾ? ಹಾಗಿದ್ರೆ ಈ 5 ಸಮಸ್ಯೆಗಳಾಗೋ ಸಾಧ್ಯತೆ ಅಧಿಕ
ಕೊರಿಯರ್ (Courier) ವ್ಯವಹಾರದ ವೆಚ್ಚ : ಕೊರಿಯರ್ ಸೇವೆ ಶುರು ಮಾಡಲು ನೀವು ಸ್ವಲ್ಪ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ ಚಿಂತಿಸಬೇಕಾಗಿಲ್ಲ. ಯಾಕೆಂದ್ರೆ ಹೂಡಿದ ಹಣ ಬೇಗ ವಾಪಸ್ ಬರುತ್ತದೆ. ಕೊರಿಯರ್ ಸೇವಾ ಕೇಂದ್ರವನ್ನು ನೀವು 50 ಸಾವಿರದಿಂದ 2 ಲಕ್ಷ ಖರ್ಚು ಮಾಡಿ ಪ್ರಾರಂಭಿಸಬಹುದು. ನೀವು ಯಾವ ಕಂಪನಿಯ ಫ್ರ್ಯಾಂಚೈಸ್ ತೆಗೆದುಕೊಳ್ಳುತ್ತೀರಿ ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ಯಾಕೆಂದ್ರೆ ಪ್ರತಿಯೊಂದು ಕಂಪನಿಯು ತನ್ನದೇ ಆದ ಪ್ರತ್ಯೇಕ ಶುಲ್ಕವನ್ನು ಹೊಂದಿದೆ. ನೀವು ಯಾವ ವಿಧದ ಕೊರಿಯರ್ ಆಯ್ಕೆ ಮಾಡಿಕೊಳ್ಳುತ್ತಿದ್ದೀರಿ ಹಾಗೂ ಯಾವ ಕಂಪನಿ ಪ್ರಾಂಚೈಸಿ ಪಡೆಯುತ್ತಿದ್ದೀರಿ, ಕೆಲಸಗಾರರಿಗೆ ಎಷ್ಟು ಸಂಬಳ ನಿಗದಿ ಮಾಡಿದ್ದೀರಿ, ಕಚೇರಿ ಜಾಗ ಎಲ್ಲಿದೆ ಹಾಗೂ ಅದಕ್ಕೆ ಬಾಡಿಗೆ ಇವೆಲ್ಲವೂ ಹೂಡಿಕೆಯಲ್ಲಿ ವ್ಯತ್ಯಾಸಕ್ಕೆ ಕಾರಣವಾಗುತ್ತದೆ.
ಮನೆ ಇರೋರು ಎಲ್ಲರೂ ಹಿಡಿ ಬಳಸ್ತಾರೆ, ವ್ಯಾಪಾರ ಆಗೋದು ಪಕ್ಕಾ
ಕೊರಿಯರ್ ವ್ಯವಹಾರದಿಂದಾಗುವ ಲಾಭ : ಈ ವ್ಯವಹಾರದಲ್ಲಿ ಲಾಭ ಹೆಚ್ಚಿದೆ. 20 ರಿಂದ 35 ಸಾವಿರ ರೂಪಾಯಿ ಲಾಭವನ್ನು ನೀವು ಪಡೆಯಬಹುದು. ಫ್ಲಿಪ್‌ಕಾರ್ಟ್, ಅಮೆಜಾನ್‌ನಂತಹ ದೊಡ್ಡ ಆನ್ಲೈನ್ ಕಂಪನಿ ಜೊತೆ ಸೇರಿ ವ್ಯವಹಾರ ಶುರು ಮಾಡಿದ್ರೆ ಕಂಪನಿಗಳು ಹೆಚ್ಚು ಕಮಿಷನ್ ನೀಡುತ್ತವೆ. ಇದ್ರಿಂದ ನೀವು ಹೆಚ್ಚು ಲಾಭ ಪಡೆಯಬಹುದು. ಒಂದು ದಿನದಲ್ಲಿ ನೀವು ಎಷ್ಟು ವಸ್ತುಗಳನ್ನು ಡಿಲಿವರಿ ಮಾಡ್ತಿರಿ ಎಂಬುದರ ಮೇಲೆ ಕಮಿಷನ್ ನಿಂತಿರುತ್ತದೆ. ಅಮೆಜಾನ್ ಅಥವಾ ಫ್ಲಿಪ್ಕಾರ್ಟ್ ನಂತಹ ದೊಡ್ಡ ಕಂಪನಿ ಜೊತೆ ಕೈಜೋಡಿಸಬೇಕೆಂದ್ರೆ ನೀವು ಅವರ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿ ನಿಮ್ಮ ಕೊರಿಯರ್ ಕಂಪನಿ ಹೆಸರನ್ನು ನೋಂದಾಯಿಸಿಕೊಂಡು ನಂತ್ರ ಕೊರಿಯರ್ ಸೇವೆ ಶುರು ಮಾಡಬೇಕಾಗುತ್ತದೆ.